Uncategorized

ಸಗಣಿಯಿಂದ ಶುರುಮಾಡಿದ ಇವರ ಉದ್ಯಮ ಇಂದು 100 ಕೋಟಿಯ ವ್ಯವಹಾರ ಮಾಡುತ್ತಿದೆ… ಹಾಗಾದ್ರೆ ಅದು ಹೇಗೆ ಸದ್ಯ ಅಂತೀರಾ…

ಈ ವ್ಯಕ್ತಿ ಮಾಡಿರುವಂತಹ ಕೆಲಸದ ಬಗ್ಗೆ ನೀವು ಕೇಳಿದರೆ ನಿಜಕ್ಕೂ ಅಚ್ಚರಿ ಪಡ್ತೀರಾ ಹೌದು ಇವರ ಗುರುಗಳು ಆಶ್ರಮದಲ್ಲಿ ಧ್ಯಾನ ಮತ್ತು ಯೋಗದ ಮೂಲಕ ಲಕ್ಷಾಂತರ ಜನರಿಗೆ ಉಪಯೋಗವಾಗುವಂತಹ ಆಶ್ರಮವೊಂದನ್ನು ಕಟ್ಟಿದ್ದರು ಮತ್ತು ಅವರ ಶಿಷ್ಯನಾಗಿ ತಾನು ಸಹ ಏನಾದರೂ

ಮಾಡಬೇಕು ಎಂಬ ಉದ್ದೇಶದಿಂದ ಸುತ್ತಮುತ್ತಲಿನ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಮತ್ತು ಪರಿಸರವನ್ನು ಕಾಪಾಡಿ ಕೊಳ್ಳುವ ಉದ್ದೇಶದಿಂದ ಜೊತೆಗೆ ನೂರಾರು ಜನರಿಗೆ ಕೆಲಸವನ್ನು ಕೊಡುವ ಉದ್ದೇಶದಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಸಂಸ್ಥೆಯನ್ನು ನಿರ್ಮಾಣ ಮಾಡುತ್ತಾರೆ.

ನಾಗರಾಜ್ ಅವರು ಮೂಲತಃ ಚಿಕ್ಕಬಳ್ಳಾಪುರದವರು ಗೌರಿಬಿದನೂರು ತಾಲ್ಲೂಕಿಗೆ ಸೇರಿರುವ ರೈತ ಕುಟುಂಬದಲ್ಲಿ ಜನಿಸಿದರು, ಇವರ ತಂದೆಯವರು ಚಿತ್ರದುರ್ಗದ ಮಲ್ಲಾಡಿಹಳ್ಳಿಯಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತದೆ ಎಂಬ ಚಿಕ್ಕಬಳ್ಳಾಪುರದಿಂದ ಚಿತ್ರದುರ್ಗಕ್ಕೆ ಬರುತ್ತಾರೆ ಬಡತನದ ಕಾರಣದಿಂದಾಗಿ ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಿದ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇವರು ತಮ್ಮ ಗುರುಗಳನ್ನು ಆದರ್ಶವನ್ನಾಗಿಟ್ಟುಕೊಂಡು ಸಾವಯವ ಗೊಬ್ಬರವನ್ನು ತಯಾರಿಸುವ ಕೆಲಸವನ್ನು ಪ್ರಾರಂಭ ಮಾಡುತ್ತಾರೆ. ನಾಗರಾಜ್ ಅವರು ಪ್ರಾರಂಭದಲ್ಲಿ ಅಂದರೆ 2010ರಲ್ಲಿ ಡೈರಿ ಪ್ರಾರಂಭ ಮಾಡುತ್ತಾರೆ ಹಾಗೂ ಹಸುಗಳಿಗೆ ಮೇವನ್ನು ಉತ್ಪಾದಿಸಿ ಬರಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಪ್ರಾರಂಭದಲ್ಲಿ ಇವರ ಸುತ್ತಮುತ್ತ ಇರುವಂಥದ್ದು ಚವಳು ಭೂಮಿ ಪ್ರದೇಶ. ಇದರಿಂದ ರೈತರಿಗೆ

