Uncategorized

ಮಾಲ್ಡೀವ್ಸ್ ನ ಹೊಟೆಲ್ ನಲ್ಲಿ ಬಿಲ್ ಕಟ್ಟಲು ಹಣವಿಲ್ಲದಾಗ ಪಾರ್ವತಮ್ಮ ಅವರು ಮಾಡಿದ ಕೆಲಸ ನೋಡಿ.. ಇದು ಧೈರ್ಯ ಅಂದರೆ..

ಸ್ಯಾಂಡಲ್ವುಡ್ ಈಗಿನ ಸಿನಿಮಾ ಇಂಡಸ್ಟ್ರಿಗಿಂತ ಮೊದಲು ಅಂದರೆ ಮೊದಲ ತಲೆಮಾರಿನ ಕಲಾವಿದರುಗಳು ಬೆಳೆದು ಬಂದ ರೀತಿ ಒಬ್ಬರಿಗೊಬ್ಬರು ಕೊಡುತ್ತಿದ್ದ ಗೌರವ ಹಾಗೂ ಸಮಯಕ್ಕೆ ನಾವಿದ್ದೀವಿ ಎಂದು ನಿಲ್ಲುತ್ತಿದ್ದ ರೀತಿ ನಿಜಕ್ಕೂ ಇದೆಲ್ಲವೂ ಎಷ್ಟು ತಲೆಮಾರುಗಳು ಬಂದರೂ ಸಹ ಇವರುಗಳೇ ನಿಜವಾದ ಆದರ್ಶವೆನ್ನಬಹುದು.. ಇನ್ನು

ದೊಡ್ಮನೆ ವಿಚಾರಕ್ಕೆ ಬಂದರೆ ರಾಜಣ್ಣನವರು ತಾವಾಯ್ತು ತಮ್ಮ ನಟನೆಯಾಯ್ತು ಎಂದು ತಮ್ಮ ಸುತ್ತ ಮುತ್ತಲಿನವರ ಜೊತೆ ಮಗುವಿನಂತೆ ಸಮಯ ಕಳೆಯುತ್ತಿದ್ದರು.. ಅಹಂಕಾರ ಎಂಬುದು ಆ ಪುಣ್ಯಾತ್ಮನಲ್ಲಿ ಒಂದು ಕಣದಲ್ಲಿಯೂ ಇರಲಿಲ್ಲ.. ಹಣದ ವಿಚಾರಕ್ಕೆ ಬಂದರೆ ಜೇಬಿನಲ್ಲಿ ಒಂದು ರೂಪಾಯಿಯೂ ಇಡದ ದೊಡ್ಡ ಮನುಷ್ಯನಾತ.. ಇನ್ನು ರಾಜಣ್ಣನವರ ವ್ಯವಹಾರವಾಗಲಿ ಅಥವಾ ದೊಡ್ಮನೆಯ ನಿರ್ಮಾಣ ಸಂಸ್ಥೆ ವಜ್ರೇಶ್ವರಿ

