Uncategorized

ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ಪಡೆಯಲು ಪರದಾಡುತ್ತಿರುವ ಸೆಲೆಬ್ರಿಟಿ ಪುತ್ರರು ಯಾರು ಗೊತ್ತಾ?? ಇವೆರೆಲ್ಲರೂ ಒಂದು ಯಶಸ್ಸಿಗಾಗಿ ಕಾದು ಕುಳಿತಿದ್ದಾರೆ.

ನಮಸ್ಕಾರ ಸ್ನೇಹಿತರೇ ಸಿನಿಮಾರಂಗ ಎನ್ನುವುದು ಪ್ರತಿಭೆ ಹಾಗೂ ಜನರು ಮೆಚ್ಚಿದರೆ ಮಾತ್ರ ಮಿಂಚಲು ಸಾಧ್ಯವಾಗುವುದು. ಹೀಗಾಗಿ ಇಲ್ಲಿ ಕೇವಲ ಪರಿಶ್ರಮ ಮಾತ್ರವಲ್ಲದೆ ಅದಕ್ಕಿಂತ ಹೆಚ್ಚಾದ ಅದೃಷ್ಟ ಇಲ್ಲಿ ಬೇಕಾಗುತ್ತದೆ. ಇದಕ್ಕಾಗಿಯೇ ಹಲವಾರು ಜನ ಸೆಲೆಬ್ರೆಟಿಗಳ ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ಕಾಣಲು ಪರದಾಡುತ್ತಿದ್ದಾರೆ. ಇನ್ನು ಇಂದಿನ ವಿಷಯದಲ್ಲಿ ನಾವು ಕನ್ನಡ ಚಿತ್ರರಂಗದ ಸೆಲಬ್ರಿಟಿಗಳ ಮಕ್ಕಳು ಕೂಡ ಯಶಸ್ಸನ್ನು ಪಡೆಯಲು ಕನ್ನಡ ಚಿತ್ರರಂಗದಲ್ಲಿ ಪರದಾಡುತ್ತಿರುವ ಕುರಿತಂತೆ ಹೇಳಲು ಹೊರಟಿದ್ದೇವೆ ಅವರು ಯಾರು ಎಂಬುದನ್ನು ಕೂಡ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ಪಂಕಜ್ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸಾಂಸಾರಿಕ ಚಿತ್ರಗಳ ಸ್ಟಾರ್ ನಿರ್ದೇಶಕ ಎಂದು ಖ್ಯಾತರಾಗಿರುವ ಕಲಾಸಾಮ್ರಾಟ್ ಎಸ್ ನಾರಾಯಣ್ ರವರ ಪುತ್ರರಾಗಿರುವ ಪಂಕಜ ರವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಿರೀಕ್ಷಿತ ಯಶಸ್ಸನ್ನು ಇದುವರೆಗೂ ಕೂಡ ಕಂಡಿಲ್ಲ. ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಒಡೆಯ ಚಿತ್ರದಲ್ಲಿ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಗುರುರಾಜ್ ನವರಸ ನಾಯಕ ಜಗ್ಗೇಶ್ ರವರ ಸು ಪುತ್ರನಾಗಿರುವ ಗುರುರಾಜ ರವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಆದರೂ ಕೂಡ ಹೇಳಿಕೊಳ್ಳುವ ಅಷ್ಟರ ಮಟ್ಟಿಗೆ ಯಶಸ್ಸನ್ನು ಕನ್ನಡ ಚಿತ್ರರಂಗದಲ್ಲಿ ಪಡೆದುಕೊಂಡಿಲ್ಲ. ಇನ್ನು ಈ ಹಿಂದೆ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಲೀಡರ್ ಚಿತ್ರದಲ್ಲಿ ನಟಿಸಿದ್ದರು. ಮೊನ್ನೆಯಷ್ಟೇ ಗುರುರಾಜ್ ಜಗ್ಗೇಶ್ ನಟನೆಯ ಕಾಗೆ ಮೊಟ್ಟೆ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಅನುಪ್ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾಗಿ ಗುರುತಿಸಿಕೊಂಡಿರುವ ಸಾರಾ ಗೋವಿಂದು ರವರ ಪುತ್ರನಾಗಿರುವ ಅನುಪ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ಯಶಸ್ಸನ್ನು ಪಡೆಯಲು ಪರದಾಡುತ್ತಿರುವ ಸೆಲೆಬ್ರಿಟಿ ಪುತ್ರನಾಗಿದ್ದಾರೆ.