ಸಮಸ್ಯೆಯಾಗುತ್ತಿತ್ತು ಅದಕ್ಕಾಗಿ ಇವರು ಸಂಶೋಧನೆಯನ್ನ ಮಾಡಿ ಭೂಮಿಗೆ ಏನನ್ನ ಒದಗಿಸಿದರೆ ಬೆಳೆಗಳನ್ನು ಬೆಳೆಯುವುದಕ್ಕೆ ಸಾಧ್ಯ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಮೊದಮೊದಲು 10ಹಸುಗಳಿಂದ ಆರಂಭವಾದ ಡೈರಿ ನಂತರ 20 ರಿಂದ 80ಹಸುಗಳ ಹಾಲಿನ ಉತ್ಪನ್ನ ದ ಜೊತೆಗೆ ಇತರ ಉತ್ಪನ್ನಗಳಲ್ಲೂ ಲಾಭ ಬರುತ್ತದೆ, ಅದರ ಕಡೆ ಹೆಚ್ಚಿನ

ಗಮನ ಹರಿಸುತ್ತಾರೆ, ಸಾವಯವ ಗೊಬ್ಬರ ಎರೆಹುಳು ಗೊಬ್ಬರ ಗೋಬರ್ ಗ್ಯಾಸ್ ಉತ್ಪಾದನೆ ಮಾಡುತ್ತಾರೆ. ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ರೈತರ ಜೊತೆ ಉತ್ತಮ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ ಹಾಗು ರೈತರು ಉತ್ಪಾದಿಸುವ ಗೊಬ್ಬರಗಳು ಬೆಳೆಗಳು ತರಕಾರಿಗಳು ಇವುಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ.

ನಂತರ ತಾವು ಸಾವಯವ ಗೊಬ್ಬರಗಳನ್ನು ತಯಾರಿಸುತ್ತಾರೆ ಅದನ್ನು ರೈತರಿಗೆ ಕೊಡುವ ಯೋಚನೆಯನ್ನು ಮಾಡುತ್ತಾರೆ. ಬ್ಯಾಂಕ್ ಇಂದ ಸಾಲ ತೆಗೆದುಕೊಂಡು ತಮ್ಮದೇ ಆದ ಒಂದು ಉದ್ಯಮವನ್ನು ಪ್ರಾರಂಭಿಸುತ್ತಾರೆ. ಅಂದು ತಮ್ಮ ಉದ್ಯಮವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಂಸ್ಥೆಯನ್ನು ಬೆಳೆಸಬೇಕು

ಎಂಬ ಆಸೆಯನ್ನು ಇಟ್ಟುಕೊಂಡ ಇವರು ಇಂದು ಅದನ್ನ ಸಾಧಿಸಿದ್ದಾರೆ. ಅಂದಿನ ಕಾಲದಲ್ಲಿ ರೈತರು ಗೇರು ಬೆಳೆಯನ್ನು ಬೆಳೆಯಬೇಕು ಅಂದರೆ ಸಾವಯವ ಗೊಬ್ಬರವನ್ನು ಬಳಸುತ್ತ ಇದ್ದರಂತೆ ಈ ಕಾರಣಕ್ಕಾಗಿಯೇ ಯಾವುದೇ ರೀತಿಯ ತೊಂದರೆಗಳು ಆಗುತ್ತಿರಲಿಲ್ಲ ಆರೋಗ್ಯದ ಮೇಲೆ

ಸಹ ಯಾವ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಇರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳನ್ನು ಬಳಸುವುದರಿಂದ ಬೆಳೆಗಳಲ್ಲಿ ರೋಗಗಳ ಕಾಣಿಸಿಕೊಳ್ಳುತ್ತದೆ, ಹಾಗೆಯೇ ಇಂತಹ ಆಹಾರ ಪದಾರ್ಥಗಳು ರಾಸಾಯನಿಕ ಯುಕ್ತ ಆಗಿರುತ್ತದೆ ಇದರಿಂದ

ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಆದ್ದರಿಂದ ಮೊದಲಿನ ಹಾಗೆ ಸಾವಯವ ಗೊಬ್ಬರ ಬಳಕೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ನಾಗರಾಜ್ ಅವರು ತಮ್ಮ ತೋಟದಲ್ಲಿ ಇದನ್ನು ಪರೀಕ್ಷಿಸಿ ಅದರಿಂದ ಬರುವ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ.

