ಲಕ್ಷ ಲಕ್ಷ ಹಣ ನೀಡಿ ಮೋಸ ಹೋದ ಖ್ಯಾತ ನಟಿ; ಕೂಡಿಟ್ಟ ಹಣವೆಲ್ಲವೂ ವಂಚಕರ ಪಾಲು
ಕನ್ನಡದ ‘ರವಿ ಶಾಸ್ತ್ರಿ’, ‘ಕುರುಕ್ಷೇತ್ರ’ ಸಿನಿಮಾಗಳಲ್ಲಿ ನಟಿಸಿದ್ದ ಸ್ನೇಹಾ ಈ ರೀತಿ ಮೋಸಕ್ಕೆ ಒಳಗಾಗಿದ್ದಾರೆ. ಸಿನಿಮಾಗಳಲ್ಲಿ ಸಂಭಾವನೆ ರೂಪದಲ್ಲಿ ಬಂದ ಹಣವನ್ನು ಅವರು ಹೂಡಿಕೆ ಮಾಡಿದ್ದರು. ನಟ-ನಟಿಯರು ಪ್ರತಿ ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ.
ಇದರ ಜತೆಗೆ ಕೆಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ತೆರಳಿ ಹಣ ಗಳಿಕೆ ಮಾಡಿಕೊಳ್ಳುತ್ತಾರೆ. ಹೀಗೆ ಗಳಿಸಿದ ಹಣವನ್ನು ಹೂಡಿಕೆ ಮಾಡೋಕೆ ಇಷ್ಟಪಡುತ್ತಾರೆ. ಇದೇ ರೀತಿ ಹೂಡಿಕೆ ಮಾಡೋಕೆ ಹೋಗಿ ನಟಿಯೊಬ್ಬರು ಮೋಸ ಹೋಗಿದ್ದಾರೆ. ದೊಡ್ಡ ಮೊತ್ತದ ಹಣವನ್ನು ಅವರು ಕಳೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದಾರೆ. ಹಾಗಾದರೆ ಯಾರು ಆ ನಟಿ? ಬಹುಭಾಷೆ ನಟಿ ಸ್ನೇಹ.
ಕನ್ನಡದ ‘ರವಿ ಶಾಸ್ತ್ರಿ’, ‘ಕುರುಕ್ಷೇತ್ರ’ ಸಿನಿಮಾಗಳಲ್ಲಿ ನಟಿಸಿದ್ದ ಸ್ನೇಹಾ ಈ ರೀತಿ ಮೋಸಕ್ಕೆ ಒಳಗಾಗಿದ್ದಾರೆ. ಸಿನಿಮಾಗಳಲ್ಲಿ ಸಂಭಾವನೆ ರೂಪದಲ್ಲಿ ಬಂದ ಹಣವನ್ನು ಅವರು ಹೂಡಿಕೆ ಮಾಡಿದ್ದರು. ಹಣ ಮರಳಿ ಬರುತ್ತದೆ ಎನ್ನುವ ನಂಬಿಕೆ ಅವರದ್ದಾಗಿತ್ತು. ಈಗ ಅಸಲು ಹಣವೂ ಇಲ್ಲ, ಲಾಭವೂ ಇಲ್ಲ ಎಂಬಂತಾಗಿದೆ. ಈ ಬಗ್ಗೆ ಅವರು ಚೆನ್ನೈ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಸ್ನೇಹಾಗೆ ಇಬ್ಬರು ಉದ್ಯಮಿಗಳ ಪರಿಚಯವಾಗಿತ್ತು. ಎಕ್ಸ್ಪೋರ್ಟ್ ಉದ್ಯಮವನ್ನು ಇವರು ಹೊಂದಿದ್ದರು. ಇವರನ್ನು ನಂಬಿ ಸ್ನೇಹಾ ಲಕ್ಷಾಂತರ ರೂಪಾಯಿ ನೀಡಿದ್ದರು. ಸಮಯಕ್ಕೆ ಸರಿಯಾಗಿ ಲಾಭದ ಮೊತ್ತವನ್ನು ನೀಡುವುದಾಗಿ ಉದ್ಯಮಿಗಳು ನಂಬಿಸಿದ್ದರು. ಆದರೆ, ಈಗ ಈ ಪ್ರಾಮಿಸ್ ಸುಳ್ಳಾಗಿದೆ. ನಟಿಗೆ ಮೋಸ ಮಾಡಲಾಗಿದೆ. ಈ ಬಗ್ಗೆ ಅವರು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಅಲ್ಲದೆ, ಉದ್ಯಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಸ್ನೇಹಾ ಅವರು ಹಣ ಹಿಂದಿರುಗಿಸುವಂತೆ ಕೇಳಿದ್ದಾರೆ. ಹಣ ಕೊಡುವುದಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೆ ಕೊಲೆ ಬೆದರಿಕೆಯನ್ನು ಕೂಡ ಹಾಕಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಮಿಳಿನ ‘ಶಾಟ್ ಬೂತ್ 3’ ಸಿನಿಮಾದಲ್ಲಿ ಸ್ನೇಹಾ ನಟಿಸುತ್ತಿದ್ದಾರೆ. ಅವರು ಮತ್ತಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಕುಟುಂಬಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ.