NEWS

ಇಂದು ಇದ್ದಕಿದ್ದ ಹಾಗೆ ಪುನೀತ್ ನಿವಾಸಕ್ಕೆ ಯಾರು ಬಂದಿದ್ದಾರೆ ನೋಡಿ.. ಕೈ ಮುಗಿದ ಅಶ್ವಿನಿ ಅವರು..

ಪುನೀತ್ ರಾಜ್ ಕುಮಾರ್ ಅವರು ಅಗಲಿ ತಿಂಗಳು ಕಳೆದಿದೆ.. ಸಮಯ ಮಿಂಚಿನ ಹಾಗೆ ಸಾಗುತ್ತಿದೆ.. ಈ ಕರಾಳವಾದ ಎರಡು ವರ್ಷಗಳು ಯಾಕಾದರೂ ಬಂದವೋ ಎನ್ನುವಂತಾಗಿದೆ.. ಅಮೂಲ್ಯವಾದ ಜೀವಗಳು ನಮ್ಮನ್ನಗಲಿ ಹೋಗಿ ಬಿಟ್ಟವು.. ಅದರಲ್ಲೂ ಇದ್ದಷ್ಟು ದಿನ ತನ್ನ ಕುಟುಂಬ

ಹಾಗೂ ಸಮಾಜ ಎರಡಕ್ಕೂ ತನ್ನ ದುಡಿಮೆ ಪ್ರೀತಿ ಎಲ್ಲವನ್ನೂ ಧಾರೆ ಎರೆದ ಪುನೀತ್ ಅವರ ಅಗಲಿಕೆಯ ನೋವು ನಿಜಕ್ಕೂ ನಿರಂತರವೇ ಸರಿ.. ತಿಂಗಳಾದರೂ ಅರಗಿಸಿಕೊಳ್ಳಲಾಗುತ್ತಿಲ್ಲ.. ಇನ್ನು ಅತ್ತ ನೋವಿನಲ್ಲಿರುವ

ಅಶ್ವಿನಿ ಅವರಿಗೆ ಇಂತಹ ಸಮಯದಲ್ಲಿ ಎಷ್ಟೇ ಸಾಂತ್ವಾನ ನೀಡಿದರೂ ಸಹ ಅಪ್ಪು ಅವರಿದ್ದ ಹಾಗೆ ಆಗದು.. ಅವರು ಕೊಡುತ್ತಿದ್ದ ಪ್ರೀತಿ ಮರಳಿ ಸಿಗದು ಎನ್ನುವ ಸತ್ಯವನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸುತ್ತಿರುವ ಆ ಹೆಣ್ಣು ಮಗಳ ಪರಿಸ್ಥಿತಿ ನೆನೆದರೆ ನಿಜಕ್ಕೂ ಮನಕಲಕುತ್ತದೆ..

ಇನ್ನು ಕಳೆದ ಒಂದು ತಿಂಗಳಿನಿಂದಲೂ ಸಾಕಷ್ಟು ಗಣ್ಯರು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಆಗಮಿಸಿ ಅಶ್ವಿನಿ ಅವರಿಗೆ ಸಾಂತ್ವಾನ ನೀಡಿದರು.. ತಮಿಳು ನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಕುಟುಂಬದಿಂದ ಮಗನನ್ನು

ಕಳುಹಿಸಿಕೊಟ್ಟಿದ್ದರು.. ಇತ್ತ ತೆಲುಗು ಚಿತ್ರರಂಗದ ಗಣ್ಯರು ಬಹುತೇಕ ಎಲ್ಲರೂ ಸಹ ಅಪ್ಪು ಅವರ ಅಂತಿಮ ದರ್ಶನವನ್ನು ಪಡೆದು ಕಣ್ಣೀರಿಟ್ಟಿದ್ದರು.. ಅಷ್ಟೇ ಅಲ್ಲದೇ ಚಿರಂಜೀವಿ, ನಾಗಾರ್ಜುನ್, ಪವನ್ ಕಲ್ಯಾಣ್, ವಿಶಾಲ್, ಸಿದ್ದಾರ್ಥ್, ಶಿವ ಕಾರ್ತಿಕೇಯನ್ ಹೀಗೆ ಬಹಳಷ್ಟು ಮಂದಿ ಪುನೀತ್ ಅವರ ನಿವಾಸಕ್ಕೆ ಆಗಮಿಸಿ ಸಾಂತ್ವಾನ ಹೇಳಿದ್ದರು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಿನ್ನೆಯಷ್ಟೇ ಅಲ್ಲು ಅರ್ಜುನ್ ಅವರ ಕುಟುಂಬದಿಂದ ಸಹೋದರ ಅಲ್ಲು ಸಿರಿಶ್ ಆಗಮಿಸಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿ ಹೋಗಿದ್ದರು.. ಆದರೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ತಮ್ಮ ಸಿನಿಮಾದ ಪ್ರಚಾರಕ್ಕೆ ಹೈದರಾಬಾದ್ ನಿಂದ ಆಗಮಿಸಿ ಹಾಗೆಯೇ ಅಶ್ವಿನಿ

