NEWS

ಪುನೀತ್ ಇಲ್ಲದ ಮೊದಲ ಮದುವೆಯ ದಿನ.. ಅಶ್ವಿನಿ ಅವರ ಮನದಾಳದ ಮಾತುಗಳು..

ಅಪ್ಪು ನಮ್ಮನು ಬಿಟ್ಟು ಹೋಗಿ ಒಂದು ತಿಂಗಳಾಯಿತು.. ಆದರೆ ಇಂದು ಪುನೀತ್ ಹಾಗೂ ಅಶ್ವಿನಿ ಅವರ ಮದುವೆಯ ದಿನ.. ನಿಜಕ್ಕೂ ಅದಾಗಲೇ ಅಪ್ಪು ಇಲ್ಲದ ನೋವಿನಲ್ಲಿರುವಾಗ ಇಂದು ಮದುವೆಯ ದಿನ ಆಗಮಿಸಿ ಅಪ್ಪು ಅಗಲಿಕೆ ಮತ್ತಷ್ಟು ಕಾಡುವಂತೆ ಮಾಡಿದೆ.. ಇದೇ

ಸಮಯದಲ್ಲಿ ಅಶ್ವಿನಿ ಅವರ ಮನದಾಳದ ಮಾತುಗಳು ನಿಜಕ್ಕೂ ಮನಕಲಕುತ್ತದೆ.. ಹೌದು ಇಂದಿಗೆ ಪುನೀತ್ ಅವರು ಹಾಗೂ ಅಶ್ವಿನಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಪ್ಪತ್ತೆರೆಡು ವರ್ಷಗಳು.. ಪ್ರತಿ ವರ್ಷ ಅಶ್ವಿನಿ

ಅವರನ್ನು ಹಾಗೂ ಮಕ್ಕಳನ್ನು ವಿದೇಶ ಪ್ರವಾಸಗಳಿಗೆ ಕರೆದುಕೊಂಡು ಹೋಗುತ್ತಿದ್ದ ಪುನೀತ್ ಅವರು ಅಲ್ಲಿಯೇ ನದುವೆಯ ದಿನ ಆಚರಿಸಿಕೊಳ್ಳುತ್ತಿದ್ದರು.. ಪ್ರವಾಸ ಕೈಗೊಂಡಿಲ್ಲವೆಂದರೆ ಮನೆಯಲ್ಲಿಯೇ ಸರಳವಾಗಿ ಕೇಕ್ ಕಟ್ಮಾಡುವ ಮೂಲಕ ಆಚರಿಸಿಕೊಳ್ಳುತ್ತಿದ್ದರು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆದರೆ ಅಶ್ವಿನಿ ಅವರ ಹುಟ್ಟುಹಬ್ಬವನ್ನು ಪುನೀತ್ ಅವರು ಯಾವ ವರ್ಷವೂ ತಪ್ಪಿಸದೇ ಆಚರಣೆ ಮಾಡುತ್ತಿದ್ದರು.. ಅದರಲ್ಲಿಯೂ ಅಶ್ವಿನಿ ಅವರಿಗೆ ಪ್ರತಿ ವರ್ಷ ವಿಶೇಷ ಉಡುಗೊರೆಗಳನ್ನು ಕೊಟ್ಟು ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುತ್ತಿದ್ದ ರೀತಿ ನಿಜಕ್ಕೂ ಅವರಿಬ್ಬರ ನಡುವಿನ

ಪ್ರೀತಿಯನ್ನು ತೋರುತ್ತಿತ್ತು.. ಕೆಲ ವರ್ಷದ ಹಿಂದಷ್ಟೇ ಮಡದಿಗೆ ಮೂರು ಕೋಟಿ ರೂಪಾಯಿ ಬೆಲೆಯ ದುಬಾರಿ ಕಾರ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.. ಹೀಗೆ ಸದಾ ಅಶ್ವಿನಿ ಅವರನ್ನು ಸಂತೋಷವಾಗಿಟ್ಟುಕೊಳ್ಳಲು ಪ್ರಯತ್ನ ಪಡುತ್ತಿದ್ದ ಅಪ್ಪು ಇಷ್ಟು ಬೇಗ ಎಲ್ಲಾ ಪ್ರೀತಿಯ

ಕೊಟ್ಟು ಹೋಗಿಬಿಟ್ಟರಾ.. ಅವರಿಗೆ ನೀಡಬೇಕಾದ ಪ್ರೀತಿ ಕಾಳಜಿ ಮತ್ತಷ್ಟು ಬಾಕಿ ಇದೆ ಎಂದಾದರೂ ಆ ಭಗವಂತ ಕರುಣೆ ತೋರಬಾರದಿತ್ತಾ.‌. ನಿಜಕ್ಕೂ ಅಪ್ಪು ಇನ್ನು ಮುಂದೆ ಇರೋದಿಲ್ಲ ಅನ್ನೋದನ್ನ ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ..

