ENTERTAINMENT

ತಮ್ಮ ನಗುಮುಖದಿಂದಲೇ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದ ನೆರೆ ರಾಜ್ಯದ ನಟಿ ಶಿಲ್ಪಾ ಅಲಿಯಾಸ್ ಚಿಪ್ಪಿ.

ಕೆಲವರ ಮುಖಚರ್ಯೆ ಅವರ ಹೃದಯದ ಭಾವನೆಗಳನ್ನು ಹೇಳುತ್ತದೆ. ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ನಟಿ ಶಿಲ್ಪಾ ಅವರು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ. ಅವರನ್ನು ನೋಡಿದ ಯಾರೇ ಆಗಲಿ ಒಂದು ಸಣ್ಣ ನಗುವನ್ನು ಕೊಡದೇ ಇರುವುದಿಲ್ಲ. ಅಂತಹ ಸ್ವಚ್ಛ ಮನಸ್ಸಿನ ಹುಡುಗಿ ಈ ಶಿಲ್ಪಾ ಅವರು.

ಇವರು ಕನ್ನಡಿಗರ ಮನಸ್ಸು ಗೆದ್ದ ಇವರು ಜನುಮದ ಜೋಡಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೆ ನಟಿಸಿದ್ದರು. ಈ ಸಿನಿಮಾ ಮೂಲಕ ಇವರು ಬಹುತೇಕ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇವರು ಮೂಲತಃ ಕೇರಳ ರಾಜ್ಯದವರು. ಮಲೆಯಾಳಂ ಇವರ ಮಾತೃಭಾಷೆಯಾದರೂ ಕನ್ನಡ ಭಾಷೆಯನ್ನು ಅಚ್ಚುಕಟ್ಟಾಗಿ ಮಾತನಾಡುತ್ತಿದ್ದರು.

ಇವರು ನಟಿಸಿದ್ದು ಬೆರಳೆಣಿಕೆಯ ಸಿನಿಮಾ ಆದರೂ ಕೂಡ ಕನ್ನಡಿಗರ ಮನಸ್ಸು ಗೆಲ್ಲುವಲ್ಲಿ ಮಾತ್ರ ಬಹಳ ಯಶಸ್ವಿಯಾಗಿದ್ದರು. ಇವರ ನಿಜವಾದ ಹೆಸರು ಚಿಪ್ಪಿ ಎಂದು. ಜನುಮದ ಜೋಡಿ ಸಿನಿಮಾದ ನಂತರ ಇವರು ಪಾಂಡವರು ಎಂಬ ಸಿನಿಮಾದಲ್ಲೂ ನಟಿಸಿದ್ದರು. ಇವರು ಶಿವರಾಜ್ ಕುಮಾರ್ ಅವರ ಜೊತೆಗಷ್ಟೇ ಅಲ್ಲದೇ, ರಮೇಶ್ ಅರವಿಂದ್ ಅವರ ಜೊತೆಗೂ ನಟಿಸಿದ್ದಾರೆ.

ಇವರು ನಿರ್ಮಾಪಕ ರಂಜಿತ್ ಅವರನ್ನು ವಿವಾಹವಾಗಿದ್ದಾರೆ. ಶಿಲ್ಪಾ ಮತ್ತು ರಂಜಿತ್ ದಂಪತಿಗೆ ಆವಂತಿಕಾ ಎಂಬ ಮಗಳಿದ್ದಾಳೆ. ಅವರ ಮಗಳು ಕೂಡ ನೋಡಲು ಶಿಲ್ಪಾ ಅವರ ಹಾಗೆಯೇ ಇದ್ದಾರೆ. ಇವರು ಮದುವೆಯಾದ ಬಳಿಕ ಅಭಿನಯದಿಂದ ದೂರವಾದರೂ ನಿರ್ಮಾಣ ಸಂಸ್ಥೆಯನ್ನು ಕಟ್ಟಿಕೊಂಡು ನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಿರ್ಮಾಣ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಬಳಿಕ ಇವರು ಸಿನಿಮಾಗಳ ನಿರ್ಮಾಣ ಮಾಡಲು ಮುಂದಾದರು. ಆದರೆ ಇದರಿಂದ ಅವರು ಸಾಕಷ್ಟು ನಷ್ಟವನ್ನು ಅನುಭವಿಸಿದರು. ಹಾಗಾಗಿ ಮಲೆಯಾಳಂ ಭಾಷೆಯ ಧಾರಾವಾಹಿಗಳಲ್ಲಿ ನಟನೆ ಮಾಡಲು ಪ್ರಾರಂಭಿಸಿದರು. ಧಾರಾವಾಹಿಯಲ್ಲಿ ಯಶಸ್ವಿಯಾದ ಬಳಿಕ ಅವರು ಧಾರಾವಾಹಿಗಳನ್ನು ನಿರ್ಮಾಣ ಮಾಡಲು ಮುಂದಾದರು. ಅಲ್ಲಿ ಇವರಿಗೆ ಹೆಸರು ಮತ್ತು ಹಣವನ್ನು ಸಂಪಾದನೆ ಮಾಡಲು ಪ್ರಾರಂಭಿಸಿದರು.

ಮಲೆಯಾಳಂ ಕಿರುತೆರೆ ಲೋಕದಲ್ಲಿ ಶಿಲ್ಪಾ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರು ದೊಡ್ಡ ನಿರ್ಮಾಪಕಿಯಾದರೂ ಕೂಡ ಎಲ್ಲರನ್ನೂ ತಮ್ಮ ಕುಟುಂಬದವರಂತೆಯೇ ಕಾಣುತ್ತಾರೆ. ಚಿತ್ರೀಕರಣದ ವೇಳೆ ಅಲ್ಲಿ ಭಾಗವಹಿಸುವ ಪ್ರತಿಯೊಬ್ಬರನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಮಾತನಾಡಿಸುತ್ತಾರೆ. ಮಗಳು ಸದ್ಯ ತಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾಳೆ. ಮುಂದೊಂದು ದಿನ ಆಕೆಯೂ ಕೂಡ ದೊಡ್ಡ ನಟಿಯಾಗಿ ಬೆಳೆಯಬಹುದು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button