Uncategorized

ಅರ್ಜುನ್ ಸರ್ಜಾ ಶೃತಿ ಹರಿಹರನ್ ಮೀಟೂ ವಿಚಾರಕ್ಕೀಗ ಮೇಘನಾ ರಾಜ್ ಎಂಟ್ರಿ.. ಅರ್ಜುನ್ ಸರ್ಜಾ ಬಗ್ಗೆ ಹೇಳಿದ್ದೇನು ಗೊತ್ತಾ

ಕಳೆದ ಮೂರು ವರ್ಷದ ಹಿಂದೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ವಿಚಾರ ಎಂದರೆ ಅದು ಮೀಟೂ ವಿಚಾರ.. ಹೌದು ಮೊದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಶುರುವಾದ ಈ ಮೀಟೂ ನಂತರ ಬಾಲಿವುಡ್, ಟಾಲಿವುಡ್ ಕಾಲಿವುಡ್ ಹೀಗೆ ಸಾಕಷ್ಟು ಕಡೆ ಸದ್ದು ಮಾಡಿತು.. ಆದರೆ ಸ್ಯಾಂಡಲ್ವುಡ್ ನಲ್ಲಿ ಇಂತಹ ಯಾವುದೇ ವಿಚಾರಗಳು ಕೇಳಿ

ಬಂದಿರಲಿಲ್ಲ.. ಆದರೆ ಇದ್ದಕಿದ್ದ ಹಾಗೆ ಮೊದಲು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಈ ವಿಚಾರ ಬಂತು ತಕ್ಷಣ ಅದನ್ನು ಒಪ್ಪಿಕೊಂಡು ಕ್ಷಮೆಯನ್ನು ಸಹ ಕೇಳಿ ಅದರಿಂದ ಹೊರ ಬಂದರು.. ಆದರೆ ಆ ಬಳಿಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಹೆಸರು ಮಾಡಿರುವ ನಟ

ಅರ್ಜುನ್ ಸರ್ಜಾ ಅವರ ಬಗ್ಗೆ ಈ ರೀತಿ ವಿಚಾರ ಕೇಳಿ ಬಂದಿದ್ದು ಶೃತಿ ಹರಿಹರನ್ ಗಂಭೀರವಾಗಿಯೇ ಮಾತನಾಡಿದ್ದರು.. ಇತ್ತ ಅರ್ಜುನ್ ಸರ್ಜಾ ಅವರು ತಾವು ಯಾವುದೇ ರೀತಿಯ ತಪ್ಪು ಮಾಡಿಲ್ಲ ಶೃತಿ ಹರಿಹರನ್ ಮಾತಿನಲ್ಲಿ ಕಿಂಚಿತ್ತೂ ಸತ್ಯವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು..

ಈ ವಿಚಾರವನ್ನು ಬಗೆ ಹರಿಸಲು ಆಗ ಅಂಬರೀಶ್ ಅವರು ಇಬ್ಬರನ್ನು ಫಿಲಂ ಛೇಂಬರ್ ಗೆ ಕರೆಸಿ ಮಾತನಾಡಿದ್ದರು.. ಆದರೆ ಮಧ್ಯಕ್ಕೆ ಶೃತಿ ಹರಿಹರನ್ ತೆರಳಿದ್ದು ನಂತರ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.. ಇದೀಗ ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ನಟಿ ಮೇಘನಾ ರಾಜ್ ಅವರು ಪ್ರತಿಕ್ರಿಯೆ ನೀಡಿ

ಮಾತನಾಡಿದ್ದಾರೆ‌‌.. ಹೌದು ಅರ್ಜುನ್ ಸರ್ಜಾ ಅವರ ಮೇಲೆ ದೂರು ನೀಡಿದ್ದು ಆ ಆರೋಪಗಳನ್ನು ಅರ್ಜುನ್ ಸರ್ಜಾ ಅವರು ಒಪ್ಪಿಕೊಳ್ಳದ ಕಾರಣ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.. ಇತ್ತ ಶೃತಿ ಅವರನ್ನು ಕೆಲವರು ಬೆಂಬಲಿಸಿದರೆ ಬಹಳಷ್ಟು ಜನ ಅರ್ಜುನ್ ಸರ್ಜಾ ಅವರ

