ಪುನೀತ್ ರವರ ಹಣ ಆಸ್ತಿ ಹಾಗೂ ಕಾರ್ ಗಳ ಬಗ್ಗೆ ತಿಳಿಸಿದ ರಾಘಣ್ಣ.. ಕಾರಣವೇನು ಗೊತ್ತಾ..
ಇನ್ನು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘಣ್ಣ.. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.. “ನೀವು ಸಾಕಷ್ಟು ದೊಡ್ಡ ದೊಡ್ಡ ಮನುಷ್ಯರನ್ನ ನೋಡಿ ಶಂಕರಾಚಾರ್ಯರು ವಿವೇಕಾನಂದರು ಎಲ್ಲರೂ ಅಷ್ಟೇ ಎಪ್ಪತ್ತು ಎಂಭತ್ತು ವರ್ಷದಲ್ಲಿ ಮಾಡಬೇಕಾದನ್ನು ಮೂವತ್ತು ನಲವತ್ತು ವರ್ಷದಲ್ಲಿ ಮಾಡಿ ಹೋಗ್ತಾರೆ..
ಅವರಿಗೆ ಇದ್ದ ಆಯಸ್ಸು ಅಷ್ಟೇ.. ದೇವರು ಯೋಚನೆ ಮಾಡ್ತಾನೆ.. ನೀನ್ ಯಾರಯ್ಯಾ ನನ್ನ್ ಕೆಲಸನಾ ನೀನ್ ಮಾಡ್ತಿದ್ದೀಯಾ ಸಾಕ್ ಬಾ ಅಂತಾನೆ.. ಅವನು ಏನ್ ಕಲಿಸಿಕೊಟ್ಟು ಹೋದ ಅಂದ್ರೆ ನೂರಾರು ವರ್ಷ ಹಂದಿಯಾಗಿ ಬದುಕೋದಕ್ಕಿಂತ ಕೆಲವು ವರ್ಷ ನಂದಿಯಾಗಿ ಬದುಕಿಬಿಟ್ಟು ಹೋಗು ಅನ್ನೋದನ್ನ ಕಲಿಸಿದ.. ಅವನು
ಹೋದಾಗಿನಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.. ಅದು ನನಗೆ ಕಾಣ್ತಾ ಇದೆ.. ನನ್ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ.. ಜನರು ಒಂದು ರೂಪಾಯಿ ಕೊಡ್ತಾ ಇದ್ದ ಜಾಗದಲ್ಲಿ ಎರಡು ರೂಪಾಯಿ ಕೊಟ್ಟು ಹೋಗ್ತಾ ಇದ್ದಾರೆ.. ನಮಗೆ ಪುಣ್ಯ ಇಲ್ಲ ಅಷ್ಟೇ.. ಅವನ ಜೊತೆ ಮತ್ತಷ್ಟು ದಿನ ಇರೋದು.. ನಮ್ಮ ತಂದೆ ಅಂದುಕೊಂಡಿದ್ದನ್ನೆಲ್ಲಾ ಅವನು ಮಾಡಿ ತೋರಿಸಿಬಿಟ್ಟು ಹೋದ ಅಷ್ಟೇ ಎಂದರು..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಮನುಷ್ಯನಿಗೆ ಎಷ್ಟೇ ಹಣವಿದ್ದರೂ ಆಸ್ತಿ ಇದ್ದರೂ ಕಾರು ಬಂಗಲೆ ಇದ್ದರೂ ನಮ್ಮ ಸಮಯ ಮುಗಿದ ಕೂಡಲೇ ಹೊರಡಬೇಕೆಂಬುದು ವಾಸ್ತವ.. ಅದನ್ನು ಅಪ್ಪು ವಿಚಾರದಲ್ಲಿಯೂ ಹೇಳಿದ ರಾಘಣ್ಣ ಪುನೀತ್ ಅವರ ಬಳಿ ಇದ್ದ ಕಾರ್ ಗಳು ಮನೆಗಳು ಹಣ ಎಲ್ಲವೂ ಇತ್ತು ಆದರೆ ಪ್ರಯೋಜನವಿಲ್ಲ ಎಂದಿದ್ದಾರೆ.. ಹೌದು ” ನಾವ್ ಯಾರನ್ನ
ಏನ್ ಹೇಳಕ್ಕಾಗತ್ತೆ.. ಯಾರದ್ದೂ ತಪ್ಪು ಅಂತಿಲ್ಲ.. ಆದರೆ ನನಗೆ ಏನ್ ಕಾಡ್ತಾ ಇದೆ ಅಂದ್ರೆ.. ಅಪ್ಪುಗೆ ಅವತ್ತು ಎಲ್ಲವೂ ಇತ್ತು.. ಕೋಟ್ಯಾಂತರ ರೂಪಾಯಿ ದುಡ್ಡಿತ್ತು.. ಆರು ಏಳು ಕಾರ್ ಇತ್ತು.. ಮನೆ ಇತ್ತು.. ಜನ ಇದ್ರು.. ಕುಟುಂಬ ಇತ್ತು.. ಎಲ್ಲವೂ ಇತ್ತು.. ಆದರೆ ಅವನ ಬಳಿ ನಾಲ್ಕು ನಿಮಿಷ