ಅವರನ್ನು ಭೇಟಿ ಮಾಡಿದ್ದ ರಾಜಮೌಳಿ ಅವರ ನಡೆ ಜನರ ಟೀಕೆಗೆ ಗುರಿಯಾಗಿತ್ತು.. ಅಂತಿಮ ದರ್ಶನ ಪಡೆಯದೇ ಅಥವಾ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಲೆಂದು ಬಾರದೇ.. ತಿಂಗಳ ನಂತರ ತನ್ನ ಸಿನಿಮಾ ಪ್ರಚಾರಕ್ಕೆ ಬಂದು ಅದೇ ದಿನ ಪುನೀತ್ ಅವರ ಮನೆಗೆ ಭೇಟಿ ಕೊಟ್ಟು

ಸಾಂತ್ವಾನ ಹೇಳಿದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟೀಕಿಸಿದ್ದರು.. ಈ ಸಮಯದಲ್ಲಿ ಬರುವ ಅಗತ್ಯವೇನಿತ್ತು ಎಂದಿದ್ದರು..ಇನ್ನು ಆ ವ್ಯಕ್ತಿಯನ್ನು ಹೊರತು ಪಡಿಸಿ ನಾಡಿನ ಹಾಗೂ ಅಕ್ಕ ಪಕ್ಕದ ರಾಜ್ಯದ ಸಾಕಷ್ಟು ಗಣ್ಯರು ಆಗಮಿಸಿ ಅಶ್ವಿನಿ ಅವರ ಜೊತೆ ಮಾತನಾಡಿದ್ದು

ನಿಜಕ್ಕೂ ನಮ್ಮ ಪುನೀತ್ ಅವರು ಇದ್ದಾಗ ಸಂಪಾದಿಸಿದ್ದು ಏನು ಎಂಬುದು ತಿಳಿಯಿತು.. ಹೌದು ಪ್ರತಿಯೊಬ್ಬರು ಅಪ್ಪು ಅವರಿಗೆ ನೀಡುತ್ತಿರುವ ಗೌರವ ನೋಡಿದರೆ ನಿಜಕ್ಕೂ‌ ಮನತುಂಬಿ ಬರುತ್ತದೆ.. ಬದುಕಿದರೆ ಪುನೀತ್ ಅವರ ರೀತಿ ಬದುಕಬೇಕೆನಿಸುತ್ತದೆ.. ಇನ್ನು ಇಂದು ಸಹ ನಾಡಿನ ಗಣ್ಯರೊಬ್ಬರು ಪುನೀತ್ ಅವರ ನಿವಾಸಕ್ಕೆ ಭೇಟಿ ನೀಡಿ

ಸಾಂತ್ವಾನ ಹೇಳಿದ್ದು ಮಗಳು ವಂದಿತಾಳನ್ನೂ ಸಹ ಮಾತನಾಡಿಸಿ ಸಂತೈಸಿರುವುದು ನಿಜಕ್ಕೂ ಅವರ ನಡೆ ಮೆಚ್ಚುವಂತದ್ದು.. ಹೌದು ಇಂದು ಪುನೀತ್ ಅವರ ನಿವಾಸಕ್ಕೆ ಭೇಟಿ ಕೊಟ್ಟದ್ದು ಮತ್ಯಾರೂ ಅಲ್ಲ.. ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು..

ಹೌದು ನಿನ್ನೆಯಷ್ಟೇ ಅಶ್ವಿನಿ ಹಾಗೂ ಪುನೀತ್ ಅವರ ಇಪ್ಪತ್ತೆರಡನೇ ವರ್ಷದ ಮದುವೆಯ ದಿನವಾಗಿತ್ತು.. ನೋವಿನ ಮೇಲೆ ನೋವೆನ್ನುವಂತೆ ಅಶ್ವಿನಿ ಅವರು ಸಾಕಷ್ಟು ದುಃಖದಲ್ಲಿದ್ದರು.. ಹೊರಗೆ ಗಟ್ಟಿಯಾಗಿ ತೋರಿಕೊಂಡರೂ

ಸಹ ಆ ಹೆಣ್ಣು ಮಗಳಿಗಿರುವ ಸಂಕಟ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ.. ಇಂತಹ ಸಮಯದಲ್ಲಿ ಈ ರೀತಿ ದೊಡ್ಡವರ ಸಾಂತ್ವಾನದ ಅವಶ್ಯಕತೆ ಖಂಡಿತ ಅವರಿಗಿದೆ.‌ ಅದನ್ನು ತಿಳಿದು ಖುದ್ದಾಗಿ ಪುನೀತ್ ಅವರ ನಿವಾಸಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಭೇಟಿ ನೀಡಿ ಅಶ್ವಿನಿ ಅವರ ಜೊತೆ ಸಾಕಷ್ಟು ಸಮಯ ಮಾತುಕತೆ ನಡೆಸಿದ್ದಾರೆ..

