Uncategorized

ಆ ದಿನ ಕುಟುಂಬದಲ್ಲಿ ನಡೆದ ವಿಚಾರಕ್ಕೆ ಅತ್ತಿಗೆಯ ಪರವಾಗಿ ನಿಂತಿದ್ದ ಅಪ್ಪು.. ಇದು ದೊಡ್ಡಗುಣ ಅಂದರೆ..

ಪುನೀತ್ ರಾಜ್ ಕುಮಾರ್ ಅವರು ಬಹುಶಃ ನಾವುಗಳು ಇರುವವರೆಗೂ ಆ ಪುಣ್ಯಾತ್ಮನ ಒಳ್ಳೆಯತನ ಒಳ್ಳೆಯ ಗುಣಗಳ ಬಗ್ಗೆ ಎಷ್ಟು ಬರೆದರೂ ಮುಗಿಯಲಾರದು ಎನಿಸುತ್ತದೆ.. ಪುನೀತ್ ರಾಜ್ ಕುಮಾರ್ ಅವರು ಇದ್ದಾಗ ಅವರೊಬ್ಬ ಸ್ಟಾರ್ ನಟ.. ದೊಡ್ಮನೆಯ ಮಗ.. ಸರಳ ವ್ಯಕ್ತಿ.. ಅಹಂಕಾರವಿಲ್ಲದ ಗುಣ.. ಯಾರ ಬಗೆಯೂ ಎಂದೂ ಸಣ್ಣ

ಕೊಂಕನ್ನೂ ಹೇಳದ ನಟ.. ಒಬ್ಬ ಒಳ್ಳೆಯ ವ್ಯಕ್ತಿ.. ಇಷ್ಟೇ ಪುನೀತ್ ಅವರ ಬಗ್ಗೆ ನಮಗೆಲ್ಲಾ ಗೊತ್ತಿದ್ದ ವಿಚಾರ.. ಆದರೆ ದೊಡ್ಡವರು ಒಂದು ಮಾತ್ ಹೇಳ್ತಾರೆ.. ನಾವು ಇದ್ದಾಗ ಅಲ್ಲ ನಾವು ಹೋದ ನಂತರ ನಮ್ಮ ಬಗ್ಗೆ ಜನರು ಒಂದಿಷ್ಟು ಒಳ್ಳೆಯದನ್ನು ಮಾತನಾಡ್ಬೇಕು ಅಂತ.. ಆ ಮಾತು ಪುನೀತ್

ಅವರ ವಿಚಾರದಲ್ಲಿ ಅಕ್ಷರಶಃ ಸತ್ಯ.. ಇದ್ದಾಗ ಮಾಡಿದ ಆ ಪುಣ್ಯ ಕೆಲಸಗಳು ಅವರು ಹೋದ ನಂತರವಷ್ಟೇ ಬೆಳಕಿಗೆ ಬಂದಿದೆ.. ಎಲ್ಲಿಯೂ ಒಂದಿಷ್ಟು ಪ್ರಚಾರ ಪಡೆಯದ ವ್ಯಕ್ತಿಯ ಒಂದೊಂದೇ ವಿಚಾರಗಳು ಈಗ ಹೊರ ಬರುತ್ತಿದೆ‌‌..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಸಮಾಜದ ವಿಚಾರದಲ್ಲಿ ಮಾತ್ರವಲ್ಲ ತಮ್ಮ ಕುಟುಂಬದ ವಿಚಾರವಾಗಿಯೂ ಪುನೀತ್ ತೋರುತ್ತಿದ್ದ ದೊಡ್ಡಗುಣ ಅದರಲ್ಲೂ ಅತ್ತಿಗೆಯ ವಿಚಾರವಾಗಿ ಪುನೀತ್ ಅವರು ನಡೆದುಕೊಂಡ ರೀತಿ ನೋಡಿದ್ರೆ ನಿಜಕ್ಕೂ ಬದುಕಿದರೆ ಅವರ ಆದರ್ಶ ಮಾರ್ಗದಲ್ಲಿ