ಅನುಪ್ ಕರ್ನಾಟಕ ರಾಜ್ಯದ ರಾಜಕಾರಣಿಗಳಲ್ಲಿ ಪ್ರಸಿದ್ಧರಾಗಿರುವ ರೇವಣ್ಣನವರ ಪುತ್ರನಾಗಿರುವ ಅನುಪ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಒಂದು ಚಿತ್ರದಲ್ಲಿ ನಡೆಸಿದ್ದು ಅದು ಬಾಕ್ಸಾಫೀಸ್ ನಲ್ಲಿ ವಿಫಲವಾಗಿದೆ.

ವಿನಯ್ ರಾಜಕುಮಾರ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದ ಅಂತಹ ರಾಘವೇಂದ್ರ ರಾಜಕುಮಾರ್ ರವರ ಪುತ್ರನಾಗಿರುವ ವಿನಯ ರಾಜಕುಮಾರ್ ರವರು ಕೂಡ ಯಶಸ್ಸಿಗಾಗಿ ಕನ್ನಡ ಚಿತ್ರರಂಗದಲ್ಲಿ ಪರದಾಡುತ್ತಿದ್ದಾರೆ. ಇನ್ನು ಇವರ ನಟನೆ ಸಾಕಷ್ಟು ಚೆನ್ನಾಗಿದ್ದರೂ ಕೂಡ ಇವರ ಕತೆ ಆಯ್ಕೆಯಲ್ಲಿ ಎಡವುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಮನೋರಂಜನ್ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಎಂದೇ ಖ್ಯಾತರಾಗಿರುವ ನಟ ಹಾಗೂ ನಿರ್ದೇಶಕ ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಪುತ್ರನಾಗಿರುವ ಮನೋರಂಜನ್ ರವಿಚಂದ್ರನ್ ರವರು ಕೂಡ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇನ್ನೂ ಕೂಡ ದೊಡ್ಡ ಒಂದು ಯಶಸ್ಸಿಗಾಗಿ ಮನೋರಂಜನ್ ರವಿಚಂದ್ರನ್ ರವರು ಕಾಯುತ್ತಿದ್ದಾರೆ.

ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದ ಡೈನಾಮಿಕ್ ಸ್ಟಾರ್ ದೇವರಾಜ್ ರವರ ಪುತ್ರನಾಗಿರುವ ಪ್ರಜ್ವಲ್ ದೇವರಾಜ್ ಅವರು ಕನ್ನಡ ಚಿತ್ರರಂಗಕ್ಕೆ ಬಂದ ಸಮಯದಲ್ಲಿ ಯಶಸ್ಸನ್ನು ಕಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅವರು ಮಂಕಾಗಿದ್ದಾರೆ ಎಂದು ಹೇಳಬಹುದಾಗಿದೆ.

ನಿಖಿಲ್ ಕುಮಾರ್ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ಕುಮಾರಸ್ವಾಮಿಯವರ ಪುತ್ರನಾಗಿರುವ ಕುಮಾರ್ ಅವರು ಕೂಡ ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದರೂ ಕೂಡ ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲು ಪರದಾಡುತ್ತಿವೆ ಎಂದು ಹೇಳಬಹುದಾಗಿದೆ.

ಸಚಿನ್ ಮಾಜಿ ಮುಖ್ಯಮಂತ್ರಿ ಆಗಿರುವ ಚೆಲುವರಾಯಸ್ವಾಮಿ ಅವರ ಪುತ್ರರಾಗಿರುವ ಸಚಿನ್ ರವರು ಕೂಡ ಯಶಸ್ಸನ್ನು ಪಡೆಯದೇ ಇರುವ ಸೆಲೆಬ್ರಿಟಿಗಳ ಪುತ್ರರಲ್ಲಿ ಒಬ್ಬರಾಗಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Related Articles

Leave a Reply

Your email address will not be published. Required fields are marked *

Back to top button