ENTERTAINMENT

ಗಾಂಧಿನಗರಕ್ಕೆ ಬಸ್ನಲ್ಲಿ ಬರೋಕೆ ಹಣವಿಲ್ಲದೆ ನಡೆದುಕೊಂಡು ಬರುತ್ತಿದ್ದ ಹುಡುಗ ಈಗ ಗೋಲ್ಡನ್ ಸ್ಟಾರ್! ಗಣೇಶ್ ಅವರ ಲೈಫ್ ಕಹಾನಿ ಹೇಗಿದೆ ಗೊತ್ತಾ..??

ಸ್ನೇಹಿತರೆ, ಲಕ್ ಎಂದರೆ ನಮ್ಮ ಪರಿಶ್ರಮದ ಇನ್ನೊಂದು ಅಡ್ಡ ಹೆಸರು ಎಂದೇ ಹೇಳಬಹುದು. ಲಕ್ ಸಿಗಬೇಕು ಎಂದರೆ ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೇ ಹೊರತು ನಾವು ಮನೆಯಲ್ಲೇ ಕೂತು ಲಕ್ ಸಿಗುತ್ತದೆಂದು ಕಾದರೆ ಬರುವುದು ಲಕ್ ಅಲ್ಲ ಲಕ್ವ.

ರೀತಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಕೊಟ್ಟಂತಹ ಉತ್ತರ ಫನ್ನಿ ಎನಿಸಿದರು ಅದೆಷ್ಟು ವಾಸ್ತವವಾದ ಉತ್ತರ ಅಲ್ವಾ? ಇಂದು ಗೋಲ್ಡನ್ ಸ್ಟಾರ್ ಗಣೇಶ್ ಬೆಳೆದು ಬಂದ ಹಾದಿ ಅತ್ಯಂತ ಕಠಿಣವಾದದ್ದು ಲಕ್ ಎನ್ನುವುದು ಅವರಿಗೆ ಅಷ್ಟು ಸುಲಭವಾಗಿ ಸಿಗಲಿಲ್ಲ

ಅನೇಕ ಏಳುಬೀಳುಗಳ ಜರ್ನಿ ಇಂದಲೇ ಗಣೇಶ್ ಈ ಮಟ್ಟದ ಸೆಲೆಬ್ರಿಟಿಯಾಗಿ ಬೆಳೆದಿರುವುದು. ಸದಾ ಹಸನ್ಮುಖಿಯಾಗಿರುವಂತಹ ಗಣೇಶ ಅನೇಕ ನೋವು ಹಾಗೂ ಅವಮಾನಗಳನ್ನು ಎದುರಿಸಿ ಬಂದಿರುವವರು. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದ ಗಣೇಶ್ ಅವರಿಗೆ ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಆಸಕ್ತಿ ಇರಲಿಲ್ಲ.

ಬದಲಿಗೆ ನಟನೆಯಲ್ಲಿ ಅವರ ಸಂಪೂರ್ಣ ಆಲೋಚನೆ ಮುಳುಗಿಹೋಗಿತ್ತು. ಈ ಕಾರಣದಿಂದಾಗಿ ಕಲಾಕ್ಷೇತ್ರಕ್ಕೆ ಸೇರಿಕೊಂಡ ಗಣೇಶ್ ಅಭಿನಯವನ್ನು ಅಚ್ಚುಕಟ್ಟಾಗಿ ಕಲಿತರು. ಅಲ್ಲದೆ ಅನೇಕ ಕಾಮಿಡಿ ಸೀರಿಯಲ್ಗಳು ಹಾಗೂ ಸಣ್ಣಪುಟ್ಟ ರಿಯಾಲಿಟಿ ಶೋಗಳಲ್ಲೂ ಗಣೇಶ್ ಗುರುತಿಸಿಕೊಂಡರು.

ಹೌದು ಯದ್ವಾತದ್ವಾ, ಪಾಪ ಪಾಂಡು ಮುಂತಾದ ಹಾಸ್ಯ ಧಾರಾವಾಹಿಗಳಲ್ಲಿ ಗಣೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದರು. ಈ ನಡುವೆ ಅಹಂ ಬ್ರಹ್ಮಾಸ್ಮಿ, ಅಬ್ಬಬ್ಬ ಎಂಥ ಹುಡುಗ ಮುಂತಾದ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡ ಗಣೇಶ್ 2004ರಲ್ಲಿ ಉದಯ ಚಾನೆಲ್ನಲ್ಲಿ ಕಾಮಿಡಿ ಟೈಮ್ ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ನಿರೂಪಕರಾಗಿ ತಮ್ಮ ಛಾಪನ್ನು ಮೂಡಿಸಿದರು.

ಈ ಶೋ ವಿಶಿಷ್ಟ ರೀತಿಯಲ್ಲಿ ಮೂಡಿಬರುತ್ತಿದ್ದ ಶೋ ಕೊನೆಯವರೆಗೂ ಗಣೇಶ್ ವೀಕ್ಷಕರನ್ನು ರಂಜಿಸುತ್ತಾ ತಮಾಷೆ ಮಾಡುತ್ತಿದ್ದರು. ಆ ಸಮಯದಲ್ಲಿ ಜನರು ಗಣೇಶ್ ಅವರನ್ನು ಕಾಮಿಡಿ ಟೈಮ್ ಎಂದೇ ಕರೆಯಲು ಆರಂಭಿಸುತ್ತಿದ್ದರು.

ಸಿನಿಮಾದ ಮೂಲಕ ಗಣೇಶ್ರವರ ಲಕ್ಕೇ ಬದಲಾಗಿ ರಾಜ್ಯಾದ್ಯಂತ ಮನೆಮಾತಾದರು. ಇದಾದ ಬಳಿಕ ಗಣೇಶ್ ಇಂದೆಂದು ಕೂಡ ಹಿಂದೆ ತಿರುಗಿ ನೋಡಿಯೇ ಇಲ್ಲ. ಹೀಗೆ ಶೂಟಿಂಗ್ಗೆ,

ಬರಲು ಹಣವಿಲ್ಲದೆ ನಡೆದುಕೊಂಡೇ ಗಾಂಧಿನಗರಕ್ಕೆ ಬರುತ್ತಿದ್ದಂತಹ ಗಣೇಶ್ ತಮ್ಮ ಸಾಧಾರಣ ನಟನೆ ಹಾಗೂ ಕಠಿಣ ಪರಿಶ್ರಮದಿಂದ ಇಂದು ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಶ್ರದ್ಧೆ ಹಾಗೂ ಡೆಡಿಕೇಶನ್ ಹೆಸರಾಗಿರುವ ಗಣೇಶ್ ಅವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button