ಅಂದು ಪಡೆದ ಹಣಕ್ಕೆ ಬಡ್ಡಿ ಸೇರಿಸಿ ಮೂರುಪಟ್ಟು ಹಣ ವಾಪಾಸ್ ಕೊಟ್ಟ ಯಶ್…ನೋಡಿ ಯಾರಿಗೆ
ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ತೆಗೆದುಕೊಂಡೊದಂತಹ ಸಿನಿಮಾ ಎಂದರೆ ಅದು ಕೆಜಿಎಫ್ ಸಿನಿಮಾ ಎನ್ನಹುದು . ಈ ಚಿತ್ರ ಬಿಡುಗಡೆಯಾಗಿದ್ದೇ ತಡ ಕನ್ನಡ ಚಿತ್ರರಂಗದ ನಸೀಬೇ ಬದಲಾಗಿ ಬಿಟ್ಟಿದೆ. ಅಲ್ಲದೇ ಈ ಚಿತ್ರದ ಬಳಿಕ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಮೂವಿಗಳ ಕಾನ್ಸೆಪ್ಟ್ ಕೂಡ ಟ್ರೆಂಡ್ ನಲ್ಲಿದ್ದು ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದಂತಹ ಈ ಸಿನಿಮಾ ದೇಶ ವಿದೇಶದಲ್ಲಿಯೂ ಕೂಡ ದೊಡ್ಡ ಇತಿಹಾಸವನ್ನೇ ಬರೆದಿದೆ.
ಅಲ್ಲದೆ ಯಶ್ ಅವರ ಡೇಟ್ಸ್ ಪಡೆದುಕೊಳ್ಳಲು ನಿರ್ಮಾಪಕರು ತುದಿಗಾಲಲ್ಲಿ ನಿಂತಿದ್ದು ಇದರ ಜೊತೆಗೆ ನಮ್ಮ ಕನ್ನಡದ ನಟನೊಬ್ಬ ಅಂತಾರಾಷ್ಟ್ರೀಯ ಸ್ಟಾರ್ ಆಗಿರುವುದು ಹೆಮ್ಮೆ ತರುವಂತಹ ವಿಷಯವಾಗಿದೆ ಸದ್ಯ ಇದೀಗ ಚಿತ್ರರಂಗದಲ್ಲಿ ಎಲ್ಲರ ಬಾಯಲ್ಲಿ ಗುನುಗುತ್ತಿರುವ ಹೆಸರು ರಾಕಿ ಬಾಯ್.
ಹೌದು ಈ ಚಿತ್ರದ ಬಳಿಕ ರಾಕಿಂಗ್ ಸ್ಟಾರ್ ಯೂತ್ ಐಕಾನ್ ಆಗಿಬಿಟ್ಟಿದ್ದಾರೆ. ಅಲ್ಲದೇ ಕೆಜಿಎಫ್ ಚಿತ್ರ
ಬಿಡುಗಡೆಯಾದಾಗಲಿಂದ ರಾಕಿಂಗ್ ಸ್ಟಾರ್ ಬದುಕೇ ಬದಲಾಗಿಬಿಟ್ಟಿದೆ. ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಹೆಣ್ಣು ಮಗಳ ನಾಮಕರಣ ಗಂಡು ಮಗನ ಜನನ,ಮ ವಿಶ್ವದಲ್ಲೇ ಅತಿ ದೊಡ್ಡ ಕಟೌಟ್ ಮತ್ತು ಅತಿ ದೊಡ್ಡ ಕೇಕ್ ಕತ್ತರಿಸಿದ ನಟ ಭಾರತಾದ್ಯಂತ ದೊಡ್ಡ ಅಭಿಮಾನಿಗಳನ್ನು ಹೊಂದಿರುವಂತಹ ನಟ ಅಬ್ಬಾ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಒಂದು ಸಿನಿಮಾ ಒಬ್ಬ ನಟನ ಜೀವನವನ್ನು ಯಾವ ರೀತಿ ಬದಲು ಮಾಡಿದೆ ನೋಡಿ.
