ಸ್ಯಾಂಡಲ್ ವುಡ್ ಡ್ರ’ ಗ್ಸ್ ವಿಚಾರ – ಮಾ’ ದಕ ವ್ಯಸನಿಗಳಾದರೆ ಬೀದಿಯಲ್ಲಿ ಸಾಯುತ್ತೀರ ಎಂದು ಖಡಕ್ ಉತ್ತರ ನೀಡಿದ ಯಶ್..!!!
ಬಾಲಿವುಡ್ ಅಂಗಳಕ್ಕೆ ಸುತ್ತಿಕೊಂಡಿದ್ದ ಡ್ರ’ ಗ್ಸ್ ಜಾಲ ಇದೀಗ ಸ್ಯಾಂಡಲ್ ವುಡ್ ವರೆಗೂ ಬಂದು ನಿಂತಿದ್ದು, ಈಗಾಗಲೇ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಿಸಿಬಿ ವಶದಲ್ಲಿದ್ದಾರೆ. ಅಲ್ಲದೇ ಇನ್ನಷ್ಟು ಮಂದಿಯ ವಿಚಾರಣೆ ನಡೆಸಬೇಕಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿದ್ದು, ಏತನ್ಮಧ್ಯೆ ಸ್ಯಾಂಡಲ್ ವುಡ್ ಸ್ಟಾರ್ ನಟ ಯಶ್ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಂಡಲ್ ವುಡ್ ನ ಡ್ರ’ ಗ್ಸ್ ಜಾಲದ ನಂಟಿನ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡ್ರ’ ಗ್ಸ್ ತಗೊಳ್ಳುವವರು ಯಾರೇ ಆಗಲಿ ಅದು ನಿಮ್ಮ ದೇಹವಲ್ಲ. ನಿಮ್ಮ ಅಪ್ಪ ಅಮ್ಮ ಕೊಟ್ಟಿರೋದು. ಅದನ್ನು ಹಾಳು ಮಾಡು ಅಧಿಕಾರ ನಿಮಗಿಲ್ಲ. ಯಾರೂ ಈ ದುಶ್ಚಟಕ್ಕೆ ಬೀಳಬೇಡಿ ಎಂದು ತುಸು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
“ಡ್ರ’ ಗ್ಸ್ ಎನ್ನುವುದು ದೇಶ ಹಾಗು ಜಗತ್ತಿಗೆ ಮಾ’ ರಕ. ಕೇವಲ ಚಿತ್ರರಂಗ ಮಾತ್ರವಲ್ಲ, ಎಲ್ಲಾ ವಲಯದವರು ಇದ್ದಾರೆ. ರಾಜ್ಯದ ಯುವಕರು, ಯುವತಿಯರು, ಜನರು ಅಂತಾ ಹೇಳಿ. ಡ್ರ’ ಗ್ಸ್ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿ ಬೇಕು ಈ ನಿಟ್ಟಿನಲ್ಲಿ ಮಾಧ್ಯಮಗಳು ಒಳ್ಳೆಯ ಕೆಲಸ ಮಾಡುತ್ತಿವೆ” ಎಂದು ಯಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ಎಂದ ಮೇಲೆ ನಾವೆಲ್ಲ ನಟರು, ಇದರಲ್ಲಿ ನಟ, ನಟಿ ಎಂಬ ಪ್ರಶ್ನೆ ಇಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.
ದೇಹ ನಿಮ್ಮದಲ್ಲ, ಇದು ನಿಮ್ಮ ಅಪ್ಪ ಅಮ್ಮ ನಿಮಗೆ ಕೊಟ್ಟಿರೋ ಭಿಕ್ಷೆ. ಅವರಿಗೆ ತಿನ್ನೋಕೆ ಇತ್ತೋ ಇಲ್ವೋ ಗೊತ್ತಿಲ್ಲ. ಆದರೆ ಒಳ್ಳೇ ಊಟ ಹಾಕಿ ಬೆಳೆಸಿರ್ತಾರೆ. ಅಂಬೆಗಾಲಿಡೋವಾಗ ಎಡವಿದ್ರೂ ನೋವು ಅನುಭವಿಸ್ತಾರೆ. ನನಗೂ ಮಕ್ಕಳಿದ್ದಾರೆ. ಈ ದರಿದ್ರ ಡ್ರ’ ಗ್ಸ್ ತಗೊಂಡು ಹಾಳಾಗಬೇಡಿ. ಮರ್ಯಾದೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ಗೌರವ ತರುವ ಕೆಲಸ ಮಾಡಿ’ ಎಂದಿದ್ದಾರೆ ಯಶ್.
ಚಿತ್ರರಂಗವನ್ನು ಮಾತ್ರ ಹೈಲೈಟ್ ಮಾಡಬೇಡಿ. ತಂದೆ ತಾಯಿ ಕಷ್ಟಪಟ್ಟು ಬೆಳಸಿ ಕನಸು ಕಾಣುತ್ತಿರುತ್ತಾರೆ, ಆದರೆ ದರಿದ್ರ ಡ್ರ’ ಗ್ಸ್ ತೆಗೆದುಕೊಂಡು ಹಾಳಾಗಬೇಡಿ” ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ. ಸ್ಯಾಂಡಲ್ ವುಡ್ ಡ್ರ’ ಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಬಂಧನದ ಬೆನ್ನಲ್ಲೇ ಸಂಜನಾ ಗಲ್ರಾನಿಯನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿ ಬಂಧಿಸಿತ್ತು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.