ಇನ್ನೂ ಇದು ಅಶ್ವಿನಿ ಅವರಿಗೆ ಅಪ್ಪು ಇಲ್ಲದ ಮೊದಲ ಮದುವೆಯ ದಿನವಾಗಿದೆ.. ಇದೇ ದಿನ ಕೆಲ ವರ್ಷದ ಹಿಂದೆ ಅಪ್ಪು ಬಗ್ಗೆ ಅಶ್ವಿನಿ ಅವತು ಯೂಟ್ಯೂಬ್ ಚಾನಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು
ಹಂಚಿಕೊಂಡಿದ್ದರು.. ಹೌದು “ನಮ್ಮ ಜೊತೆ ಪುನೀತ್ ಸಾಕಷ್ಟು ಸಮಯ ಕಳೆಯುತ್ತಾರೆ.. ಆದರೆ ನಾನು ಮತ್ತು
ಮಕ್ಕಳು ಪುನೀತ್ ಅವರ ಜೊತೆ ಮಾಲ್ ಗೆ ಹೋಗಲು ಇಷ್ಟ ಪಡುವುದಿಲ್ಲ. ಅಲ್ಲಿ ಜನರು ಅವರ ಜೊತೆ ನಮ್ಮನ್ನು
ಗುರುತಿಸುತ್ತಾರೆ.. ಮಕ್ಕಳಿಗೆ ಸ್ವಲ್ಪ ಮುಜುಗರವಾಗುತ್ತದೆ.. ಜನರು ತೋರುವ ಪ್ರೀತಿ ಅಭಿಮಾನದ ಬಗ್ಗೆ ನಮಗೆ ಬಹಳ ಸಂತೋಷವಿದೆ‌.. ಆದರೆ ಮಕ್ಕಳು ಸರಳವಾಗಿಯೇ ಇರಬೇಕೆಂಬುದು ನಮ್ಮ ಆಸೆ..

ಇನ್ನು ಮಾಲ್ ಗಳಿಗೆ ಹೋಗದಿದ್ದರೂ ಆಗಾಗ ಸಿನಿಮಾಗಳಿಗೆ ಕರೆದುಕೊಂಡು ಹೋಗುತ್ತಾರೆ.. ಕಾಫಿ ಕುಡಿಯಲು ಸಹ ಆಗಾಗ ಹೊರಗೆ ಹೋಗ್ತಾ ಇರ್ತೀವಿ.. ಮನೆಯ ಬಳಿಯ ಪಾರ್ಕ್ ನಲ್ಲಿ ವಾಕ್ ಗೂ ಕರೆದುಕೊಂಡು

ಹೋಗ್ತಾರೆ.. ಹೀಗೆ ಮಕ್ಕಳಿಗೂ ನಮಗೂ ಸಾಕಷ್ಟು ಸಮಯ ನೀಡ್ತಾರೆ ಆ ಬಗ್ಗೆ ನನಗೆ ಸಂತೋಷ ಇದೆ ಎಂದಿದ್ದರು. ಅಷ್ಟೇ ಅಲ್ಲದೇ ಪುನೀತ್ ಅವರು ಹಾಗೂ ಮಕ್ಕಳಿಗೆ ಮನೆಯಲ್ಲಿ ಫೋಟೋಗಾಗಿ ಕ್ಯಾಮರಾ ಮುಂದೆ ನಿಲ್ಲೋದು ಇಷ್ಟವಿಲ್ಲ.. ಇದ್ದಷ್ಟು ಸಮಯ ಮಕ್ಕಳು ಮತ್ತು ಪುನೀತ್ ಒಟ್ಟಿಗೆ

ಕಳೆಯುತ್ತಾರೆ.. ಎಂಜಾಯ್ ಮಾಡುತ್ತಾರೆ.. ಎಂದಿದ್ದರು.. ಇನ್ನು ಇತ್ತ ಪುನೀತ್ ರಾಜ್ ಕುಮಾರ್ ಅವರೂ ಸಹ ಕಳೆದ ವರ್ಷವಷ್ಟೇ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡುವಾಗ ಅಶ್ವಿನಿ ಅವರನ್ನು ಸಂತೋಷ ಪಡಿಸಲು ಏನೆಲ್ಲಾ ಮಾಡ್ತೀರಾ ಎಂದು ಕೇಳಿದ್ದರು…

ಆಗ ನಗುತ್ತಲೇ ಉತ್ತರಿಸಿದ್ದ ಅಪ್ಪು ಏನೂ‌ ಮಾಡಲ್ಲ ಅವರಿಗಾಗಿ ಸಮಯ ಕೊಟ್ಟರೆ ಅವರಿಗೆ ಅದೇ ಸಂತೋಷ ಎಂದು ಎಂದಿನಂತೆ ತಮ್ಮ ಮುಗ್ಧತೆಯ ನಗು ಬೀರಿದ್ದರು.. ಜೊತೆಗೆ ನಾನು ಹೆಚ್ಚಾಗಿ ಅಶ್ವಿನಿ ಅವರಿಗಾಗಿ ಒಂದು ಹಾಡನ್ನು ಹಾಡುತ್ತಿರುತ್ತೇನೆ.. ಎಂತ ಸೌಂದರ್ಯ ಕಂಡೆ..

ಆಹಾ ಎಂತ ಸೌಂದರ್ಯ ಕಂಡೆ.. ಈ ಹಾಡನ್ನು ಅವರ ಮುಂದೆ ಹಾಡುತ್ತಿರುತ್ತೇನೆ ಎಂದಿದ್ದರು.. ಆದರೀಗ ಅಶ್ವಿನಿ ಅವರು ಸಂತೋಷ ಪಡುವಂತೆ ಅವರ ಜೊತೆ ಸಮಯ ಕಳೆಯದೇ ಹೋಗಿಬಿಟ್ಟಿರಾ ಅಪ್ಪು.. ಛೇ ನಿಜಕ್ಕೂ ವಿಧಿಯದ್ದು ಕಲ್ಲು ಮನಸ್ಸು.. ಅವರ ಹಳೆಯ ಮಾತುಗಳನ್ನು ಕೇಳ್ತಿದ್ರೆ ಹೊಟ್ಟೆಯಲ್ಲಿ ಏನೋ ಒಂದು ರೀತಿ ಹೇಳಕ್ಕಾಗದೇ ಇರೋ ಅಷ್ಟು ಸಂಕಟ ಆಗತ್ತೆ ಗುರು..

Related Articles

Leave a Reply

Your email address will not be published. Required fields are marked *

Back to top button