ಇದೀಗ ಭಾತೀಯ ಚಿತ್ರರಂಗವೇ ಕೆಜಿಎಫ್ ೨ ಗಾಗಿ ಎದುರು ನೋಡುತ್ತಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಮುಗಿದಿದ್ದು ಮಂದಿನ ವರುಷ ಸಿನಿಮಾ ತೆರೆ ಕಾಣಲಿದೆ. ಇತ್ತೀಚೆಗಷ್ಟೇ ಉಡಪಿಯ ಕಡಲತೀರದಲ್ಲಿ ಚಿತ್ರೀಕರಣ ಮುಗಿಸಿದ ಚಿತ್ರತಂಡ ಇದೀಗ ಹೈದರಾಬಾದ್ ಗ ನತ್ತ ಪಯಣ ಬೆಳೆಸಿದ್ದು ರಾಕಿಂಗ್ ಸ್ಟಾರ್ ಯಶ್ ಅವರು ಲಾಕ್ ಡೌನ್ ಬಳಿಕ ಉಡುಪಿಯ ಕಡಲತೀರದಲ್ಲಿ ನಡೆದ ಚಿತ್ರೀಕರಣದಲ್ಲಿ ಮೊದಲ ಬಾರಿಗೆ ಭಾಗಿಯಾಗಿದ್ದರು. ಇದೀಗ ಹೈದರಾಬಾದ್ ನಲ್ಲಿ ನಡೆಯುವ ಕೆಲ ಭಾಗದ ಚಿತ್ರೀಕರಣದಲ್ಲಿ ಕಾಣಿಸಿಕೊಳ್ಳುತ್ತಿದ್ದು ಯಶ್ ರವರ ಕೆಜಿಎಫ್ ಚಾಪ್ಟರ್ ೨ ಚಿತ್ರಕ್ಕೆ ಇಡೀ ವಿಶ್ವವೇ ಕಾಯುತ್ತಿದೆ
ಅಂತರರಾಷ್ಟ್ರೀಯ ನಟ ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್ ಚಿತ್ರದ ಚಿತ್ರೀಕರಣದ ನಂತರ ಯಶ್ ರವರ ಜೀವನದ ಟರ್ನಿಂಗ್ ಪಾಯಿಂಟ್ ಚಿತ್ರ ಕಿರಾತಕ-2 ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ಇನ್ನು ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಈ ಚಿತ್ರವನ್ನು ನಿಲ್ಲಿಸಲು ಹೇಳಿದ್ದರಂತೆ. ಇನ್ನು ಇದೀಗ ಈ ಚಿತ್ರವನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಯಶ್ ಚಿತ್ರದ ನಿರ್ಮಾಪಕರಾಗಿರುವ ಜಯಣ್ಣ ರವರಿಗೆ ಇಲ್ಲಿಯವರೆಗೆ ನನ್ನಿಂದಾಗಿ ಚಿತ್ರ ಅರ್ಧಕ್ಕೆ ನಿಂತಿರುವ ಕಾರಣ.
ಇಲ್ಲಿಯವರೆಗೆ ಚಿತ್ರೀಕರಣಕ್ಕೆ ತಗುಲಿದಂತಹ ವೆಚ್ಚ ಹಾಗೂ ಪಡೆದಿರುವ ಸಂಭಾವನೆ ಎಲ್ಲಾ ಸೇರಿ 3% ಬಡ್ಡಿಯನ್ನು ಕೂಡ ಸೇರಿಸಿ ಒಟ್ಟಾರೆಯಾಗಿ 13 ಕೋಟಿ ರೂಪಾಯಿಯನ್ನು ಜಯಣ್ಣ ರವರಿಗೆ ರಾಕಿಂಗ್ ಸ್ಟಾರ್ ಯಶ್ ಅವರು ವಾಪಸು ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಸದ್ಯ ರಾಕಿಂಗ್ ಸ್ಟಾರ್ ಮಾಡಿರುವ ಕೆಲಸ ಹಾಗೂ ವ್ಯಕ್ತಿತ್ವಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಬಹಳಾನೇ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.