ಈ ಅಂಶಗಳು ನೀವು ಪ್ರೀತಿಸುವ ವ್ಯಕ್ತಿಗಳಲ್ಲಿದ್ದರೆ ನಿಮ್ಮೊಂದಿಗೆ ಪ್ರಾಮಾಣಿಕವಾಗಿದ್ದಾರೆ ಎಂದು ನಿರ್ಧರಿಸಬಹುದು
ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಬೀಳುವುದನ್ನು ಕಾಣುತ್ತಲೇ ಇರುತ್ತೇವೆ. ಅನೇಕರು ಪ್ರೀತಿಸಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಇನ್ನು ಕೈ ಕೊಟ್ಟ ಹುಡುಗನ ಅಥವಾ ಹುಡುಗಿಯಾ ನೆನಪು ಮಾಡಿಕೊಳ್ಳುತ್ತಾ ಜೀವನ ಹಾಳಾಗಿ ಹೋಯ್ತು ಎಂದು ಗೊಣಗಾಡುತ್ತಿರುತ್ತಾರೆ. ಅದೇನೇ ಆದರೂ ಪ್ರೀತಿ ಎನ್ನುವ ಮಾಯಾಜಾಲದಲ್ಲಿ ಬೀಳುವವರು ಸಂಖ್ಯೆಯೂ ಎಳ್ಳಷ್ಟು ಕಡಿಮೆಯಾಗಿಲ್ಲ.
ಪ್ರೀತಿಸಿ ಮದುವೆಯಾಗುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ಮೊದ ಮೊದಲು ಚೆನ್ನಾಗಿದ್ದ ಪ್ರೀತಿಯ ಸಂಬಂಧಗಳು, ಕಾಲ ಕಳೆದ ಹಾಗೆಯೇ ವ್ಯಕ್ತಿಯ ನಡವಳಿಕೆಗಳು ಕಾರಣಗಳಿಲ್ಲದೇ ಬದಲಾವಣೆಯಾಗುತ್ತದೆ. ಹೀಗೆ ಆದಾಗ ನೀವು ಪ್ರೀತಿಸುವ ಹುಡುಗ ಅಥವಾ ಹುಡುಗಿ ನಿಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದಾರೆಯೇ ಎಂಬ ಅನುಮಾನ ಬರುವುದು ಸಹಜ. ಜೊತೆಗೆ ನಿಮ್ಮ ಮೇಲೆ ಸುಳ್ಳು ಪ್ರೀತಿಯ
ನಿಜವಾಗಿಯೂ ಪ್ರೀತಿಸುವ ಹುಡುಗ ಅಥವಾ ಹುಡುಗಿಯೂ ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಸನ್ನಿವೇಶ ಮತ್ತು ಸಂದರ್ಭ ಹೇಗೆ ಇರಲಿ. ಕೊನೆಯವರೆಗೂ ನಿಮ್ಮ ಜೊತೆಗೆ ಇರುತ್ತಾರೆ. ಇಲ್ಲಿ ಮುಖ್ಯವಾಗಿ ನಂಬಿಕೆ, ವಿಶ್ವಾಸ ಮತ್ತು ಪ್ರೀತಿ ಹೆಚ್ಚಾಗಿ ಇರುತ್ತದೆ.
• ಸಂಬಂಧಗಳಲ್ಲಿ ಸಣ್ಣ ಪುಟ್ಟ ವೈಮನಸ್ಸನ್ನು ಸರಿ ಪಡಿಸಿಕೊಂಡು ಹೋಗುವ ವ್ಯಕ್ತಿಗಳು ಇದ್ದರೆ ಖಂಡಿತವಾಗಿ ಅಂತಹ ಸಂಬಂಧಗಳು ಜೋಪಾನವಾಗಿಯೇ ಉಳಿಯುತ್ತದೆ. ಜೊತೆಗೆ ಭಿನ್ನಾಭಿಪ್ರಾಯಗಳು ಬಂದಾಗ ದೂರವಾಗುವ ನಿರ್ಧಾರವನ್ನು ಎಂದಿಗೂ ಇಂತಹ ವ್ಯಕ್ತಿಗಳು ಮಾಡುವುದಿಲ್ಲ.
ಯಾವ ವ್ಯಕ್ತಿಯೂ ದೂರ ಮಾಡಲು ಬಯಸುತ್ತಾರೋ ಅಂತಹವರಲ್ಲಿ ನಿಮ್ಮ ಸಂಬಂಧವನ್ನು ಕಳೆದುಕೊಳ್ಳುವೆ ಎನ್ನುವ ಯಾವ ನೋವು ಮತ್ತು ಭಯವಾಗಲಿ ಇರುವುದಿಲ್ಲ. ಇಲ್ಲಿ ವ್ಯಕ್ತಿಯೂ ಸಮಯ ಸಾಧಕರಂತೆ ವರ್ತಿಸಿ ಬಿಡುತ್ತಾರೆ. ಸಾಮಾನ್ಯವಾಗಿ ವೈಯುಕ್ತಿಕ ಅಥವಾ ಕುಟುಂಬದ ಕಾರಣದಿಂದಾಗಿ ಇಬ್ಬರು ಸಂಬಂಧಗಳನ್ನು ಮುರಿದುಕೊಳ್ಳುವ ಅನಿವಾರ್ಯ ಸನ್ನಿವೇಶಗಳು ಎದುರಾದಾಗ, ನಿಮ್ಮ ಜೊತೆಯಿರುವ ವ್ಯಕ್ತಿಗಳಲ್ಲಿ ನಿಮ್ಮನ್ನು ಬಿಟ್ಟುಕೊಡಬೇಕು ಎನ್ನುವ ಭಯ ಕಾಣಿಸಿಕೊಳ್ಳುತ್ತದೆ. ಇಂತಹ ವ್ಯಕ್ತಿಗಳು ಪ್ರಾಮಾಣಿಕವಾಗಿ ನಿಮ್ಮನ್ನು ಪ್ರೀತಿಸುತ್ತಿದ್ದಾರೆ ಎಂದು ಅರ್ಥೈಸಿಕೊಳ್ಳಬಹುದಾಗಿದೆ.
ನಿಮ್ಮನ್ನು ಪ್ರೀತಿಸುವ ಪ್ರಾಮಾಣಿಕ ವ್ಯಕ್ತಿಗಳು ಮೊದಲು ನಿಮ್ಮನ್ನು ಗೌರವಿಸುತ್ತಾರೆ. ಜೊತೆಗೆ ನಿಮ್ಮ ಪ್ರೀತಿ, ನಿರ್ಧಾರ ಮತ್ತು ಭಾವನೆಗಳನ್ನು ಗೌರವಿಸುತ್ತಾರೆ. ಹಾಗಾಗಿ ಇಂತಹ ವ್ಯಕ್ತಿಗಳು ಪ್ರಾಮಾಣಿಕವಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.