ಕನ್ನಡದಲ್ಲಿ ಮಾತನಾಡಿದ ಪ್ಯಾರ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್.!! ಏನಂದ್ರು ನೋಡಿ
ಎಸ್‌ಎಲ್4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ಯಾರಾ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಸೆಟಿಯವಾನ್ ಫ್ರೆಡಿ ವಿರುದ್ಧ ಸುಲಭ ಗೆಲುವು ಸಾಧಿಸಿದ್ದ ಸುಹಾಸ್, ಭಾನುವಾರ ಫೈನಲ್‌ನಲ್ಲಿ ಫ್ರಾನ್ಸ್‌ನ ಲುಕಾಸ್ ಮಜುರ್ ವಿರುದ್ಧ ಸೆಣಸಾಡಿದ್ದರು.
ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್‌ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಭಾರೀ ರೋಚಕವಾಗಿದ್ದ ಈ ಪಂದ್ಯದ ಮೊದಲ ಸೆಟ್‌ನಲ್ಲಿ ಸುಹಾಸ್ 21-15ರೆ ಮುನ್ನಡೆ ಪಡೆದುಕೊಂಡು, ಮೊದಲ ಅಂಕ ಗಳಿಸಿದ್ದರು. ಆದರೆ ಎರಡನೇ ರೌಂಡ್‌ನಲ್ಲಿ ಎದುರಾಳಿ ಆಟಗಾರ 17-21 ಮುನ್ನಡೆ ಪಡೆದುಕೊಂಡಿದ್ದರಿಂದ 1-1 ಮೂಲಕ ಸಮಬಲವಾಯಿತು.
ಇನ್ನು ಮೂರನೇ ಸೆಟ್ನಲ್ಲಿಯೂ ಸುಹಾಸ್ 15-21 ಅಂಕಗಳ ಹಿನ್ನಡೆ ಸಾಧಿಸಿ 1-2 ಸೆಟ್ಗಳ ಅಂತರದಿಂದ ಸೋತ ಪರಿಣಾಮ ಬೆಳ್ಳಿ ಪದಕ ತಮ್ಮದಾಗಿಸಿದರು. ಈ ಪಂದ್ಯಕ್ಕೂ ಮುನ್ನ ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸುಹಾಸ್, ಇಂಡೋನೇಷ್ಯಾದ ಸೆಟಿಯವಾನ್ ಫ್ರೆಡಿ ವಿರುದ್ಧ 21-9, 21-15ರ ಸುಲಭ ಗೆಲುವು ಸಾಧಿಸಿದ್ದರು.
ಸುಹಾಸ್ ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು. ಹಾಸನದಲ್ಲಿ ಬಾಲ್ಯ ಹಾಗೂ ಶಿಕ್ಷಣ ಪೂರೈಸಿದ ಸುಹಾಸ್ ಯತಿರಾಜ್ ತಂದೆ ಸರ್ಕಾರಿ ಉದ್ಯೋಗಿಯಾದ ಕಾರಣ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜನೀಯರಿಂಗ್ ಪದವಿ ಪಡೆದ ಸುಹಾಸ್ ಇದೀಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಯುಪಿಎಸ್ಸಿ ಪಾಸ್ ಮಾಡಿ ಉತ್ತರ ಪ್ರದೇಶ ಕೇಡರ್ನ ಐಎಎಸ್ ಆಫಿಸರ್ ಆಗಿರುವ ಎಲ್.ವೈ.ಸುಹಾಸ್ ಬೆಳೆದಿದ್ದು ಮಲೆನಾಡ ತಪ್ಪಲು ಶಿವಮೊಗ್ಗ ಆದರೂ, ಅವರ ಮೂಲ ಊರು ಹಾಸನ ಎನ್ನೋದು ಹಲವರಿಗೆ ಗೊತ್ತಿಲ್ಲ
ಇಸವಿಯಲ್ಲಿ ಲಾಳನಕೆರೆನ ಗ್ರಾಮದಲ್ಲಿದ್ದ ನಾಲ್ಕು ಅಯ್ಯಂಗಾರ್ ಕುಟುಂಬಗಳು ತಮ್ಮ ಆಸ್ತಿಯನ್ನೆಲ್ಲಾ ಮಾರಾಟ ಮಾಡಿ ಬೇರೆ ಬೇರೆ ಕಡೆ ವಲಸೆ ಹೋದರು ಅಂತ ಹಿರಿಯರು ಹೇಳುತ್ತಾರೆ. ಕೃಷ್ಣ ಅಯ್ಯಂಗಾರ್ ರವರ ಏಕೈಕ ಪುತ್ರ ಯತಿರಾಜ್ ಇಂಜಿನಿಯರಿಂಗ್ ಪದವಿಗಾಗಿ ಕುಟುಂಬದ ಜೊತೆ ಊರು ತೊರೆದು ಹಾಸನ ನಗರ ಸೇರಿಕೊಂಡಿದ್ದರು. ಶಿಕ್ಷಣ ಪಡೆದ ಬಳಿಕ ಸರ್ಕಾರಿ ಕೆಲಸಕ್ಕೆ ಸೇರಿದ ಯತಿರಾಜ್, ಕುಟುಂಬ ಜೊತೆ ರಾಜ್ಯದ ವಿವಿದೆಡೆ ನೆಲೆಸಿದ್ದರು.
ಹಾಸನದ ಹೇಮಾವತಿ ನಗರದಲ್ಲಿ ನೆಲೆಸಿದ್ದ ತಾಯಿ ಜಯಶ್ರಿ ಹಾಸನದ ಎ.ವಿ.ಕಾಂತಮ್ಮ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು. ಯತಿರಾಜ್ ಜೊತೆಗೆ ಮದುವೆಯಾದ ಬಳಿಕ ವಿವಿಧ ಊರುಗಳಲ್ಲಿ ನೆಲೆಸಿದರು. ಮಕ್ಕಳ ಶಿಕ್ಷಣಕ್ಕಾಗಿ ಶಿವಮೊಗ್ಗದಲ್ಲಿ ನೆಲೆ ನಿಂತು ಮಕ್ಕಳು ಉನ್ನತ ಸಾಧನೆ ಮಾಡಲು ನೆರವಾದರು. ಸದ್ಯ ಸುಹಾಸ್ ಕುಟುಂಬದವರಾಗಲಿ, ಪರಿಚಿತರಾಗಿ ಯಾರೂ ಕೂಡ ಊರಿನಲ್ಲಿ ಇಲ್ಲ. ಆದರೂ ಅವರ ಮೂಲ ನೆಲೆ ಇನ್ನೂ ಅವರ ಹೆಸರಿನೊಂದಿಗೆ ಬೆಳಗುತ್ತಿದೆ. ಮತ್ತೊಂದು ವಿಶೇಷವೆಂದರೆ ಸುಹಾಸ್ ಪದಕಗೆದ್ದ ನಂತರ ಕನ್ನಡದಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಕನ್ನಡಿಗರೊಬ್ಬರು ಈ ಸಾಧನೆ ಮಾಡಿರುವುದು ನಮಗೆಲ್ಲ ಹೆಮ್ಮೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.