NEWS

ಅಶ್ವಿನಿ ಅಲ್ಲ ಶಿವಣ್ಣ ಅಲ್ಲ…ಅಪ್ಪು ಅನ್ನಸಂತರ್ಪಣೆಗೆ ಕೋಟಿ ಕೋಟಿ ಹಣ ನೀಡಿದ್ದು ಯಾರು ಗೊತ್ತಾ

ಕನ್ನಡ ಚಿತ್ರರಂಗದ ಅಪ್ಪು ಅವರ ಹನ್ನೊಂದನೇ ದಿನದ ಕಾರ್ಯವನ್ನು ಕುಟುಂಬಸ್ಥರು ಈಗಾಗಲೇ ನೆರವೇರಿಸಿದ್ದು ಪತಿ ಅಶ್ವಿನಿ ಮತ್ತು ಪುತ್ರಿಯರಾದಂತಹ ವಂದಿತಾ ಹಾಗೂ ಧೃತಿ ಅಪ್ಪು ಅವರ ಸಮಾಧಿಗೆ ಬಂದು ಪೂಜೆಯನ್ನು ಸಲ್ಲಿಸಿ ಅವರಿಗೆ ಭಕ್ತಿಪೂರ್ವಕ ನಮನವನ್ನು ಸಲ್ಲಿಸಿದ್ದಾರೆ. ಇನ್ನು 11ನೇ ದಿನದ ಕಾರ್ಯಕ್ರಮದಲ್ಲಿ ಪದ್ಧತಿಯಂತೆ ಅಪ್ಪು ಅವರಿಗೆ ಯಾವ ತಿಂಡಿ ತಿನಿಸಿಗಳು ಇಷ್ಟವಾಗಿರುತ್ತದೆ ಅವುಗಳನ್ನು ಎಡೆಗೆ ಇಡುವುದು ನಮ್ಮ ಸಂಪ್ರದಾಯವಾಗಿದ್ದು ಹಾಗಾಗಿ ಅಪ್ಪು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದಂತಹ ಆಹಾರಗಳನ್ನು ಅವರ ಸಮಾಧಿಯ ಮುಂದೆ ಇಟ್ಟಿದ್ದಾರೆ.

ಇನ್ನೂ ಅಪ್ಪು ಅವರ ಹಲವಾರು ಬಾರಿ ಹೇಳಿಕೊಂಡಿದ್ದಾರೆ ನಾನೊಬ್ಬ ಬೋಜನಪ್ರಿಯ ನನಗೆ ಊಟ ತಿಂಡಿ ಮಾಡುವುದು ಅಂದರೆ ಬಹಳ ಇಷ್ಟ. ಅದರಲ್ಲೂ ಕೂಡ ಮಾಂಸಾಹಾರ ಅಂದರೆ ನನಗೆ ತುಂಬಾ ಇಷ್ಟ ಅಂತ ಹೇಳಿಕೊಂಡಿದ್ದರು. ಹೌದುಸಂದರ್ಶನ ಒಂದರಲ್ಲಿ ಅಪ್ಪು ಅವರು ನಾನು ತುಂಬಾ ಇಷ್ಟಪಟ್ಟು ಊಟವನ್ನು ಮಾಡುತ್ತೇನೆ. ಅಷ್ಟೇ ವ್ಯಾಯಾಮವನ್ನು ಕೂಡ ಮಾಡುತ್ತೇನೆ ಹಾಗಾಗಿ ನನ್ನ ದೇಹದ ಬ್ಯಾಲೆನ್ಸ್ ಅನ್ನು ನಾನು ಚೆನ್ನಾಗಿ ಕಂಡುಕೊಂಡಿದ್ದೇನ ಅಂತ ಹೇಳಿದ್ದರು ಅಪ್ಪು ಅವರು ಬಿಡುವಿನ ವೇಳೆಯಲ್ಲಿ ಬೆಂಗಳೂರಿನಲ್ಲಿ ಇರುವಂತಹ ಬಹುತೇಕ ಹೋಟೆಲ್ ಗಳಲ್ಲಿ ರೆಸ್ಟೋರೆಂಟ್ ಗಳಲ್ಲಿ ಅಷ್ಟೇ ಯಾಕೆ ಬೀದಿ ಬದಿಯಲ್ಲಿ ಸಿಗುವಂತಹ ತಿಂಡಿಗಳನ್ನು ತಿನ್ನುತ್ತಿದ್ದರು.

