NEWS

ಹೆಲ್ಮೆಟ್ ಹಾಕಿಕೊಂಡು ಯಾರಿಗೂ ಗೊತ್ತಾಗದೆ ಅಪ್ಪು ಮಾಡಿದ್ದ ಕೆಲಸ ಬಾಯ್ಬಿಟ್ಟ ರಂಗಣ್ಣ …ದೇವ್ರೇ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕರುನಾಡು ಕಂಡಂತಹ ಒಬ್ಬ ಅಭೂತಪೂರ್ವ ನಟರಾಗಿದ್ದು ಡಾ. ರಾಜ್ ಕುಮಾರ್ ಅವರು ಕರುನಾಡನ್ನು ಅಗಲಿದ ನಂತರ ಪುನೀತ್ ರಾಜ್ ಕುಮಾರ್ ಅವರ ರೂಪದಲ್ಲಿ ಸಂಸ್ಕಾರದಲ್ಲಿ ಅವರನ್ನು ಕಾಣುತ್ತಿತ್ತು. ಆದರೆ ಇದೀಗ

ಎರಡನೇ ಬಾರಿ ಡಾ. ರಾಜ್ ಕುಮಾರ್ ಅವರನ್ನು ಕಳೆದುಕೊಂಡಂತಾಗಿದ್ದು ಮುಗ್ದನಗು ಸಂಸ್ಕಾರ  ಸದಾ ಬೇರೆಯವರಿಗೆ ಒಳ್ಳೆಯದನ್ನೇ ಬಯಸುತ್ತಿದ್ದ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ.

ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಸರಿ ಸುಮಾರು 30 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದು ಇದೀಗ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಪ್ಪು ಸಮಾಧಿ ನೋಡಲು ಸರದಿ ಸಾಲಿನಲ್ಲಿ ಜನರು ಹರಿದು ಬರುತ್ತಿದ್ದಾರೆ. ಈ ನಡುವೆ ಅಪ್ಪು ಮಾಡಿದ್ದ ಮತ್ತೊಂದು ಸಹಾಯ ಬೆಳಕಿಗೆ ಬಂದಿದ್ದು 20 ಲಕ್ಷ ಕೊಟ್ಟು ಯಾರಿಗೆ ಹೇಳ್ಬೇಡಿ ಎಂದಿದ್ದರು ನಮ್ಮ ಅಪ್ಪು.

ಅಷ್ಟಕ್ಕು ಅವರು ಕೊಟ್ಟಿದ್ದು ಯಾರಿಗೆ ಗೊತ್ತಾ. ಡಾ. ರಾಜ್ ಕುಮಾರ್ ಅವರ ಹಾದಿಯಲ್ಲೇ ಸಾಗುತ್ತಿದ್ದ ಪುನೀತ್ ರಾಜ್ ಕುಮಾರ್  ಅಣ್ಣಾವ್ರಂತೆಯೇ ನೇತ್ರದಾನ ಮಾಡಿದ್ದರು ಆದರೆ ಅಪ್ಪು ಅವರ ಅಗಲಿದ ನಂತರ ನೇತ್ರದಾನ ನೋಂದಣಿ ಪ್ರಕ್ರಿಯೆ ಹೆಚ್ಚಾಗಿದ್ದು ನೇತ್ರದಾನ ಮಾಡುವ ಮೂಲಕ ಹಲವಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಹೌದು ಈ ಹಿಂದೆ ನೇತ್ರದಾನ ನೋಂದಣಿ ಒಂದು ದಿನಕ್ಕೆ 15 ರಿಂದ 20 ಜನ ಮಾಡಿಸುತ್ತಿದ್ದರು. ಆದರೆ ಕೊರೊನ ಹಿನ್ನಲೆಯಲ್ಲಿ ಸುಮಾರು 90% ನೋಂದಣಿ ಪ್ರಕ್ರಿಯೆ ಕಡಿಮೆಯಾಗಿತ್ತು. ಆದರೆ ಇದೀಗ ಅಪ್ಪು ಅಗಲಿಕೆಯ ನಂತರದಿಂದ ಒಂದು ದಿನಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಸುತ್ತಿದ್ದು ತಾವು ಬರುವ ಜೊತೆಗೆ

