Uncategorized

ಕಾರ್ ಇತ್ತು ಹಣ ಇತ್ತು.. ಆದರೆ ಕಷ್ಟದಲ್ಲಿ ಎಲ್ಲವೂ ಹೋಯಿತು.. ಸಿಂಗಲ್ ಪೇರೆಂಟ್ ಆಗಿ ರೆಮೋ ಅನುಭವಿಸಿದ ಕಷ್ಟ ಯಾರಿಗೂ ಬಾರದಿರಲಿ..

ಹೌದು ಚಿಕ್ಕ ವಯಸ್ಸಿನಲ್ಲಿಯೇ ಚಿನ್ನಾರಿ ಮುತ್ತ ಸಿನಿಮಾದ ರೆಕ್ಕೆ ಇದ್ದರೆ ಸಾಕೆ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದ ರೆಮೋ ನಂತರ ಅಷ್ಟಾಗಿ ಪ್ರಖ್ಯಾತಿಗೆ ಬರಲಿಲ್ಲ.. ಓದನ್ನು ಮುಗಿಸಿ ತಮ್ಮದೇ ಆದ ಒಂದು ತಂಡದ ಜೊತೆ ಶೋ ಗಳನ್ನು ಮಾಡಿಕೊಂಡು ಹೋಗುತ್ತಿದ್ದರು.. ಇತ್ತ ಮಜಾ

ಟಾಕೀಸ್ ಶೋ ನಲ್ಲಿ ರೆಮೋ ಅವರಿಗೆ ಅವಕಾಶ ದೊರಕಿತು.. ಮಜಾ ಟಾಕೀಸ್ ನ ಬಗ್ಗೆ ಅಷ್ಟು ಗಮನವಹಿಸದ ರೆಮ್ಖ್ ತಮ್ಮ ಶೋಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದರು.. ಆದರೆ ಒಂದು ದಿನ ವಿಮಾನ ನಿಲ್ದಾಣದಲ್ಲಿ ರೆಮೋ ಅವರನ್ನು ಮಜಾ ಟಾಕೀಸ್ ರೆಮೋ ಎಂದು ಗುರುತಿಸಿದಾಗ ಅವರಿಗೆ ಮಜಾ ಟಾಕೀಸ್ ಎಷ್ಟು

ಮುಖ್ಯ ಎಂಬುದು ಅರಿವಾಯಿತು.. ನಂತರ ಶ್ರಮವಹಿಸಿ ಕೆಲಸ ಮಾಡಿ ಸಾಕಷ್ಟು ಹೆಸರು ಮಾಡಿಕೊಂಡರು.. ಸದಾ ನಗುನಗುತ್ತಾ ಕಾಮಿಡಿ ಮಾಡುತ್ತಿದ್ದ ರೆಮೋ ಜೀವನದ ಕತೆ ಒಂದು ಕಡೆ ಮನಸ್ಸಿಗೆ ನೋವು ನೀಡಿದರೆ ಮತ್ತೊಂದು ಕಡೆ ಸ್ಪೂರ್ತಿಯೂ ಆಗುತ್ತದೆ..

ಹೌದು ತೆರೆ ಮೇಲೆ ನಗುಮುಖದ ರೆಮೋ ತಮ್ಮ ವ್ಯಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ನೋಡಿದರು.. ಸಿಂಗಲ್ ಪೇರೆಂಟ್ ಆಗಿ ಮಗಳನ್ನು ಸಾಕುತ್ತಿದ್ದರು.. ಅದಾಗಕೇ ರೆಮೋ ಎಂದು ಹೆಸರು ಮಾಡಿಕೊಂಡಿದ್ದರು.. ಆದರೆ ಆನಂತರ ಸಾಲು ಸಾಲು ಕಷ್ಟಗಳು ಎದುರಾದವು.. ಕಾರು ಹಣ ಎಲ್ಲವೂ ಹೋಯಿತು.. ಅಷ್ಟು ದಿನ ಕಾರಿನಲ್ಲಿ ಓಡಾಡುತ್ತಿದ್ದ ರೆಮೋ ಸ್ಕೂಟಿಯಲ್ಲಿ ಓಡಾಡುವಾಗ ಜನರು ನೋಡುವ ರೀತಿಯೇ ಬದಲಾಯಿತು.. ಈ ಬಗ್ಗೆ ರೆಮೋ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಮಾದ್ಯಮದ ಸಂದರ್ಶನವೊಂದರಲ್ಲಿ ಹೇಳಿದ ಮಾತು ನಿಜಕ್ಕೂ ಮನಕಲಕುತ್ತದೆ.. “ಮಜಾ ಟಾಕೀಸ್ ನಿಂದ ನನ್ನ ಗೌರವ ಜಾಸ್ತಿಯಾಯಿತು.. ನನ್ನ ಪೇಮೆಂಟ್ ಜಾಸ್ತಿ ಆಯಿತು.. ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ನಮಗೆ ಗೌರವ ಕೊಡೋಕೆ ಶುರು ಮಾಡಿದ್ರು.. ಸೃಜನ್ ಅವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲದು.. ಮಜಾ ಟಾಕೀಸ್ ನನಗೆ ಜೀವನ ಕೊಟ್ಟಿತು..