ಇದನ್ನ ರೈತರಿಗೆ ಮನದಟ್ಟು ಮಾಡುವ ಉದ್ದೇಶದಿಂದ ನಿರಂತರವಾಗಿ ಅನೇಕ ಡೆಮೋ ಗಳನ್ನ ಮಾಡಿ ಅದರಿಂದ ಬೆಳೆಗಳನ್ನು ಬೆಳೆದು ರೈತರಿಗೆ ತೋರಿಸುವ ಮುಖಾಂತರ ಇದರಿಂದ ಉತ್ಪನ್ನ ಯಾವ ರೀತಿಯಾಗಿ ಹೆಚ್ಚಾಗುತ್ತದೆ ಮತ್ತು ಖರ್ಚು ಯಾವ ರೀತಿಯಾಗಿ ಕಡಿಮೆಯಾಗುತ್ತದೆ ಈ ಎಲ್ಲ

ಮಾಹಿತಿಯನ್ನು ರೈತರಿಗೆ ನೀಡಿ ಅವರಿಗೆ ಪ್ರೇರಣೆಯನ್ನು ನೀಡುವ ಮೂಲಕ ತಮ್ಮ ಕಂಪನಿಯನ್ನು ಬೆಳೆಸುತ್ತಾರೆ.ಕೆಲವು ಸಂಸ್ಥೆಗಳಲ್ಲಿ ಶೇಕಡ ತೊಂಬತ್ತರಷ್ಟು ರೈತರಿಗೆ ಒಳಗೆ ಬಿಡುವುದಿಲ್ಲ. ಆದರೆ ಇವರ ಸಂಸ್ಥೆ ರೈತರ ಉದ್ದೇಶಕ್ಕಾಗಿ ಮಾಡಿರುವುದರಿಂದ ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ಎಲ್ಲಾ ಎನ್ ಜಿ ಒ ನಬಾರ್ಡ್ಸ್ ಕೃಷಿ ಸಂಸ್ಥೆಗಳು ಮುಂತಾದ ಹಲವಾರು ಸಂಘ-

ಸಂಸ್ಥೆಗಳಿಂದ ವೀಕ್ಷಣೆಗಾಗಿ ಬರುತ್ತಾರೆ. ನಾಲ್ಕು ಜನ ರೈತರಿಗೆ ಸಹಾಯವಾಗುವ ಉದ್ದೇಶದಿಂದ ಉದ್ಯಮವನ್ನು ಪ್ರಾರಂಭಿಸಿದ ಇವರು ರೈತರಿಗೆ ಯಾವ ಯಾವ ಮಣ್ಣಿನಲ್ಲಿ ಯಾವ ಯಾವ ರೀತಿಯ ಬೆಳೆಗಳನ್ನು ಬೆಳೆದರೆ ಹೆಚ್ಚು ಫಸಲನ್ನು ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿಕೊಡುತ್ತಾರೆ.

