ಇದೆ ಮೊದಲ ಬಾರಿ ಯಶ್ ಬಗ್ಗೆ ಬೇರೆಯದನ್ನೇ ಹೇಳಿದ ರಾಧಿಕಾ ಪಂಡಿತ್…ನೋಡಿ ಅಸಲಿ ಸತ್ಯ
ಯಶ್ ಮತ್ತು ರಾಧಿಕಾ ಪಂಡಿತ್‌ರವರ ಲವ್‌ಸ್ಟೋರಿ ಗುಟ್ಟಾಗಿ ಉಳಿದಿರಲಿಲ್ಲ. ಅವರು ಬಹಿರಂಗವಾಗಿ ಇದನ್ನು ಒಪ್ಪಿಕೊಳ್ಳದೇ ಇದ್ದರೂ ಕೂಡ ಅವರಿಬ್ಬರೂ ಪ್ರೇಮಿಗಳು ಅನ್ನುವುದನ್ನು ತಮ್ಮ ಮಾತಿನ ಮೂಲಕ ಪರೋಕ್ಷವಾಗಿ ಸಾರುತ್ತಲೇ ಇದ್ದರು. ಹೌದು ಒಮ್ಮೆ ವೀಕೆಂಡ್ ವಿತ್ ರಮೇಶ್ ಕಾರರ್ಯಕ್ರಮದಲ್ಲಿ ತಮ್ಮನ್ನು ಮದುವೆ ಆಗುವ
ಹುಡುಗ ಹೇಗಿರಬೇಕು ಎಂದು ಕೇಳಿದ ಪ್ರಶ್ನೆಗೆ ಯಾವುದೇ ಅಳುಕಿಲ್ಲದೇ ಯಶ್‌ನಂತೆಯೇ ಇರಬೇಕು ಅನ್ನುವ ಅರ್ಥದಲ್ಲಿ ಯಶ್ ಅವರ ಸಿನಿಮಾಗಳ ಟೈಟಲ್ ಅನ್ನು ಬಳಸಿ ಉತ್ತರ ನೀಡಿದ್ದರು ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ರವರು.
ಅಲ್ಲದೇ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಯಶ್‌ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಶ್ನೆ ಮಾಡುತ್ತಾ ಸೀರಿಯಲ್ ಟೈಮ್‌ನಿಂದ ಈವರೆಗೂ ಒಂದೇ ಹುಡುಗಿಯನ್ನು ಪ್ರೀತಿಸ್ತಾ ಬಂದಿದ್ದೀಯಾ. ಒಂದೇ ಹುಡುಗಿಯನ್ನು ಮೆಂಟೇನ್ ಮಾಡೋದು ಕಷ್ಟ ಎಂದು ಕಿಂಡಲ್ ಮಾಡಿದ್ದು ಅದಕ್ಕೆ ಅಷ್ಟೇ ಸ್ವಾರಸ್ಯವಾಗಿ ಉತ್ತರ ನೀಡಿದ್ದ ಯಶ್ ಒಂದೇ
ಹುಡುಗಿಯನ್ನು ಇಷ್ಟ ಪಡುವುದು ಯಾವತ್ತಿಗೂ ಒಳ್ಳೆಯದು ಎಂದು ಹೇಳುವ ಮೂಲಕ ರಾಧಿಕಾ ಅವರನ್ನು ಪ್ರೀತಿಸುತ್ತಿರುವ ವಿಷಯವನ್ನು ಒಪ್ಪಿಕೊಂಡಿದ್ದರು. ಇಂತಹ ಅನೇಕ ಮಾತುಗಳಿಂದಲೇ ಏಳೆಂಟು ವರ್ಷಗಳಿಂದಲೂ ಈ ಜೋಡಿ ಪ್ರೀತಿಸುತ್ತಿರುವ ವಿಷಯ ಅಂದು ಗಟ್ಟಿಯಾಗಿತ್ತು.
ಇನ್ನು ತಾವಿಬ್ಬರೂ ಪ್ರೇಮಿಗಳು ಎಂಬ ವಿಷಯವನ್ನು 2016 ರ ವರೆಗೂ ಓಪನ್ ಆಗಿ ಒಪ್ಪಿಕೊಳ್ಳದಿದ್ದರೂ ಕೂಫ ನಿರಾಕರಣೆಯಂತೂ ಮಾಡಿರಲಿಲ್ಲ. ಅಲ್ಲದೇ ಈ ಪ್ರೇಮಕ್ಕೆ ಸಾಕ್ಷಿ ಎನ್ನುವಂತೆ ಬೆಂಗಳೂರಿನಲ್ಲಿ ಅನೇಕ ಸ್ಥಳಗಳಿದ್ದು
ಅವುಗಳಲ್ಲಿ ವಾರಕ್ಕೆರಡು ಬಾರಿ ಸೇರುತ್ತಿದ್ದ ಮಲ್ಲೇಶ್ವರಂನ ಎಂಇಎಸ್ ಕಾಲೇಜು ಪಕ್ಕದ ಕಾಫಿ ಡೇ ಕೂಡ ಒಂದು. ಇಬ್ಬರೂ ಪಕ್ಕಾ ಪ್ರೇಮಿಗಳಂತೆ ಗಂಟೆಗಟ್ಟಲೆ ಕಳೆದದ್ದನ್ನು ನೋಡಿದವರು ಕೂಡ ಇದ್ದಾರೆ.
