ಮಧ್ಯ ರಾತ್ರಿ ದಾರಿ ತಪ್ಪಿ ಆಸ್ಟ್ರಿಯಾದಲ್ಲಿ ರಾತ್ರಿ ಪೂರ್ತಿ ರಸ್ತೆಯಲ್ಲಿಯೇ ಕೂತಿದ್ದ ಪುನೀತ್ ಅವರನ್ನು ದೇವರಂತೆ ಬಂದು ಕಾಪಾಡಿದ್ದ ಆ ವ್ಯಕ್ತಿ ಯಾರು ಗೊತ್ತಾ..
ಪುನೀತ್ ರಾಜ್ ಕುಮಾರ್ ಅವರಿಗೆ ಪ್ರವಾಸಗಳೆಂದರೆ ಎಷ್ಟು ಇಷ್ಟ ಎಂಬುದು ಎಲ್ಲರಿಗೂ ತಿಳಿದಿದೆ.. ಅದರಲ್ಲೂ ದೇಶ ವಿದೇಶಗಳನ್ನು ಸುತ್ತಬೇಕು.. ಎಲ್ಲಾ ಕಡೆ ಆ ಆ ಜಾಗದಲ್ಲಿನ ಸಂಸ್ಕೃತಿ ಅಲ್ಲಿನ ಪರಿಸರ ಅಲ್ಲಿನ ಆಹಾರ ಎಲ್ಲವನ್ನೂ ಸವಿಯ ಬೇಕು ಎಂಬುದು ಅಪ್ಪು ಅವರ ಆಸೆಯಾಗಿತ್ತು.. ಅದೇ ರೀತಿ ಅದೆಷ್ಟೇ ಕೆಲಸ ಇದ್ದರೂ ಪ್ರತಿ
ವರ್ಷ ತಪ್ಪದೇ ಬಿಡುವು ಮಾಡಿಕೊಂಡು ತಮ್ಮ ಕುಟುಂಬವನ್ನು ವಿದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು.. ಅಶ್ವಿನಿ ಅವರು ಧೃತಿ ಹಾಗೂ ವಂದಿತಾ ಜೊತೆಗೆ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್ ಆಗಿ ಹೋಗುತ್ತಿದ್ದ ಪುನೀತ್ ಅವರು ಯಾವುದೇ ಸಹಾಯಕರನ್ನು ಕರೆದುಕೊಂಡು ಹೋಗುತ್ತಿರಲಿಲ್ಲ.. ಮಕ್ಕಳು ಹಾಗೂ ಪತ್ನಿ
ಕೈಯಲ್ಲಿ ಯಾವುದೇ ಲಗೇಜ್ ಕೊಡದೇ ಸಂಪೂರ್ಣ ತಾವೇ ಹದಿನೈದು ದಿನ ಗಳಿಗಾಗುವಷ್ಟು ಲಗೇಜ್ ಎಲ್ಲವನ್ನೂ ಹೊರುತ್ತಿದ್ದರು.. ಈ ಬಗ್ಗೆ ಮಜಾ ಟಾಕೀಸಿನಲ್ಲಿಯೂ ಸಹ ಒಮ್ಮೆ ಹೇಳಿಕೊಂಡಿದ್ದರು..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಸಹಾಯಕರು ಯಾರೂ ಇರಲ್ವಲ್ಲಾ ಏನು ಮಾಡ್ತೀರಾ ಅಪ್ಪು.. ಲಗೇಜ್ ಯಾರ್ ಹೊರ್ತಾರೆ ಎಂದು ಸೃಜನ್ ಕೇಳಿದಾಗ.. ಇನ್ಯಾರ್ ಹೊರ್ತಾರೆ ಎಲ್ಲವನ್ನು ನಾನೇ ಹೊರಬೇಕು ಎಂದು ಮಗುವಿನಂತೆ ಮುಗ್ಧವಾಗಿ ನಕ್ಕಿದ್ದರು.. ಇನ್ನು ಅವರಿಗೆ ಸೌತ್ ಅಮೇರಿಕಾಗೆ ಹೋಗಬೇಕೆಂದು ಬಹಳ ಆಸೆಯಿತ್ತು.. ಅವರ ಆಸೆಯಂತೆ ಎರಡು ವರ್ಷದ
ಹಿಂದೆ ಅಶ್ವಿನಿ ಅವರು ಹಾಗೂ ಮಕ್ಕಳೊಟ್ಟಿಗೆ ತೆರಳಿ ಸಂತೋಷಪಟ್ಟಿದ್ದರು.. ಇನ್ನು ಪುನೀಯ್ ಅವರ ಕೊನೆಯ ವಿದೇಶ ಪ್ರವಾಸ ಎರಡು ವರ್ಷದ ಹಿಂದೆ ಕತಾರ್ ಗೆ ಕನ್ನಡ ಸಮ್ಮೇಳನಕ್ಕಾಗಿ ಸ್ನೇಹಿತರೊಟ್ಟಿಗೆ ಹೋದದ್ದು.. ಆನಂತರ ಕೊರೊನಾ ಬಂದಿತು.. ಈ ವರ್ಷ ಅಪ್ಪುವೇ ಇಲ್ಲವಾದರು
ಅವರ ಪ್ರವಾಸವೂ ಅಲ್ಲಿಗೆ ನಿಂತು ಹೋಯಿತು.. ಆದರೆ ಇದ್ದಷ್ಟು ದಿನ ಪ್ರತಿಕ್ಷಣವನ್ನು ಸಂತೋಷದಿಂದ ಅನುಭವಿಸುತ್ತಿದ್ದ ಅಪ್ಪು ಒಮ್ಮೆ ಬೇರೆ ದೇಶವೊಂದರಲ್ಲಿ ಮಧ್ಯರಾತ್ರಿಯಲ್ಲಿ ದಾರಿ ತಪ್ಪಿದ್ದ ಘಟನೆ ನಿಜಕ್ಕೂ ಆ ಸಾಮಯದಲ್ಲಿಯೂ ಅಷ್ಟು ಸಂಯಮದಿಂದ ಇದ್ದರೆಂದರೆ ಅವರ ಗುಣ ಮೆಚ್ಚಲೇ ಬೇಕು.
