ನಂದ ನಂದನಾ ನೀನು ಶ್ರೀಕೃಷ್ಣ’ ಹಾಡಿಗೆ ನೃತ್ಯ ಮಾಡಿದ ಕನ್ನಡದ ಮನೆಮಗಳು ಅನುಶ್ರೀ
ಕರ್ನಾಟಕದ ಮನೆ ಮಾತಾಗಿರುವ ಖ್ಯಾತ ನಿರೂಪಕಿ ಅನುಶ್ರೀ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸಕ್ರೀಯವಾಗಿದ್ದಾರೆ. ಹೌದು ತಮ್ಮ ಪ್ರತಿಯೊಂದು ವಿಚಾರಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಹೌದು ಅನುಶ್ರೀ ಎಂದ ಕೂಡಲೇ ನೆನಪಾಗುವುದು ಪಟ ಪಟ ಎಂದು ಅರಳು ಹುರಿದಂತೆ ಮಾತನಾಡುವ ಬೆಡಗಿ. ಮುಖದಲ್ಲೊಂದು ನಗು, ಜೊತೆ ಪಟಾಕಿಯಂತೆ ಮಾತನಾಡುತ್ತಾ ಎಲ್ಲರ ಮನೆಯ ಮಗಳಾದ ಅನುಶ್ರೀಯ ಚಂದದ ಮುಖ. ಹೌದು ಅನುಶ್ರೀ ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮಗಳ ಮೂಲಕ ನಿರೂಪಕಿಯಾಗಿ ಚಿರಪರಿಚಿತವಾಗಿದ್ದೇ ಹೆಚ್ಚು. ಸದ್ಯ ಇವರು ಕನ್ನಡದ ಬಹುಬೇಡಿಕೆಯ ನಿರೂಪಕಿಯಾಗಿದ್ದಾರೆ. ಕಿರುತೆರೆಯ ಅನೇಕ ಕಾರ್ಯಕ್ರಮಗಳನ್ನು ಮತ್ತು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಮೂಲತಃ ಮಂಗಳೂರಿನವರು. ಅಂದಹಾಗೆ, ಮಂಗಳೂರು ಮೂಲದ ನಮ್ಮ ಟಿವಿ ಚಾನೆಲ್ ಅಂತಾಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದ ಇವರು ಇದೀಗ ತುಂಬಾ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.