ಇನ್ನು ಮೊಟ್ಟ ಮೊದಲ ಬಾರಿಗೆ ಈ ಜೋಡಿ ಪರಸ್ಪರ ಭೇಟಿಯಾಗಿದ್ದು ನಂದಗೋಕುಲ ಸೀರಿಯಲ್‌ನಲ್ಲಿ. ಈ ಧಾರಾವಾಹಿಯಲ್ಲಿ ಕೇವಲ ನಟ-ನಟಿಯಾಗಿದ್ದರೂ ನಂತರ ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾದದ್ದು ಮಾತ್ರ
ಮೊಗ್ಗಿನ ಮನಸು’ ಸಿನಿಮಾದ ನಂತರ. ಅಲ್ಲದೇ ಡ್ರಾಮಾ ಸಿನಿಮಾದ ವೇಳೆಗೆ ಇಬ್ಬರೂ ಪ್ರೇಮಿಗಳಾಗಿದ್ದು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ವೇಳೆಗೆ ಮದುವೆ ಆಗುವ ಮಾತುಕತೆ ಕೂಡ ಆಗಿತ್ತು ಅನ್ನುವುದು ಯಶ್ ಅವರನ್ನು ತೀರಾ ಹತ್ತಿರದಿಂದ ಬಲ್ಲವರ ಹೇಳುವು ಮಾತಾಗಿದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಈ ಜೋಡಿಯು ಮದುವೆ ಆಗುವುದು ಪಕ್ಕಾ ಆಗುತ್ತಿದ್ದಂತೆಯೇ ಇವರ ನಟನೆಯ ಸಿನಿಮಾದಲ್ಲೂ ಅವುಗಳು ದೃಶ್ಯವಾಗಿಯೂ ಮೂಡಿ ಬಂದವು. ಅದು ಕೇವಲ ಕಾಕತಾಳೀಯ ಅನ್ನುವಂತೆ ಬಿಂಬಿಸಲಾಗಿದ್ದು
ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ಯಶ್ ಮತ್ತು ರಾಧಿಕಾ ಅವರು ಪಕ್ಕಾ ನಿಜ ಜೀವನದ ಪ್ರೇಮಿಗಳು ಎನ್ನುವಂತೆ ಚಿತ್ರಿಸಿದ್ದರು. ಹೌದು ಅದರಲ್ಲೂ ಯಶ್ ಪ್ರಪೋಸ್ ಮಾಡಿದ ದೃಶ್ಯವಂತೂ ವೈರಲ್ ಆಗಿತ್ತು. ಸದ್ಯ ಇದೀಗ ಈ ಜೋಡಿಗಳು ಮದುವೆಯಾಗಿ ಸುಖ ದಾಂಪತ್ಯ ನಡೆಸುತ್ತಿದ್ದು
ಯಶ್ ಈಗ ಎರಡು ಮಕ್ಕಳ ತಂದೆ. ಅವರು ತಂದೆಯಾಗಿ ಎಲ್ಲಾ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಮಗು ಜನಿಸುವ ಸಂದರ್ಭದಲ್ಲಿ ಯಶ್ ಶೂಟಿಂಗ್ಗೆ ಬ್ರೇಕ್ ನೀಡಿ ಕುಟುಂಬದ ಜತೆ ಸಮಯ ಕಳೆದಿದ್ದರು. ಇನ್ನು ಲಾಕ್
ಡೌನ್ ಸಂದರ್ಭದಲ್ಲಿ ಯಶ್ ಸಂಪೂರ್ಣ ಸಮಯವನ್ನು ಮಕ್ಕಳು ಹಾಗೂ ಪತ್ನಿ ರಾಧಿಕಾ ಜತೆ ಕಳೆದಿದ್ದಾರೆ. ವೃತ್ತಿ ಜೀವನದ ಜತೆಜತೆಗೆ ಕುಟುಂಬಕ್ಕೂ ಯಶ್ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅಲ್ಲದೇ ಇವರು ಚಿತ್ರರಂಗದ ಮಾದರಿ ದಂಪತಿಗಳು ಕೂಡ ಹೌದು.
