NEWS

ದಯವಿಟ್ಟು ನನ್ನ ಬಗ್ಗೆ ಈ ರೀತಿ ಕೀಳಾಗಿ ಮಾತನಾಡಬೇಡಿ.. ಕೈ ಮುಗಿದ ನಟ ಅನಿರುದ್ಧ್..

ಕನ್ನಡ ಕಿರುತೆರೆಯ ಖ್ಯಾತ ನಟ ಅನಿರುದ್ಧ್ ಇದೀಗ ತನ್ನ ಬಗ್ಗೆ ಮಾತನಾಡಿದವರಿಗೆ ಕೈ ಮುಗಿದಿದ್ದು ನನ್ನ ಬಗ್ಗೆ ಆ ರೀತಿ ಮಾತನಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಹೌದು ಕನ್ನಡದ ಖ್ಯಾತ ನಟ ಮೇರು ನಟ ಸಾಹಸಿಂಹ ವಿಷ್ಣುವರ್ಧನ್ ಅವರ ವಿಚಾರವಾಗಿ ಇದೀಗ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ.. ಅದೇ ವಿಚಾರದ ಕುರಿತು ಅನಿರುದ್ಧ್ ಹಾಗೂ ವಿಷ್ಣುವರ್ಧನ್ ಅವರ ಸಂಬಂಧದ

ಕುರಿತು ಮಾತನಾಡಿದ್ದು ಇದರಿಂದ ಅನಿರುದ್ಧ್ ಸಾಕಷ್ಟು ಬೇಸರ ಪಟ್ಟುಕೊಂಡು ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.. ಹೌದು ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರ ಕಳೆದ ಹನ್ನೊಂದು ವರ್ಷದಿಂದಲೂ ದಡ ಕಾಣದ ಸಾಗರದಂತಾಗಿದ್ದು ಕನ್ನಡದ ಒಬ್ಬ ಮೇರು ನಟನಿಗೆ ನೀಡುತ್ತಿರುವ ಗೌರವ ಇದೇನಾ ಎಂಬಂತಾಗಿದೆ.. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರ ಆಗಾಗ ಮುನ್ನೆಲೆಗೆ ಬರುತ್ತಲೇ ಇದ್ದರೂ ಸಹ ಯಾವುದೇ ಪ್ರಯೋಜನವಿಲ್ಲದಂತಾಗಿದೆ..

ಆದರೀಗ ಬೇರೆಯ ವಿಚಾರವೇ ನಡೆದಿದೆ.. ಹೌದು ಪುನೀತ್ ರಾಜ್ ಕುಮಾರ್ ಅವರು ಇಲ್ಲವಾದ ನಂತರ ಸರ್ಕಾರ ಅಪ್ಪು ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡುವುದಾಗಿ ತಿಳಿಸಿತು.. ಅಷ್ಟೇ ಅಲ್ಲದೇ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡಿ ಪುನೀತ್ ಅವರ ಕಲಾ ಹಾಗೂ ಸಮಾಜ ಸೇವೆಗೆ ಗೌರವ ಸಲ್ಲಿಸಿತು.. ಆದರೆ ಮತ್ತೊಂದು

ಕಡೆ ಅಪ್ಪು ಅವರ ಸಮಾಧಿಯ ಫೋಟೋ ಜೊತೆಗೆ ವಿಷ್ಣುವರ್ಧನ್ ಅವರ ಸಮಾಧಿಯ ದುಸ್ಥಿತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಒಬ್ಬ ಮಹಾನ್ ನಟನ ಸಮಾಧಿಗೆ ಬಂದ ಸ್ಥಿತಿ ನೋಡಿ ಎನ್ನುತ್ತಿದ್ದರು ದಾದಾ ಅಭಿಮಾನಿಗಳು.. ಆದರೆ ಈ ಬಗ್ಗೆ ವಿಷ್ಣುವರ್ಧನ್ ಅವರ ಅಳಿಯ ಸಹ ಪ್ರತಿಕ್ರಿಯೆ ನೀಡಿ ವಿಷ್ಣುವರ್ಧನ್ ಅವರ ಸ್ಮಾರಕದ ನಿರ್ಮಾಣಕ್ಕೆ ಯಾರೊಬ್ಬರು ಸಹಾಯ ಮಾಡಲಿಲ್ಲ..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹತ್ತು ವರ್ಷಗಳ ಕಾಲ ಸರ್ಕಾರಗಳಿಗೆ ಮನವಿ ಮಾಡಿಕೊಂಡು ಕೊನೆಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ.. ಮುಂದಿನ ವರ್ಷ ಸೆಪ್ಟೆಂಬರ್ ಹೊತ್ತಿಗೆ ಸ್ಮಾರಕ ಸಂಪೂರ್ಣವಾಗಲಿದೆ.. ಆದರೆ ಅಪ್ಪಾವ್ರಿಗೆ ಮೊದಲಿನಿಂದಲೂ ತಾರತಮ್ಯ ಮಾಡಿದ್ದು ನಮಗೆ ಬೇಸರವಿದೆ.. ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅವರ ಹೆಸರಿಲ್ಲ..

