NEWS

ಪುನೀತ್ ಪತ್ನಿ ಅಶ್ವಿನಿ ಅವರ ತಂದೆ ನಿಜಕ್ಕೂ ಯಾರು ಗೊತ್ತಾ….ನೋಡಿ ಒಮ್ಮೆ ಮೊದಲಸಲ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಇನ್ನಿಲ್ಲ ಎಂಬ ಸುದ್ದಿ ಬಂದು ಅದಾಗಲೇ ಎರಡು ವಾರಗಳೇ ಕಳೆದು ಹೋಗಿದ್ದು ಆದರೆ ಅಭಿಮಾನಿಗಳಲ್ಲಿ ಮತ್ತು ಕುಟುಂಬದವರಲ್ಲಿ ಇಂದಿಗೂ ಕೂಡ ಆ ದುಃಖ ಕಡಿಮೆಯಾಗಿಲ್ಲ. ಹೌದು ಅಪ್ಪು ಅವರು ಇಡೀ ರಾಜ್ಯ ಪ್ರೀತಿಸುತ್ತಿದ್ದ ವ್ಯಕ್ತಿಯಾಗಿದ್ದು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಕೂಡ ಎಲ್ಲರಿಗೂ ಅಪ್ಪು ಕಂಡರೆ ಬಹಳ ಪ್ರೀತಿ. ಹೌದು ಪುಟ್ಟ ಮಕ್ಕಳು ಅಪ್ಪು ಅವರ ಫೋಟೋ ನೋಡಿ ಅಪ್ಪು ಅಪ್ಪು ಎಂದು ಗುರುತಿಸುವ ವಿಡಿಯೋಗಳನ್ನು ನೋಡಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ಬರುತ್ತದೆ.

ಹೌದು ಈ ರೀತಿ ಇರುವ ಸಮಯದಲ್ಲಿ ಅಪ್ಪು ಅವರ ಕುಟುಂಬದಿಂದ ಏನಾದರೂ ಒಂದು ಸುದ್ದಿ ಸಿಕ್ಕರೆ ಸಾಕು ಅದು ಅಭಿಮಾನಿಗಳಿಗೆ ಆಶಾದಾಯಕವಾಗಿದ್ದು ಇನ್ನು ತಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಅವರು ಚಿತ್ರರಂಗದ ಬಗ್ಗೆ  ದೊಡ್ಡ ಕನಸನ್ನು ಇಟ್ಟುಕೊಂಡಿದ್ದವರಾಗಿದ್ದರು.  ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆ ಪ್ರಾರಂಭಿಸಿ ಅದರ ಮೂಲಕ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಸದಾ ಯೋಚಿಸುತ್ತಿದ್ದರಂತೆ. ಅದಾಗಲೇ ಅಪ್ಪು ಅವರು ಕೆಲವು ಕಥೆಗಳನ್ನು ಕೂಡ ಕೇಳಿ ಇಷ್ಟಪಟ್ಟಿದ್ದು ಅವುಗಳನ್ನು ಸಿನಿಮಾ ಮಾಡಬೇಕು ಎಂದು ಕನಸನ್ನು ಕೂಡ ಕಂಡಿದ್ದರು.

