NEWS

ಅನಿಲ್ ಕುಂಬ್ಳೆ ಅವರು ಶಿವರಾಂ ಅವರಿಗೆ ಏನಾಗಬೇಕು ಗೊತ್ತಾ.. ಕಂಬನಿ‌ ಮಿಡಿದ ಅನಿಲ್ ಕುಂಬ್ಳೆ ಹೇಳಿದ ಮಾತು ನೋಡಿ..

ಸ್ಯಾಂಡಲ್ವುಡ್ ನ ಹಿರಿಯ ಕೊಂಡಿ ಹಳೆ ತಲಮಾರುಗಳನ್ನೂ ಹೊಸ ತಲೆಮಾರುಗಳನ್ನು ಬೆಸೆಯುತ್ತಿದ್ದ ಆ ಒಂದು ಹಿರಿಯ ಜೀವ ಇಂದು ಇನ್ನಿಲ್ಲವಾಗಿದೆ.. ಎಂಬತ್ತ ಮೂರು ವರ್ಷದ ಹಿರಿಯ ನಟ ಶಿವರಾಂ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.. ಅಯ್ಯಪೊಅ ಸ್ವಾಮಿ ಪೂಜೆ ಮಾಡುವ ಸಮಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಶಿವರಾಂ ಅವರು ಮತ್ತೆ

ಮಾತನಾಡಲೇ ಇಲ್ಲ.. ಬ್ರೇನ್ ಡ್ಯಾಮೇಜಾದ ಕಾರಣ ತಲೆಗೆ ಬಲವಾದ ಒಳ ಪೆಟ್ಟು ಬಿದ್ದಿದ್ದು ಮೂರು ದಿನಗಳ ಕಾಲ ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.. ಕಳೆದ ತಿಂಗಳಷ್ಟೇ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ಅಗಲಿದ್ದು ಆ ನೋವಿನಿಂದಲೇ ಹೊರ ಬಾರದ ಈ ಸಮಯದಲ್ಲಿ ಚಿತ್ರರಂಗಕ್ಕೆ ಮತ್ತೊಂದು ನೋವು ಎದುರಾಗಿದೆ.. ರಾಜ್

ಕುಮಾರ್ ಅವರಾಗಲಿ ವಿಷ್ಣುವರ್ಧನ್ ಅವರಾಗಲಿ ಅಂಬರೀಶ್ ಅವರಾಗಲಿ ಚಿತ್ರರಂಗಕ್ಕೆ ಸಂಬಂಧ ಪಟ್ಟ ಯಾವುದೇ ಕಾರ್ಯಕ್ರಮವಾಗಲಿ ಅಥವಾ ಬೇರೆ ಯಾವುದೇ ಕಾರ್ಯಕ್ರಮವಾದರೂ ಮೊದಲು ಕರೆ ಮಾಡುತ್ತಿದ್ದ ಪ್ರೀತಿಯ ಶಿವರಾಮಣ್ಣ ಇಂದು ಇಲ್ಲವಾಗಿದ್ದಾರೆ..

ಚಿತ್ರರಂಗದ ಏಳಿಗೆಗೆ ಬಹಳ ಕಷ್ಟ ಪಟ್ಟಿದ್ದ ಶಿವರಾಮ್ ಅವರು ಇನ್ನೂರ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು.. ನಿರ್ದೇಶಕನಾಗಿ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು.. ಎಲ್ಲಕಿಂತ ಹೆಚ್ಚಾಗಿ ಚಿತ್ರರಂಗದ ಪ್ರಮುಖ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು.. ಆದರೆ

ಇಂದು ಆ ಹಿರಿಯ ಜೀವ ಇನ್ನಿಲ್ಲವಾಗಿದೆ.. ಆದರೆ ಎಂಬತ್ತ ಮೂರು ವರ್ಷದ ಸಾರ್ಥಕ ಜೀವನ ನಡೆಸಿದ ಸಂತೃಪ್ತಿಯಿಂದಲೇ ಅಯ್ಯಪ್ಪ ಸ್ವಾಮಿಯ ಪಾದವನ್ನು ಪರಮಭಕ್ತ ಸೇರಿರಬಹುದೆಂದು ಭಾವಿಸಬಹುದು.. ಆದರೆ ಅಗಲಿದ ಹಿರಿಯ ನಟನಿಗೆ ಇದೀಗ ಸಂಪೂರ್ಣ ‍ಚಿತ್ರರಂಗ