ಕಂಬೈನ್ಸ್ ನ ವ್ಯವಹಾರಗಳಾಗಲಿ ನೋಡಿಕೊಳ್ಳುತ್ತಿದ್ದದ್ದು ಪಾರ್ವತಮ್ಮನವರೇ.. ಅವರ ವ್ಯವಹಾರ ರೀತಿ ನೀತಿಗಳನ್ನು ನೋಡಿ ಕಲಿತು ಜೀವನದಲ್ಲಿ ದೊಡ್ಡ ಸ್ಥಾನಕ್ಕೇರಿರುವವರು ನೂರಾರು ಮಂದಿ.. ಇತ್ತ ಪುನೀತ್ ರಾಜ್ ಕುಮಾರ್ ಅವರೂ ಸಹ ಸಾಕಷ್ಟು ಬಾರಿ ಹೇಳಿದಂತೆ “ನಾನು ಸದಾ ಅಮ್ಮನ ಜೊತೆಯೇ ಇರುತ್ತಿದ್ದೆ.. ಅವರು ಯಾವಾಗಲೂ ಒಂದಲ್ಲಾ ಒಂದು ಕೆಲಸದಲ್ಲಿ ಬ್ಯುಸಿ ಆಗಿರುತ್ತಿದ್ದರು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಸದಾ ಚೆಕ್ ಗಳಿಗೆ ಸಹಿ ಮಾಡೋದು ಅಥವಾ ಮತ್ಯಾವುದೋ ಪತ್ರಗಳನ್ನು ನೋಡೋದು ಅಥವಾ ಅಪ್ಪಾಜಿಯ ಕೆಲಸಗಳು ಹೀಗೆ ಸಾಕಷ್ಟು ಬ್ಯುಸಿ ಆಗಿರುತ್ತಿದ್ದರು.. ನಾನು ಸಹ ದೊಡ್ಡವನಾದ ಮೇಲೆ ಅಮ್ಮನಂತೆ ಆಗಬೇಕು ಎಂಬ ಆಸೆಯಿತ್ತು ಎಂದಿದ್ದರು.. ಆದರೆ ಇಂತಹ ಪಾರ್ವತಮ್ಮನವರು ಚಿತ್ರೀಕರಣಕ್ಕಾಗಿ

ಮಾಲ್ಡೀವ್ಸ್ ಗೆ ತೆರಳಿದಾಗ ಅಲ್ಲಿ ಹೊಟೆಲ್ ನಲ್ಲಿ ಬಿಲ್ ಕಟ್ಟಲು ಹಣವಿಲ್ಲದಾಗ ಮಾಡಿದ ಕೆಲಸ ತೋರಿದ ದಿಟ್ಟತನ ನಿಜಕ್ಕೂ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಎನ್ನಬಹುದು.. ಅಷ್ಟೇ ಅಲ್ಲದೇ ಆ ಸಮಯದಲ್ಲಿ ಪಾರ್ವತಮ್ಮ ಅವರನ್ನು ಹೊಟೆಲ್ ನಿಂದ ಹೊರಗೆ ಕರೆತಂದದ್ದು ಕನ್ನಡದ ಒಬ್ಬ ಸೂಪರ್ ಸ್ಟಾರ್ ನಟ.. ಹೌದು ಆಗಿನ ಕಲಾವಿದರ ನಡುವಿನ ಬಾಂಧವ್ಯ ಎಷ್ಟರ ಮಟ್ಟಕ್ಕೆ

ಇತ್ತು ಎಂಬುದಕ್ಕೆ ಈ ಘಟನೇ ಸಾಕ್ಷಿ.. ಹೌದು ಈ ಬಗ್ಗೆ ನಿರ್ದೇಶಕ ಹಾಗೂ ಅಣ್ಣಾವ್ರ ಕುಟುಂಬದ ಆಪ್ತರಾದ ಭಗವಾನ್ ಅವರು ಮೊನ್ನೆ ಮಾದ್ಯಮದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.. ” ಹೀಗೆ ಒಮ್ಮೆ ಮಾಲ್ಡೀವ್ಸ್ ನಲ್ಲಿ ಹೊಟೆಲ್ ನಲ್ಲಿ ಬಿಲ್ ಕಟ್ಟಲು ಹಣ ಇಲ್ಲದೇ ಲಾಕ್ ಆಗಿಬಿಟ್ಟಿದ್ದೆವು.. ತೆಗೆದುಕೊಂಡು ಹೋದ ಹಣವೆಲ್ಲಾ ಸಿನಿಮಾ ಚಿತ್ರೀಕರಣಕ್ಕೆ ಖರ್ಚಾಗಿ ಹೋಗಿತ್ತು..