ಇದರ ಜೊತೆಗೆ ಹೊಸ ಹೊಸ ಸಿನಿಮಾ ಘೋಷಣೆಯನ್ನು ಕೆಲ ದಿನಗಳಲ್ಲೇ ಮಾಡಬೇಕಿತ್ತು. ಆದರೆ ಅಪ್ಪು ಅವರಿಗೆ ದಿಢೀರ್ ಎಂದು ಈ ರೀತಿಯಾದ ಕಾರಣ ನಡೆಯಬೇಕಿದ್ದ ಎಲ್ಲಾ ವಿಚಾರಗಳು ಕೂಡ ಯಾವುದು ನಡೆದಿಲ್ಲ. ಇನ್ನು ದೊಡ್ಮನೆಯಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಅಪ್ಪು ಅವರು ಕಂಡಿದ್ದ ಕನಸುಗಳನ್ನು ನೆರವೇರಿಸಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಿರ್ಧಾರ ಮಾಡಿದ್ದು ಇನ್ನುಮುಂದೆ  ಪ್ರೊಡಕ್ಷನ್ಸ್ ಸಂಸ್ಥೆಯ ಮುಂದಾಳತ್ವ ವಹಿಸಲಿದ್ದಾರೆ ಎಂದೇ ಹೇಳಲಾಗುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಶೀಘ್ರದಲ್ಲೇ ಅಪ್ಪು ಅವರ ಕನಸಿನ ಹೊಸ ಸಿನಿಮಾ ಬಗ್ಗೆ ಅನೌನ್ಸ್ಮೆಂಟ್ ಸಹ ಮಾಡಲಿದ್ದಾರೆ ಎಂದು ಮಾಹಿತಿ ಕೂಡ ಸಿಕ್ಕಿದ್ದು ಅಪ್ಪು ಅವರು ಚಾಮರಾಜನಗರದ ಸುತ್ತ ಮುತ್ತ ಚಿತ್ರೀಕರಣ ಮಾಡಿ  ಹೆಸರಿನ ಒಂದು ಡಾಕ್ಯುಮೆಂಟರಿಯನ್ನು ಕೂಡ ಮಾಡಿದ್ದರು. ಈ ಎಲ್ಲದರ ಜವಾಬ್ದಾರಿಯನ್ನು ಅಶ್ವಿನಿ ಅವರೇ ವಹಿಸಿಕೊಂಡು ಹೋಗುತ್ತಾರೆ ಎನ್ನಲಾಗುತ್ತಿದೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪತಿಯ ಹಿಂದಿನ ಪವರ್ ಆಗಿದ್ದು ಚಿತ್ರರಂಗದಲ್ಲಿ ಇವರಿಬ್ಬರು ಆದರ್ಶ ದಂಪತಿಗಳಾಗಿದ್ದು ಪುನೀತ್ ಅವರು ಮಾಡುತ್ತಿದ್ದ ಎಲ್ಲಾ ಕೆಲಸಗಳಿಗೂ ಕುಡ ಬೆನ್ನೆಲುಬಾಗಿ ನಿಂತು ಎಲ್ಲದಕ್ಕೂ ಬೆಂಬಲ ನೀಡುತ್ತಾ ಅವರ ಯಶಸ್ಸಿನ ಹಿಂದಿನ ಮಹಿಳೆಯಾಗಿದ್ದರು.

ಇನ್ನು ಗಂಡನ ಹಾಗೆ ಅವರು ಕೂಡ ಅತ್ಯಂತ ಸರಳ ಸ್ವಭಾವ ಹೊಂದಿದವರಾಗಿದ್ದು ಹಾಗಾದರೆ ಅಶ್ವಿನಿ ಅವರು ಮೂಲತಃ ಎಲ್ಲಿಯವರು ಅವರ ತಂದೆ ತಾಯಿ ಯಾರು ಅವರ ಕುಟುಂಬ ಹೇಗಿದೆ ಎಂಬುದರ ಎಲ್ಲಾ ಮಾಹಿತಿ ತಿಳಿಸುವ ಪ್ರಯತ್ನ ಇಂದಿನ ಲೇಖನಿಯದ್ದು. ಹೌದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆಯ ಹೆಸರು ರೇವನಾಥ್ ಎಂಬುದಾಗಿದ್ದು ಅವರು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇನ್ನು ರೇವನಾಥ್ ಅವರು ಹಿರಿಯ ರಾಜಕಾರಣಿ ಸನ್ಮಾನ್ಯ ಶ್ರೀ  ಚಂದ್ರೇಗೌಡರ ಹತ್ತಿರದ ಸಂಬಂಧಿಯಾಗಿದ್ದು ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯಾ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿದ್ದರು.