ಸಿನಿಮಾ ಪ್ರೇಮಿಗಳು ಸಂಬಂಧಿಕರು ಸ್ನೇಹಿತರು ಹಿರಿಯ ಕಲಾವಿದರು ಎಲ್ಲರೂ ಸಹ ಕಂಬನಿ ಮಿಡಿದಿದ್ದಾರೆ.. ತಮ್ಮ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಮುಖ್ಯಮಂತ್ರಿಗಳನ್ನು ಸೇರಿದಂತೆ ಎಲ್ಲರೂ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇತ್ತ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದ ಶಿವರಾಮ್ ಅವರಿಗೆ ಪೊಲೀಸ್ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಸಿ ಸರ್ಕಾರ ಗೌರವಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದು ಒಳ್ಳೆಯ ನಡೆಯಾಗಿದೆ.. ಇನ್ನೂ ಇತ್ತ ಖ್ಯಾತ ಕ್ರಿಕೇಟ್ ಆಟಗಾರರಾದ ಅನಿಲ್ ಕುಂಬ್ಳೆ ಅವರು ಶಿವಾರಮ್ ಅವರ ನಿವಾಸಕ್ಕೆ ಆಗಮಿಸಿ ಶಿವರಾಮ್ ಅವರ

ಅಂತಿಮ ದರ್ಶನ ಪಡೆದಿದ್ದು ಕಂಬನಿ ಮಿಡಿದಿದ್ದಾರೆ.. ಆದರೆ ಅನಿಲ್ ಕುಂಬ್ಳೆ ಅವರು ಚಿತ್ರರಂಗದ ಗಣ್ಯರ ಅಂತಿಮ ದರ್ಶನ ಪಡೆಯಲು ಬಂದದ್ದನ್ನು ನೋಡಿ ಕೆಲವರು ಆಶ್ಚರ್ಯ ವ್ಯಕ್ತ ಪಡಿಸಿದ್ದರು.. ಇದಕ್ಕೆ ಕಾರಣವೂ ಇದೆ.. ಹೌದು ಅನಿಲ್ ಕುಂಬ್ಳೆ ಅವರು ಕ್ರಿಕೆಟರ್ ಮಾತ್ರವಲ್ಲ

ಅದಕ್ಕಿಂತ ಹೆಚ್ಚಾಗಿ ಒಬ್ಬ ಕನ್ನಡಿಗನಾಗಿದ್ದಾರೆ..‌ ಕನ್ನಡದ ಪ್ರತಿಯೊಂದು ವಿಚಾರದಲ್ಲಿಯೂ ಅಭಿಮಾನ ವ್ಯಕ್ತಪಡಿಸುವ ಅನಿಲ್ ಕುಂಬ್ಳೆ ಅವರು ಕನ್ನಡದ ಎಲ್ಲಾ ರಂಗದವರ ಜೊತೆಯೂ ಉತ್ತಮ ಸಂಬಂಧ ಹೊಂದಿದ್ದಾರೆ..

ಅದರಲ್ಲಿಯೂ ಚಿತ್ರರಂಗದ ಬಹುತೇಕ ಎಲ್ಲರಿಗೂ ಅನಿಲ್ ಕುಂಬ್ಳೆ ಅವರು ಹತ್ತಿರದಿಂದ ಪರಿಚಿತರು.. ಆದರೆ ಶಿವರಾಂ ಅವರು ಮಾತ್ರ ನಟನಾಗಿ ಪರಿಚಿತರು ಮಾತ್ರವಲ್ಲ ಅನಿಲ್ ಕುಂಬ್ಳೆ ಅವರಿಗೆ ತಂದೆಯ ಸ್ಥಾನದಲ್ಲಿ ನಿಂತು ಸಾಕಷ್ಟು ಬಾರಿ ಮಾರ್ಗದರ್ಶನ ಮಾಡುತ್ತಿದ್ದರಂತೆ.. ಅಷ್ಟೇ ಅಲ್ಲದೇ ಅನಿಲ್

ಕುಂಬ್ಳೆ ಅವರನ್ನು ಲೆಕ್ಕವಿಲ್ಲದಷ್ಟು ಬಾರಿ ಭೇಟಿಯಾಗಿದ್ದ ಶಿವರಾಂ ಅವರು ಸಾಕಷ್ಟು ವಿಚರಗಳನ್ನು ಹಂಚಿಕೊಂಡಿದ್ದರು.. ಅನಿಲ್ ಕುಂಬ್ಳೆ ಅವರ ಮನೆಯಲ್ಲಿಯೂ ಪೂಜೆ ಪುನಸ್ಕಾರಗಳು ನಡೆದಾಗ ಶಿವರಾಂ ಅವರು ಭಾಗಿಯಾಗುತ್ತಿದ್ದರು.. ಆದರೆ ಶಿವರಾಂ ಅವರು ಕೇಳಿಕೊಂಡಿದ್ದ ಆ ಒಂದು ಆಸೆಯನ್ನು ಅನಿಲ್ ಕುಂಬ್ಳೆ ಅವರು ಈಡೇರಿಸಲು ಸಾಧವಾಗಲೇ ಇಲ್ಲ..