ಬದುಕಬೇಕೆನಿಸುತ್ತದೆ‌. ಹೌದು ನಾವು ಸಾಕಷ್ಟು ಜನರನ್ನು ನೋಡಿರುತ್ತೇವೆ.. ತಮ್ಮ ಕುಟುಂಬವನ್ನು ಬಹಳ ಐಶಾರಾಮಿಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ನೋಡಿಕೊಳ್ಳುತ್ತಾರೆ.. ಆದರೆ ಸಮಾಜಕ್ಕೆ ಅವರ ಕೊಡುಗೆ ಶೂನ್ಯವಾಗಿರುತ್ತದೆ.. ಮತ್ತೊಂದು ವರ್ಗದವರು ಸಮಾಜಕ್ಕೆ

ಸಾಕಷ್ಟು ಮಾಡಿರುತ್ತಾರೆ.. ಆದರೆ ಸ್ವಂತ ಕುಟುಂಬವನ್ನು ನಿರ್ಲಕ್ಷ್ಯ ಮಾಡಿರುತ್ತಾರೆ.. ಆದರೆ ಅಪ್ಪು ಮಾತ್ರ ನಿಜಕ್ಕೂ ಇದೆಲ್ಲವನ್ನು ಮೀರಿದ ದೇವತಾ ಮನುಷ್ಯ ಎಂದರೆ ತಪ್ಪಾಗಲಾರದು.. ಸಮಾಜ ಕುಟುಂಬ ಎರಡನ್ನೂ ಚೆನ್ನಾಗಿ ನೋಡಿಕೊಂಡ ವ್ಯಕ್ತಿ.. ಹೌದು ಅದೊಂದು ದಿನ ತಮ್ಮ

ಕುಟುಂಬದಲ್ಲಿ ಬಹುದೊಡ್ಡ ವಿಚಾರವೊಂದರ ಕುರಿತು ಮನೆಯವರೆಲ್ಲಾ ಕೂತು ಚರ್ಚೆ ಮಾಡುತ್ತಿರುತ್ತಾರೆ.. ಆ ಸಮಯದಲ್ಲಿ ಶಿವಣ್ಣನ ಪತ್ನಿ ಗೀತಕ್ಕನ ಪರವಾಗಿ ಅಪ್ಪು ನಿಂತ ರೀತಿ ನಿಜಕ್ಕೂ ಆತನ ದೊಡ್ಡಗುಣವನ್ನು ತೋರುತ್ತದೆ.

ಹೌದು ಎಲ್ಲರಿಗೂ ತಿಳಿದಿರುವಂತೆ ಅಣ್ಣಾವ್ರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದದ್ದು ಪಾರ್ವತಮ್ಮನವರು.. ಪೂರ್ಣಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದವರೂ ಸಹ ಪಾರ್ವತಮ್ಮ ರಾಜ್ ಕುಮಾರ್ ಅವರೇ.. ತಮ್ಮದೇ ಪ್ರೊಡಕ್ಷನ್ ನಲ್ಲಿ

ಸಾವಿರಾರು ಜನರಿಗೆ ಕೆಲಸ ಕೊಟ್ಟರು..‌ ಅಷ್ಟೇ ಅಲ್ಲದೇ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದರು.. ಆದರೆ ಆಗಿನ ಕಾಲಕ್ಕೆ ಸಾಮಾಜಿಕ ಜಾಲತಾಣವಾಗಲಿ ಅಥವಾ ಸುದ್ದಿ ಮಾದ್ಯಮಗಳು ಈಗಿನಷ್ಟು ಇರಲಿಲ್ಲ.. ಆ ಕಾರಣ ಆ ವಿಚಾರಗಳು ಅವರ ಸುತ್ತ ಮುತ್ತ ಇದ್ದ ಜನರಿಗಷ್ಟೇ ತಿಳಿದಿತ್ತು.. ಆದರೆ ಅಷ್ಟಕ್ಕೇ ಸುಮ್ಮನಾಗದ