ಅಷ್ಟೇ ಅಲ್ಲದೆ ಅವರು ಚಿತ್ರೀಕರಣದ ವೇಳೆ ಕರ್ನಾಟಕದಾದ್ಯಂತ ಇರುವ ಎಲ್ಲಾ ಪ್ರದೇಶದಲ್ಲಿ ಕೂಡ ಸಿಗುವ ವಿಶಿಷ್ಟವಾದ ಆಹಾರವನ್ನು ತಿನ್ನುತ್ತಿದ್ದರಂತೆ. ಎಲ್ಲೇ ಹೋದರೂ ಕೂಡ ಅವರಿಗೆ ಇಷ್ಟವಾದ ಊಟ ಮಾಡದೆ ಹಿಂತಿರುಗಿ ಬರುತ್ತಾ ಇರಲಿಲ್ಲ. ಹಾಗಾಗಿ ಊಟಕ್ಕೆ ಅವರಿಗೂ ಅವಿನಾಭಾವ ಸಂಬಂಧ ಇದೆ ಅಂತಾನೆ ಹೇಳಬಹುದು. ಇನ್ನು ಅಪ್ಪು ಅವರ 11ನೇ ದಿನದ ಪುಣ್ಯಸ್ಮರಣೆ ಇರುವ ಕಾರಣ ಅವರು ಬೆಂಗಳೂರಿನಲ್ಲಿ ಯಾವೆಲ್ಲಾ ಹೋಟೆಲ್ ಗಳಲ್ಲಿ ಅಪ್ಪು ಇಷ್ಟಪಟ್ಟು ಊಟ ತಿಂಡಿ ಮಾಡುತ್ತಿದ್ದರೋ ಅದನ್ನು ತರಿಸಿ ಎಡೆಗೆ ಇಟ್ಟು ಪೂಜೆ ಮಾಡಿದ್ದು ಮಲ್ಲೇಶ್ವರಂ ನಲ್ಲಿ ಇರುವ ಶ್ರೀಸಾಯಿ ರಾಮ್ಸ್ ಚಾಟ್ಸ್ ಅಂಡ್ ಜ್ಯೂಸ್ ಸೆಂಟರ್‌ ನಾ ಟಿಕ್ಕಿ ಪುರಿ ಮತ್ತು ಆಲೂ ದಹಿ ಪೂರಿ ಚಾಟ್ಸ್ ಅಂದ್ರೆ ಅಪ್ಪುಗೆ ಬಹಳ ಇಷ್ಟ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ದಾವಣೆಗೆರೆ ಬೆಣ್ಣೆ ದೋಸೆ ಎಂದರೆ ಅಚ್ಚುಮೆಚ್ಚಾಗಿದ್ದು ದಾವಣಗೆರೆಗೆ ಹೋದಾಗಲೆಲ್ಲಾ ಮಿಸ್ ಮಾಡದೇ ಇದನ್ನು ತಿನ್ನುತ್ತಾರೆ. ಇನ್ನೂ ಹುಬ್ಬಳಿ ಧಾರವಾಡ ಕಡೆಗೆ ಚಿತ್ರೀಕರಣಗಕ್ಕೆ ಹೋದಾಗಲೆಲ್ಲಾ ಅಲ್ಲಿನ ಜೋಳದ ರೊಟ್ಟಿಯ ಊಟ ಮಿರ್ಚಿ ಗಿರ್ಮಿಟ್ ಅಪ್ಪುಗೆ ಬಹಳ ಇಷ್ಟ. ಇತ್ತೀಚಿಗೆ ಬೆಂಗಳೂರಿನ ಬಸವೇಶ್ವರ ಖಾನಾವಳಿಗೆ ಕೂಡ ಭೇಟಿ ಮಾಡ, ಜೋಳದ ರೊಟ್ಟಿ ಊಟವನ್ನು ಸವಿದಿದ್ದರು ಅಪ್ಪು. ಈ ಕಾರಣದಿಂದಾಗಿ ಇದಿಗ ಈ ಎಲ್ಲವನ್ನು ತರಿಸಿ ಸಮಾಧಿ ಮುಂದೆ ಇಟ್ಟು ಪೂಜೆ ಸಲ್ಲಿಸಿದೆ ದೊಡ್ಮನೆ ಕುಟುಂಬ.