ಹೌದು ಆಸ್ಟ್ರಿಯಾ ದೇಶಕ್ಕೆ ಚಿತ್ರೀಕರಣಕ್ಕೆಂದು ತೆರಳಿದ್ದರು.. ಚಿತ್ರೀಕರಣ ಮುಗಿದ ನಂತರ ಅಪ್ಪು ಅವರು ತಮ್ಮ ಮ್ಯಾನೇಜರ್ ಕುಮಾರ್ ಅವರನ್ನು ಕರೆದುಕೊಂಡು ಬನ್ನಿ ಕುಮಾರ್ ಹೊರಗೆ ಊಟ ಮಾಡೋಣ ಎಂದು ರಾತ್ರಿ ಹೊಟೆಲ್ ನಿಂದ ಕರೆದುಕೊಂಡು ಹೋದರು.. ಊಟ ಎಲ್ಲಾ
ಮುಗಿದಿದ್ದು ಹನ್ನೊಂದು ಮೂವತ್ತಾಯಿತು.. ಊಟ ಮುಗಿಸಿ ನಡೆದುಕೊಂಡು ಹೊಟೆಲ್ ಕಡೆಗೆ ಬರುತ್ತಿದ್ದರು.. ಆದರೆ ಬರ್ತಾ ಬರ್ತಾ ದಾರಿ ತಪ್ಪಿ ಹೋಗಿದ್ದರು.. ಸಮಯ ಒಂದು ಗಂಟೆಯಾಗಿತ್ತು.. ದಾರಿಯಲ್ಲಿ ಯಾರೊಬ್ಬರ ಸುಳಿವೂ ಇಲ್ಲ.. ಆಗೆಲ್ಲಾ ಹೊರ ದೇಶಕ್ಕೆ ಹೋದಾಗ ಅಲ್ಲಿ
ಸಂಪೂರ್ಣ ಪ್ರೊಡಕ್ಷನ್ ನವರು ಒಂದು ಫೋನ್ ಮಾತ್ರ ಇಟ್ಟುಕೊಂಡು ಅದರಲ್ಲಿಯೇ ಎಲ್ಲರೂ ಕುಟುಂಬಗಳಿಗೆ ಫೋನ್ ಮಾಡಲು ಬಳಸುತ್ತಿದ್ದರು.. ಇವರಿಗೆ ಹೊಟೆಲ್ ಹೆಸರು ಬಿಟ್ಟರೆ ಅಲ್ಲಿ ಯಾವ ದಾರಿಯ ಹೆಸರೂ ಸಹ ಗೊತ್ತಿರಲಿಲ್ಲ..
ಹೋಗ್ತಾ ಹೋಗ್ತಾ ಸಮಯ ಬೆಳಗ್ಗೆ ಮೂರು ಗಂಟೆ ಆಗಿ ಹೋಯ್ತು.. ಯಾರದ್ದಾದರೂ ಮನೆ ಬಾಗಿಲು ತಟ್ಟಿ ಹೊಟೆಲ್ ಹೆಸರು ಹೇಳಿ ಕೇಳೋಣ ಅಂದರೆ ಅವರು ನಮ್ಮನ್ನು ತಪ್ಪಾಗಿ ತಿಳಿದುಕೊಂಡು ಬಿಟ್ಟರೆ ಏನು ಮಾಡೊದು ಎಂದು ಸುಮ್ಮನಾಗಿ ಬಿಟ್ಟರು.. ಜೊತೆಗೆ ನಾವು ಬೇರೆ ಕತ್ತಲ್ಲಿ ಚೈನ್ ಹಾಕಿದ್ದೆವು.. ಎಂದು ಆ ದಿನ
ಭಯಪಟ್ಟುಕೊಂಡಿದ್ದನ್ನು ಕುಮಾರ್ ಅವರು ನೆನಪಿಸಿಕೊಂಡರು.. ಆಗಲೂ ಸಹ ಆ ರಾತ್ರಿಯಲ್ಲಿ ದಾರಿ ತಪ್ಪಿ ಕೂತಿದ್ದರೂ ಸಹ ಪುನೀತ್ ಅವರು ಚಿತ್ರತಂಡದವರ ಬಗ್ಗೆಯೇ ಯೋಚಿಸಿ ನಾನು ಬೆಳಿಗ್ಗೆ ಚಿತ್ರೀಕರಣಕ್ಕೆ ಬೇಗ ಹೋಗ್ಬೇಕು.. ನನ್ನಿಂದ ಅವರಿಗೆ ತೊಂದರೆ ಆಗಬಾರದು ಎನ್ನುತ್ತಿದ್ದರಂತೆ