ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇನ್ಫೋಸಿಸ್ ಕಂಪನಿಯ ಉದ್ಯೋಗ ಕೈಚೆಲ್ಲಿ, ಯಶಸ್ವಿ ರೈತ ಮಹಿಳೆ ಎನಿಸಿದ ಇವರ ಪರಿಚಯ ನಿಮಗುಂಟೇ?
ಈಕೆ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ಬಹುರಾಷ್ಟ್ರೀಯ ಕಂಪನಿ ಇನ್ಫೋಸಿಸ್ ನಲ್ಲಿ ಕೆಲಸದ ಆಫರ್ ಕೂಡ ಬರುತ್ತದೆ. ಆದರೆ ಅಷ್ಟರ ವೇಳೆಗೆ ಆಕೆಗೆ ಮದುವೆಯಾಗಿರುತ್ತದೆ. ಗಂಡನ ಮನೆಯಲ್ಲಿ ಅಲ್ಲಿವರೆಗೂ ಯಾವುದೇ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ದುಡಿವರಲ್ಲ. ಹಾಗಾಗಿ ಗಂಡ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಕೆಲಸಕ್ಕೆ ಹೋಗುವುದಕ್ಕೆ ಸುತ್ರಾಮ್ ಒಪ್ಪುವುದಿಲ್ಲ.
ಕೊನೆಗೆ ಗಂಡ ಕೆಲಸ ಮಾಡಲೇಬೇಕು ಎಂಬ ಮನಸ್ಸಿದ್ದರೆ ನಮ್ಮದೇ ಜಮೀನಿನಲ್ಲಿ ಕೆಲಸ ಮಾಡಿ ನಿಮ್ಮ ಸಾಧನೆ ಏನು ಎಂದು ತೋರಿಸು ಎಂದು ಸವಾಲು ಹಾಕಿದರು. ಆಕೆ ಆ ಮಾತನ್ನೇ ಸವಾಲನ್ನಾಗಿ ಸ್ವೀಕರಿಸಿ, ಇಂದು ಇಡೀ ದೇಶವೇ ತಿರುಗಿ ನೋಡುವಂತಹ ಸಾಧಕಿಯಾಗಿಯಾದ್ದಾರೆ. ಅವರು ತಮ್ಮ ಸಾಧನೆ ಮಾಡಲು ಆಯ್ಕೆ ಮಾಡಿಕೊಂಡಿದ್ದು, ವ್ಯವಸಾಯ ಕ್ಷೇತ್ರ ಎಂಬುದು ಗಮನಾರ್ಹ. ಈಕೆ ಇಂದು ಯಶಸ್ವಿ ರೈತ ಮಹಿಳೆಯಾಗಿ ಸಾವಿರಾರು ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾಳೆ. ಆಕೆ ಬೇರೆ ಯಾರೂ ಅಲ್ಲ, ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕವಿತಾಳ ಗ್ರಾಮದ ಡಾ. ಕವಿತ ಮಿಶ್ರಾ ಅವರು
ಕವಿತಾ ಅವರು ಮೂಲತಃ ಧಾರವಾಡದವರು. ಅವರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಪಂಚೆಯುಟ್ಟ ಯಾವುದಾದರೂ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದರೆ ಆತನನ್ನು ನೋಡಿ ಓಡಿ ಹೋಗುತ್ತಿದ್ದರಂತೆ. ಅಂತಹ ಮಹಿಳೆ ಇಂದು ಎಂಟು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿ ಕೋಟ್ಯಾಂತರ ರೂ. ಸಂಪಾದಿಸುತ್ತಿದ್ದಾರೆ. ಈಕೆ ಇಂದು ಇಡೀ ದೇಶದಲ್ಲೇ ಶ್ರೀಗಂಧದ ಬೆಳೆಯನ್ನು ಬೆಳೆದು ಮಾದರಿ ರೈತ ಮಹಿಳೆಯೆನಿಸಿಕೊಂಡಿದ್ದಾರೆ.
ಇವರ ತೋಟದ ನರ್ಸರಿಯಲ್ಲಿ ಬೆಳೆಯುವ ಶ್ರೀಗಂಧದ ಸಸಿಗಳು ಹಾಗೂ ಮರಗಳನ್ನು ದೇಶ ವಿದೇಶಕ್ಕೆ ಮಾರಾಟ ಮಾಡುತ್ತಾರೆ. ದೂರದ ಮಲೇಶಿಯಾ, ಸಿಂಗಪೂರ್ ನಂತಹ ದೇಶಗಳಿಂದಲೂ ಇವರ ಶ್ರೀಗಂಧದ ಮರಕ್ಕೆ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಈಕೆಯ ಸಾಧನೆಯನ್ನು ಮೆಚ್ಚಿ ಗೌರವ ಸಲ್ಲಿಸಿದ್ದಾರೆ. ಡಾ. ಕವಿತಾ ಮಿಶ್ರಾ ಅವರು ಕಂಪ್ಯೂಟರ್ ಸೈನ್ಸ್ ಪದವಿಯನ್ನು ಪಡೆದುಕೊಂಡರೂ ರೈತರಾಗಿ ಬೆಳೆದಿದ್ದಾರೆ. ಈಗಾಗಲೇ ಹೇಳಿದಂತೆ ಗಂಡನ ಮನೆಯಲ್ಲಿ ಅವಕಾಶ ಇಲ್ಲದ ಕಾರಣ ಅವರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು
ತಿಂಗಳೂ ಆದಾಯ ನಿರೀಕ್ಷಿಸಲು ಸಾಧ್ಯ. ಇಲ್ಲದೇ ಹೋದರೆ ಮಾರುಕಟ್ಟೆ ವಿರುದ್ಧ ನಿಲ್ಲಲು ಸಾಧ್ಯವಿಲ್ಲ ಎಂದು ತಮ್ಮ ಅನುಭವದ ಮಾತನ್ನು ಹೇಳುತ್ತಾರೆ ಕವಿತಾ. ಇವರ ಸಾಧನೆಗೆ ಸಾವಿರಾರು ಪ್ರಶಸ್ತಿಗಳು ಸಿಕ್ಕಿವೆ. ದೇಶದ ನಾನಾ ವಿವಿಗಳಲ್ಲಿ ಕೃಷಿ ಬಗ್ಗೆ ಬೋಧನೆ ಮಾಡಲು ಸಂಪನ್ಮೂಲ ವ್ಯಕ್ತಿಯಾಗಿ ತೆರಳುತ್ತಾರೆ. ಇವರನ್ನು ನಡೆದಾಡುವ ಕೃಷಿ ವಿಶ್ವವಿದ್ಯಾಲಯ ಎಂದೇ ಹೇಳಲಾಗುತ್ತದೆ. ಜಗತ್ತು ರೈತನಿಗೆ ಕೊಡುವ ಗೌರವ ಬದಲಾಗಬೇಕು ಎನ್ನುವ ಇವರ ಕನಸಿಗೆ ಇವರ ಪತಿ ಸಾಥ್ ನೀಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.