ಚಂದನ್ ಮನೆಗೆ ಮುದ್ದಾದ ಮಗು ಎಂಟ್ರಿ.. ಸಂತೋಷದಲ್ಲಿ ತೇಲಾಡಿದ ಚಂದನ್ ಹೇಳಿದ್ದೇನು ಗೊತ್ತೇ?
ಪ್ರಿಯ ವೀಕ್ಷಕರೆ ರಾಧಾ ಕಲ್ಯಾಣ ಧಾರಾವಾಹಿ ಖ್ಯಾತಿಯ ಕಿರುತರೆ ನಟ ಚಂದನ ತಮ್ಮ ಕ್ಯೂಟ್ ನಟನೆಯಿಂದಲೆ ಮನೆ ಮಾತಾಗಿದ್ದಾರೆ. ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಧಾರಾವಾಹಿಗಳ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು ಚಂದನ್. ಅದೇ ರೀತಿ ಚಂದನ್ ಜೊತೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಕವಿತಾ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಈಗಷ್ಟೇ ಕಾಲಿಟ್ಟಿದ್ದಾರೆ. ಈಗ
ಚಂದನ ಅವರ ಮೆನೆಗೆ ಪುಟ್ಟ ಕಂದಮ್ಮ ಪುಟ್ಟ ಹೆಜ್ಜೆಯನ್ನಿಟ್ಟಿದ್ದು, ಮಗುವಿನೊಂದಿಗಿನ ಫೋಟೊಗಳನ್ನು ಚಂದನ ತಮ್ಮ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮದುವೆಯಾದ ನಂತರ ಅಭಿಮಾನಿಗಳು ಚಂದನಿಗೆ ಸಿಹಿ ಸುದ್ದಿ ಕುರಿತು ಆಗಾಗ ಕೇಳುತ್ತಲೇ ಇದ್ದರೂ, ಈ ಪುಟ್ಟ ಮಗುವಿನ ಆಗಮನ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಆದರೆ ಆ ಪುಟ್ಟ ಮಗು ಯಾರು, ಚಂದನ ತಮ್ಮ ಸಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಿದ್ಯಾಕೆ ಎಂಬ ಪ್ರಶ್ನೆಗಳು ಹುಟ್ಟುವುದು ಸಾಮಾನ್ಯ.. ಧಾರಾವಾಹಿ ಹೊರತಾಗಿ ಚಂದನ ಹಾಗೂ ಕವಿತಾ ತಮ್ಮ ಪ್ರೀತಿಯ ಸುದ್ದಿಯನ್ನು ಎಲ್ಲಿಯೂ ಬಿಚ್ಚಿಟ್ಟಿದ್ದಿಲ್ಲ. 2019 ರಲ್ಲಿ ಕವಿತಾಳ ಹುಟ್ಟುಹಬ್ಬದ ಕಾರ್ಯಕ್ರಮ, ವಿಕೆಂಡ್ ಟ್ರೀಪ್, ಟ್ರೇಕಿಂಗ್ಸ್ ಸೇರಿದಂತೆ
ಹಲವು ರೀತಿಯ ಫೋಟೊಗಳನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಅವರಿಬ್ಬ ಸ್ನೇಹ ಪ್ರೀತಿಯಾಗಿ ಚಿಗುರೊಡೆಯುವ ಮೊದಲೆ ಸಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಮ್ ದಲ್ಲಿ ಹಂಚಿಕೊಳ್ಳುತಿದ್ದ ಫೋಟೊಗಳು ಸಾಕಷ್ಟು ವೈರಲ್ ಆಗಿ ಇವರಿಬ್ಬರ ಮಧ್ಯ ಪ್ರೀತಿ ಇದೆ ಎಂಬ ಗಾಸಿಫ್ ಗಳು ಹರಿದಾಡಿದವು.
