ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವ ಜೊತೆಜೊತೆಯಲಿ ನಟಿ ಮೇಘಾ ಶೆಟ್ಟಿ..
ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿಯ ಅನು ಸಧ್ಯ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.. ಹೌದು ಸಧ್ಯ ಜೊತೆಜೊತೆಯಲಿ ಧಾರಾವಾಹಿ ರೋಚಕ ತಿರುವುಗಳ ಜೊತೆ ಸಾಗುತಲಿದ್ದು ಆರ್ಯವರ್ಧನ್ ಅನು ಮೇಲಿನ ಪ್ರೀತಿ ಸತ್ಯವಾ ಎನ್ನುವ ಅನುಮಾನ ಮೂಡುವಂತಹ ಸಂದರ್ಭಗಳು
ಸೃಷ್ಟಿಯಾಗಿದ್ದು ಕುತೂಹಲದ ಜೊತೆಗೆ ಧಾರಾವಾಹಿ ಸಾಗುತಲಿದ್ದು ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಳ್ಳುತ್ತಿದೆ.. ಧಾರಾವಾಹಿ ಶುರುವಾಗಿ ಎರಡು ವರ್ಷಗಳು ಕಳೆದಿದ್ದು ಅದೇ ಕುತೂಹಲ ಅದೇ ಪ್ರೀತಿಯನ್ನು ಜನರಿಂದ ಪಡೆದುಕೊಳ್ಳುತ್ತಿದೆ.. ಸಧ್ಯ ಕೆಲ ದಿನಗಳ
ಹಿಂದಷ್ಟೇ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಅನು ಆರ್ಯರ ಮದುವೆ ಸಹ ನೆರವೇರಿದ್ದು ಇದೀಗ ರಾಜನಂದಿನಿಯ ಕುರಿತ ರೋಚಕ ಸತ್ಯಗಳು ಬಯಲಾಗುವ ಸಮಯ ಬಂದಿದ್ದು ಕುತೂಹಲವನ್ನು ಹೆಚ್ವಿಸಿದೆ ಎನ್ನಬಹುದು..
ಇನ್ನು ಧಾರಾವಾಹಿಯಲ್ಲಿ ಅನು ಪಾತ್ರದ ಮೂಲಕ ಮನೆ ಮಾತಾದ ನಟಿ ಮೇಘಾ ಶೆಟ್ಟಿ ಇದೀಗ ಹೊಸ ಇನ್ನಿಂಗ್ಸ್ ಒಂದನ್ನು ಆರಂಭಿಸಿದ್ದು ಸಿಹಿ ಸುದ್ದಿ ನೀಡಿದ್ದಾರೆ.. ಹೌದು ಐ ಎ ಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ಮೇಘಾ ಶೆಟ್ಟಿಯನ್ನು ಬಣ್ಣದ ಬದುಕು ತನ್ನತ್ತ ಸೆಳೆದಿತ್ತು..
ಅಭಿನಯಿಸಿದ ಮೊದಲ ಧಾರಾವಾಹಿಯಲ್ಲಿಯೇ ದೊಡ್ಡ ಹೆಸರು ಪಡೆದುಕೊಂಡ ಮೇಘಾ ಶೆಟ್ಟಿ ಒಂದೇ ವರ್ಷದಲ್ಲಿ ಸಿನಿಮಾಗೂ ಕಾಲಿಟ್ಟರು.. ಅದರಲ್ಲೂ ಸ್ಯಾಂಡಲ್ವುಡ್ ನ ಸ್ಟಾರ್ ನಟರಲ್ಲಿ ಒಬ್ಬರಾದ ಗೋಲ್ಡನ್ ಸ್ಟಾರ್ ಗಣೇಶ್
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅವರ ಜೊತೆ ಮೊದಲ ಸಿನಿಮಾದ ಅವಕಾಶ ಸಿಕ್ಕಿದ್ದು ಮೇಘಾ ಶೆಟ್ಟಿ ಅವರ ಅದೃಷ್ಟವೇ ಸರಿ.. ಇದೇ ರೀತಿ ಈ ಹಿಂದೆ ಅರಸಿ ಧಾರಾವಾಹಿಯಲ್ಲಿ ನಟಿಯಾಗಿದ್ದ ರಚಿತಾ ರಾಮ್ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾದಲ್ಲಿ ಅಭಿನಯಿಸಿ ನಂತರ ಅವರ ಜೀವನವೇ ಬದಲಾಗಿ ಹೋಯ್ತು..