ತಮ್ಮವರನ್ನು ಕರೆದುಕೊಂಡು ಬಂದು ನೇತ್ರದಾನ ನೋಂದಣಿ ಮಾಡಿಸುತ್ತಿದ್ದಾರೆ. ಇನ್ನು ಸಮಾಜಕ್ಕೆ ಮಾದರಿಯಾಗಿದ್ದ ಅಪ್ಪು ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ ಅವರ ತಂಡ ತೆಗೆದುಕೊಂಡು ಹೋಗಿದ್ದು ನಂತರ ಆ ಕಣ್ಣುಗಳನ್ನು ಬರೋಬ್ಬರಿ ನಾಲ್ಕು ಜನರಿಗೆ ಅಳವಡಿಸಿದ್ದಾರೆ. ಆದರೆ ಈ ಮೊದಲು ಕೇವಲ ಇಬ್ಬರಿಗೆ ಮಾತ್ರ ಅಳವಡಿಸಬಹುದಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆದರೆ ಹೈ ಟೆಕ್ನಾಲಜಿ ಬಳಸಿ ನಾಲ್ಕು ಜನರಿಗೆ ಅಳವಡಿಸುವ ಮೂಲಕ ಅಪ್ಪು ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಅಪ್ಪು ಅವರ ಕಣ್ಣಿನ ಕಾರ್ನಿಯದಾ ಒಂದು ಭಾಗವನ್ನು ಲ್ಯಾಬ್ ನಲ್ಲಿ ಇಡಲಾಗಿದ್ದು ಅದನ್ನು ಕಲ್ಚರ್ ಮಾಡಿ ಇನ್ನೂ ಹೆಚ್ಚು ಜನರಿಗೆ ಅಳವಡಿಸಲು ಮುಂದಾಗಿದ್ದಾರೆ. ಅಪ್ಪು ಬದುಕಿದ್ದಾಗಲೂ ಜನರಿಗೆ ಸಹಾಯ ಮಾಡಿಕೊಂಡು ಬಂದಂತಹವರು. ಆದರೆ ಅವರ ಎರಡು ಕಣ್ಣುಗಳು ಹಲವರ ಬಾಳಿಗೆ ಬೆಳಕಾಗುವ ಮೂಲಕ ಅಗಲಿಕೆಯಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಸದ್ಯ ಇದೀಗ ಮತ್ತೊಂದು ಹೃದಯ ಕಲಕುವ ವಿಚಾರವನ್ನು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್ ಆರ್ ರಂಗನಾಥ್ ರವರು ಬಿಚ್ಚಿಟ್ಟಿದ್ದು  “ಬೆಂಗಳೂರು ಮಹಾನಗರ ಪಾಲಿಕೆಯ ಸಚಿವರಾದತಂಹ ಒಬ್ಬರು ನನಗೆ ದೂರವಾಣಿ ಮಾಡಿದಾಗ ಹೇಳಿದರು. ನನ್ನ ವಾರ್ಡ್ ನ ಪ್ರದೇಶದಲ್ಲಿರುವ ಒಂದು ಶಾಲೆ ಆ ಶಾಲೆಯಲ್ಲಿ ನಾನೂರು ಮಕ್ಕಳಿವೆ. ಅವರಿಗೆ ಪೀಸ್ ಕಟ್ಟೋಕೆ ಆಗುತ್ತಿರಲಿಲ್ಲ. ವರುಷಕ್ಕೆ 20 ಲಕ್ಷ ಬೇಕಾಗಿತ್ತು. ನಾನು ಅಪ್ಪು ಸರ್ ಗೆ ಕರೆ ಮಾಡಿ ರಿಕ್ವೆಸ್ಟ್ ಮಾಡಿಕೊಂಡೆ.

ಅಂದು ಅವರು ಹೆಲ್ಮೆಟ್ ಹಾಕಿಕೊಂಡು ಬಂದು  ಆ ಹಣವನ್ನು ಕಟ್ಟಲು ವ್ಯವಸ್ಥೆ ಮಾಡಿ ಯಾರಿಗೂ ಹೇಳಬೇಡ ಎಂದು ಹೇಳಿ ಹೊರಟು ಹೋದರು. ಇದು ಮೂರು ವರುಷದಿಂದ ನಡೆದುಕೊಂಡು ಬರುತ್ತಿದೆ. ಪ್ರತಿ ವರುಷ ಅವರೇ ಕೊಡುತ್ತಿದ್ದರು” ಎಂದು ರಂಗಣ್ಣನಿಗೆ ಹೇಳಿದರಂತೆ. ಈ ಕುರಿತು ಮಾತನಾಡಿದ ರಂಗಣ್ಣ ಕೆಲವರು ತೋರಿಸುತ್ತಾರೆ ಕೆಲವರು ತೋರಿಸುವುದಿಲ್ಲ.

ಅದು ಅವರ ಆಯ್ಕೆ. ನಿಮಗೂ ಕೂಡ ಸಹಾಯ ಮಾಡುವ ಆಸೆ ಇದ್ದರೆ ಪುನೀತ್ ಅವರ ಹೆಸರು ಇಟ್ಟುಕೊಂಡೆ ತೋರಿಸಿಯೇ ಮಾಡಿ. ನೋ ಅಬ್ಜಕ್ಷನ್. ನೀವು ಕೂಡ ಯಾರಿಗೂ ಹೇಳಬಾರದು ಎಂದು ಕೊಂಡು ಮಾಡಬೇಡಿ. ಬೇಕಿದ್ರೆ ಜನರಿಗೆಲ್ಲಾ ತೋರಿಸಿಕೊಳ್ಳಿ ಏನು ತೊಂದರೆ ಇಲ್ಲ. ನಿಮ್ಮಂದ ಸಹಾಯ ಆದರೆ ಸಾಕು ನಾಲ್ಕು ಜನಕ್ಕೆ ಹೇಳಿಕೊಂಡರು ಪರವಾಗಿಲ್ಲ. ಅಪ್ಪು ಅವರ ಗುಣವನ್ನ ಬೆಳೆಸಿಕೊಳ್ಳಿ ಎಂದು ರಂಗನಾಥ್ ರವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button