ಪುನೀತ್ ಹೆಸರಿನಲ್ಲಿ ಈ ದಂಪತಿಗಳು ತಮ್ಮ ಹೊಲದಲ್ಲಿ ಮಾಡುತ್ತಿರುವ ಕಾರ್ಯ ಎಂತದ್ದು ಗೊತ್ತೇ? ಅಯ್ಯೋ ನಿಜವಾಗ್ಲೂ ಗ್ರೇಟ್ ಕಣ್ರೀ! ವಿಡಿಯೋ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಮರ ಅನ್ನೋದು ಅಕ್ಷರಶಃ ನಿಜ. ಯಾಕಂದರೆ ಅಪ್ಪು ಇಹಲೋಕ ತ್ಯಜಿಸಿ ಒಂದು ತಿಂಗಳು ಕಳೆದರೂ ಅಭಿಮಾನಿಗಳು ಪ್ರತಿ ದಿನ ಅವರ ನೆನಪಲ್ಲಿ ಒಂದಲ್ಲ ಒಂದು ಕೆಲಸ ಕಾರ್ಯಗಳನ್ನು ಮಾಡುತ್ತಲೇ ಇರುತ್ತಾರೆ.ಪವರ್ ಸ್ಟಾರ್
ಪುನೀತ್ ರಾಜ್ ಕುಮಾರ್ ಕೇವಲ ನಟನೆಯಲ್ಲಿ ಮಾತ್ರ ಅಲ್ಲ ಡ್ಯಾನ್ಸ್ ನಲ್ಲಿ ಕೂಡ ನಂಬರ್ ೧. ಅಪ್ಪು ಅವರು ಸ್ಟೆಪ್ ಹಾಕಿದ್ರು ಅಂದರೆ ಹುಡುಗರು ಕೂಡ ನಾಚ್ಕೋಬೇಕು.೪೬ ನೇ ವಯಸ್ಸಲ್ಲೂ ದೇಹವನ್ನು ಫಿಟ್ ಆಗಿ ಇಟ್ಟುಕೊಂಡು ಪ್ರತಿ ದಿನ ವರ್ಕೌಟ್ ಮಾಡುತ್ತಾ ಆರೋಗ್ಯವನ್ನು
ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಅಪ್ಪು ಇಷ್ಟು ಬೇಗ ನಮ್ಮನಗಲಿ ಹೋಗುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಅಪ್ಪು ಅವರ ಸಾವು ದೊಡ್ಡ ಆಘಾತವೇ ಸರಿ. ಪುನೀತ್ ರಾಜ್ ಕುಮಾರ್ ಅವರು ರಿಯಲ್ ಲೈಫ್ ಹೀರೋ ಕೂಡ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು, ಅದೆಷ್ಟೋ ಮಂದಿ ಬಡ ಬಗ್ಗರಿಗೆ, ಅನಾಥರಿಗೆ, ನಿರಾಶ್ರಿತರಿಗೆ ಸಹಾಯ ಮಾಡಿದ್ದಾರೆ. ಆದರೆ ಇದಾವುದೂ ಅವರು ಬದುಕಿರುವಾಗ ಯಾರಿಗೂ ತಿಳಿದಿರಲಿಲ್ಲ.
ಅವರ ಸಾವಿನ ನಂತರವೇ ಒಂದೊಂದಾಗಿ ಹೊರ ಬಿದ್ದಿದೆ. ಇದೇ ಸಾಕು ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ಎಂತದ್ದು ಅಂತ ತೋರಿಸಲು. ಪುನೀತ್ ಅವರಿಗೆ ಚಿಕ್ಕ ಮಕ್ಕಳಿಂದ ಹಿಡಿದು, ಹಣ್ಣು ಹಣ್ಣು ಮುದುಕರವರೆಗೆ ಅಭಿಮಾನಿಗಳು ಇದ್ದಾರೆ. ಹೀಗಾಗಿಯೇ ಅಪ್ಪು ಪಾರ್ಥೀವ
ಶರೀರ ನೋಡಲು ೨೫ ಲಕ್ಷಕ್ಕೂ ಹೆಚ್ಚು ಜನರು ಬಂದಿದ್ದರು. ಅದೇ ರೀತಿ ಈಗಲೂ ಪ್ರತಿ ದಿನ ಅಪ್ಪು ಸಮಾಧಿ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರ್ತಾನೇ ಇದ್ದಾರೆ. ಇದೇ ರೀತಿ ಅನೇಕ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ.
ಅದೇ ರೀತಿ ಇಲ್ಲೊಬ್ಬ ದಂಪತಿಗಳು ಕೂಡ ಅಪ್ಪು ಮೇಲಿನ ಪ್ರೀತಿಯನ್ನು ವಿಚಿತ್ರ ರೀತಿಯಲ್ಲಿ ವ್ಯಕ್ತಪಡಿಸಿ, ನೋಡುಗರಿಗೆ ಕಣ್ಣೀರು ತರಿಸಿದ್ದಾರೆ. ಕುಣಿಗಲ್ ತಾಲೂಕಿನ ಹೆಡ್ಡಿಗೆರೆ ಗ್ರಾಮದ ಒಂದು ದಂಪತಿಗಳು ತಮ್ಮ ಜಮೀನಿನಲ್ಲಿ ಅಪ್ಪು
ಅವರ ಎಲ್ಲ ಸಿನಿಮಾದ ಹೆಸರಿನ ಒಂದೊಂದು ಬ್ಯಾನರ್ ಅಡಿ ಒಂದೊಂದು ಗಿಡವನ್ನು ನೆಟ್ಟಿದ್ದಾರೆ. ಗ್ರಾಮದ ಯುವಕರೆಲ್ಲಾ ಒಂದು ದೊಡ್ಡದಾದ ಕೋಲಲ್ಲಿ ಬ್ಯಾನರ್ ಜೊತೆ ಗಿಡವನ್ನು ಕಟ್ಟಿಕೊಂಡು ಈ ಸ್ವ ಕಾರ್ಯವನ್ನು ಮಾಡಿದ್ದಾರೆ.
ಇನ್ನು ಆ ದಂಪತಿಗಳು ಪುನೀತ್ ಅವರ ಬ್ಯಾನರ್ ಹಾಗೂ ಅಪ್ಪು ಸರ್ಕಲ್ ಅನ್ನುವ ಶಿಲಾ ನ್ಯಾಸ ಮಾಡಿ ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. ಗಿಡಗಳ ರೂಪದಲ್ಲಿ ನಾವು ಪುನೀತ್ ರನ್ನು ಕಾಣಲು ಬಯಸುತ್ತೇವೆ, ಬಡವರಿಗೆ ಸದಾ ನೆರಳಾಗಿದ್ದ ಅಪ್ಪು ಇಲ್ಲೂ ದೊಡ್ಡ ಮರವಾಗಿ ನೆರಳಾಗಲಿದ್ದಾರೆ ಅನ್ನುವುದು ಆ ದಂಪತಿಗಳ ಇಂಗಿತ. ಒಟ್ಟಿನಲ್ಲಿ ಇವರ ಅಭಿಮಾನವನ್ನು ಮೆಚ್ಚಲೇ ಬೇಕು.