ಇವುಗಳಿಗೆ ತಕೆ ಕಡಿಸಿಕೊಳ್ಳದ ಚಂದನ್ ಕವಿತಾ ಸ್ನೇಹಿತರಾಗಿ ಆರಾಮಾಗಿದ್ದರು. ಅದ್ಯಾವಾಗ ಸ್ನೇಹ ಸಲುಗೆಯಾಗಿ , ಸಲುಗೆ ಪ್ರೀತಿಯಾಗಿತ್ತು ಗೊತ್ತಿಲ್ಲ. ಮನೆಯವರ ಸಮ್ಮತಿ ಮೆರೆಗೆ ಇದೆ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು ಈ ಜೋಡಿ ಅಭಿಮಾನಿಗಳಿಗೆ ಸಡನ್ ಸರ್ ಪ್ರೈಸ್ ನೀಡಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮದುವೆ ನಂತರ ಚಂದನ ಧಾರಾವಾಹಿಗಳಿಂದ ಸ್ವಲ್ಪ ಹೊರ ಬಂದು ಹೋಟೆಲ್ ಬಿಸಿನೆಸ್ ಪ್ರಾರಂಭಿಸಿದ್ದು ಮತ್ತೆ ಈದೀಗ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸದ್ಯ ತೆಲುಗಿನ ಧಾರಾವಾಹಿಯ ಶೂಟಿಂಗ್ ಒಂದರಲ್ಲಿ ನಟಿಸುತಿದ್ದಾರೆ. ಕವಿತಾ ಕೊಡ ರಿಯಾಲಿಟಿ ಶೋ,ಡ್ಯಾನ್ಸ್ ಶೋ ಗಳಲ್ಲಿ ಬ್ಯುಸಿಯಾಗಿದ್ದು ಆಗಾಗ ತಮ್ಮ ಸಾಮಾಜಿಕ
ಜಾಲತಾಣಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡ್ತಾರೆ. ಕೆಲವು ದಿನಗಳ ಹಿಂದೆ ಚಂದನ್ ಪುಟ್ಟ ಮಗುವನ್ನು ಬರಮಾಡಿಕೊಂಡ ಫೋಟೊದೊಂದಿಗೆ ಪೋಸ್ಟ್ ಮಾಡಿದ್ದರು. ಈ ಫೋಟೊ ನೋಡಿದ ಕೆಲವರು ಇದು ಚಂದನ್ ಕವಿತಾರ ಮಗು ಎಂದು ಯೂಟ್ಯೂಬ್‌ನಲ್ಲಿ ಸುದ್ದಿ ಮಾಡಿದ್ದರು. ಆದರೆ ಆ ಮಗು ಚಂದನ್ ಕವಿತಾರದ್ದಲ್ಲ. ಚಂದನ ತಮ್ಮ ಕುಟುಂಬಕ್ಕೆ ಮಗುವನ್ನು ಬರಮಾಡಿಕೊಂಡಿದ್ದೇನೊ ನಿಜ ಆದರೆ ಆ ಮಗು ಚಂದನ ಅವರ ಅಕ್ಕನ ಮಗುವಾಗಿದೆ.
ಹೌದು ಚಂದನ್ ಗೆ ಮೊದಲಿನಿಂದಲೂ ತನ್ನ ಕುಟುಂಬದಲ್ಲಿ ಅಕ್ಕ ಎಂದರೆ ಎಲ್ಲಿಲ್ಲದ ಪ್ರೀತಿ ಗೌರವ. ಅಕ್ಕನ ಮಗನೆಂದರೆ ಬಹಳ ಪ್ರೀತಿ,ವಾತ್ಸಲ್ಯ. ಇದೀಗ ಅಕ್ಕನಿಗೆ ಎರಡನೇ ಮಗುವಾಗಿದ್ದು ಚಂದನ ಖುಷಿಗೆ ಮಿತಿಯಿಲ್ಲದಂತಾಗಿದೆ. ಆ ಪುಟ್ಟ ಕಂದಮ್ಮನನ್ನು ತಮ್ಮ ತೋಳಿನಲ್ಲಿರಿಸಿ ಫೋಟೋ ಹಂಚಿಕೊಂಡಿದ್ದಾರೆ..
ಅಷ್ಟೇ ಅಲ್ಲದೇ ಈ ಮಗು ನನ್ನ ಮನಸ್ಸಿನ ಎಲ್ಲಾ ನೋವಿಗೆ ನೆಮ್ಮದಿ ಎಂದು ಭಾವನಾತ್ಮಕವಾಗು ಪೋಸ್ಟ್ ಮಾಡಿದ್ದಾರೆ.. ಸಧ್ಯ ಅಕ್ಕನ ಮಗುವನ್ನು ಸ್ವಾಗತಿಸಿರುವ ಚಂದನ್ ಆದಷ್ಟು ಬೇಗ ತಮ್ಮ ಮಗುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಲಿ ಎಂದು ಅಭಿಮಾನಿಗಳು ಹಾರೈಸಿದ್ದು ಕಮೆಂಟುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.