ಕಿರುತೆರೆಯ ಈ ಹುಡುಗನ ಬಣ್ಣದ ಬದುಕಿಗೆ ಮುನ್ನುಡಿಯಾಗಿದ್ದು
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಾಯಕ ಸುಶಾಂತ್ ಆಗಿ ಅಭಿನಯಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಹ್ಯಾಂಡ್ ಸಮ್ ಹುಡುಗ ಪವನ್ ರವೀಂದ್ರ ಅವರ ಬಣ್ಣದ ಬದುಕು ಅರಂಭವಾದುದು ಜಾನಕಿ ರಾಘವ ಮೂಲಕ. ವಿನು ಬಳಂಜ ನಿರ್ದೇಶನದ ಜಾನಕಿ ರಾಘವ ಧಾರಾವಾಹಿಯಲ್ಲಿ ನಾಯಕ ರಾಘವ ಆಗಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಪವನ್ ರವೀಂದ್ರ ಮೊದಲ ಧಾರಾವಾಹಿಯಲ್ಲಿಯೇ ಮನೆ ಮಾತಾದರು.
ನಟನಾಗಿ ಕಾಣಿಸಿಕೊಳ್ಳುವ ಮೊದಲು ಮಾಡೆಲಿಂಗ್ ಲೋಕದಲ್ಲಿ ಕಾಣಿಸಿಕೊಂಡಿರುವ ಪವನ್ ರವೀಂದ್ರ ಜನ ಗುರುತಿಸಿದ್ದು ಕಿರುತೆರೆಗೆ ಬಂದ ಬಳಿಕವೇ ಜಾನಕಿ ರಾಘವ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರೆತಾಗ ಹಿಂದೆ ಮುಂದೆ ನೋಡದೇ ಅಸ್ತು ಎಂದ ಪವನ್ ರವೀಂದ್ರ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದರು. ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಏಟು ಎದಿರೇಟು ಧಾರಾವಾಹಿಯಲ್ಲಿ ನಟಿಸಿದ ಪವನ್ ರವೀಂದ್ರ ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಂಗನಾಯಕಿ ಧಾರಾವಾಹಿಯಲ್ಲಿ ನಾಯಕ ಚಿರಂತ್ ಆಗಿ ನಟಿಸಿದರು.