ಪಾರ್ವತಮ್ಮ ರಾಜ್ ಕುಮಾರ್ ಅವರು ಮೈಸೂರಿನಲ್ಲಿ ಅನಾಥ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಆಶ್ರಮವೊಂದನ್ನು ತೆರೆದರು.. ಯಾರೂ ಇಲ್ಲದ ಹೆಣ್ಣು ಮಕ್ಕಳನ್ನು ಸಮಾಜದಲ್ಲಿ ಬಲಿಷ್ಠವಾಗಿಸಲು ಆ ಕೇಂದ್ರಕ್ಕೆ ಶಕ್ತಿಧಾಮ ಎಂದು

ಹೆಸರಿಟ್ಟರು.. ಈವರೆಗೂ ಸಾವಿರಾರು ಹೆಣ್ಣು ಮಕ್ಕಳು ಆ ಶಕ್ತಿಧಾಮದಲ್ಲಿ ಬೆಳೆದು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ವಿದೇಶದಲ್ಲಿ ವ್ಯಾಸಂಗ ಮಾಡಿ ದೊಡ್ಡ ದೊಡ್ಡ ಹುದ್ದೆಯಲ್ಲಿಯೂ ಇದ್ದಾರೆ ಎಂದು ತಿಳಿದುಬಂದಿದೆ..

ಆ ಕೇಂದ್ರದಲ್ಲಿ ಮಕ್ಕಳನ್ನು ಸಾಕುವುದು ಮಾತ್ರವಲ್ಲ.. ಅವರು ದೊಡ್ಡವರಾದ ನಂತರ ಅವರನ್ನು ಸ್ವಾವಲಂಭಿಯಾಗಿ ಜೀವನ ನಡೆಸಲು ಬೇಕಾದ ಎಲ್ಲಾ ತರಬೇತಿಗಳನ್ನೂ ಸಹ ಅಲ್ಲಿ ನೀಡಲಾಗುತ್ತದೆ.. ಸ್ವಯಂ ಉದ್ಯೋಗ ಮಾಡಬಯಸುವವರೂ ಸಹ ಮುಂದೆ ಮಾಡಿ

ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದಾಗಿದೆ.. ಅಷ್ಟು ತಯಾರಿ ತರಬೇತಿ ಎಲ್ಲವನ್ನೂ ನೀಡಿ ಹೆಣ್ಣು ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಿ ಬಲಿಷ್ಠರನ್ನಾಗಿ ಮಾಡಲಾಗುತ್ತದೆ.. ಇದು ಪಾರ್ವತಮ್ಮ ಅವರ ಕನಸು ಕೂಡ ಹೌದು.. ಗಂಡು ಮಕ್ಕಳಿಗೆ ಸಾಕಷ್ಟು ಜನರು ಆಶ್ರಮಗಳನ್ನು ಮಾಡುತ್ತಾರೆ.. ಆದರೆ ಹೆಣ್ಣು ಮಕ್ಕಳಿಗೆಂದರೆ ಕೊಂಚ ಹಿಂದೇಟು ಹಾಕುವುದು ಸತ್ಯ.. ಆದರೆ

ಪಾರ್ವತಮ್ಮನವರು ಮಾತ್ರ ದಿಟ್ಟ ಹೆಜ್ಜೆ ಇಟ್ಟು ಬಲಿಷ್ಠವಾದ ಶಕ್ತಿಧಾಮವನ್ನು ಕಟ್ಟಿದ್ದರು.. ಪಾರ್ವತಮ್ಮನವರು ಇದ್ದಷ್ಟು ದಿನ ಅದನ್ನು ಅವರೇ ಖುದ್ದಾಗಿ ನೋಡಿಕೊಳ್ಳುತ್ತಿದ್ದರು.. ಆದರೆ ಕಳೆದ ನಾಲ್ಕು ವರ್ಷದ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ಅವರು ಅಗಲಿದರು..

