Uncategorized

ಪುನೀತ್ ನಮನ ಕಾರ್ಯಕ್ರಮದಲ್ಲಿ ಹಾಡಲು ವಿಜಯ್‌ ಪ್ರಕಾಶ್ ಪಡೆದ ಸಂಭಾವನೆ ಎಷ್ಟು

ಪುನೀತ್ ರಾಜ್ ಕುಮಾರ್ ಅವರು ಅಗಲಿದ ಕಾರಣ ಸಂಪೂರ್ಣ ನಾಡೇ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ರಸ್ತೆ ರಸ್ತೆಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋ ಇಟ್ಟು ನಮಿಸಿದ್ದಾರೆ. ಅವರಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸಿದ್ದಾರೆ.. ರಸ್ತೆಯಲ್ಲಿ ಸಂಚರಿಸುವಾಗ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರ ಇಲ್ಲದ ರಸ್ತೆಯೇ ಇಲ್ಲ

ಎನ್ನುವಂತಾಗಿದೆ.. ದಿನಗಳು ಕಳೆಯುತ್ತಿದೆ ಆದರೆ ನೋವು ಮಾತ್ರ ಕಡಿಮೆಯಾಗುವ ಬದಲು ಹೆಚ್ಚಾಗುತ್ತಲೇ ಇದೆ. ಇನ್ನು ರಾಜ್ಯದಲ್ಲಿ ನಾನಾ ಭಾಗಗಳಲ್ಲಿ ಪುನೀತ್ ಅವರ ಹನ್ನೊಂದನೇ ದಿನದ ಪುಣ್ಯ ಕಾರ್ಯವನ್ನು ಮಾಡಿ ಜನರಿಗೆ ಅನ್ನಸಂತರ್ಪಣೆಯನ್ನೂ ಸಹ ಮಾಡಿದ್ದಾರೆ.. ಇತ್ತ

ಜನಸಾಮಾನ್ಯರು ತಮ್ಮ ತಮ್ಮ ಕೈಲಾದ ರೀತಿಯಲ್ಲಿ ಪುನೀತ್ ಅವರಿಗೆ ಗೌರವ ಸಲ್ಲಿಸಿದರೆ ಮತ್ತೊಂದು ಕಡೆ ಚಿತ್ರರಂಗದ ಗಣ್ಯರು ಕಲಾವಿದರು ತಂತ್ರಜ್ಞರು ಎಲ್ಲರೂ ಸೇರಿ ಅಪ್ಪು ಅವರಿಗೆ ಪುನೀತ್ ನಮನ ಕಾರ್ಯಕ್ರಮ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕಾರ್ಯಕ್ರಮದಲ್ಲಿ ಬೇರೆ ಭಾಷೆಯ ಕಲಾವಿದರು, ಸ್ಯಾಂಡಲ್ವುಡ್ ನ ಹಿರಿಯ ಕಲಾವಿದರು ರವಿಚಂದ್ರನ್ ಅವರು ಜಗ್ಗೇಶ್ ಅವರು ಯಶ್ ದರ್ಶನ್ ಗಣೇಶ್ ದುನಿಯಾ ವಿಜಯ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರು ಆಗಮಿಸಿ ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿದರು..

ಮುಖ್ಯಮಂತ್ರಿಗಳು ಸೇರಿದಂತೆ ರಾಜಕೀಯ ಗಣ್ಯರು ಎಲ್ಲರೂ ಆಗಮಿಸಿ ಅಗಲಿದ ಅಪ್ಪುವಿಗೆ ನಮಿಸಿದರು.. ಮತ್ತೊಂದೆಡೆ ಕುಟುಂಬದವರಾದ ಅಶ್ವಿನಿ ಅವರು ಎರಡನೇ ಮಗಳು ವಂದಿತಾ..‌ ಶಿವಣ್ಣನ ಕುಟುಂಬ ರಾಘಣ್ಣನ ಕುಟುಂಬ ಎಲ್ಲರೂ ಸಹ ಆಗಮಿಸಿ ಪುನೀತ್ ಅವರನ್ನು ನೆನೆದು ಭಾವುಕರಾದರು‌..

ಇನ್ನು ಕಾರ್ಯಕ್ರಮ ಗೀತ ನಮನದ ಕಾರ್ಯಕ್ರಮವಾದ್ದರಿಂದ ವಿಜಯ್ ಪ್ರಕಾಶ್ ಅವರು ರಾಜೇಶ್ ಕೃಷ್ಣನ್ ಅವರು ಹೇಮಂತ್, ನಂದಿತಾ, ಅನುರಾಧಾ ಭಟ್ ಗುರು ಕಿರಣ್ ಸೇರಿದಂತೆ ನಾಡಿನ ಎಲ್ಲಾ

