NEWS

ಶಾಸಕನ ಮಗನ ಸಹವಾಸ ಬೇಡವ್ವ ಅಂದ್ರೂ ಮದ್ವೆ ಆಗ್ತೀನಂತ ಹಠ ಹಿಡಿದಳು. ಕಾಲ್​ ಮಾಡಿದ್ದಾಗ ಚೆನ್ನೈನಲ್ಲಿ ಇದ್ದೇನೆ ಅಂದಿದ್ದಳು.ಇದೆಲ್ಲಾ ನಮ್ಮ ಹಣೆಬಹರ

ಬೆಂಗಳೂರಿನ ಸರಹದ್ದಿನ ಕೋರಮಂಗಲ ಅಪಘಾತ ಪ್ರಕರಣದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಶಾಸಕ ಪ್ರಕಾಶ್ ಅವರ ಭಾವಿ ಸೊಸೆ ಕೂಡಾ ಮೃತಪಟ್ಟಿದ್ದಾರೆ. ಆದರೀಗ ಶಾಸಕ ಪ್ರಕಾಶ್ ಭಾವಿ ಸೊಸೆ ಬಿಂದು ಸಾವಿನ ವಿಚಾರಕ್ಕೆ ಹೊಸ ತಿರುವು ಸಿಕ್ಕಿದೆ.

ಬಿಂದು ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಆಕೆ ಬೆಂಗಳೂರಿಗೆ ಯಾವಾಗ ಬಂದಿದ್ದು ಎಂಬ ವಿಚಾರವೇ ಆಕೆಯ ಹೆತ್ತವರಿಗೆ ತಿಳಿದಿಲ್ಲ. ಈ ಬಗ್ಗೆ ಮಾತನಾಡಿರುವ ಬಿಂದು ತಂದೆ ಚಂದ್ರಶೇಖರ್ ನಮ್ಮ ಮಗಳು ರಾತ್ರಿ 8 ಗಂಟೆಗೆ ನಮಗೆ ಫೋನ್ ಮಾಡಿದ್ದಳು. ಚೆನ್ನೈನಲ್ಲಿ ನನಗೆ ಕೆಲಸ ಸಿಕ್ಕಿದೆ ಸೇರ್ಪಡೆಗೆ ಹೋಗುತ್ತಿದ್ದೀನಿ ಎಂದಿದ್ದಳು. ಆದರೆ ಬೆಂಗಳೂರಿಗೆ ಬಂದಿದ್ದೇ ನನಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಬಿಂದು ಹಾಗೂ ಕರುಣಾ ಸಾಗರ್ ಮದುವೆ ಮಾತುಕತೆ ನಡೆದಿತ್ತು. ಆದರೆ ಈ ಮದುವೆಗೆ ನಾವು ಒಪ್ಪಿರಲಿಲ್ಲ. ಆದರೆ ಮಗಳು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು ಎಂದು ಕಂಬನಿ ಮಿಡಿದಿದ್ದಾರೆ. ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ತಮಿಳುನಾಡು ಡಿಎಂಕೆ ಶಾಸಕ ವೈ. ಪ್ರಕಾಶ್​ರ ಏಕೈಕ ಪುತ್ರ ಕರುಣಾಸಾಗರ್​ ಸೇರಿ 7 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಕರುಣಾಸಾಗರ್​ನ ಭಾವಿ ಪತ್ನಿ ಬಿಂದು ಕೂಡ ಈ ಅಪಘಾತದಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಗಳು ಶಾಸಕರ ಪುತ್ರ ಕರುಣಾಸಾಗರ್​ನನ್ನು ಮದುವೆ ಆಗುತ್ತೇನೆ ಎಂದು ಹಠ ಮಾಡಿದ್ದಳು. ಅವರು ದೊಡ್ಡವರು ಬೇಡ ಎಂದು ಮಗಳಿದೆ ಬುದ್ಧಿ ಹೇಳಿದ್ದೆ. ಏನೇ ಆದರೂ ಅವರನ್ನೇ ಮದುವೆ ಆಗುವೆ ಎಂದು ಹೇಳಿದ್ದ ಮಗಳೀಗ ಅವರೊಂದಿಗೇ ಬಾರದ ಲೋಕಕ್ಕೆ ಹೋಗಿಬಿಟ್ಟಳು… ನಿನ್ನೆ ನಾನು ಮಗಳಿಗೆ ಕಾಲ್​ ಮಾಡಿದ್ದಾಗ ಚೆನ್ನೈನಲ್ಲಿ ಇದ್ದೇನೆ ಅಂದಿದ್ದಳು. ಬೆಳಗ್ಗೆ ಟಿವಿಯಲ್ಲಿ ಸುದ್ದಿ ನೋಡಿದಾಗಲೇ ಗೊತ್ತಾಗಿದ್ದು ಮಗಳು ಇನ್ನಿಲ್ಲ ಎಂದು…’ ಎಂದು ಬಿಂದು ತಂದೆ ಚಂದ್ರಶೇಖರ್ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತದ್ದು.

ಬಿಂದು ಎಂಎಸ್ಸಿ ಓದಿದ್ದು, ಚೆನೈನಲ್ಲಿ ಜಾಬ್ ಮಾಡ್ತಿದ್ದಳು. ಕೋವಿಡ್ ಕಾರಣ ವರ್ಕ್ ಫ್ರಂ ಹೋಂನಲ್ಲಿ ಇದ್ದಳು. ಬೆಂಗಳೂರಿನಲ್ಲಿ ಇದ್ರೂ ನಮ್ಮ ಜತೆ ಇರಲಿಲ್ಲ. ಕೆಲಸಕ್ಕೆ ಅಡ್ಡಿ ಆಗುತ್ತೆ ಅಂತ ಪಿಜಿಯಲ್ಲಿ ಇದ್ದಳು. ಕರುಣಾಸಾಗರ್​ ನಮಗೆ ಭಾವನ ಮಗ ಆಗಬೇಕು. ಅವರಿಬ್ಬರೂ ಮದುವೆ ಆಗಬೇಕು ಅಂತಿದ್ರು. ಮದುವೆ ಆದ್ರೆ ಕರುಣಾಸಾಗರ್​ನನ್ನೇ ಆಗ್ತೀನಿ ಅಂತ ಹಠ ಹಿಡಿದಿದ್ದಳು. ದೊಡ್ಡವರ ಸಹವಾಸ ಬೇಡ ಅಂತ ನಾವು ಕಿವಿಮಾತು ಹೇಳಿದ್ವಿ ಆದ್ರೆ ಕೇಳಿರಲಿಲ್ಲ. ಇವತ್ತು ಹೀಗಾಗಿದೆ…’ ಇದೆಲ್ಲಾ ನಮ್ಮ ಹಣೆಬಹರ ಎಂದು ಮೃತಳ ತಂದೆ ಕಣ್ಣೀರಿಟ್ಟಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button