ಹೊಟೆಲ್ ಗೆ ಕಟ್ಟಲು ಹಣವಿರಲಿಲ್ಲ.. ಎಲ್ಲರನ್ನೂ ರೂಮ್ ಗಳಲ್ಲಿ ಲಾಕ್ ಮಾಡಿಬಿಟ್ಟಿದ್ದರು.. ಆಗ ನಾವು ಭಾರತಕ್ಕೆ ಹೋದ ಕೂಡಲೇ ಹಣ ಕಳುಹಿಸಿ ಕೊಡ್ತೀವಿ ಎಂದು ಹೇಳಿದಾಗ ಸರಿ ಎಂದು ಎಲ್ಲರನ್ನೂ ಬಿಟ್ಟರು.. ಆದರೆ ರಾಜ್ ಕುಮಾರ್ ಅವರನ್ನು ಮಾತೆಅ ಬಿಡಲಿಲ್ಲ.. ಅವರಿಗೆ ಗೊತ್ತಿತ್ತು ರಾಜ್ ಕುಮಾರ್ ಅವರು ಸಿನಿಮಾದ ಹೀರೋ

ಅವರನ್ನು ಇಟ್ಟುಕೊಂಡರೆ ಹಣ ಬರತ್ತೆ ಅಂತ.. ಅದಕ್ಕೆ ರಾಜಣ್ಣನನ್ನು ಬಿಡಲು ಅವರು ಒಪ್ಪಲಿಲ್ಲ.. ಆದರೆ ಆ ಸಮಯದಲ್ಲಿ ದಿಟ್ಟತನ ತೋರಿದ ಪಾರ್ವತಮ್ಮನವರು ಅದೆಲ್ಲಾ ಸಾಧ್ಯವಿಲ್ಲ.. ನಾನು ಇಲ್ಲೇ ಇರ್ತೀನಿ.. ರಾಜ್ ಕುಮಾರ್ ಅವರನ್ನು ಬಿಡಿ ಎಂದರು.. ಸರಿ ಎಂದು ರಾಜ್

ಕುಮಾರ್ ಅವರನ್ನು ಬಿಡಿಸಿದರು.. ಪಾರ್ವತಮ್ಮ ಅವರು ತಮ್ಮ ಮೈಮೇಲಿದ್ದ ಆಭರಣಗಳನ್ನೆಲ್ಲಾ ಬಿಚ್ಚಿ ಕೊಟ್ಟು ಅಲ್ಲಿಯೇ ಉಳಿದಿದ್ದರು.. ಮಾಲ್ಡೀವ್ಸ್ ನ ಹೊಟೆಲ್ ನಲ್ಲಿ ಪಾರ್ವತಮ್ಮ ಅವರೊಬ್ಬರೇ ಉಳಿದು ಮಿಕ್ಕ ಎಲ್ಲರನ್ನು ಅದಾಗಲೇ ಟಿಕೆಟ್ ಬುಕ್ ಆಗಿದ್ದರಿಂದ ಫ್ಲೈಟ್ ನಲ್ಲಿ ಕಳುಹಿಸಿ ಬಿಟ್ಟರು

ಆ ಸಮಯದಲ್ಲಿ ಪಾರ್ವತಮ್ಮ ಅವರ ನೆರವಿಗೆ ಬಂದದ್ದು ನಮ್ಮ ಕನ್ನಡದ ಕರ್ಣ ಅಂಬರೀಶ್ ಅವರು.. ಹೌದು ಇಲ್ಲಿ ಬೆಂಗಳೂರಿನಲ್ಲಿದ್ದ ಅಂಬರೀಶ್ ಅವರಿಗೆ ಹೇಗೋ ವಿಚಾರ ಗೊತ್ತಾಗಿದೆ.. ಅಂಬರೀಶ್ ಅವರು ಹಾಗೂ ರಾಜಣ್ಣನ ಕುಟುಂಬ ಎಷ್ಟು ಆತ್ಮೀಯವಾಗಿತ್ತು ಎಂದರೆ ಎಲ್ಲರೂ