ಆ ನಂತರ ಶಕ್ತಿಧಾಮವನ್ನು ನೋಡಿಕೊಳ್ಳೋದು ಯಾರು ಆ ಜವಾಬ್ದಾರಿ ಯಾರಿಗೆ ನೀಡೋದು ಎಂಬ ಪ್ರಶ್ನೆ ಮೂಡಿದಾಗ ದೊಡ್ಮನೆ ಕುಟುಂಬದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಕೂತು ಒಮ್ಮೆ ಚರ್ಚೆ ಮಾಡಿದರು.. ಶಿವಣ್ಣ ಗೀತಕ್ಕ.. ರಾಘಣ್ಣ ಹಾಗೂ ಅವರ ಪತ್ನಿ ಮತ್ತು ಮಕ್ಕಳು.. ಪುನೀತ್ ಹಾಗೂ ಅಶ್ವಿನಿ ಅವರು ಹಾಗೂ ಲಕ್ಷ್ಮಿ ಅವರು ಹಾಗೂ ಪೂರ್ಣಿಮಾ ಅವರು ಎಲ್ಲರೂ ಸಹ ಕೂತು ಚರ್ಚೆ

ಮಾಡಿದರು.. ಆ ಸಮಯದಲ್ಲಿ ಇನ್ನು ಮುಂದೆ ಈ ಜವಾಬ್ದಾರಿಯನ್ನು ಅತ್ತಿಗೆಯೇ ತೆಗೆದುಕೊಳ್ಳಲಿ ಎಂದು ಪುನೀತ್ ಅವರು ಹೇಳಿದರು.. ಅಮ್ಮನ ಜೊತೆ ಹೆಚ್ಚು ಸದಾ ಜೊತೆಗಿದ್ದ ಪುನೀತ್ ಅವರಿಗೆ ಅಮ್ಮನ ಪ್ರತಿ ಹೆಜ್ಜೆ ಅವರ ನಿರ್ಧಾರಗಳ ಬಗ್ಗೆ ಬಹಳ ಚೆನ್ನಾಗಿ ಗೊತ್ತಿತ್ತು.. ಅದನ್ನು ಮನಸಿನಲ್ಲಿಟ್ಟುಕೊಂಡು ಗೀತಕ್ಕಾ ಅವರೇ ಸರಿಯಾದ ವ್ಯಕ್ತಿಯೆಂದು ಅವರೇ ಶಕ್ತಿದಾಮವನ್ನು ನೋಡಿಕೊಳ್ಳಲಿ

ಎಂಬ ನಿರ್ಧಾರಕ್ಕೆ ಕುಟುಂಬದವರೆಲ್ಲಾ ಬಂದರು.. ಶಕ್ತಿಧಾಮ ಎಂಬುವುದು ಒಂದು ಟ್ರಸ್ಟ್ ಆಗಿದ್ದು.. ಅಲ್ಲಿಗೆ ದೊಡ್ಮನೆ ಕುಟುಂಬವನ್ನು ಹೊರತು ಪಡಿಸಿ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರು ಹಾಗೂ ಇನ್ನೂ ಕೆಲವರು ಟ್ರಸ್ಟಿಗಳು ಸಹ ಇದ್ದಾರೆ..

ಇನ್ನು ಇತ್ತ ದೊಡ್ಮನೆ ಕುಟುಂಬದಿಂದ ಗೀತಕ್ಕ ಅವರು ಶಕ್ತಿಧಾಮದ ಜವಾಬ್ದಾರಿಯನ್ನು ತೆಗೆದುಕೊಂಡರು.. ಈಗಲೂ ಸಹ ವಾರಕ್ಕೊಮ್ಮೆ ಮೈಸೂರಿನ ಶಕ್ತಿಧಾಮಕ್ಕೆ ಗೀತಕ್ಕನವರು ಭೇಟಿ ಕೊಡುವುದು ಉಂಟು.. ಇನ್ನು ಅತ್ತಿಗೆಗೆ ಜವಾಬ್ದಾರಿ ನೀಡಿದ್ದು ಮಾತ್ರವಲ್ಲ ನಂತರ ಗೀತಕ್ಕ ಅವರಿಗೆ ಪುನೀತ್ ಅವರು ಬೆನ್ನೆಲುಬಾಗಿ ನಿಂತರು.. ಅವರ