ಇತ್ತ ಸ್ಮಾರಕ ನಿರ್ಮಾಣ ಮಾಡಲು ಯಾರೂ ಮುಂದೆ ಬರಲಿಲ್ಲ.. ಎಲ್ಲರೂ ಮಾದ್ಯಮದ ಮುಂದೆ ಹೇಳಿದರಷ್ಟೇ ಆದರೆ ಯಾರೊಬ್ಬರೂ ಅಮ್ಮನ ಜೊತೆ ಮಾತನಾಡಿ ನಿರ್ಧಾರವನ್ನು ಕೈಗೊಳ್ಳಲಿಲ್ಲ.. ಎಂದಿದ್ದರು.. ಆದರೆ ಇದೀಗ ವಿಷ್ಣುವರ್ಧನ್ ಅವರ ಅಭಿಮಾನಿಗಳು ಮಾತ್ರ ಅನಿರುದ್ಧ್ ಅವರ ಬಗ್ಗೆ ಮಾತನಾಡುತ್ತಿದ್ದು ಅದರಿಂದ ಅನಿರುದ್ಧ್ ಬೇಸರ ಪಟ್ಟುಕೊಂಡಿದ್ದಾರೆ..

ಹೌದು ಸ್ಮಾರಕದ ವಿಚಾರದ ಕುರಿತು ಕುಟುಂಬ ನಿರ್ಲಕ್ಷ್ಯ ಮಾಡಿತು.. ಭಾರತಿ ಅಮ್ಮನವರ ಹಠದಿಂದ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಸ್ಮಾರಕ ಮೈಸೂರಿಗೆ ಸ್ಥಳಾಂತರವಾಯಿತು.. ಆದರೆ ನಮಗೆ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರವಾದ ಜಾಗದಲ್ಲಿಯೇ ಅವರ ಸ್ಮಾರಕ ನಿರ್ಮಾಣವಾಗಬೇಕು.. ಅನಿರುದ್ಧ್ ಅವರು

ವಿಷ್ಣುವರ್ಧನ್ ಅವರ ಹೆಸರು ಬಳಸಿಕೊಂಡರಷ್ಟೇ ಆದರೆ ಸರಿಯಾಗಿ ನಿಂತು ಸ್ಮಾರಕ ಮಾಡಿಸಲಿಲ್ಲ ಎಂದೆಲ್ಲಾ ಜನರು ನೇರವಾಗಿ ಅನಿರುದ್ಧ್ ಅವರ ಫೋಟೋ ಕೆಳಗೆ ಕಮೆಂಟ್ ಮಾಡುತ್ತಿದ್ದಾರೆ.. ಅಷ್ಟೇ ಅಲ್ಲದೇ ವಿಷ್ಣುವರ್ಧನ್ ಅವರು ನಿಮ್ಮ ಆಸ್ತಿಯಲ್ಲ.. ಅವರು ಕನ್ನಡಿಗರ ಆಸ್ತಿ.. ಸ್ಮಾರಕ ಎಲ್ಲಿಯಾದರೂ ಮಾಡಿ ಆದರೆ ಅವರ ಅಂತ್ಯ ಸಂಸ್ಕಾರ

ನಡೆದ ಜಾಗದಲ್ಲಿ ಪುಣ್ಯಭೂಮಿಯನ್ನು ಸರಿಯಾಗಿ ನಿರ್ವಹಿಸಿ.. ಅದನ್ನು ಮಾಡಲಾಗಲಿಲ್ಲ ಎಂದಮೇಲೆ ಅವರ ಹೆಸರನ್ನು ಯಾಕೆ ಬಳಸಿಕೊಳ್ತೀರಾ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button