ಅಂಬಾನಿ ಮನೆಯಲ್ಲಿ ಕೆಲಸ ಸಿಕ್ಕರೆ ಅವರಿಗೆ ಅದೃಷ್ಟ ಒಲಿದಂತೆ.. ಕೆಲಸ ಮಾಡುವವರನ್ನ ಅಂಬಾನಿ ಯಾವ ರೀತಿ ನೋಡಿಕೊಳ್ತಾರೆ! ತಿಂಗಳಿಗೆ ಎಷ್ಟು ಲಕ್ಷ ಸಂಭಾವನೆ ಕೊಡ್ತಾರೆ ಗೊತ್ತೇ..
ಸಾವಿರಾರು ಕೋಟಿ ಖರ್ಚು ಮಾಡಿ ಸ್ವರ್ಗವನ್ನೇ ಭೂಮಿಗೆ ತಂದಂತೆ ಮನೆ ಕಟ್ಟಿರುವ ಮುಖೇಶ್ ಅಂಬಾನಿ ತನ್ನ ಮನೆಯ ಆರು ಅಂತಸ್ತುಗಳನ್ನು ಕೇವಲ ಕಾರ್ ಪಾರ್ಕಿಂಗ್ ಗಾಗಿಯೆ ಮೀಸಲಿಟ್ಟಿದ್ದಾರೆ ಎಂದರೆ ಅವರ ಹವಾ ಎಷ್ಟು ಎಂದು ಊಹಿಸಿಕೊಳ್ಳಿ. ಇಪ್ಪತ್ತೇಳು ಅಂತಸ್ತಿನ ಅಂಬಾನಿ ಮನೆಯನ್ನು ಸ್ವಚ್ಛವಾಗಿ ನೋಡಿಕೊಳ್ಳಲು ಅವರ
ಮನೆಯಲ್ಲಿ ಸುಮಾರು ಒಂದು ಸಾವಿರದ ನಾಲ್ಕುನೂರು ಕೆಲಸಗಾರರು ಇದ್ದಾರೆ. ಕೆಲಸಗಾರರಲ್ಲಿ ಮೊದಲು ಅಂಬಾನಿ ನೋಡುವುದು ಅವರು ಎಷ್ಟು ಕ್ಲೀನಾಗಿ ಇದ್ದಾರೆಂದು. ನಂತರ ಅವರನ್ನು ಸೆಲೆಕ್ಟ್ ಮಾಡಿಕೊಂಡು ಅಂಬಾನಿ ಮಾರ್ಗದರ್ಶನ ಮತ್ತು ಸೂತ್ರಗಳಂತೆ ಕೆಲಸಗಾರರಿಗೆ ಟ್ರೈನಿಂಗ್ ಕೊಡಲಾಗುತ್ತದೆ.
ಕೆಲಸಗಾರರು ಫ್ರೆಂಡ್ಲಿಯಾಗಿ ಮತ್ತು ಸಮಾಧಾನವಾಗಿ ಮಾತನಾಡುವಂತೆ ಅವರನ್ನು ತಿದ್ದುತ್ತಾರೆ . ಹಾಗೂ ಪಾಸಿಟಿವ್ ಆಲೋಚನೆಗಳನ್ನು ಕೆಲಸಗಾರರಲ್ಲಿ ತುಂಬುತ್ತಾರೆ. ಇದು ಅಸಾಧ್ಯ ಅನ್ನೋ ಮಾತು ಅವರಿಂದ ಬರದಂತೆ ಅವರಿಗೆ ಟ್ರೈನಿಂಗ್ ಕೊಡಲಾಗುತ್ತದೆ. ಹಾಗೆ
ಎಮರ್ಜೆನ್ಸಿ ಟೈಮ್ ನಲ್ಲಿ ಅವರು ತಕ್ಷಣ ಹೇಗೆ ಕಾರ್ಯಪ್ರವೃತ್ತರಾಗ ಬೇಕು ಎಂದು ಕೆಲಸಗಾರರಿಗೆ ಹೇಳಿಕೊಡಲಾಗುತ್ತದೆ. ಕೆಲಸಗಾರರನ್ನು ತನ್ನ ಸ್ವಂತ ಮನೆಯವರಂತೆ ನೋಡಿಕೊಳ್ಳುವ ಅಂಬಾನಿ ಕುಟುಂಬದವರು ಅವರ ಕೆಲಸಕ್ಕೆ ತಕ್ಕಂತೆ ತಿಂಗಳಿಗೆ ಎರಡು ಲಕ್ಷದಿಂದ ಹದಿನಾಲ್ಕು ಲಕ್ಷದವರೆಗೆ ಸಂಬಳ ಕೊಡಲಾಗುತ್ತದೆ.
ಹಾಗೂ ಹಬ್ಬಗಳಲ್ಲಿ ದುಬಾರಿ ಬಟ್ಟೆ ಮತ್ತು ಗಿಫ್ಟ್ ಗಳನ್ನು ಕೆಲಸಗಾರರಿಗೆ ಅಂಬಾನಿ ಕುಟುಂಬದವರು ಪ್ರೀತಿಯಿಂದ ವಿತರಿಸುತ್ತಾರೆ. ನಿಜ ಹೇಳಬೇಕು ಎಂದರೆ ಅಂಬಾನಿ ಮನೆಯಲ್ಲಿ ಕೆಲಸ ಸಿಕ್ಕರೆ ಅವರಿಗೆ ಅದೃಷ್ಟ ಒಲಿದಂತೆ.
ಯಾಕೆಂದರೆ ಕೆಲಸಗಾರರ ಕಷ್ಟಗಳನ್ನು ನೀಗಿಸುತ್ತಾರೆ ಅಂಬಾನಿ ಕುಟುಂಬದವರು. ಅಂಬಾನಿ ಮನೆಗೆ ಕೆಲಸಕ್ಕೆ ಸೇರುವವರು ಯಾವುದೇ ಕಾರಣಕ್ಕೂ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲ್ಲ. ಹಾಗೆ ಬೇರೆ ಕಡೆ ಕೆಲಸಕ್ಕೆ ಸೇರುವುದಿಲ್ಲ.