ಒಂದೇ ಕುಟುಂಬದವರಂತೆ ಇದ್ದರು.. ಆ ಸಮಯದಲ್ಲಿ ಅಂಬರೀಶ್ ಅವರು ಮಾಲ್ಡೀವ್ಸ್ ನ ಆ ಹೊಟೆಲ್ ಗೆ ಫೋನ್ ಮಾಡಿದ್ದಾರೆ.. ಫೋನ್ ಮಾಡಿ ಪಾರ್ವತಮ್ಮ ಅವರ ಜೊತೆ ಮಾತನಾಡಿ “ಏನಕ್ಕಾ ಮಾಲ್ಡೀವ್ಸ್ ಗೆ ಹೋಗ್ತಾ ಇದ್ದೀವಿ ಅಂತ ನನಗೆ ಒಂದು ಮಾತು ಹೇಳ್ಬೇಕ್ ಅಲ್ವಾ.. ಈ ರೀತಿ ನೀವ್ಯಾಕೆ ಅಲ್ಲಿದ್ದೀರಾ.‌ ಫೋನ್ ಕೊಡಿ ಆ ಹೊಟೆಲ್

ಮ್ಯಾನೇಜರ್ ಗೆ ಎಂದು ಪಾರ್ವತಮ್ಮನವರಿಗೆ ತಮ್ಮನಾಗಿ ಕಾಳಜಿಯಿಂದ ರೇಗಿದ್ದಾರೆ.. ನಂತರ ಮ್ಯಾನೇಜರ್ ಬಳಿ‌ ಮಾತನಾಡಿ ಅದೆಷ್ಟು ದುಡ್ಡಾಗಿದೆ ಎಂದು ಕೇಳಿದ್ದಾರೆ.. ಸರಿ ಒಂದೆರೆಡು ಗಂಟೆ ಇರಿ ಎಂದು ತಿಳಿಸಿ ನಂತರ ಅಂಬರೀಶ್ ಅವರು ಏನು ಮಾಡಿದರೋ ಯಾರಿಗೂ ಗೊತ್ತಿಲ್ಲ..

ಅವರು ಫೋನ್ ಇಟ್ಟ ಎರಡು ಗಂಟೆಗಳಲ್ಲಿ ಅಷ್ಟೂ ಹಣವನ್ನು ಮಾಲ್ಡೀವ್ಸ್ ನ ಒಬ್ಬ ವ್ಯಕ್ತಿ ತಂದು ಹೊಟೆಲ್ ಗೆ ಕೊಟ್ಟಿದ್ದಾನೆ.. ಅದು ಸಣ್ಣ ಪುಟ್ಟ ಮೊತ್ತವೂ ಅಲ್ಲ ದೊಡ್ಡ ಮೊತ್ತವೇ ಆಗಿತ್ತು.. ಅಷ್ಟೂ ಹಣವನ್ನು ಹೊಟೆಲ್ ಗೆ ಕೊಟ್ಟು ಪಾರ್ವತಮ್ಮ ಅವರನ್ನು ಕರೆದುಕೊಂಡು ಬಂದು ಎರಡನೇ ಫ್ಲೈಟ್ ಗೆ ಹತ್ತಿಸಿ ಜೋಪಾನವಾಗಿ ಕಳುಹಿಸಿ ಕೊಟ್ಟಿದ್ದಾರೆ..

ಈ ಬಗ್ಗೆ ನಿರ್ದೇಶಕ ಭಗವಾನ್ ಅವರು ತಿಳಿಸಿ ಅಂಬರೀಶ್ ಅವರ ಮಾತು ಒರಟು ಸದಾ ಒರಟು ಒರಟಾಗಿಯೇ ಮಾತನಾಡುತ್ತಿದ್ದ.. ಆದರೆ ಆತನ ಮನಸ್ಸು ಮಾತ್ರ ಯಾರಿಗೂ ಗೊತ್ತಿಲ್ಲ ಅಷ್ಟು ಒಳ್ಳೆಯದಿತ್ತು.. ಆತನಿಗೆ ಸುಮ್ಮನೇ ಕರ್ಣ ಎಂಬ ಹೆಸರು ಬಂದಿಲ್ಲ.. ಆತ ಮಾಡಿರುವ ಇಂತಹ ಕೆಲಸಗಳು ಲೆಕ್ಕವಿಲ್ಲದಷ್ಟು.. ಎಂದಿದ್ದಾರೆ.. ಈಗ