ಪರವಾಗಿ ನಿಂತರು.. ಅದೇ ದಿನ ಧೃವ ಸರ್ಜಾ ಶೃತಿ ಹರಿಹರನ್ ಹಾಗೂ ಅವರ ಬೆಂಬಲವಾಗಿ ನಿಂತಿದ್ದ ಶೃತಿ ಹರಿಹರನ್ ಅವರಿಗೆ ಕ್ರಿಮಿ ಕೀಟಗಳೆಲ್ಲಾ ನಮ್ಮ ಮಾವ ಏನು ಅಂತ ಹೇಳೋದು ಬೇಕಿಲ್ಲ ಎಂದಿದ್ದರು.. ಇನ್ನು ಮೂರು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿ ಹೋದವು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇಬ್ಬರ ನಡುವೆ ಸಂದಾನ ಮಾಡಿದ ಅಂಬರೀಶ್ ಅವರು ಇಹಲೋಕ ತ್ಯಜಿಸಿದರು.. ಕೊರೊನಾ ಕಾರಣದಿಂದಾಗೊ ಸ್ಯಾಂಡಲ್ವುಡ್ ಮಂದಿ ಸಾಕಷ್ಟು ಕಷ್ಟಗಳನ್ನು ಅನುಭವಿಸುವಂತಾಯಿತು.. ಸಾಕಷ್ಟು ಚಿತ್ರಗಳು ಬಿಡುಗಡೆಯಾದವು.. ಮೊನ್ನೆ ಮೊನ್ನೆಯಷ್ಟೇ ಅಪ್ಪು ಅಗಲಿದ

ನೋವು ಎದುರಾಯಿತು.. ಆದರೆ ಕಳೆದ ಮಿಉರು ವರ್ಷದಿಂದ ಅರ್ಜುನ್ ಸರ್ಜಾ ಹಾಗೂ ಶೃತಿ ವಿಚಾರ ಕೋರ್ಟ್ ನಲ್ಲಿಯೇ ಇತ್ತು.. ಆದರೆ ಇದೀಗ ಈ ಪ್ರಕರಣಕ್ಕೆ ಅಂತ್ಯ ಹಾಡಲಾಗಿದೆ.. ಹೌದು ವಿಸ್ಮಯ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ಅಭಿನಯಿಸಿದ್ದ ನಟಿ ಶೃತಿ

ಹರಿಹರನ್ ತಮ್ಮ ಜೊತೆ ಅರ್ಜುನ್ ಸರ್ಜಾ ಅವರು ಬೇರೆ ರೀತಿ‌ ನಡೆದುಕೊಂಡಿದ್ದಾರೆ.. ನನ್ನನ್ನು ಬೇರೆ ರೀತಿ ಬಳಸಿಕೊಂಡಿದ್ದಾರೆ.. ಫಾರ್ಮ್ ಹೌಸ್ ಗೆ ಕರೆದಿದ್ದರು.. ಹೀಗೆ ಮೂರು ಪ್ರಕರಣಗಳನ್ನು ದಾಖಲಿಸಿದ್ದರು..

ಆದರೆ ಪೊಲೀಸರಿಗೆ ಈ ಬಗ್ಗೆ ವಿಚಾರಣೆ ನಡೆಸಿ ಸತ್ಯಾಂಶ ತಿಳಿಸುವಂತೆ ಕೋರ್ಟ್ ಆದೇಶ ನೀಡಿತ್ತು.. ಇತ್ತ ಪೊಲೀಸರು ಶೃತಿ ಹರಿಹರನ್ ಅವರಿಗೆ ಅನೇಕ ಬಾರಿ ನೋಟಿಸ್ ನೀಡಿದರು ಸಹ ಶೃತಿ ಮಾತ್ರ ಯಾವುದೇ ಸಾಕ್ಷ್ಯ ಒದಗಿಸಲಿಲ್ಲ.. ಸೂಕ್ತ ಸಾಕ್ಷಿಗಳಿಲ್ಲದೇ ಸುಮ್ಮನೆ ಆರೋಪ