ಇನ್ನು ಅಶ್ವಿನಿ ಅವರ ತಂಗಿಯ ಹೆಸರು ಡಿಂಪಲ್ ಹಾಗೂ ಅವರ ತಮ್ಮನ ಹೆಸರು ವಿನಯ್  ಅಶ್ವಿನಿ ಅವರ ಕುಟುಂಬದವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಭಾಗಮನೆ ಗ್ರಾಮದವರಾಗಿದ್ದಾರೆ. ಇನ್ನು ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹವಾಗಿದ್ದು ಕಾಮನ್ ಫ್ರೆಂಡ್ ಮೂಲಕ ಪುನೀತ್ ಅಶ್ವಿನಿ ಅವರಿಗೆ ಪರಿಚಯವಾಗುತ್ತಾರೆ. ಹೌದು ಪರಿಚಯ ಪ್ರೀತಿಕ್ಕೆ ತಿರುಗಿ ಒಬ್ಬರನ್ನೊಬ್ಬರು ಪ್ರೀತಿಸಲು ಶುರು ಮಾಡಿದ್ದು ನಂತರ ಪುನೀತ್ ಅವರ ಮನೆಯಲ್ಲಿ ಒಪ್ಪಿಗೆ ಸಿಕ್ಕಿ ಅಶ್ವಿನಿ ಅವರ ಮನೆಯಲ್ಲಿ ಒಪ್ಪಿಸಲು ಸ್ವಲ್ಪ ಕಷ್ಟ ಆಗಿತ್ತು. ಅಂತೂ ಎರಡು ಕುಟುಂಬದವರ ಒಪ್ಪಿಗೆ ಪಡೆದು ಅಶ್ವಿನಿ ಅವರನ್ನು 1999ರ ಡಿಸೆಂಬರ್ 1ರಂದು ವರಿಸಿದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು.

ಇವರ ಮದುವೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಒಂದು ಕಲ್ಯಾಣ ಮಂಟಪದಲ್ಲಿ ನಡೆದಿದ್ದು ವಿವಾಹವಾದ ಸಮಯದಿಂದ ಈಗಿನವರೆಗೂ ಕೂಡ ಪತಿಗೆ ಬಹಳ ದೊಡ್ಡ ಸ್ಟ್ರೆಂತ್ ಆಗಿ ನಿಂತವರು ಅಶ್ವಿನಿ ಯವರು. ಹೌದು ಗೃಹಿಣಿಯಾಗಿ ತಾಯಿಯಾಗಿ ಗಂಡನನ್ನು ನೋಡಿಕೊಳ್ಳುವುದ ಮಕ್ಳಳ ಪಾಲನೆ ಪೋಷಣೆ ಎಲ್ಲವನ್ನು ಅಶ್ವಿನಿಯವರು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದು ಇತ್ತೀಚೆಗಷ್ಟೇ  ಪ್ರೊಡಕ್ಷನ್ಸ್ ಸಂಸ್ಥೆ ಶುರು ಮಾಡಿದ್ದು ನಿರ್ಮಾಪಕಿ ಕೂಡ ಆದರು. ಪುನೀತ್ ಅವರ ಜೊತೆ ಸೇರಿ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿ ಕನ್ನಡ ಜನತೆಗೆ ಒಳ್ಳೆಯ ಸಿನಿಮಾಗಳನ್ನು ನೀಡುವ ಕಡೆ ಸಾಗುತ್ತಿದ್ದು ಆದರೆ ಕನಸುಗಳೆಲ್ಲವು ಅರ್ಧದಲ್ಲೇ ಕಳಚಿ ಹೋದ ಹಾಗಾಗಿದೆ.

Related Articles

Leave a Reply

Your email address will not be published. Required fields are marked *

Back to top button