ENTERTAINMENT

ನನ್ನ ಗಂಡನ ಪಾತ್ರ ಮಾಡಿದ್ದು ನಮ್ಮಪ್ಪನೇ – ತಂದೆಯ ಜೊತೆಯಲ್ಲಿ ಹೆಂಡತಿಯ ಪಾತ್ರ ಮಾಡಿದ ನಟಿ ಯಾರು ಗೊತ್ತಾ?

ಸತ್ಯಭಾಮ ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿ. ಗೋಲ್ ಮಾಲ್ ರಾಧಾಕೃಷ್ಣ (1990), ಬಂಧನ (1984), ಮತ್ತು ನಂಜುಂಡಿ ಕಲ್ಯಾಣ (1989) ಸೇರಿವೆ. ಚಲನಚಿತ್ರಗಳಲ್ಲಿ ನಟಿಯಾಗುವ ಮೊದಲು, ಅವರು ಕನ್ನಡ ರಂಗಭೂಮಿಯಲ್ಲಿ ನಟಿಸಿದರು. ತನ್ನ 25 ವರ್ಷಗಳ ರಂಗಭೂಮಿಯಲ್ಲಿ, ವೀರ ರಾಣಿ ಚೆನ್ನಮ್ಮ ನಾಟಕದಲ್ಲಿ ರಾಣಿ ಚೆನ್ನಮ್ಮನ ಪಾತ್ರಕ್ಕಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟರು. ನಾಟಕದಲ್ಲಿನ ಆಕೆಯ ಅಭಿನಯವನ್ನು ನೋಡಿದ ನಂತರ, ನಿರ್ದೇಶಕ ಎಸ್. ಸಿದ್ದಲಿಂಗಯ್ಯ ಅವರು 1977 ರಲ್ಲಿ ಸತ್ಯಭಾಮ ಅವರ ಹೇಮಾವತಿ ಚಿತ್ರದಲ್ಲಿ ಪಾತ್ರವನ್ನು ನೀಡಿದರು.

ಇದು ಅವರ ಚಲನಚಿತ್ರಗಳಿಗೆ ಪ್ರವೇಶವನ್ನು ಗುರುತಿಸಿತು. ಇನ್ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಸತ್ಯಭಾಮ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಸತ್ಯಭಾಮ ಅವರು ತಮ್ಮ ಪಟಪಟ ಮಾತು ಹಾಗೂ ಕೊಂಕು ಅಭಿನಯದಿಂದಲೇ ಸಾಕಷ್ಟು ಜನಮನ್ನಣೆ ಪಡೆದವರು. ಯಾವುದಾದರೂ ಸಿನಿಮಾದಲ್ಲಿ ಸತ್ಯಭಾಮ ಇದ್ದಾರೆ ಎಂಬುದು ತಿಳಿದರೆ ಅಲ್ಲಿ ಅತ್ತೆ-ಸೊಸೆಯ ಜಗಳ ಇದ್ದೇ ಇರುತ್ತದೆ ಎಂದು ಪ್ರೇಕ್ಷಕ ಪ್ರಭುಗಳು ಬಯಸುತ್ತಿದ್ದ ಕಾಲವದು. ಹೀಗೆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವಂತಿದ್ದ ಅವರ ಅಭಿನಯಕ್ಕೆ ಸಾವಿರಾರು ಅಭಿಮಾನಿಗಳು ಫಿದಾ ಆಗಿದ್ದರು.

ಇಂತಹ ಅದ್ಭುತ ನಟಿ ತನ್ನ ತಂದೆಯ ಜೊತೆಗೆ ಹೆಂಡತಿಯಾಗಿ ಬಣ್ಣಹಚ್ಚಿದ್ದಾರೆ. ಸತ್ಯಭಾಮನವರು ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿ ಜನರಿಗೆ ಹತ್ತಿರವಾಗುವದಕ್ಕಿಂತ ನೆಗೆಟಿವ್ ಪಾತ್ರಗಳ ಮೂಲಕ ಜನರ ಮನಸ್ಸನ್ನು ಗೆದ್ದವರು. ಜಗಳಗಂಟಿ ಪಾತ್ರ ಎಂದರೆ ಸತ್ಯಭಾಮನವರು ಸದಾ ಸಿದ್ಧ. ಹೀಗೆ ಸಿಕ್ಕಂತಹ ಯಾವುದೇ ಪಾತ್ರಗಳಿಗೂ ಇಲ್ಲ ಎನ್ನದೆ ಬಣ್ಣ ಹಚ್ಚಿ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಸತ್ಯಭಾಮ ಅವರು ಮೂಲತಃ ಉಡುಪಿಯವರಾಗಿದ್ದು, ಸಿನಿಮಾರಂಗದ ಮೂಲಕವೇ ತಮ್ಮ ಸುಂದರ ಜೀವನವನ್ನು ಸುಖವಾಗಿ ಸಾಗಿಸಿದವರು.

ಗೋಲ್ ಮಾಲ್ ರಾಧಾಕೃಷ್ಣ, ತರ್ಲೆ ನನ್ ಮಕ್ಳು, ನಂಜುಂಡಿ ಕಲ್ಯಾಣ ಹಾಗೂ ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಬಂಧನ ಹೀಗೆ ಹತ್ತು ಹಲವಾರು ಸಿನಿಮಾಗಳಲ್ಲಿ ಸತ್ಯ ಭಾಮ ಅವರು ತಮ್ಮ ಅಮೋಘ ನಟನೆಯ ಸಾಮರ್ಥ್ಯ ತೋರಿದ್ದಾರೆ. ತಮ್ಮ ತಂದೆಯೊಂದಿಗೆ ಹೆಂಡತಿಯಾಗಿ ನಟಿಸಿದಂತ ಅಪರೂಪದ ಅನುಭವ ಕೂಡಾ ಅವರ ಬಳಿ ಇದೆ. ನಾಟಕವೊಂದರಲ್ಲಿ ಸ್ವತಃ ತನ್ನ ತಂದೆಯೇ ಗಂಡನ ಪಾತ್ರ ಮಾಡಿದ್ದರು ಎಂದು ಸತ್ಯಭಾಮ ಹೆಮ್ಮೆಯಿಂದ ಸಂದರ್ಶನವೊಂದರಲ್ಲಿ ಹೇಳಿದ್ದರು.

ಕಲೆಯ ವಿಷಯ ಬಂದರೆ ಸಂಬಂಧಗಳ ಕುರಿತು ಲೆಕ್ಕಚಾರ ಹಾಕಬಾರದು ಕಲೆಯೆ ನಮ್ಮ ಜೀವನವಾಗಿರುವ ಕಾರಣ ತಂದೆ ಗಂಡನ ಪಾತ್ರ ಮಾಡಬಲ್ಲ ಹಾಗೂ ತಾಯಿ ಮಗಳ ಪಾತ್ರವನ್ನು ಮಾಡಬಲ್ಲಳು ಇಂದು ಸತ್ಯಭಾಮ ತಮ್ಮ ಅಭಿಪ್ರಾಯವನ್ನು ಹೊರಹಾಕಿದರು. ದಿವಂಗತ ಕಾಶೀನಾಥ್ ಅವರು ತಮಗೆ ಉತ್ತಮ ಪಾತ್ರ ನೀಡಿದ್ದರು ಎಂದು ಅವರನ್ನು ಸಂದರ್ಶನ ಒಂದರಲ್ಲಿ ಸ್ಮರಿಸಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button