ನಿಮಿಷಗಳಲ್ಲಿ ದೇಶ ವಿದೇಶಗಳಿಗೆ ಹಣ ವರ್ಗಾವಣೆ ಮಾಡಬಹುದು.. ಆದರೆ ಆಗ ಆರೀತಿ ಇರಲಿಲ್ಲ.. ಬೇರೆ ದೇಶವೊಂದಕ್ಕೆ ಚಿತ್ರೀಕರಣಕ್ಕಾಗಲಿ ಅಥವಾ ಬೇರೆ ಕೆಲಸಕ್ಕಾಗಲಿ ಹೋದರೆ ಅಲ್ಲಿ ಬೇಕಾದಷ್ಟು ಹಣವನ್ನು ಹಾಗೂ ಇನ್ನೂ ಅವಶ್ಯಕ ಸಾಮಾಗ್ರಿಗಳನ್ನು ಇಲ್ಲಿಂದಲೇ ತೆಗೆದುಕೊಂಡು ಹೋಗಬೇಕಿತ್ತು.

ನಿಜಕ್ಕೂ ಆ ದಿನ ನಮ್ಮ ನಾಡಿನ ಮೇರು ನಟನ ಪತ್ನಿ ಅನ್ನೋದಕ್ಕಿಂತ ತನ್ನ ಅಕ್ಕನನ್ನು ಅಲ್ಲಿಂದ ತಕ್ಷಣ ಕರೆತರಲು ಅಂಬರೀಶ್ ಅವರು ಮಾಡಿದ ಕೆಲಸ ನಿಜಕ್ಕೂ ಅಂಬರೀಶ್ ಅವರ ದೊಡ್ಡಗುಣವೇ ಸರಿ.. ಮತ್ತೊಂದು ಕಡೆ ರಾಜ್ ಕುಮಾರ್ ಅವರನ್ನು ಅಲ್ಲಿ ಬಿಟ್ಟು ಬಂದರೆ ಅದು ಅವರಿಗೆ ಅಗೌರವ ತೋರಿದಂತೆ ಎಂದು ಖುದ್ದು ತಾವೇ ಉಳಿದು

ಮಿಕ್ಕ ಎಲ್ಲರನ್ನೂ ಸುರಕ್ಷಿತವಾಗಿ ಹಿಂತಿರುಗಿ ಕಳುಹಿಸಿದ ಪಾರ್ವತಮ್ಮ ಅವರ ದಿಟ್ಟತನ ನಿಜಕ್ಕೂ ಹ್ಯಾಟ್ಸ್ ಆಫ್ ಹೇಳುವಂತದ್ದು.. ಇಷ್ಟೆಲ್ಲಾ ಕಷ್ಟಗಳನ್ನು ನೋಡಿ ಬಂದು ದೊಡ್ಡ ಹೆಸರು ಮಾಡಿ ಸಾವಿರಾರು ಜನರ ಜೀವನಕ್ಕೆ ದಾರಿಯಾದರೂ ಸಹ ಒಂದಿಷ್ಟೂ ಅಹಂಲಾರವಿಲ್ಲದ

ವ್ಯಕ್ತಿತ್ವದವರು ಆಗಿನ ಕಾಲದ ಕಲಾವಿದರುಗಳು.. ಆದರೆ ಈಗ ಒಂದು ಸಿನಿಮಾ ಮಾಡುವಷ್ಟರಲ್ಲಿ ಅದರಲ್ಲೂ ಆ ಸಿನಿಮಾ ಹಿಟ್ ಆಗದಿದ್ದರೂ ಸಹ ತಮಗೆ ತಾವೇ ಸೂಪರ್ ಸ್ಟಾರ್ ಎಂಬಂತೆ ತಲೆ ಮೇಲೆ ನಡೆಯುವ ಕೆಲ ವ್ಯಕ್ತಿಗಳೂ ಇದ್ದಾರೆ.. ಇವರೆಲ್ಲಾ ನಮ್ಮ ಹಿರಿಯರನ್ನು ನೋಡಿ ಕಲಿಯೋದು ಸಾಕಷ್ಟಿದೆ.. ಅವರಿಗೆ ಅವರುಗಳೇ ಸಾಟಿ..

Related Articles

Leave a Reply

Your email address will not be published. Required fields are marked *

Back to top button