ಇನ್ನು ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಪಂಡಿತ್ ಹಾಗ ಯಶ್ ಜೋಡಿ ಅಂದ್ಲರೆ ಅದೆಷ್ಟೋ ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿದ್ದು ಬಹಳ ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಇಬ್ಬರು ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಈ ಜೋಡಿಯನ್ನ ನೋಡಿದವರು ಯಾರೇ
ಆದರೂ ಕೂಡ ಇವರದ್ದು ಮೇಡ್ ಫಾರ್ ಈಚ್ ಅದರ್ ಜೋಡಿ ಅಂತಾನೇ ಹೇಳುತ್ತಿದ್ದು ಈಗಿರುವಾಗ ಇಷ್ಟು ದಿನಗಳ ನಂತರ ನಮ್ಮದು ಪರ್ಫೆಕ್ಟ್ ಜೋಡಿ ಅಲ್ಲ ಅಂತ ರಾಧಿಕಾ ಪಂಡಿತ್ ಅವರು ಹೇಳಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗಿದ್ದು ಅಷ್ಟಕ್ಕೂ ರಾಧಿಕಾ ಪಂಡಿತ್ ಅವರು ಹೀಗೆಕೆ ಹೇಳಿದ್ದಾರೆ.
ಈ ರೀತಿ ಹೇಳಲು ಕಾರಣವೇನು ಎಂಬುವುದನ್ನು ತಿಳಿಸಿಕೊಡುತ್ತೆವೆ ಬನ್ನಿ. ಹೌದು ಇಬ್ಬರು ಕೂಡ ಹಲವು ವರ್ಷಗಳ ಕಾಲ ಪ್ರೀತಿಸಿ ತಮ್ಮ ಪ್ರೀತಿಗೆ ಬೆಲೆಯನ್ನ ಕೊಟ್ಟು ಇಬ್ಬರು ಮನೆಯವರನ್ನ ಒಪ್ಪಿಸಿ ರಾಧಿಕಾ ಹಾಗು ರಾಕಿಂಗ್ ಸ್ಟಾರ್ ಯಾಶ್ ಇಬ್ಬರು ಬಹಳ ಅದ್ದೂರಿಯಾಗಿ ಮದುವೆ
ಆಗಿದ್ದು ಅಷ್ಟೇ ಅಲ್ಲದೆ ಮತ್ತೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಕೂಡ ಬದುಕು ನಡೆಸುತ್ತಿದ್ದಾರೆ. ಹೀಗಿದ್ದರು ಕೂಡ ರಾಧಿಕಾ ಪಂಡಿತ್ ಅವರು ನಾವಿಬ್ಬರೂ ಪರ್ಫೆಕ್ಟ್ ಜೋಡಿ ಅಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು ನಾವಿಬ್ಬರೂ ಜಗಳ ಹಾಡುತ್ತೇವೆ ನಮ್ಮಿಬ್ಬರ ನಡುವೆ ವಿವಾದ ನಡೆಯುತ್ತದೆನಎಷ್ಟೋ ಸಾರಿ ಒಬ್ಬರನ್ನೊಬ್ಬರು ದೂಷಿಸುತ್ತೇವೆ ಆದರೆ ನಮ್ಮಿಬ್ಬರನ್ನು ಒಟ್ಟಾಗಿ ಹಿಡಿದಿಟ್ಟಿರುವುದು ಅದೇಲ್ಲವನ್ನೂ ಮೀರಿದ ನಮ್ಮಿಬ್ಬರಲ್ಲೂ ಇರುವ ಗಾಢವಾದ ಪ್ರೀತಿ. ಜೀವನದಲ್ಲಿ ಯಾರು ಕೂಡ
ಪರ್ಫೆಕ್ಟ್ ಅಗಲು ಸಾಧ್ಯವಿಲ್ಲ. ನಾನು ಪರ್ಫೆಕ್ಟ್ ಆಗುತ್ತೇನೆ ಅಂತ ಅದನ್ನೇ ಹುಡುಕಿಕೊಂಡು ಹೋದರೆ ನೀವು ನಿಮ್ಮ ಜೀವನವನ್ನೇ ಕಳೆದುಕೊಳ್ಳುತ್ತೀರಿ. ಇರುವುದರಲ್ಲಿಯೇ ಇಬ್ಬರು ಹೊಂದಾಣಿಕೆ ಮಾಡ್ಕೊಂಡು ಅದರಲ್ಲೇ ನಿಜವಾದ ಪ್ರೀತಿಯನ್ನ ಕಾಣಬೇಕು ಸಂಸಾರ ಎಂದಮೇಲೆ ಗೊಂದಲಗಳು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತದೆ.