ದರ್ಶನ್ ವಿರುದ್ದದ ಹೇಳಿಕೆಗಳಿಗೆ ಇಂದ್ರಜಿತ್ ಲಂಕೇಶ್ ಮೇಲೆ ಹರಿಹಾಯ್ದ ಸೃಜನ್ ಲೋಕೇಶ್…!!!
ಕನ್ನಡ ಕಿರುತೆರೆಯ ಮಜಾ ಟಾಕೀಸ್ ಸೃಜನ್ ಲೋಕೇಶ್ ದರ್ಶನ್ ಮೇಲೆ ಮಾಡುತ್ತಿರುವ ಇಂದ್ರಜಿತ್ ಅವರ ಕೆಲ ಆರೋಪಗಳಿಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. 25 ಕೋಟಿ ಶೂರಿಟಿ ವಿಚಾರಕ್ಕೆ ಆರಂಭಗೊಂಡ ಈ ಗಲಾಟೆ ಈಗ ಸಾಕಷ್ಟು ತಿರುವುಗಳನ್ನ ಪಡೆದುಕೊಂಡಿದೆ
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಮೈಸೂರಿನ ಪ್ರಿನ್ಸ್ ಹೋಟೆಲ್ ನ ಸಿಬ್ಬಂದಿಗೆ ದರ್ಶನ್ ಹೊಡೆದಿದ್ದಾರೆ, ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿ ದರ್ಶನ್ ವಿರುದ್ಧ ದೂರು ನೀಡುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು.
ಇದಾದ ಬಳಿಕ ನಡೆದದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರವೆ. ದರ್ಶನ್ ಅವರು ಮಾಧ್ಯಮದ ಮುಂದೆ ಬಂದು ತುಂಬಾನೇ ಆಕ್ರೋಶ ಹೊರಹಾಕಿ ತಾವು ತಪ್ಪು ಮಾಡಿಲ್ಲ ಎಂದು ಹೇಳಿ, ಪೋಲಿಸರಿದ್ದಾರೆ ಪ್ರಕರಣವಿದೆ ತನಿಖೆಯಾಗಲಿ ಎಂದು ಹೇಳಿದ್ದರು. ಹಾಗೇನೆ ಇಂದ್ರಜಿತ್ ಲಂಕೇಶ್ ವಿರುದ್ಧವಾಗಿಯೂ ಸಹ ಸಾಕಷ್ಟು ವಿಚಾರಗಳ ಮಾತನಾಡಿ ಇಂದ್ರಜಿತ್ ಅವರ ಮೇಲೆ ಗುಡುಗಿದ್ದರು.
ಇದೀಗ ಮಜಾ ಟಾಕೀಸ್ ನಟ ಸೃಜನ್ ಲೋಕೇಶ್ ಅವರು ದರ್ಶನ್ ಅವರ ಪರ ನಿಂತು ಇದೇ ಹೋಟೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಲಂಕೇಶ್ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ದರ್ಶನ್ ಹೊಡೆದರೆನ್ನಲಾದ ಸಪ್ಲೈಯರ್ ಗೆ ದರ್ಶನ್ ಹಲವು ಬಾರಿ ಸಹಾಯ ಮಾಡಿದ್ದಾರೆ. ದರ್ಶನ್ ವ್ಯಕ್ತಿತ್ವ ಇಡೀ ಕರ್ನಾಟಕದಾದ್ಯಂತ ಎಲ್ಲರಿಗೂ ಗೊತ್ತಿದೆ.
ದರ್ಶನ್ ಅವರು ಮಾಡಿರುವತಕ್ಕಂತ ಒಳ್ಳೆಯ ಕಾರ್ಯಗಳನ್ನು ನೆನೆಸಿ ಸೃಜನ್ ಲೋಕೇಶ್ ಅವರು ಇಂದ್ರಜಿತ್ ಲಂಕೇಶ್ ಅವರ ಮೇಲೆ ಗುಡುಗಿದ್ದಾರೆ. ಇಂದ್ರಜಿತ್ ಅವರಿಗೆ ದರ್ಶನ್ ಪರ ನಿಂತು ಸೃಜನ್ ಲೋಕೇಶ್ ಹೇಳಿದ್ದನ್ನು ಕೇಳಿ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.