ಸಮಯ ಇರ್ಲಿಲ್ಲ.. ಯಾರಿಗ್ ಹೇಳ್ಕೊಳ್ಳಿ.. ಯಾರನ್ನ ದೂರೋದು ನಾನು.. ಪಕ್ಕದಲ್ಲಿ ನಾನಿದ್ದೆ.. ಪಕ್ಕದ ಮನೆಯಲ್ಲೇ ಇದ್ದೆ.. ನನ್ನ್ ಜೊತೆಲೇ ಇದ್ದ.. ಆದರೆ ಏನೂ ಮಾಡೋಕೆ ಆಗ್ಲಿಲ್ಲ.. ಎಂದಿದ್ದಾರೆ.. ಅಷ್ಟೇ ಅಲ್ಲದೇ ನಾವ್ ಗಳು ಬದಲಾಗಬೇಕು ನಮ್ಮಿಂದಲೇ ಕೆಲಸಗಳು ಆಗ್ಬೇಕು.. ಆವತ್ತು ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಕರ್ಸೋಣ
ಅಂದ್ರೆ.. ಆಂಬ್ಯುಲೆನ್ಸ್ ಬಂದು ನಾವ್ ಕರ್ಕೋಂಡ್ ಹೋಗೋದ್ರೊಳಗೆ ತಡವಾಗತ್ತೆ ಅಂದುಕೊಂಡ್ವಿ.. ಅವತ್ತು ಬಹಳ ಟ್ರಾಫಿಕ್ಕು.. ಅದೊಂದು ಕಾರಣದಿಂದ ಅವನು ನಮ್ಮನ್ನ ಬಿಟ್ಟು ಹೋಗಿದ್ದಾನೆ. ಈಗ ನಾವು ಸರಿ ಹೋಗ್ಬೇಕು.. ನೂರಾರು ಜನ ಅಪ್ಪುಗಳನ್ನ ಈ ರೀತಿ ಕಳೆದುಕೊಳ್ಳಬಾರದು..
ಒಂದೊಂದ್ ಆಂಬ್ಯುಲೆನ್ಸ್ ಗಳಿಗೆ ಮೇಲ್ಗಡೆ ಡಿಜಿಟಲ್ ಬೋರ್ಡ್ ಬರಬೇಕು.. ಇಂತ ಆಪತ್ರೆಗೆ ಹೋಗ್ತಾ ಇದ್ದೀವಿ ಅಂತ ಬೋರ್ಡ್ ಇದ್ರೆ ಅದನ್ನ ನೋಡಿ ಪೋಲೀಸರು ಜಾಗ ಬಿಡಿಸಿ ಅನುವು ಮಾಡಿ ಕೊಡ್ತಾರೆ.. ಆಗ ಸಾಕಷ್ಟು ಜನರ ಜೀವ ಉಳಿಯುತ್ತದೆ.. ಎಂದಿದ್ದಾರೆ. ಇಷ್ಟೇ ಜೀವನ ಹಣವಿದ್ದರೂ ಆಸ್ತಿಯಿದ್ದರೂ ಕಾರ್ ಗಳಿದ್ದರೂ
ಮನೆಗಳಿದ್ದರೂ ನಮ್ಮ ಸಮಯ ಬಂದಾಗ ಹೋಗಬೇಕು.. ಆದರೆ ಇದ್ದಷ್ಟು ದಿನ ಅಪ್ಪು ಜೀವನ ಮಾಡಿದ ರೀತಿ ನಿಜಕ್ಕೂ ಸಾರ್ಥಕ ಜೀವನವದು.. ದೂರದಲ್ಲೆಲ್ಲೋ ಇದ್ದ ರಾಜ ಕುಮಾರನೊಬ್ಬ ಬಾರದೂರಿಗೆ ಪಯಣ ಬೆಳೆಸಿದನೆಂದು ಕಣ್ಣೀರಿಟ್ಟವು ಕೋಟ್ಯಾಂತರ ಹೃದಯಗಳು.. ಸಂತೈಸಲು ಆ
ರಾಜಕುಮಾರನೇ ಬರಬೇಕೆಂದು ಪಟ್ಟು ಹಿಡಿದವು ಪುಟ್ಟ ಮನಸ್ಸುಗಳು.. ಕೋಟಿ ಜನರು ಕೂಗಿಕೊಂಡರು ಲಕ್ಷ ಜನರು ಪ್ರಾರ್ಥಿಸಿದರು ಹತ್ತಾರು ಜನರು ಜೀವವನ್ನೇ ಕೊಟ್ಟರೂ ಒಬ್ಬನನ್ನು ಮರಳಿ ಕೊಡಲಾಗದು ಆ
ಭಗವಂತನಿಗೆ.. ನಿಜಕ್ಕೂ ಇದೇ ಜೀವನದ ಸತ್ಯ.. ಇದ್ದಷ್ಟು ದಿನ ನಮ್ಮವರು ತಮ್ಮವರು ಎನ್ನುತ್ತಾ ಎಲ್ಲರೊಟ್ಟಿಗೆ ಸಂತೋಷದಿಂದ ಬದುಕ ಪಯಣ ಮುಗಿಸಿ ಹೊರಡುತ್ತಿರಬೇಕಷ್ಟೇ. ಸಮಯ ಕಳೆದುಹೋಗುತ್ತಿದೆ.. ಹೋಗಿ ಒರತಿ ಕ್ಷಣವೂ ನಿಮ್ಮವರ ಜೊತೆ ಸಂತೋಷವಾಗಿರಿ.