Uncategorized

ಮನೆಯಲ್ಲಿ ಅಪ್ಪ ಅಮ್ಮ ಮಾಡೊ ಕೆಲಸವನ್ನೆಲ್ಲಾ ವೇದಿಕೆ ಮೇಲೆಯೇ ಹೇಳಿ ಜನ್ಮ ಜಾಲಾಡಿದ ಮಾಸ್ಟರ್ ಆನಂದ್ ಮಗಳು.. ಅದಕ್ಕೆ ಮಕ್ಕಳ ಮುಂದೆ ಹುಷಾರಾಗಿ ಇರ್ಬೇಕು ಗುರು‌.

ಪುಟ್ಟ ಮಕ್ಕಳೇ ಹಾಗೆ.. ಮನಸ್ಸು ನಿಷ್ಕಲ್ಮಶ.. ಆದರೆ ಮಕ್ಕಳ‌ ಮುಂದೆ ಅಪ್ಪ ಅಮ್ಮ ಸ್ವಲ್ಪ ಎಚ್ಚರ ತಪ್ಪಿದರೂ ಸಹ ಮಕ್ಕಳು ಅವಕಾಶ ಸಿಕ್ಕಾಗ ಅಪ್ಪ ಅಮ್ಮನ ಜನ್ಮ ಜಾಲಾಡಿ ಇಂತಹ ಘಟನೆಗಳಾಗೋದು ನೂರಕ್ಕೆ ನೂರರಷ್ಟು ಖಚಿತ.. ಹೌದು ಅದೇ ರೀತಿ ಈ ಪುಟ್ಟ ಕಂದಮ್ಮ ತನ್ನ ತಂದೆ ಸ್ಟಾರ್ ನಟ

ಮಾಡೋ ಎಲ್ಲಾ ಕೆಲಸಗಳನ್ನು ಇದೀಗ ವೇದಿಕೆ ಮೇಲೆ ಬಟಾಬಯಲು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಶುರುವಾಗುತ್ತಿರುವ ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಈ ಕಂದಮ್ಮನ ಮಾತುಗಳು ಮೋಡಿ ಮಾಡಿವೆ..

ಹೌದು ಈ ಪುಟ್ಟ ಕಂದ ಮತ್ಯಾರೂ ಅಲ್ಲ ಖ್ಯಾತ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ಮಗಳು ವಂಶಿಕಾ.. ಮಾಸ್ಟರ್ ಆನಂದ್ ಚಿಕ್ಕ ವಯಸ್ಸಿನಲ್ಲಿ ಎಷ್ಟು ಚೂಟಿಯಾಗಿದ್ದನೋ ಆನಂದ್ ಮಗಳು ಅದಕ್ಕೆ ಹತ್ತರಷ್ಟು

ಹೆಚ್ಚು ಚೂಟಿಯಾಗಿದ್ದು ವೇದಿಕೆ ಮೇಲೆ ತನ್ನ ಅಪ್ಪ ಅಮ್ಮ ಮಾಡೋ ಕೆಲಸಗಳ ಬಗ್ಗೆ ಹೇಳಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.. ಅದಕ್ಕೇ ಹೇಳೋದು ಮಕ್ಕಳ ಮುಂದೆ ಏನು ಮಾಡಬೇಕು ಏನು ಮಾಡಬಾರದು ನೋಡಿ ಮಾಡಿ ನಡೆದುಕೊಳ್ಳಬೇಕು ಎಂದು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಆ ಪುಟ್ಟ ಹುಡುಗಿ ವಂಶಿಕಾ ಹೇಳಿದ ಮಾತುಗಳು ಕೇಳಿ “ನನ್ನ್ ಹೆಸರು ವಂಶಿಕಾ ಅಂಜನಿ ಕಶ್ಯಪ.. ಎಲ್ಲರೂ ನನ್ನನ್ನ ವಂಶಿ ವಂಶಿ ಅಂತಾ ಕರೀತಾರೆ.. ವಂಶಿ ಅಂತ ಕರೆಯೋಕೆ ಇಷ್ಟುದ್ದ ಹೆಸರು ಬೇಕಾ.. ಇಷ್ಟುದ್ದ ಹೆಸರು ಮಾತ್ರ ಇಟ್ಟಿದ್ದಾರೆ.. ಕೂದಲು ಮಾತ್ರ ಶಾರ್ಟ್ ಆಗಿ ಕಟ್

