ಮನರಂಜನಾ ಕ್ಷೇತ್ರದಲ್ಲಿ 18 ವರ್ಷ ಪಯಣ ಪೂರೈಸಿದ ಶ್ವೇತಾ ಚೆಂಗಪ್ಪ, ಪತ್ನಿಗೆ ಸಪ್ರ್ರೈಸ್ ಗಿಫ್ಟ್ ಕೊಟ್ಟ ಪತಿ
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಜನವರಿ 26 ವಿಶೇಷವಾದ ದಿನ. ಈ ದಿನದ ಅಂತಹ ವಿಶೇಷ ಯಾಕೆ? ಏನಿದರ ಅಸಲಿಯತ್ತು. ಹೌದು ಧಾರಾವಾಹಿಯಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ನಟಿ ಶ್ವೇತಾ ಚೆಂಗಪ್ಪ, ಟಿ.ವಿ, ಸಿನಿಮಾ, ನಿರೂಪಣೆ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು.
ಇದೀಗ ಮಜಾ ಟಾಕೀಸ್ ರಾಣಿಯಾಗಿ ಮಿಂಚುತ್ತಿರುವ ನಟಿ ಶ್ವೇತಾ ಚೆಂಗಪ್ಪ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 18 ವರ್ಷಗಳು ಆಗಿದೆ. 18ವರ್ಷದ ಪಯಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶ್ವೇತಾ ಚೆಂಗಪ್ಪ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೌದು ಶ್ವೇತಾ ಅವರ ಪಯಣದ ಬಗ್ಗೆ ವಿಡಿಯೋ ಮಾಡಿರುವುದು ಅವರ ಪತಿ ಕಿರಣ್. ಇನ್ನು ವಿಡಿಯೋವನ್ನು ಶೇರ್ ಮಾಡಿ ತನ್ನ ಬಣ್ಣದ ಬದುಕಿನ ಬಗ್ಗೆ ಭಾವುಕ ಸಂದೇಶ ರವಾನಿಸಿದ್ದಾರೆ. 18 ವರ್ಷದ ಪಯಣಕ್ಕೆ ಪತಿಯೂ ವಿಡಿಯೋ ಗಿಫ್ಟ್ ಕೊಟ್ಟಿದ್ದಾರೆ. ಈ ಕುರಿತಾಗಿ ಬದುಕಿನ ಪಯಣದ ಬಗ್ಗೆ ತಮ್ಮ ಮನದಾಳದ ಮಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.