ಎರಡನೇ ಮದುವೆಗೆ ಸಿದ್ದವಾದ ನಟ ನಾಗಚೈತನ್ಯ ಆಪ್ತರು ಸೂಚಿಸಿದ ಹುಡುಗಿ ಇವರೇ…ನೋಡಿ ಮನರಂಜನೆ
ಟಾಲಿವುಡ್ ಚಿತ್ರರಂಗದ ಖ್ಯಾತ ದಂಪತಿಗಳಾದ ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ವಿಚ್ಛೇದನ ವಿಚಾರ ಅವರ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ತರಿಸಿದ್ದು ಇದನ್ನು ಹೇಗೆ ಸ್ವೀಕರಿಸಬೇಕು ಎಂಬುದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲವಂತಾಗಿದೆ. ಅನೇಕರು ಸಮಂತಾ ಅವರದ್ದೇ ತಪ್ಪು ಎಂದು ದೂರೋಕೆ ಪ್ರಾರಂಭಿಸಿದ್ದು ಸಮಂತಾ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ವಿಚ್ಛೇದನ ವಿಚಾರ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತಿದೆ. ಸಮಂತಾ ಅವರು ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದು ಈ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿತ್ತು.
ಇದರ ಜೊತೆಗೆ ಸಮಂತಾ ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು ಇವೆಲ್ಲದರ ಜತೆಗೆ ಸಮಂತಾ ಅವರ ಬೋಲ್ಡ್ ದೃಶ್ಯಗಳು ಎಲ್ಲರ ಕಣ್ಣು ಕುಕ್ಕಿದ್ದವು ಎನ್ನಬಹುದು. ಸಮಂತಾ ಈ ವೆಬ್ ಸೀರಿಸ್ನಲ್ಲಿ ಅನೇಕ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಕೆಲವು ದೃಶ್ಯಗಳು ಎಷ್ಟು ಬೋಲ್ಡ್ ಆಗಿತ್ತು ಎಂದರೆ ಸ್ವತಃ ನಿರ್ದೇಶಕರು ಈ ದೃಶ್ಯಗಳಿಗೆ ಕತ್ತರಿ ಹಾಕಿದ್ದರು. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಮದುವೆಯ ನಂತರದಲ್ಲಿ ಹೀರೋಯಿನ್ಗಳು ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ವಿರಳ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಖಚಿತ ಆದರೆ ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ಬಹಳ ಮಹತ್ವ ಪಡೆದುಕೊಂಡಿತ್ತು. ಈ ಕಾರಣಕ್ಕೆ ಅವರು ವೆಬ್ ಸೀರಿಸ್ ಒಪ್ಪಿಕೊಂಡಿದ್ದು ಇದಕ್ಕೆ ಕುಟುಂಬದವರ ವಿರೋಧವಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್ವರೆಗೆ ತಂದು ನಿಲ್ಲಿಸಿತು ಎನ್ನುತ್ತಿವೆ ಮೂಲಗಳು.