ಇನ್ನೂ ನಮ್ಮ ರಾಜ್ಯಾದ್ಯಂತ ಇರುವ ರೈತರಿಗೆ ಸಣ್ಣ ಪುಟ್ಟ ಉದ್ಯಮ ಮಾಡುವವರಿಗೆ ಆದರ್ಶವಾಗಿ ಇರುವಂತಹ ತಮ್ಮ ಸಂಸ್ಥೆಯನ್ನು ಬೆಳೆಸಿದ್ದಾರೆ ಹಾಗೂ ರಾಜ್ಯದಲ್ಲಿ ರೈತರು ಬೆಳೆಯುವ ಪ್ರತಿಯೊಂದು ಬೆಳೆಗೂ ಇವರ ಬೆಳೆ ಸಾವಯವ ಗೊಬ್ಬರಗಳಾಗಿವೆ ಕೀಟನಾಶಕಗಳಿವೆ ವರ ಸಂಸ್ಥೆಯಲ್ಲಿ ಸುಮಾರು ೧೨೦ ವಿಧವಾದ ಉತ್ಪನ್ನಗಳು

ಉತ್ಪಾದನೆಯಾಗುತ್ತವೆ ಇವರ ಉತ್ಪಾದನೆಯು ಕೂಡ ಉತ್ತಮ ಗುಣಮಟ್ಟದ್ದಾಗಿರುತ್ತದೆ. ತಮ್ಮ ಉದ್ಯಮದಲ್ಲಿ ಎರಡು ನೂರಾ ಎಂಬಟ್ಟರಿಂದ ಎರಡು ನೂರಾ ತೊಂಬತ್ತು ಗ್ರಾಮೀಣ ಜನರಿಗೆ ಉದ್ಯೋಗವನ್ನು ನೀಡಿದ್ದಾರೆ ಎಂಟು ತಾಸುಗಳ ಅವಧಿಗೆ ಮೂರು ಶಿಫ್ಟ್ ನಲ್ಲಿ ಕೆಲಸ ನಡೆಯುತ್ತದೆ. ಜೊತೆಗೆ ಹೊರಗಡೆ ಮಾರ್ಕೆಟಿಂಗ್ ಮಾಡುವ ಉದ್ದೇಶದಿಂದ ಅರವತ್ತರಿಂದ ಅರವತ್ತೈದು ಜನ ಕೆಲಸ

ಮಾಡುತ್ತಿದ್ದಾರೆ. ಇವರು ತಮ್ಮ ಉದ್ಯಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ ಇವರು ಉತ್ಪನ್ನಗಳಿಗೆ ಅನೇಕ ಕಡೆಗಳಿಂದ ಬೇಡಿಕೆ ಬರುತ್ತಿದೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇರುವ ಪ್ಲಾಂಟ್ ಗಳಿಗೂ ಇವರ ಉದ್ಯಮದಿಂದ ಸಾವಯವ ಗೊಬ್ಬರ ಪೂರೈಕೆ ಆಗುತ್ತದೆ.

ಸುಮಾರು ಇಪ್ಪತ್ತರಿಂದ ಇಪ್ಪತ್ತೆಳು ಜಿಲ್ಲೆಗಳಿಗೆ ಕೃಷಿ ಇಲಾಖೆಯ ಮೂಲಕ ರೈತ ಸಂಪರ್ಕ ಕೇಂದ್ರಕ್ಕೆ ಇವರ ಸಾವಯವ ಗೊಬ್ಬರ ಪೂರೈಕೆ ಆಗುತ್ತದೆ. ಇವರು ತಮ್ಮ ಉದ್ಯಮಕ್ಕೆ ಕಚ್ಚಾವಸ್ತುವನ್ನು ಸುತ್ತಮುತ್ತಲ ಜಿಲ್ಲೆಗಳಿಂದ ತರಿಸಿಕೊಳ್ಳುತ್ತಾರೆ ಬಿಜಾಪುರ ಕಡೆಗಳಿಂದ ಬೇವಿನ ಬೀಜದ