ಮಾಡಲಾಗಿದೆ ಎಂದು ಕಬ್ಬನ್ ಪಾರ್ಕ್ ಪೊಲೀಸರು ಬಿ ರಿಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದರು.. ಆಗಲೂ ಸಹ ಕೊನೆಯದಾಗಿ ಶೃತಿ ಹರಿಹರನ್ ಅವರಿಗೆ ನೋಟಿಸ್ ನೀಡಲಾಗಿತ್ತು.. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಇದೀಗ ನ್ಯಾಯಲಯಕ್ಕೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದು ಪ್ರಕರಣ ವಜಾ

ಆಗಿದೆ.. ಇದರಲ್ಲಿ ಅರ್ಜುನ್ ಸರ್ಜಾ ಅವರ ಯಾವ ತಪ್ಪು ಇಲ್ಲವೆನ್ನಲಾಗಿದೆ..ಇನ್ನು ಶೃತಿ ಅವರು ಈ ವಿಚಾರ ಪ್ರಸ್ತಾಪ ಮಾಡಿದಾಗ ಅದಾಗಲೇ ಶೃತಿ ಹರಿಹರನ್ ಅವರಿಗೆ ಮದುವೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು.. ಹೌದು ಅಷ್ಟು ದಿನಗಳವರೆಗೆ ತಾವು ಮದುವೆಯಾದ

ವಿಚಾರವನ್ನು ಎಲ್ಲಿಯೂ ಹೇಳಿಕೊಳ್ಳದ ಶೃತಿ ಅವರು ಪೊಲೀಸರ ಬಳಿ ತಮಗೆ ಅದಾಗಲೇ ಮದುವೆಯಾಗಿರುವ ವಿಚಾರವನ್ನು ತಿಳಿಸಿದ್ದರು.. ಇನ್ನು ಇದೀಗ ಮೂರು ವರ್ಷಗಳ ಬಳಿಕ ಅರ್ಜುನ್ ಸರ್ಜಾ ಅವರ ಪರವಾಗಿ ಆದ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಪ್ರತಿಕ್ರಿಯೆ ನೀಡುತ್ತಿದ್ದಾರೆ.. ಹೌದು ಈ ಬಗ್ಗೆ ಧೃವ ಸರ್ಜಾ

ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದು ಸ್ಟೇಟಸ್ ಹಾಕಿಕೊಂಡಿದ್ದು ಇದರ ಜೊತೆಗೆ ಸೊಳ್ಳೆ ಬ್ಯಾಟ್ ನಲ್ಲಿ ಸೊಳ್ಳೆಗಳು ಪಟ ಪಟ ಎಂದು ಉದುರಿಹೋಗುವ ಸಣ್ಣ ವೀಡಿಯೀ ಹಾಕಿ ಸೊಳ್ಳೆ ಕ್ರಿಮಿ ಕೀಟಗಳು ಎಂದು ಬರೆದು ನಟ ಚೇತನ್ ಹಾಗೂ ಶೃತಿ ಹರಿಹರನ್ ಅವರಿಗೆ ಟಾಂಗ್ ನೀಡಿದ್ದಾರೆ..

ಆದರೆ ಈ ಹಿಂದೆ ಮೇಘನಾ ರಾಜ್ ಅವರ ಮಗ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬವನ್ನು ಮೇಘನಾ ರಾಜ್ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದ್ದರು.. ಆದರೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಅರ್ಜುನ್ ಸರ್ಜಾ ಹಾಗೂ ಸರ್ಜಾ ಕುಟುಂಬದ ಯಾರೂ ಸಹ ಆಗಮಿಸಿರಲಿಲ್ಲ..

ಇದರಿಂದ ಎರಡೂ ಕುಟುಂಬದ ನಡುವೆ ಮನಸ್ತಾಪವಿದೆ ಎನ್ನಲಾಗುತಿತ್ತು.. ಆದರೆ ಈಗ ಸ್ವತಃ ಮೇಘನಾ ರಾಜ್ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು ಅರ್ಜುನ್ ಸರ್ಜಾ ಅವರ ಗುಣದ ಬಗ್ಗೆ ಮಾತನಾಡಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಸ್ಟೇಟದ್ ಹಾಕಿಕೊಂಡಿರುವ ಮೇಘನಾ ರಾಜ್ “ಅರ್ಜುನ್ ಸರ್ಜಾ.. ಜೆಂಟಲ್ ಮ್ಯಾನ್.. ಯಾವಗಲೂ ಸಹ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button