ಹಾಡುಗಾರರು ಸಂಗೀತ ನಿರ್ದೇಶಕರು ಆಗಮಿಸಿ ಅಪ್ಪುಗೆ ಹಾಡಿನ ಮೂಲಕ ನಮಿಸಿದರು. ಇನ್ನು ಯಾವುದೇ ಕಾರ್ಯಕ್ರಮವಾಗಲಿ ಗಾಯಕರುಗಳು ಸಂಭಾವನೆ ಪಡೆದು ಆ ಕಾರ್ಯಕ್ರಮದಲ್ಲಿ ಹಾಡಿ ಬರುತ್ತಾರೆ. ಇನ್ನು ಕನ್ನಡ

ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಬಹುಬೇಡಿಕೆಯ ಗಾಯಕರಾದ ವಿಜಯ್ ಪ್ರಕಾಶ್ ಸೇರಿದಂತೆ ಅನೇಕ ಗಾಯಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಗಾಯನದ ಮೂಲಕ ಅಪ್ಪುವಿಗೆ ನಮಿಸಿದರು.

ಕಾರ್ಯಕ್ರಮದ ಜವಾಬ್ದಾರಿಯನ್ನು ಗುರುಕಿರಣ್ ಅವರು ಹಾಗೂ ಸಾಹಿತಿ ನಾಗೇಂದ್ರ ಪ್ರಸಾದ್ ಅವರು ವಹಿಸಿದ್ದರು.. ಇವರುಗಳೆಲ್ಲಾ ಕಾರ್ಯಕ್ರಮದ ದಿನ ಮಾತ್ರವಲ್ಲ ಬಹಳಷ್ಟು ದಿನಗಳ ಕಾಲ ಅಭ್ಯಾಸ ಮಾಡಿ ನಂತರ ಆ ದಿನ ವೇದಿಕೆಯ

ಮೇಲೆ ಹಾಡಿದರು.. ಇನ್ನು ಇವರಿಗೆಲ್ಲಾ ಗೌರವಧನವನ್ನು ವಾಣಿಜ್ಯ ಮಂಡಳಿ ನೀಡಲು ಮುಂದಾಗಿತ್ತು. ಆದರೆ ವಿಜಯ್ ಪ್ರಕಾಶ್ ಅವರು ಗುರುಕಿರಣ್ ಅವರು ಯಾರೊಬ್ಬರೂ ಸಹ ಯಾವುದೇ ಸಂಭಾವನೆಯನ್ನು ಪಡೆಯಲಿಲ್ಲ..

ನಾವುಗಳು ಸಹ ಅಪ್ಪು ಇಲ್ಲದ ನೋವಿನಲ್ಲಿದ್ದೇವೆಂದು ಯಾವುದೇ ಹಣ ಪಡೆಯದೇ ಸತತ ನಾಲ್ಕು ಗಂಟೆಗಳ ಕಾಲ ಹಾಡುಗಳ ಮೂಲಕ ಗೀತ ನಮನವನ್ನು ಸಲ್ಲಿಸಿ ಕಣ್ಣೀರಿಟ್ಟರು.. ಇನ್ನು ಕಾರ್ಯಕ್ರಮ ನಡೆಸಿಕೊಟ್ಟ ಅಪರ್ಣಾ ಸಹ ಯಾವುದೇ ಸಂಭಾವನೆ ಪಡೆಯದೇ ಸತತ ಏಳು ಗಂಟೆಗಳ ಕಾಲ ಕಾರ್ಯಕ್ರಮದ ನಿರೂಪಣೆ ಮಾಡಿ ಅಪ್ಪುಗೆ ತಮ್ಮ ಮಾತುಗಳ ಮೂಲಕವೇ ನುಡಿ ನಮನ ಸಲ್ಲಿಸಿದರು..

ಅಪ್ಪು ನೀವು ನಮ್ಮನ್ನೆಲ್ಲಾ ಬಿಟ್ಟು ಹೋಗಿಯಾಗಿದೆ.. ನಡೆದದ್ದನ್ನು ಬದಲಿಸಲು ನಿಜಕ್ಕೂ ನಮ್ಮಿಂದ ಸಾಧ್ಯವಿಲ್ಲ.. ಆದರೆ ದಯವಿಟ್ಟು ಮರಳಿ ಹುಟ್ಟಿ ಬನ್ನಿ.. ಅದೇ ದೊಡ್ಮನೆಯಲ್ಲಿ ಹುಟ್ಟಿ ಆ ಕುಟುಂಬದ ನೋವನ್ನು ಕಡಿಮೆ ಮಾಡಿ.. ದೀರ್ಘಾಯುಷಿಯಾಗಿ ಸಂತೋಷವಾಗಿ ಬಾಳಿ.. ಇದೇ ನಮ್ಮೆಲ್ಲರ ಪ್ರಾರ್ಥನೆ.. ದೇವರಲ್ಲಿನ ಕೋರಿಕೆ.. ಎಲ್ಲವೂ ಇದೆ..

Related Articles

Leave a Reply

Your email address will not be published. Required fields are marked *

Back to top button