NEWS

ಅಪ್ಪು ಸಾವಿನಲ್ಲಿ ನಡೆದಿದೆ ಮಹಾ ಮೋಸ,ಪುನೀತ್ ಸಾವಿನ ಬಗ್ಗೆ ತನಿಖೆ ನಡೆಸಿ…

ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿಗೆ ಅವರ ಕುಟುಂಬ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿ, ಈ ಸಂಬಂಧ ಬಗ್ಗೆ ತನಿಖೆ ನಡೆಸುವಂತೆ ಕೋರಿ ಪುನೀತ್ ಅಭಿಮಾನಿಯೊಬ್ಬರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅರುಣ್ ಪರಮೇಶ್ವರ್ ದೂರು ನೀಡಿದ್ದು, ಪುನೀತ್ ರಾಜ್‌ಕುಮಾರ್‌ಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಅವರು ರಮಣಶ್ರೀ ಆಸ್ಪತ್ರೆಗೆ ಹೋಗಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ ಅಲ್ಲಿ ಸೂಕ್ತ ಚಿಕಿತ್ಸೆಯೂ ಸಿಕ್ಕಿದಂತೆ ಕಾಣುತ್ತಿಲ್ಲ. ಅವರನ್ನು ತಡವಾಗಿ ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಗಿದೆ. ವಿಕ್ರಮ್ ಆಸ್ಪತ್ರೆಗೆ ಸಾಗಿಸಲು ರಮಣಶ್ರೀ ಆಸ್ಪತ್ರೆ ಕಡೆಯಿಂದ ಆಂಬ್ಯೂಲೆನ್ಸ್ ಕೂಡ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಕುರಿತು ಸತ್ಯಾಸತ್ಯತೆ ಬಹಿರಂಗವಾಗಬೇಕು.

ಪುನೀತ್ ರಾಜ್‌ಕುಮಾರ್ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆ ಸುತ್ತಲೂ ಪೊಲೀಸ್ ಕಾವಲು |  Prajavani

ಪುನೀತ್ ರಾಜ್‌ಕುಮಾರ್‌ ಎಷ್ಟು ಸಮಯಕ್ಕೆ ರಮಣಶ್ರೀ ಆಸ್ಪತ್ರೆಗೆ ದಾಖಲಾದರು. ಎದೆನೋವಿನ ಬಗ್ಗೆ ಹೇಳಿದಾಗ ಎಷ್ಟು ನಿಮಿಷಗಳ ಕಾಲ ರಮಣಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಯಾವ್ಯಾವ ಮಾತ್ರೆಗಳನ್ನು ಅಲ್ಲಿ ನೀಡಲಾಗಿತ್ತು. ಆ ಬಳಿಕ ಅವರು ಆಸ್ಪತ್ರೆಯಿಂದ ಎಷ್ಟು ಸಮಯಕ್ಕೆ ವಿಕ್ರಮ್ ಆಸ್ಪತ್ರೆಗೆ ತೆರಳಿದರು. ಆಸ್ಪತ್ರೆಗೆ ಹೋಗಲು ರಮಣಶ್ರೀ ಆಸ್ಪತ್ರೆಯಿಂದ ಏನು ವ್ಯವಸ್ಥೆ ಮಾಡಲಾಗಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಈ ಕುರಿತು ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ಅರುಣ್ ಪರಮೇಶ್ವರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪುನೀತ್‌ಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಕುಟುಂಬ ವೈದ್ಯರು ಎಂದು ಭಾವಿಸಿದ್ದ ಡಾ. ರಮಣರಾವ್ ಬಳಿ ತೆರಳಿದ್ದರು. ಹೃದಯಾಘಾತಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಿಲ್ಲ. ವಿಕ್ರಮ್ ಆಸ್ಪತ್ರೆಗೆ ರವಾನಿಸುವಲ್ಲಿ ತಡವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ದೂರು ದಾಖಲಾಗಿದೆ.

 

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ…

Related Articles

Leave a Reply

Your email address will not be published.

Back to top button

You cannot copy content of this page