ಇದೀಗ ಅದೇ ಹಾದಿಯಲ್ಲಿರುವ ಮೇಘಾ ಶೆಟ್ಟಿ ಒಂದರ ನಂತರ ಒಂಫ಼ು ಸಿಹಿ ಸುದ್ದಿಯನ್ನು ನೀಡುತ್ತಿದ್ದಾರೆ.. ಹೌದು ಕೆಲ ತಿಂಗಳ ಹಿಂದಷ್ಟೇ ಮೇಘಾ ಶೆಟ್ಟಿ ಹಾಗೂ ಜೊತೆಜೊತೆಯಲಿ ಧಾರಾವಾಹಿ ತಂಡದ ನಡುವೆ
ಮನಸ್ತಾಪಗಳು ಉಂಟಾಗಿ ಧಾರಾವಾಹಿ ಬಿಡುವ ನಿರ್ಧಾರವನ್ನು ಮಾಡಿದ್ದರು.. ಆನಂತರ ಮತ್ತೆ ಮನಸ್ತಾಪಗಳು ಬಗೆಹರಿದು ಧಾರಾವಾಹಿ ಇರುವವರೆಗೂ ಅನು ಪಾತ್ರವನ್ನು ನಾನೇ ಮಾಡುತ್ತೇನೆ.. ಕುಟುಂಬ
ಎಂದಮೇಲೆ ಭಿನ್ನಾಭಿಪ್ರಾಯ ಸಹಜ.. ಅದೇ ರೀತಿ ನಮ್ಮ ಕುಟುಂಬದಲ್ಲಿಯೂ ಆಗಿತ್ತು.. ಆದರೀಗ ಬಗೆಹರಿದಿದೆ ಎಂದು ಎಂದಿನಂತೆ ಧಾರಾವಾಹಿಯಲ್ಲಿ ಮುಂದುವರೆದಿದ್ದರು..
ಇನ್ನು ಗಣೇಶ್ ಅವರ ಜೊತೆ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ ಮೇಘಾ ಶೆಟ್ಟಿ ಲವ್ ಮಾಕ್ಟೈಲ್ ಕೃಷ್ಣ ಅವರ ಜೊತೆಯೂ ದಿಲ್ ಪಸಂದ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ.. ಆದರೆ ಆ ಎರಡೂ
ಸಿನಿಮಾಗಳಲ್ಲಿ ಬಹು ನಾಯಕಿಯರಿದ್ದು ಅವರಲ್ಲಿ ಒಬ್ಬರಾಗಿ ಮೇಘಾ ಅಭಿನಯಿಸಿದ್ದಾರೆ.. ಆದರೆ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಪ್ರಮುಖ ನಾಯಕಿಯಾಗಿ ಮೇಘಾ ಶೆಟ್ಟಿ ಕನ್ನಡದ ಹೊಸ ಚಿತ್ರವೊಂದರಲ್ಲಿ
ಅಭಿನಯಿಸುತ್ತಿದ್ದಾರೆ.. ಅದರಲ್ಲೂ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಮೇಘಾ ಶೆಟ್ಟಿ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಒಂದನ್ನು ಆರಂಭ ಮಾಡುತ್ತಿದ್ದಾರೆನ್ನಬಹುದುಹೌದು ಅದರಲ್ಲೂ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಮುಖ್ಯ ಭೂಮಿಕೆಯಲ್ಲಿ
ಮೇಘಾ ಶೆಟ್ಟಿ ಹಾಗೂ ನಾಯಕನಾಗಿ ಕವೀಶ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.. ಕನ್ನಡ ಮರಾಠಿ ಹಾಗೂ ಇತರೆ ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ಅದಾಗಲೇ ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ.. ಸಡಗರ ರಾಘವೇಂದ್ರ ಅವರು ನಿರ್ದೇಶಿಸುತ್ತಿರುವ
ಚೊಚ್ಚಲ ಚಿತ್ರ ಇದಾಗಿದ್ದು ಕೌತುಕ ಕಥಾವಸ್ತು ಉಳ್ಳದ್ದಾಗಿದೆ ಎಂದು ತಿಳಿದುಬಂದಿದೆ.. ಒಟ್ಟಿನಲ್ಲಿ ಎರಡು ವರ್ಷದ ಹಿಂದೆ ಧಾರಾವಾಹಿಯ ನಾಯಕಿಯಾಗಿ ಬಂದ ಮೇಘಾ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ..