NEWS

ಕೆಜಿಎಫ್ ಚಿತ್ರತಂಡ ಸೇರಿಕೊಂಡ ಮತ್ತೊಬ್ಬ ಕನ್ನಡ ಖ್ಯಾತ ನಟಿ…ಯಾವ ಪಾತ್ರ ಗೊತ್ತಾ ನೋಡಿ

ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಕೆಜಿಎಫ್​ ಚಾಪ್ಟರ್​ ೨ ಚಿತ್ರ ಯಾವಾಗ ತೆರೆ ಕಾಣಲಿದೆ ಎಂಬುದಕ್ಕೆ ಈಗ ಉತ್ತರ ಸಿಕ್ಕಿದ್ದು 2022ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಮಾಡಲು ಕೆಜಿಎಫ್​ 2 ಚಿತ್ರ ತಂಡ ನಿರ್ಧರಿಸಿದೆ.

ಹೌದು ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳಲಾಗಿದ್ದು ನಟ ಯಶ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್​ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಟ್ವಿಟರ್​ ಮೂಲಕ ಬಹಿರಂಗಪಡಿಸಿದ್ದಾರೆ.

ಇದರ ಜೊತೆಗೆ ಚಿತ್ರದ ಹೊಸ ಪೋಸ್ಟರ್​ ಹಂಚಿಕೊಂಡಿದ್ದಯ ಅಭಿಮಾನಿಗಳಿಗೆ ಈ ಬ್ರೇಕಿಂಗ್​ ನ್ಯೂಸ್​ ನೀಡಿ ಸಂತಸ ನೀಡಿದ್ದಾರೆ.ಇನ್ನು ಎಲ್ಲಾ ಅಂದುಕೊಂಡಂತೆ ಆಗುದ್ದರೆ ಇಷ್ಟು ಹೊತ್ತಿಗಾಗಲೇ ಕೆಜಿಎಫ್​ 2 ಸಿನಿಮಾ ತೆರೆಕಂಡಿರಬೇಕಿತ್ತು.

ಆದರೆ ಕೊರೊನಾ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲಾಗಿದ್ದು ಹೊಸ ರಿಲೀಸ್​ ಡೇಟ್​ ತಿಳಿದುಕೊಳ್ಳಲು ಸಿನಿಪ್ರಿಯರು ಕಾದು ಕುಳಿತಿದ್ದು ಆ ಕಾಯುವಿಕೆಗೆ ಇದೀಗ ಬ್ರೇಕ್​ ಬಿದ್ದಿದೆ.

ಆದರೆ ಈ ವರ್ಷವೇ ಕೆಜಿಎಫ್​ ಚಾಪ್ಟರ್​ 2 ಸಿನಿಮಾ ನೋಡಬೇಕು ಎಂದುಕೊಂಡವರಿಗೆ ನಿರಾಸೆಯಾಗಿದ್ದು ಈ ಬಹುನಿರೀಕ್ಷಿತ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಮುಂದಿನ ವರ್ಷ ಏ.14ರವರೆಗೂ ಕಾಯುವುದು ಅನಿವಾರ್ಯವಾಗಿ ಬಿಟ್ಟಿದೆ.

ಸದ್ಯ ಎರಡನೇ ಅಲೆ ಈಗತಾನೆ ಕಡಿಮೆಯಾಗುತ್ತಿದ್ದು ಅಷ್ಟರಲ್ಲಾಗಲೇ ಮೂರನೇ ಅಲೆಯ ಭೀತಿ ಹೆಚ್ಚುತ್ತಿದೆ. ಯಾವುದೇ ಕ್ಷಣದಲ್ಲೂ ಲಾಕ್​ಡೌನ್​ ಜಾರಿ ಆಗಬಹುದೇನೋ ಎಂಬ ಆತಂಕದಲ್ಲೇ ಎಲ್ಲ ಕ್ಷೇತ್ರದ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಚಿತ್ರಮಂದಿರಗಳಲ್ಲಿ ಸದ್ಯ ಕೇವಲ ಶೇ 50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದೆ. ಈ ಎಲ್ಲ ಕಷ್ಟದ ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲವು ತಿಂಗಳು ಸಮಯ ಬೇಕಿದ್ದು ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡಿರುವ ನಿರ್ಮಾಪಕ ವಿಜಯ್​ ಕಿರಗಂದೂರು.

ಅವರು 2022ರ ಏಪ್ರಿಲ್​ 14ಕ್ಕೆ ಕೆಜಿಎಫ್​ 2 ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಇನ್ನು ಕೆಲವೇ ದಿನಗಳ ಹಿಂದೆಯಷ್ಟೆ ಕೆಜಿಎಫ್​ ಚಾಪ್ಟರ್​ 2 ತಂಡದಿಂದ ಬಿಗ್​ ನ್ಯೂಸ್​ ಹೊರಬಿದ್ದಿದ್ದು ಈ ಸಿನಿಮಾದ ಟಿವಿ ಪ್ರಸಾರ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದುಕೊಂಡಿದೆ ಎಂಬುದು ಖಚಿತವಾಯಿತು.

ಕನ್ನಡ ಮಾತ್ರವಲ್ಲದೇ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಕೆಜಿಎಫ್​ 2 ಚಿತ್ರವನ್ನು ಆಯಾ ಭಾಷೆಯ ಜೀ ವಾಹಿನಿ ಪ್ರಸಾರ ಮಾಡಲಿದ್ದು ಅದಕ್ಕೂ ಮುನ್ನ ಚಿತ್ರಮಂದಿರದಲ್ಲೇ ಈ ಸಿನಿಮಾ ರಾರಾಜಿಸಲಿದೆ.

ಥಿಯೇಟರ್​ನಲ್ಲಿ ಬಿಡುಗಡೆ ಆದ ಬಳಿಕವೇ ಈ ಚಿತ್ರ ಟಿವಿಯಲ್ಲಿ ಪ್ರಸಾರ ಆಗಲಿದೆ.ಇನ್ನು ತಮಗೆಲ್ಲರಿಗೂ ತಿಳಿದಿರುವ ಹಾಗೆ ಕೆಜಿಎಫ್ ಚಾಪ್ಟರ್ ಎರಡರಲ್ಲಿ ಅತ್ಯಂತ ದೊಡ್ಡ ತಾರಾಗಣವೇ ಇದ್ದು ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿ ಅಚ್ಯುತ್ ಪ್ರಕಾಶ್ ರಾಜ್ ಮಾಳವಿಕಾ ಸಂಜಯ್ ದತ್ ರವೀನ ತಂಡನ್ ರಮೇಶ್ ರಾವ್ ಈಶ್ವರಿ ರಾವ್ ವಸಿಷ್ಟ ಸಿಂಹ.

ಹೀಗೆ ಹೆಸರು ಹೇಳುತ್ತ ಹೋದರೆ ಮುಗಿಯದಷ್ಟರ ಮಟ್ಟಿಗೆ ದೊಡ್ಡ ದೊಡ್ಡ ಹೆಸರುಗಳು ಈ ಚಿತ್ರದಲ್ಲಿದೆ. ಇನ್ನು ಈ ಬಹುನಿರೀಕ್ಷಿತ ಚಿತ್ರ ಬಾಲಿವುಡ್ ಚಿತ್ರಗಳನ್ನು ಕೂಡ ಮೀರಿಸುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಈಗಾಗಲೇ ಭಾರತದಾದ್ಯಂತ ಹರಡಿದೆ. ಇನ್ನು ಈ ತಾರಾ ಗಣಕ್ಕೆ ಕನ್ನಡದ 90ರ ದಶಕದ ನಟಿಯರು ಕೂಡ ಸೇರಲಿದ್ದಾರೆ ಎಂಬ ವಿಚಾರ ಇದೀಗ ಹೊರ ಬಂದಿದೆ.

ಹೌದು ಅವರು ಬೇರೆ ಯಾರು ಅಲ್ಲ ನಟಿ ಸುಧಾರಾಣಿ ಹಾಗೂ ನಟಿ ಶೃತಿಯವರು. ಹಾಗಂತ ಅವರು ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿಲ್ಲ. ಅವರು ಕೆಜಿಎಫ್ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ರವೀನ ತಂಡನ್ ಹಾಗೂ ಈಶ್ವರಿ ರಾವ್ ರವರ ಕನ್ನಡ ಡಬ್ಬಿಂಗ್ ಗೆ ಧ್ವನಿ ಆಗಲಿದ್ದಾರೆ.

ರವೀನ ತಂಡನ್ ರವರ ರಮಿಕ ಸೆನ್ ಪಾತ್ರಕ್ಕೆ ಸುಧಾರಾಣಿ ಅವರು ಕನ್ನಡದ ಧ್ವನಿಯಾದರೆ ಈಶ್ವರಿ ರಾವ್ ರವರ ಹೊಸ ಪಾತ್ರಕ್ಕೆ ಶೃತಿಯವರು ದನಿಯಾಗಲಿದ್ದಾರೆ ಎಂದೇ ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button