ENTERTAINMENT

ಖಾಸಗಿ ಜೀವನದ ಬಗ್ಗೆ ಮಾತನಾಡಿದ ನಟ; ತರಾಟೆಗೆ ತೆಗೆದುಕೊಂಡ ‘ಕಿರಾತಕ’ ಸಿನಿಮಾ ನಟಿ ಓವಿಯಾ

ಸಾಮಾಜಿಕ ಮಾಧ್ಯಮ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕರು ಹಣ ಗಳಿಸುವ ಕೆಲಸವನ್ನು ಮಾಡುವುದು ಗುಟ್ಟಾಗಿ ಉಳಿದಿಲ್ಲ. ಕಾಂಟ್ರವರ್ಸಿ, ಅಸಹ್ಯ, ಖಾಸಗಿ ಜೀವನದ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟರೆ ಸಿಕ್ಕಾಪಟ್ಟೆ ವೀಕ್ಷಣೆ ಪಡೆಯಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ.

ಅದರಲ್ಲೂ ಸೆಲೆಬ್ರಿಟಿಗಳ ಜೀವನವನ್ನು ತಿಳಿದುಕೊಳ್ಳುವ ಕುತೂಹಲ ಪ್ರೇಕ್ಷಕರಿಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಅನೇಕರು ಯುಟ್ಯೂಬ್ ಚಾನೆಲ್ ಸೃಷ್ಟಿ ಮಾಡಿಕೊಂಡು ಮನಬಂದಂತೆ ಮಾತನಾಡುತ್ತಾರೆ. ಹೀಗೆ ನಟಿ ಒಬ್ಬರ ಖಾಸಗೀ ಬದುಕಿನ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಿರಿಬಿಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ, ಯುಟ್ಯೂಬರ್‌ ಹಾಗೂ ನಟರೂ ಆಗಿರುವ ‘ಕಿರಾತಕ’ ಸಿನಿಮಾ ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ನಟಿ ಓವಿಯಾಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವಿದೆ. ಬಿಗ್ ಬಾಸ್ ಶೋನಲ್ಲಿ ಅವರು ಭಾಗವಹಿಸಿ ಕಮಾಲ್ ಮಾಡಿದ್ದರು. ಅದನ್ನು ಆಧರಿಸಿ ಅವರ ಬಗ್ಗೆ ಬಯಿಲ್ವನ್ ರಂಗನಾಥನ್ ವೀಡಿಯೋ ಮಾಡಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಆ ವೀಡಿಯೋದಲ್ಲಿ ನಟಿ ಓವಿಯಾ ಅವರ ಖಾಸಗಿ ಜೀವನ, ವೃತ್ತಿ ಜೀವನದಲ್ಲಾದ ಏರಿಳಿತಗಳನ್ನು ಪ್ರಸಾರ ಮಾಡಲಾಗಿದೆ.

ಬಯಿಲ್ವನ್ ರಂಗನಾಥನ್ ಈಗಾಗಲೇ ಸಾಕಷ್ಟು ಬಾರಿ ನಟಿಯರ ಖಾಸಗಿ ಜೀವನ, ಚಿತ್ರರಂಗದಲ್ಲಿ ಸೋಲು-ಗೆಲುವಿನ ಕುರಿತು ವೀಡಿಯೋ ಮಾಡಿ ಅಪ್‌ಲೋಡ್ ಮಾಡಿದ್ದಾರೆ. ಈ ರೀತಿಯ ಕಿರುಕುಳದಿಂದಾಗಿ ಚಿತ್ರರಂಗದಿಂದ ಓಡಿಹೋದವರು ಎಂದು ಟೈಟಲ್ ಕೊಟ್ಟು ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ. ಈ ಸಾಲಿನಲ್ಲಿ ನಟಿ ಸದಾ, ಸಂಧ್ಯಾ, ಅಭಿರಾಮಿ, ಸುನೈನಾ, ಪೂಜಾ, ಸೋನಿಯಾ ಅಗರ್‌ವಾಲ್, ಓವಿಯಾ ಸೇರಿದಂತೆ ಮುಂತಾದವರ ಬಗ್ಗೆ ಬಯಿಲ್ವನ್ ಮಾತನಾಡಿದ್ದಾರೆ. ನಟಿಯರ ಖಾಸಗಿ ಜೀವನ, ಹವ್ಯಾಸ, ದೇಹದ ಆಕಾರದ ಬಗ್ಗೆಯೂ ಈ ವೀಡಿಯೋಗಳು ಇವೆ. ಈ ವೀಡಿಯೋ ನಟಿ ಓವಿಯಾ ಕಣ್ಣಿಗೆ ಬಿದ್ದಿದ್ದು, ಟ್ವಿಟ್ಟರ್‌ನಲ್ಲಿ ಅವರು ರಂಗನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಆಗಮಿಸಿದ್ದಾಗ ಓವಿಯಾ ಅವರು #GoBackModi ಎಂದು ಟ್ವೀಟ್ ಮಾಡಿದ್ದರು. ಸಾರ್ವಜನಿಕವಾಗಿ ಅಗೌರವ ತೋರಿದ್ದಕ್ಕಾಗಿ ಅವರ ಮೇಲೆ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ. ಅಲೆಕ್ಸಿಸ್ ಸುಧಾಕರ್ ಅವರು ಎಸ್‌ಪಿ, ಸಿಬಿ-ಸಿಐಡಿಗೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. 2007ರಿಂದ ಇಲ್ಲಿಯವರೆಗೆ ಓವಿಯಾ ನಟಿಸಿದ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ. ತೆಲುಗು, ತಮಿಳು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಓವಿಯಾ ಅವರು ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button