ಉತ್ಪನ್ನಗಳು, ಕೋಳಿ ಉದ್ಯಮದಿಂದ ಕೋಳಿ ಗೊಬ್ಬರಗಳನ್ನು ತರಿಸಿಕೊಳ್ಳುತ್ತಾರೆ ಗುಡ್ಡಗಾಡು ಪ್ರದೇಶಗಳಲ್ಲಿ ಕುರಿಸಾಕಣಿಕೆ ಮಾಡುವವರ ಬಳಿಯಿಂದ ಕುರಿ ಗೊಬ್ಬರಗಳನ್ನು ತರಿಸಿಕೊಳ್ಳುತ್ತಾರೆ, ಕೆಲವು ಕಡೆಗಳಿಂದ ಸಗಣಿ ಗೊಬ್ಬರವನ್ನು ತರಿಸಿಕೊಳ್ಳುತ್ತಾರೆ ದೊಡ್ಡ ದೊಡ್ಡ

ವಿಶ್ವವಿದ್ಯಾಲಯಗಳಿಂದ ಬ್ಯಾಕ್ಟೀರಿಯಾ ಉತ್ಪನ್ನಗಳನ್ನು ತರಿಸಿಕೊಂಡು ಅದನ್ನು ಅಭಿವೃದ್ಧಿಪಡಿಸುತ್ತಾರೆ. ೧೨೦ ಉತ್ಪನ್ನಗಳಲ್ಲಿ ರೈತರಿಗೆ ಎಲ್ಲ ಬೆಳೆಗಳಿಗೆ ಅವಶ್ಯಕತೆ ಇರುವಂತಹ ಸಾವಯವ ಗೊಬ್ಬರ ಕಡಿಮೆ ದರದಲ್ಲಿ ಪ್ರತಿಯೊಬ್ಬ ರೈತರಿಗೂ ಸಾವಯವ ಗೊಬ್ಬರ ಕಡಿಮೆ ದರದಲ್ಲಿ ಪ್ರತಿಯೊಬ್ಬ ರೈತರಿಗೂ ಕೈಗೆಟುಕುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಇದರಿಂದ ರೈತರಿಗೂ ತೃಪ್ತಿ ಇದೆ. ಇವರು ಒಂದು ವರ್ಷಕ್ಕೆ ಅರವತ್ತರಿಂದ ಎಪ್ಪತ್ತು ಕೋಟಿಯವರೆಗೆ ವ್ಯವಹಾರವನ್ನು ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಕೆಲಸವನ್ನು ನೀಡುವುದರ ಜೊತೆಗೆ ಇನ್ನೂ ಹೆಚ್ಚಿನ ವ್ಯವಹಾರವನ್ನು ಮಾಡುವ ಉದ್ದೇಶವನ್ನು ಹೊಂದಿದ್ದಾರೆ.

ಇವರು ಹೇಳುವ ಪ್ರಕಾರ ನಾವು ಮಾಡುವ ಸಣ್ಣಪುಟ್ಟ ಕೆಲಸದಲ್ಲಿ ಗುರಿ ಇದ್ದಾಗ ಶ್ರಮ ಇದ್ದಾಗ ಅದರಿಂದ ಲಾಭ ಬಂದೇ ಬರುತ್ತದೆ. ಹೌದು ಸ್ನೇಹಿತರೆ ರೈತರು ನಮ್ಮ ದೇಶದ ಬೆನ್ನೆಲುಬು ಅನ್ನುತ್ತಾರೆ ಇನ್ನೂ ಕೃಷಿ ಕುಟುಂಬದಲ್ಲಿ ಬೆಳೆದ ನಾಗರಾಜ್ ಅವರು ಇದೀಗ ದೊಡ್ಡ ಉದ್ಯಮಿಯಾಗಿ

ರಾಜ್ಯಾದ್ಯಂತ ಹೆಸರು ಗಳಿಸಿದ್ದಾರೆ ಹಾಗೂ ಇವರ ಉದ್ಯಮದಿಂದಾಗಿ ಹಲವು ರೈತರಿಗೆ ಸಹಾಯ ಮಾಡಬೇಕೆಂಬ ಮನಸ್ಸು ಹೊಂದಿರುವ ಇವರಿಗೆ ಒಳ್ಳೆಯದಾಗಲಿ.

Related Articles

Leave a Reply

Your email address will not be published. Required fields are marked *

Back to top button