ನಾನು ನಂಬಿದ್ದವರೆಲ್ಲಾ ನನ್ನಿಂದ ದೂರ ಆಗಿದ್ರು.. ನಾನು ನನ್ನ ಮಗಳು ಮಾತ್ರ ಇದ್ದದ್ದು.. ಆ ಟೈಮಲ್ಲಿ ಮಜಾ ಟಾಕೀಸ್ ನನಗೆ ಜೀವನ ಕೊಡ್ತು.. ಅಲ್ಲಿಂದ ಲೈಫ್ ಶುರು ಆಯ್ತು.. ಸೃಜನ್ ಅವರು ಶ್ವೇತಾ ಚಂಗಪ್ಪ ಅವರು ಅಪರ್ಣಾ ಅವರು ಮಂಡ್ಯಾ ರಮೇಶ್ ಅವರು ಎಲ್ಲರೂ ಬಂದು ನನಗೆ ಹೇಳಿದ್ರು ಜೀವನದಲ್ಲಿ ಕಷ್ಟ ಬರೋದು

ಸಹಜ ಆದರೆ ಅದನ್ನೆಲ್ಲಾ ಮೀರಿ ನಾವು ಬೆಳಿಬೇಕು ಅಂದರು.. ಎಲ್ಲರೂ ಸಪೋರ್ಟ್ ಮಾಡಿದ್ರು.. ಒಂದು ದಿನ ನನ್ನ ವ್ಯಯಕ್ತಿಕ ಜೀವನದಲ್ಲಿ ಏನೋ ಪ್ರಾಬ್ಲಂ ಆಗಿತ್ತು.. ಚಿತ್ರೀಕರಣಕ್ಕೆ ಹೋದೆ ಅಲ್ಲಿ ನಾನು ನಗಬೇಕಿತ್ತು.. ಆದರೆ ನನ್ನ ಕಣ್ಣಲ್ಲಿ ನೀರ್ ಬರ್ತಾ ಇತ್ತು.. ಆಗ ತಕ್ಷಣ ಅಪರ್ಣಾ

ಅವರು ಶ್ವೇತಾ ಅವರು ಎಲ್ಲರೂ ಸಮಾಧಾನ ಮಾಡಿದ್ರು.. ಆಗ ಸೃಜನ್ ಅವರು ಬಂದು ನಿನಗೆ ನಾನು ಅಣ್ಣ ನಿನ್ನ ಪ್ರಾಬ್ಲಂ ಏನೇ ಇದ್ರು ನನ್ನ ಬಳಿ ಹೇಳ್ಕೋ ಎಂದು ನನ್ನಲ್ಲಿ ಶಕ್ತಿ ತುಂಬಿದ್ರು.. ಅವರ ಮಾತು ನನ್ನನ್ನು ಇಲ್ಲಿವರೆಗೆ ಬದುಕಿಸಿದೆ..

ಆಗ ಸಣ್ಣ ಸಣ್ಣ ಕೆಲಸ ಬಂದರೂ ನಾನು ಮಾಡೋಕೆ ಶುರು ಮಾಡಿದೆ.. ಆಗ ಮಿಮಿಕ್ರಿ ದಯಾನಂದ ಸರ್ ನನಗೆ ದೇವರಣ್ತೆ ಬಂದು ಸಾಕಷ್ಟು ಶೋಗಳಲ್ಲಿ ಅವಕಾಶ ಕೊಟ್ರು.. ಶೋಗಳಿಗೆ ಕರೆದುಕೊಂಡು ಹೋಗಿ ಹಾಡು ಹೇಳು ಅಂತಿದ್ರು.. ಪೇಮೆಂಟ್ ಕೊಡ್ತಾ ಇದ್ರು..‌ ನಾನ್ ಯಾರಿಗೂ ಏನೂ ಹೇಳ್ಕೊಂಡಿಲ್ಲಾ.. ಆದರೆ ಅವರೇ ಈರೀತಿ ಅವಕಾಶ

ಕೊಟ್ರು.. ನನಗೆ ಒಂದೊಂದು ರೂಪಾಯಿಗೂ ಅವಶ್ಯಕತೆ ಇತ್ತು.. ಆಗ ಶೋಗಳು ನನ್ನ ಕೈ ಹಿಡಿದ್ವು.. ನನ್ನ ಜೊತೆ ಯಾರೂ ನಿಲ್ಲಲಿಲ್ಲ.. ಆಗ ನನ್ನ ನಾಲ್ಕು ಜನ ಫ್ರೆಂಡ್ಸ್ ನನ್ನ ಜೊತೆ ಇದ್ರು ಅಷ್ಟೇ.. ನಾನು ಯಾರದ್ದು ತಪ್ಪು ಅನ್ನಲ್ಲ.. ಎಲ್ಲಾ ನಮ್ ನಮ್ ಹಣೆಬರಹ ಅಷ್ಟೇ.. ಒಬ್ಬ ಸಿಂಗಲ್ ಪೇರೆಂಟ್ ಆದ್ಮೇಲೆ ನಾವು ಜೀವನದಲ್ಲಿ ಬಹಳ

