ಸ್ಯಾಂಡಲ್ ವುಡ್ ಡ್ರ’ ಗ್ಸ್ ವಿವಾದಕ್ಕೆ ಪ್ರತಿಕ್ರಿಯಿಸಿದ ಡಿಬಾಸ್ ದರ್ಶನ್..ಡ್ರ’ ಗ್ಸ್ ಹಿನ್ನೆಲೆಯಿರುವವರ ಮೇಲೆ ಹರಿಹಾಯ್ದ ಚಾಲೆಂಜಿಂಗ್ ಸ್ಟಾರ್..!!!
ಕನ್ನಡ ಚಿತ್ರರಂಗದಲ್ಲಿ ಈಗ ಡ್ರ’ ಗ್ಸ್‌ನದ್ದೇ ಸುದ್ದಿ. ಮಾ’ ದಕ ವಸ್ತು ಮಾ’ ಫಿಯಾದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳು ಚಂದನವನದ ಕೆಲವರ ಹೆಸರನ್ನು ಬಾಯಿ ಬಿಟ್ಟಿದ್ದಾರೆ ಎಂಬ ಹಿನ್ನೆಲೆಯಲ್ಲಿ ವಿಚಾರಣೆ ಜಾರಿಯಲ್ಲಿದೆ. ಒಟ್ಟಾರೆ ಈ ಎಲ್ಲ ಘಟನೆಗಳ ಬಗ್ಗೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲು ಊಹಾಪೋಹಗಳನ್ನು ಬಿಡಿ. ಹೇಗಿದ್ದರೂ ಈ ಪ್ರಕರಣ ಪೊಲೀಸರ ಕೈಯಲ್ಲಿ ಇದೆ. ಗೊತ್ತಾಗುತ್ತದೆ, ಹೆಸರುಗಳು ಹೊರಬರುತ್ತವೆ. ಅಲ್ಲಿಯವರೆಗೂ ಆ ನಟ ಈ ನಟ ಎಂಬುದೆಲ್ಲ ಯಾಕೆ? ಒಂದು ಕ್ಲಾಸ್ ರೂಮ್‌ನಲ್ಲಿ ಫಸ್ಟ್ ರ‍್ಯಾಂಕ್ ವಿದ್ಯಾರ್ಥಿ ಇರುತ್ತಾನೆ. ಅದೇ ರೀತಿ ಜೀರೋ ತೆಗೆಯೋನೂ ಇರ್ತಾನೆ. ಹಾಗಂತ ಇಡೀ ಕ್ಲಾಸ್ ಅನ್ನು ಜೀರೋ ಅನ್ನೋಕೆ ಆಗಲ್ಲ’ ಎಂದಿದ್ದಾರೆ ದರ್ಶನ್.
ಸ್ಯಾಂಡಲ್‌ವುಡ್‌ನಲ್ಲಿ ಯುವ ನಟರೊಬ್ಬರ ಮರಣೋತ್ತರ ಪರೀಕ್ಷೆ ಯಾಕೆ ಆಗಲಿಲ್ಲ ಎಂದು ಮೊದಲು ಪ್ರಶ್ನೆ ಎತ್ತಿದ್ದೇ ನಿರ್ದೇಶಕ ಇಂದ್ರಜಿತ್ ಲಂಕೇಶ್. ಯಾರ ಹೆಸರನ್ನೂ ಅವರು ಹೇಳಿಲ್ಲವಾದರೂ ಆ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಈ ಸಂಬಂಧ ಅವರು ಇಂದು ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಆದರೆ ಇಂದ್ರಜಿತ್ ಬಗ್ಗೆ ಮಾತನಾಡಲು ದರ್ಶನ್ ನಿರಾಕರಿಸಿದ್ದಾರೆ. ‘ಇನ್ನೊಬ್ಬರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ.
ಜಸ್ಟ್ ಕಾದು ನೋಣೋಣ. ಪೊಲೀಸರು ತನಿಖೆ ಮಾಡಲಿ’ ಎಂದಿದ್ದಾರೆ ಡಿ ಬಾಸ್. ‘ಡ್ರ’ ಗ್ಸ್ ವಿಚಾರ ನನ್ನ ಅನುಭವಕ್ಕೆ ಬಂದಿಲ್ಲ. ನಾನು ಚಿತ್ರರಂಗಕ್ಕೆ ಬಂದು ಹೆಚ್ಚು-ಕಡಿಮೆ 26-27 ವರ್ಷ ಆಯಿತು. ಒಬ್ಬ ಲೈಟ್‌ಮ್ಯಾನ್ ಆಗಿದ್ದಾಗಿನಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಾವು ಇದುವರೆಗೂ ಆ ಬಗ್ಗೆ ನೋಡಿಲ್ಲ, ಕೇಳಿಲ್ಲ. ಇದು ಸ್ಯಾಂಡಲ್‌ವುಡ್ ಮಾತ್ರ ಅಲ್ಲ. ಇಡೀ ಕರ್ನಾಟಕಕ್ಕೆ ಕಳಂಕ’ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.