ಮಾಡ್ಸ್ಬಿಟ್ಟಿದ್ದಾರೆ.. ಬೆಳೆಯತ್ತೆ ಅಂತ ಕಟ್ ಮಾಡ್ಸ್ಬಿಟ್ಟಿದ್ದಾರೆ.. ಅದ್ಯಾವಗ್ ಬೆಳೆಯತ್ತೋ ಏನೋ.. ನಮ್ಮ್ ಅಪ್ಪ ಅಮ್ಮ ನನ್ನ ನಮ್ಮ್ ಅಣ್ಣನ್ನ ಪಕ್ಕದ್ ರೂಮಲ್ ಮಲುಗ್ಸಿ ಅವ್ರ್ ಮಾತ್ರ ಕೆಳಗೆ ವಟ ವಟ ಅಂತ ಮಾತ್ ಆಡ್ತಾನೆ ಇರ್ತಾರೆ.. ನಮಗ್ ನಿದ್ರೆನೇ ಬರಲ್ಲ..

ನಮ್ ಅಪ್ಪ ಕಾಸ್ ಕೊಡ್ತಾ ಇರ್ತಾರೆ.. ನಮ್ಮ್ ಅಮ್ಮ ಜೋಡ್ಸಿ ಜೋಡ್ಸಿ ಇಡ್ತಾ ಇರ್ತಾರೆ.. ಆ ಪಕ್ಕದ್ ಮನೆ ಆಂಟಿ ಬಂದೋ ಅಯ್ಯೋ ರೀ ಒಂದ್ ದುಡ್ಡ್ ಕೊಡಿ ಅಂತ ಕೇಳುದ್ರೆ ನಮ್ ಅಮ್ಮ ಅಯ್ಯೋ ಸಾರಿ ರಿ ದುಡ್ಡೇ ಇಲ್ಲ ಅಂತಾರೆ..

ಅವ್ರ್ ಮಾತ್ರ ಸುಳ್ಳ್ ಹೇಳ್ಬಹುದಾ ನಾವ್ ಮಾತ್ರ ಸುಳ್ಳ್ ಹೇಳ್ಬಾರ್ದಾ.. ಎಲ್ಲಾರೂ ನನ್ನ ಮಾಸ್ಟರ್ ಆನಂದ್ ಮಗಳು ಮಾಸ್ಟರ್ ಆನಂದ್ ಮಗಳು ಅಂತ ಕರೀತಾರೆ.. ಇನ್ಮೇಲೆ ನನ್ಮ್ ಹೆಸರನ್ನೇ ಕರಿಬೇಕು.. ಏನ್ ಹೇಳಿ ವಂಶಿಕಾ ಅಂಜನಿ ಕಶ್ಯಪ..

ಇನ್ನು ವಂಶಿಕಾ ಮಾತುಗಳಿಗೆ ಬೆಚ್ಚಿ ಬೆರಗಾದ ಅಲ್ಲಿ ನೆರೆದಿದ್ದವರೆಲ್ಲಾ ನಕ್ಕು ನಕ್ಕು ಸುಸ್ತಾಗಿ ನಗೆಗಡಲಲ್ಲಿ ತೇಲಿದರು.. ಇನ್ನು ಕಾರ್ಯಕ್ರಮದ ಜಡ್ಜ್ ಆದ ಸೃಜನ್ ಲೋಕೇಶ್ ಅವರು ತಕ್ಷಣ ಮಾಸ್ಟರ್ ಆನಂದ್ ಗೆ ಫೋನ್ ಮಾಡಿ ಆನಂದ ಏನೋ ಪಟಾಕಿಯನ್ನ

ಹುಟ್ಟುಸ್ಬಿಟ್ಟಿದ್ದೀಯಲ್ಲೋ ಎಂದು ಕಿಚ್ಚಾಯಿಸಿದರು.. ಸಧ್ಯ ವಂಶಿಕಾಳ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮಕ್ಕಳ‌ ಮುಂದೆ ಹುಷಾರಿ ಇರ್ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು‌‌.. ಒಟ್ಟಿನಲ್ಲಿ ಕಳೆದ ಎರಡು ವರ್ಷದಿಂದ ಮನೆಯಲ್ಲಿಯೇ ಕೂತು ಮನರಂಜನೆ ಇಲ್ಲದೆ ನಿರಾಸೆಗೊಂಡಿದ್ದ ಮಕ್ಕಳಿಗೆ ಒಂದೊಳ್ಳೆ ಕಾರ್ಯಕ್ರಮ ಎನ್ನಬಹುದು‌.

Related Articles

Leave a Reply

Your email address will not be published. Required fields are marked *

Back to top button