ಗಂಭೀರವಾಗಿರ್ಬೇಕು.. ಸ್ವಲ್ಪ ಹಾಗೆ ಹೀಗೆ ಅಂದ್ರು ಜನ ಬೇರೆ ರೀತಿನೇ ಮಾತಾಡ್ಬಿಡ್ತಾರೆ.. ಆಗ ಮಜಾ ಟಾಕೀಸ್ ಇರ್ಲಿಲ್ಲ.. ಆಗ ಸೃಜನ್ ಅವರು ಕರೆದು ಧಾರಾವಾಹಿ ಒಂದ್ರಲ್ಲಿ ಅವಕಾಶ ಕೊಟ್ರು.. ಮಾಡು ಇದು ನಿನಗೆ ಹೆಲ್ಪ್ ಆಗತ್ತೆ ಅಂದ್ರು.. ಬಹಳ ಸಪೋರ್ಟ್ ಮಾಡಿದ್ದಾರೆ.. ಅವರು ಡೈರೆಕ್ಟಾಗಿ ಹಣ ಕೊಟ್ಟಾಗ ನಾನು ತೆಗೆದುಕೊಳ್ತಿರ್ಲಿಲ್ಲ.. ಅದಕ್ಕೆ ಅವರು ಕೆಲಸ ಕೊಡ್ತಾ ಇದ್ರು..

ಮಜಾ ಟಾಕೀಸ್ ಕೊಟ್ರು.. ಧಾರಾವಾಹಿ ಕೊಟ್ರು.. ಅಷ್ಟೇ ಅಲ್ಲದೇ ರಾತ್ರಿ ಹೊತ್ತು ನನಗೆ ಶೋಗಳು ಇತ್ತು.. ಅದಕ್ಕೂ ಸಹ ನಾನು ಬೇಗ ಹೋಗ್ಲಿ ಅಂತ ನನ್ನ ಭಾಗದ ಚಿತ್ರೀಕರಣ ಮುಗ್ಸಿ ಕಳುಹಿಸಿ ಕೊಟ್ಟುಬಿಡ್ತಿದ್ರು‌.. ಹಾಗೆ ಸಣ್ಣಸಣ್ಣದಾಗಿ ಕೂಡಿಟ್ಟು ಇಷ್ಟರ ಮಟ್ಟಕ್ಕೆ ಬಂದಿದ್ದೀನಿ.. ನನ್ನ ಮುಂದಿನ ಭವಿಷ್ಯ ನನ್ನ ಮಗಳು.. ಅವಳನ್ನು ಚೆನ್ನಾಗಿ

ನೋಡಿಕೊಳ್ಳಬೇಕು ಅಷ್ಟೇ.. ಅವಳ ಆಸಕ್ತಿ ಏನಿದೆಯೋ ಆಗ್ಲಿ.. ಆದರೆ ಜೊತೆಯಲ್ಲಿ ಓದು ಅನ್ನೋದು ಬಹಳ ಮುಖ್ಯ.. ಅದು ಬೇಕೇ ಬೇಕು ಎಂದರು.. ನನಗೆ ಕೊರೊನಾ ಬಂದು ಒಂದು ವಾರ ಆಸ್ಪತ್ರೆಯಲ್ಲಿದ್ದೆ.. ಆಗೆಲ್ಲಾ ನನ್ನ ಮಗಳಿಗೆ ಯಾರೂ ಇಲ್ಲ.. ನನಗೆ ನನ್ನ ಮಗಳ ಬಿಟ್ಟರೆ ಯಾರೂ ಇರ್ಲಿಲ್ಲ.. ಅದಕ್ಕೆ ಧೈರ್ಯವಾಗಿ ಅದರಿಂದ ಹೊರ

ಬಂದೆ.. ಇದುವರೆಗೂ ನಾನು ಯಾರಿಗೂ ಕೆಟ್ಟದ್ದನ್ನಂತು ಬಯಸಿಲ್ಲ.. ಬದುಕು ಹೇಗೆ ಕರೆದುಕೊಂಡು ಹೋಗತ್ತೋ ಹಾಗೆ ಹೋಗ್ತಾ ಇರ್ಬೇಕು.. ಎಂದಿದ್ದಾರೆ.. ನಿಜಕ್ಕೂ ಬದುಕು ಕಲಿಸುವ ಪಾಠಗಳು.. ಬದುಕಿನಲ್ಲಿ ಆಗುವ ಅನುಭವಗಳು ಕಲಿಸುವ ಪಾಠಗಳನ್ನು ಯಾವ ಶಾಲೆಗಳೂ ಸಹ ಕಲಿಸೋದಿಲ್ಲ ಎಂಬುದು ಸತ್ಯದ ಮಾತು.. ರೆಮೋ ಅವರ ಮುಂದಿನ ಜೀವನ ಚೆನ್ನಾಗಿರಲಿ

Related Articles

Leave a Reply

Your email address will not be published. Required fields are marked *

Back to top button