ಇನ್ನು ಪುನೀತ್ ರಾಜಕುಮಾರ್ ಅವರ ಅಗಲಿಕೆಯ ೧೧ ನೇ ದಿನದಂದು ಅಂದರೆ ನೆನ್ನೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಪ್ಪೈದು ಸಾವಿರ ಜನರಿಗೆ ಊಟವನ್ನು ಹಾಕಿಸಬೇಕು ಎಂದು ಅಂದುಕೊಳ್ಳಲಾಗಿತ್ತು. ಆದರೆ ಅಭಿಮಾನಿಗಳು ಜಾಸ್ತಿಯಾಗಿ ಬಂದಿದ್ದರಿಂದ ಮೂವತ್ತು ಸಾವಿರ ಜನರಿಗೆ ಊಟವನ್ನು ಹಾಕಿಸಲಾಗಿದ್ದು ಇನ್ನು ಊಟದ ಸಂದರ್ಭದಲ್ಲಿ ಸ್ವತಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಪತ್ನಿಯಾಗಿರುವ ಅಶ್ವಿನಿ ಹಾಗೂ ರಾಘಣ್ಣ ಮತ್ತು ಶಿವಣ್ಣನವರು ಕಣ್ಣೀರು ಇಡುತ್ತಾ ಅಭಿಮಾನಿಗಳಿಗೆ ಊಟವನ್ನು ಬಡಿಸಿದ್ದಾರೆ.

ಇನ್ನು ಈ ಅನ್ನಸಂತರ್ಪಣೆ ಕಾರ್ಯಕ್ಕಾಗಿ ದೊಡ್ಡ ಮನೆಯವರು ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಸುದ್ದಿ ಕೂಡ ಇದ್ದು ಅಪ್ಪು ಅವರಿಗೆ ಮಾಂಸದೂಟ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಹೆಚ್ಚು ಜನರು ಊಟ ಮಾಡಿದ್ದು ಮಾಂಸಹಾರವನ್ನು. 5000 ಕೆಜಿ ಮಾಂಸವನ್ನು ಊಟಕ್ಕಾಗಿ ಬಳಸಲಾಗಿತ್ತು. 1000 ಜನರು ಬಾಣಸಿಗರು ಅಡುಗೆಯನ್ನು ತಯಾರು ಮಾಡಿದ್ದರು. ಬರೋಬ್ಬರಿ 4000 ಕೆಜಿ ಸೋನಾಮಸೂರಿ ಅಕ್ಕಿ 750 ಲಿಟರ್ ಅಡುಗೆ ಎಣ್ಣೆ ಲೆಕ್ಕವಿಲ್ಲದಷ್ಟು ದಿನಸಿ ಸಾಮಾನುಗಳನ್ನು ಅಡುಗೆಗೆ ಪೂರೈಸಲಾಗಿದ್ದು ಬಂದ ಅಭಿಮಾನಿಗಳೆಲ್ಲರೂ ಕೂಡ ಹೊಟ್ಟೆ ತುಂಬಾ ಊಟ ಮಾಡುವಂತೆ ವ್ಯವಸ್ಥೆ ಮಾಡಲಾಗಿತ್ತು.

ಇನ್ನು ಈ ಮಹಾ ಅನ್ನಸಂತರ್ಪಣೆ ಕಾರ್ಯಕ್ಕಾಗಿ ಬರೋಬ್ಬರಿ ಮೂರು ಕೋಟಿ ರೂಪಾಯಿ ಖರ್ಚಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದು ಇನ್ನು ಎಲ್ಲ ಜವಾಬ್ದಾರಿಗಳನ್ನು ಕೂಡ ಕೇವಲ ಒಬ್ಬರೇ ವಹಿಸಿಕೊಳ್ಳದೆ ದೊಡ್ಡ ಮನೆಯವರು ಎಲ್ಲರೂ ಕೂಡ ಒಟ್ಟಾಗಿ ನಿಂತು ಈ ಕಾರ್ಯವನ್ನು ಮಾಡಿದ್ದಾರೆ. ಹಾಗಾಗಿ ಈ ಖರ್ಚು ಕೂಡ ಎಲ್ಲರೂ ಸೇರಿ ಮಾಡಿದ್ದಾಗಿದ್ದು ಬಂದ ಅಭಿಮಾನಿಗಳೆಲ್ಲರೂ ಊಟ ಮಾಡಿ ಅಪ್ಪುವಿನ ಆತ್ಮಕ್ಕೆ ಶಾಂತಿ ಕೋರಿ ಹೋಗಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button