NEWS

ನೂರಾರು ಕನಸು ಕಂಡು ಮದುವೆಯಾದಳು ಆದರೆ ಮದುವೆಯಾದ ನಾಲ್ಕೇ ದಿನಕ್ಕೆ ಏನಾಗಿ ಹೋಯ್ತು ಗೊತ್ತಾ?ಕಣ್ಣೀರು ಬರುತ್ತೆ!

ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವು ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಮಲೆನಾಡಿನಲ್ಲಿ ಸೋಂಕಿಗೀಡಾಗುತ್ತಿರವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಹೀಗಿರುವಾಗಲೇ ನವ ವಧು ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಶಿವಮೊಗ್ಗದಲ್ಲಿ ಆತಂಕದ ಛಾಯೆ ಆವರಿಸಿದೆ. ಮದುವೆಯಾಗಿ ನಾಲ್ಕು ದಿನವಾಗಿದ್ದಷ್ಟೇ, ಇನ್ನೇನು ನೂತನ ಸಂಸಾರ ಸಾಗಿಸಬೇಕು ಎನ್ನುವಷ್ಟರಲ್ಲಿಯೇ ಕೊರೊನಾಗೆ 24 ವರ್ಷದ ನವ ವಿವಾಹಿತೆಯನ್ನು ಪ್ರಾಣಬಿಟ್ಟಿದ್ದಾರೆ.

ತಂದೆ -ತಾಯಿಗೆ ಒಬ್ಬಳೆ ಮಗಳಾದ ಪೂಜಾಳನ್ನು ಇದೇ ಸೋಮವಾರದಂದು ಶಿವಮೊಗ್ಗ ತಾಲೂಕಿನ ನಿಧಿಗೆ ಗ್ರಾಮದ ಮಹೇಶ್ ಜೊತೆ ವಿವಾಹ ಮಾಡಲಾಗಿತ್ತು. ಕೊರೊನಾ ಹೆಚ್ಚಳದಿಂದಾಗಿ ಕೊವಿಡ್ ನಿಯಮದಂತೆ ಸರಳವಾಗಿ ವಿವಾಹ ಮಾಡಿದ್ದಾರೆ. ಮರುದಿನ ಮಂಗಳವಾರ ಗಂಡನ ಮನೆಗೆ ಹೋಗಿ ಸಂಪ್ರದಾಯದಂತೆ ದೀಪ ಹಚ್ಚಿ ಪೂಜಾ ಮರಳಿ ತನ್ನ ತವರು ಮನೆಗೆ ಪೂಜಾ ಬಂದಿದ್ದಳು.

ಬುಧವಾರ ಸ್ವಲ್ಪ ಪೂಜಾಳಿಗೆ ಅನಾರೋಗ್ಯದಿಂದ ಸುಸ್ತಾಗಿದೆ. ನಗರದ ಹೊರವಲಯದ ಮಲವಗೊಪ್ಪ ಖಾಸಗಿ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿದ್ದಾಳೆ. ಬಳಿಕ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದೆ. ಪುನಃ ಅದೇ ಕ್ಲಿನಿಕ್​ಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಆಗಿದ್ದಾಳೆ. ತುಂಬಾ ಅಶಕ್ತ ಆಗಿದ್ದರಿಂದ ನಿನ್ನೆ ಅದೇ ಕ್ಲಿನಿಕ್​ನಲ್ಲಿ ಗ್ಲುಕೋಸ್ ಹಾಕುವುದಕ್ಕೆ ವೈದ್ಯರು ತೀರ್ಮಾನ ಮಾಡಿದ್ದರು. ಅದರಂತೆ ಡ್ರೀಪ್ ಹಾಕಿ ಕೆಲವೇ ಕ್ಷಣದಲ್ಲಿ ಪೂಜಾಳ ಆರೋಗ್ಯದಲ್ಲಿ ಏರುಪೇರು ಆಗಿದ್ದು, ವೈದ್ಯರು ಪೂಜಾಳ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಕೂಡಲೇ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ.

ಘಳಿಗೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಪೂಜಾಳ ತಾಯಿ ಆರೋಪ ಮಾಡಿದ್ದಾರೆ. ಒಟ್ಟಾರೆ ಇರುವ ಒಬ್ಬಳೇ ಮಗಳ ಮದುವೆಯನ್ನು ತುಂಬಾ ಖುಷಿ ಖುಷಿಯಾಗಿ ಮಾಡಿದ್ದ ಹೆತ್ತವರಿಗೆ ಕೊರೊನಾ ಮರೆಯಲಾರದ ಪೆಟ್ಟು ಕೊಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮದುವೆಯಾಗಿ ನಾಲ್ಕೇ ದಿನಕ್ಕೆ ಪೂಜಾ ಕೊರೊನಾಗೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ. ಕಳೆದ ನಾಲ್ಕು ದಿನಗಳ ಹಿಂದೆ‌ಯಷ್ಟೇ ಮದುವೆಯಾಗಿದ್ದ ವಿವಾಹಿತೆ ಕೊರೊನಾಗೆ ಬಲಿಯಾಗಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button