ಹೌದು ಈ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ ಅವರು “ನನಗೆ ತುಂಬಾನೇ ಬೇಕಾದವರು ಶಿವರಾಮಣ್ಣ.. ಸದಾ ಮನೆಗೆ ಬಂದು ಯಾವಾಗಲೂ ತಮಾಷೆಯಾಗಿ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು.. ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ಅವರೊಂದು ಇನ್ಸ್ಟಿಟ್ಯೂಷನ್ ರೀತಿ..

ಇವತ್ತು ಒಂದು ದೊಡ್ಡ ಲಾಸ್ ಅನ್ಸತ್ತೆ.‌ ಶಿವರಾಮಣ್ಣ ಅವರು ಯಾವುದೇ ಸಮಾರಂಭ ಆಗಲಿ, ಮನೆಯಲ್ಲಿ ಪೂಜೆ ಆಗಲಿ ಅಥವಾ ಕ್ರಿಕೆಟ್ ಮ್ಯಾಚ್ ಆಗಲಿ ಅವರು ಬಂದು ನನ್ನನ್ನ ಪ್ರೀತಿಯಿಂದ ಮಾತನಾಡಿಸಿ ವಿಚಾರಿಸಿಕೊಳ್ಳೋರು..

ತುಂಬಾನೇ ಬೇಜಾರಗತ್ತೆ ಇವತ್ತು.. ಅವರಿಗೆ ಫೋಟೋಗ್ರಫಿ ಬಗ್ಗೆನೂ ಬಹಳ ಆಸಕ್ತಿ ಇತ್ತು.. ಮನೆಗೆ ಯಾವಾಗಲೂ ಕರೀತಾನೆ ಇದ್ರು.. ಮನೆಯಲ್ಲಿ ಒಂದು ಲೈಬ್ರರಿನೇ ಇದೆ.‌ ಹಾಗೆ ಅವರ ಬಳಿ ಬಹಳ ದೊಡ್ಡ ಮಟ್ಟದ ಸ್ಟ್ಯಾಂಪ್ ಕಲೆಕ್ಷನ್ ಇದೆ..

ನಿಅದನ್ನೆಲ್ಲಾ ನೋಡೋಕೆ ಕರಿತಾನೆ ಇದ್ರು.. ಹಾಗೆ ಫೋಟೋಗ್ರಫಿಗೆ ಯಾವಾಗಲಾದರು ಒಂದ್ ಸಾರಿ ಕಾಡಿಗೆ ನಿಮ್ ಜೊತೆ ಹೋಗ್ಬೇಕು ಕರ್ಕೊಂಡ್ ಹೋಗಿ ಅಂತಿದ್ರು.. ಆದರೆ ಅದು ಯಾಕೋ ನೆರವೇರಲೇ ಇಲ್ಲ.. ನನಗೆ ಬಹಳ ಬೇಸರ ಇದೆ.. ಅದನ್ನು ಮಾಡಲಾಗಲಿಲ್ಲ ಅಂತ..

ಚಿತ್ರರಂಗಕ್ಕೆ ನಮಗೆ ಎಲ್ಲಾ ಇದು ದೊಡ್ಡ ಲಾಸ್.. ಎಂದು ಕಂಬನಿ ಮಿಡಿದು ಸಂತಾಪ ಸೂಚಿಸಿ ಕೈ ಮುಗಿದು ಹೊರಟರು.. ನಿಜಕ್ಕೂ ಆಗಿನ ಕಾಲದ ಕಲಾವಿದರು ನಾಡಿನ ಎಲ್ಲಾ ರಂಗದವರೊಟ್ಟಿಗೆಯೂ ಎಂತಹ ಒಳ್ಳೆಯ

ಸಂಬಂಧವಿಟ್ಟುಕೊಂಡಿದ್ದರು.. ಹಾಗೂ ಮೊದಲ ತಲೆಮಾರಿನ ಕಲಾವಿದರ ಕಂಡರೆ ಇತರರಿಗೆ ಎಷ್ಟು ಗೌರವವಿತ್ತು ಎಂಬುದಕ್ಕೆ ಶಿವರಾಂ ಅವರೇ ದೊಡ್ಡ ಉದಾಹರಣೆ.. ಹೋಗಿ ಬನ್ನಿ ಶಿವರಾಮಣ್ಣ..

Related Articles

Leave a Reply

Your email address will not be published. Required fields are marked *

Back to top button