ಪರವಾಗಿ ನಿಂತರು.. ಹೌದು ಅತ್ತಿಗೆಯ ಈ ಕೆಲಸಕ್ಕೆ ತಮ್ಮ ಕೈಲಿ ಏನೆಲ್ಲಾ ಮಾಡಬಹುದು ಅದೆಲ್ಲವನ್ನು ಅಪ್ಪು ಮಾಡುತ್ತಿದ್ದರು.. ಕಿರುತೆರೆಯಲ್ಲಿ ತಾವು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋಗಳಿಂದ ಬರುತ್ತಿದ್ದ ಅಷ್ಟೂ ಹಣವನ್ನು ಶಕ್ತಿಧಾಮಕ್ಕೆ ನೀಡುವ ಮೂಲಕ ಅತ್ತಿಗೆಯ ಕೆಲಸಕ್ಕೆ

ನೆರವಾಗುತ್ತಿದ್ದರು.. ಅಷ್ಟೇ ಅಲ್ಲದೇ ತಾವು ಮೈಸೂರಿಗೆ ಹೋದಾಗಲೆಲ್ಲಾ ಶಕ್ತಿಧಾಮಕ್ಕೆ ಭೇಟಿಕೊಟ್ಟು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಜೊತೆ ಸಮಯ ಕಳೆಯುತ್ತಿದ್ದರು.. ಜೊತೆಗೆ ಆ ಮಕ್ಕಳು ಕೇಳಿದ ಆಸೆಗಳನ್ನೆಲ್ಲಾ ಪೂರೈಸುತ್ತಿದ್ದರು..

ಒಬ್ಬ ಸೂಪರ್ ಸ್ಟಾರ್ ಸಾಮಾನ್ಯನಂತೆ ಆ ಮಕ್ಕಳನ್ನೆಲ್ಲಾ ಸಿನಿಮಾಗೆ ಕರೆದುಕೊಂಡು ಹೋಗಿ ಮಕ್ಕಳನ್ನು ಸಂತೋಷ ಪಡಿಸುತ್ತಿದ್ದರು ಎಂದರೆ ಪುನೀತ್ ಅವರ ಗುಣ ಏನು ಅಂತ ಅರ್ಥವಾಗುತ್ತದೆ.. ಹೀಗೆ ಅತ್ತಿಗೆಯ ಕೆಲಸಗಳಲ್ಲಿ ಜೊತೆಯಾಗಿ ನಿಲ್ಲುತ್ತಿದ್ದ ಅಪ್ಪು ಇಲ್ಲವಾದ ನಂತರ ಮಕ್ಕಳಿಗೆ

ನೆರವಾಗಲು ಸಾಕಷ್ಟು ಜನರು ಮುಂದೆ ಬರುತ್ತಿದ್ದಾರೆ.. ಈಗಲೂ ಸಹ ಶಕ್ತಿಧಾಮ ಯಾವುದೇ ತೊಂದರೆ ಇಲ್ಲದೇ ಚೆನ್ನಾಗಿಯೇ ನಡೆಯುತ್ತಿದೆ.. ಆದರೂ ಸಹ ನೆರವು ನೀಡಲು ತಮಿಳು ನಟ ವಿಶಾಲ್ ಸೇರಿದಂತೆ ಕೆಲವರು ಮುಂದೆ ಬರುತ್ತಿರುವ ಕಾರಣ ಇಂದು ಮೈಸೂರಿನಲ್ಲಿ ಶಿವಣ್ಣ ಹಾಗೂ

ಶಕ್ತಿಧಾಮದ ಎಲ್ಲಾ ಟ್ರಸ್ಟಿಗಳು ಚರ್ಚೆ ನಡೆಸಿ ಅವರುಗಳ ನೆರವು ದುರ್ಬಳಕೆಯಾಗಬಾರದೆಂದು ಅದನ್ನು ಸರಿಯಾದ ರೀತಿಯಲ್ಲಿ ಅಗತ್ಯ ಇರುವ ಕಡೆ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button