ಸಲೂನ್ ಗರ್ಲ್ ಆಗಿ ಬರುತ್ತಿದ್ದಾರೆ ವಜ್ರಕಾಯ ಬೆಡಗಿ
ವಜ್ರಕಾಯ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಂದನವನಕ್ಕೆ ಕಾಲಿಟ್ಟಿರುವ ಚಂದದ ಚೆಲುವೆ ಕಾರುಣ್ಯಾ ರಾಮ್ ಇದೀಗ ಸಲೂನ್ ಗರ್ಲ್ ಆಗಿ ಬದಲಾಗಿದ್ದಾರೆ. ಹೌದು, ಗ್ಲಾಮರಸ್ ಲುಕ್ ನ ಮೂಲಕವೇ ಸಿನಿ ಪ್ರಿಯರ ಮನ ಸೆಳೆಯುತ್ತಿದ್ದ ಮುದ್ದು ಮುಖದ ಚೆಲುವೆ ಕಾರುಣ್ಯಾ ರಾಮ್ ಇದೀಗ ತಮ್ಮ ಮುಂದಿನ ಸಿನಿಮಾದಲ್ಲಿ ಸಲೂನ್ ಗರ್ಲ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ನಲ್ಲಿ ಕಾರುಣ್ಯಾ ಸಲೂನ್ ಗರ್ಲ್ ಆಗಿ ನಟಿಸುವ ಮೂಲಕ ಸಿನಿ ಪ್ರಿಯರನ್ನು ರಂಜಿಸಲಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ರೀತಿಯ ಪಾತ್ರಕ್ಕೆ ಜೀವ ತುಂಬುತ್ತಿರುವುದಕ್ಕೆ ಬಹಳ ಖುಷಿಯಾಗಿದ್ದಾರ ಕಾರುಣ್ಯಾ. “ನಾನು ಈ ಸಿನಿಮಾದಲ್ಲಿ ಅನಾಥೆಯಾಗಿ ನಟಿಸುತ್ತಿದ್ದೇನೆ. ಅನಾಥಶ್ರಮದಲ್ಲಿ ಬೆಳೆದಿರುವ ನಾನು ಸಲೂನ್ ನಲ್ಲಿ ಕೆಲಸ ಮಾಡುತ್ತಿರುತ್ತೇನೆ. ಜೀವನದ ಮೇಲೆ ಅಪಾರವಾದ ಪ್ರೀತಿ ಹೊಂದಿರುವ ನನಗೆ ಜೀವನದಲ್ಲಿ ಏನಾದರೂ ಮಹತ್ತರವಾದುದನ್ನು ಸಾಧಿಸಬೇಕು, ಎಲ್ಲರ ಹಾಗೆ ಚೆನ್ನಾಗಿ ಓದಿ ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲವಿರುವ ಹುಡುಗಿ” ಎಂದು ಪಾತ್ರವನ್ನು ವಿವರಿಸುತ್ತಾರೆ ಕಾರುಣ್ಯಾ ರಾಮ್.