ಅಷ್ಟೇ ಅಲ್ಲದೇ ಜೀವನದ ಸತ್ಯಗಳೇ ಇವು ಎಲ್ಲವನ್ನ ಅರಿತು ಮುನ್ನಡೆಯಬೇಕೆಂದು ವಾಸ್ತವವನ್ನು ಅರ್ಥ ಮಾಡಿಸಿದ್ದಾರೆ.. ಜೊತೆಗೆ ಪುನೀತ್ ಅವರು ಮಾಡಿರುವ ಪುಣ್ಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಪುನೀತ್ ಅವರ ಪುಣ್ಯ ಕಾರ್ಯಗಳೇ ಕುಟುಂಬಕ್ಕೆ ಶ್ರೀರಕ್ಷೆ ಆಗಲಿದೆ ಎಂದಿದ್ದಾರೆ..

ಅಷ್ಟೇ ಅಲ್ಲದೇ ಪುನೀತ್ ಅವರ ಎರಡನೇ ಮಗಳು ವಂದಿತಾ ಬಳಿಯೂ ಮಾತನಾಡಿರುವ ಶ್ರೀಗಳು ವಿಧ್ಯಾಭ್ಯಾಸದ ಬಗ್ಗೆ ವಿಚಾರಿಸಿ ಚೆನ್ನಾಗಿ ಓದಿ ತಂದೆಯಂತೆ ಹೆಸರು ಮಾಡಲೆಂದು ಆಶೀರ್ವದಿಸಿದ್ದಾರೆ.. ಅಷ್ಟೇ ಅಲ್ಲದೇ ಕುಟುಂಬಕ್ಕೆ ಇದೆಲ್ಲವನ್ನು ದಾಟಿ ಬರುವ ಶಕ್ತಿ ಭಗವಂತ

ಕೊಡಲೆಂದು ಪ್ರಾರ್ಥಿಸುವೆನೆಂದಿದ್ದಾರೆ.. ಇದೇ ಸಮಯದಲ್ಲಿ ಸಚಿವರಾದ ಸುಧಾಕರ್ ಅವರು ಶ್ರೀಗಳ ಜೊತೆ ಆಗಮಿಸಿದ್ದು ಇತ್ತ ರಾಘಣ್ಣ ಹಾಗೂ ಮಗ ಯುವ ರಾಜ್ ಕುಮಾರ್ ಸಹ ಅಶ್ವಿನಿ ಅವರ ಜೊತೆ ಇದ್ದರು..

ನಿಜಕ್ಕೂ ನಾಡಿನ ಸಾಧು ಸಂತರುಗಳು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ.. ಅದೇ ರೀತಿ ನಾಡೇ ಮೆಚ್ಚಿದ ಪುಣ್ಯಾತ್ಮನ ಅಗಲಿಕೆಯಿಂದ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಲು ಬಂದ ಶ್ರೀಗಳ ನಡೆ ನಿಜಕ್ಕೂ ಮೆಚ್ಚುವಂತದ್ದು.. ಪುನೀತ್ ಅವರ ಅಂತಿಮ ದರ್ಶನವನ್ನೂ ಸಹ ಪಡೆದಿದ್ದ ಶ್ರೀಗಳು ಇದೀಗ ಕುಟುಂಬಕ್ಕೆ ಧೈರ್ಯ ನೀಡಿದ್ದು ಅಶ್ವಿನಿ ಅವರ ಮನಸ್ಸಿಗೆ ಸ್ವಲ್ಪ ಸಮಾಧಾನ ತಂದಿದ್ದರೆ ಅಷ್ಟೇ ಸಾಕು.. ಅಪ್ಪು ತಾನು ಹೋದರೂ ತನ್ನ ಕುಟುಂಬಕ್ಕೆ ಇಡಿ ನಾಡೇ ಜೊತೆಯಾಗಿರುವಂತೆ ಮಾಡಿ ಹೋಗಿದ್ದಾರೆ..

Related Articles

Leave a Reply

Your email address will not be published. Required fields are marked *

Back to top button