ಪತಿ ಅಗಲಿದ ಎಂಟು ತಿಂಗಳ ಬಳಿಕ ತಮ್ಮ ಜೀವನದ ಕುರಿತು ಮಹತ್ತರದ ನಿರ್ಧಾರ ತೆಗೆದುಕೊಂಡ ನಟಿ ಮಾಲಾಶ್ರೀ.
ನಟಿ ಮಾಲಾಶ್ರೀ ಸ್ಯಾಂಡಲ್ವುಡ್ ನ ಕನಸಿನ ರಾಣಿ ಎಂದೇ ಪ್ರಖ್ಯಾತಿ ಪಡೆದಿದ್ದ ನಟಿ ಕಳೆದ ಎಂಟು ತಿಂಗಳ ಹಿಂದಷ್ಟೇ ಪತಿ ರಾಮು ಅವರನ್ನು ಕಳೆದುಕೊಂಡ ನೋವಿನಲ್ಲಿದ್ದರು.. ಸಧ್ಯ ಇದೀಗ ಆ ಎಲ್ಲಾ ನೋವಿನಿಂದ ಕೊಂಚ ಹೊರಬಂದಿದ್ದು ತಮ್ಮ ಜೀವನದ ಕುರಿತು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.. ಹೌದು ದಶಕಗಳ ಹಿಂದೆ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ
ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಮಾಲಾಶ್ರೀ ಅವರು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು.. ಆ ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ನೀಡುತ್ತಿದ್ದ ನಟಿ ಎಂದರೆ ಅದು ಮಾಲಾಶ್ರೀ ಅವರಿಗೆ ಮಾತ್ರ.. ಇನ್ನೂ ಹೇಳಬೇಕೆಂದರೆ ಅವರ ಡೇಟ್ಸ್ ಇಲ್ಲದೇ ಒಂದೇ ದಿನ ಎರಡು ಮೂರು ಸಿನಿಮಾದ ಚಿತ್ರೀಕರಣವನ್ನೂ ಸಹ ಮಾಡುತ್ತಿದ್ದರು.. ಇತ್ತ
ರಾಮಾಚಾರಿ ಸಿನಿಮಾ ಚಿತ್ರೀಕರಣದ ವೇಳೆ ಮಾಲಾಶ್ರೀ ಅವರು ಬೇರೊಂದು ಸಿನಿಮಾ ಚಿತ್ರೀಕರಣ ಮುಗಿಸಿ ಸುಸ್ತಾಗಿ ಬಂದು ರಾಮಾಚಾರಿ ಸೆಟ್ ನಲ್ಲಿ ಮಲಗಿದ್ದಾಗಲೇ ಅವರಿಗೆ ತೊಂದರೆ ನೀಡೋದು ಬೇಡವೆಂದು ಅವರ ಮಲಗಿದ್ದಂತೆಯೇ ಹಾಡೊಂದರ ಚಿತ್ರೀಕರಣವನ್ನು ರವಿಚಂದ್ರನ್ ಅವರು ಮಾಡಿಕೊಂಡಿದ್ದರಂತೆ..
ಅಷ್ಟು ಬ್ಯುಸಿ ಇದ್ದ ನಟಿಯ ದಾಖಲೆಯನ್ನು ಸ್ಯಾಂಡಲ್ವುಡ್ ನಲ್ಲಿ ಯಾರೂ ಸಹ ಮುರಿಯಲು ಸಾಧ್ಯವಾಗಿಲ್ಲ.. ಇನ್ನು ಸಂಭಾವನೆ ವಿಚಾರವಾಗಿಯೂ ಕಳೆದ ಐದತ್ತು ವರ್ಷಗಳ ವರೆಗೂ ಅವರದ್ದೇ ಅತಿ ಹೆಚ್ಚು ಸಂಭಾವನೆಯಾಗಿತ್ತು.. ಇನ್ನು ಇಷ್ಟು ಹೆಸರು ಮಾಡಿದ್ದ ನಟಿ ಕಳೆದ ಇಪ್ಪತ್ತು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ವರ್ಷಗಳ ಹಿಂದೆ ನಿರ್ಮಾಪಕ ರಾಮು ಅವರನ್ನು ಕೈ ಹಿಡಿದಿದ್ದರು.. ಇವರಿಗೆ ಇಬ್ಬರು ಮಕ್ಕಳಿದ್ದು ಮಾಲಾಶ್ರೀ ಅವರಿಗೆ ಯಾವುದೇ ಕೊರತೆ ಆಗದಂತೆ ರಾಮು ಅವರು ನೋಡಿಕೊಂಡಿದ್ದರು.. ಆದರೆ ಪರಸ್ಪರ ಅಷ್ಟೊಂದು ಪ್ರೀತಿಸುತ್ತಿದ್ದ ಜೋಡಿಯ ನೋಡಿ ವಿಧಿಗೂ
ಅಸೂಹೆಯಾಯಿತೋ ಏನೋ.. ಎಂಟು ತಿಂಗಳ ಹಿಂದೆ ಕೊರೊನಾ ಕಾರಣದಿಂದ ರಾಮು ಅವರು ಇಹಲೋಕ ತ್ಯಜಿಸಿದರು.. ಪ್ರತಿಯೊಂದಕ್ಕೂ ರಾಮು ಅವರ ಮೇಲೆ ಅವಲಂಭಿತವಾಗಿದ್ದ ಕುಟುಂಬ ರಾಮು ಅವರ ಅಕಾಲಿಕ ಅಗಲಿಕೆಯಿಂದ ದಿಕ್ಕು ತೋಚದಂತಾಯಿತು..
ಹೌದು ರಾಮು ಅವರು ಅತಿ ಚಿಕ್ಕ ವಯಸ್ಸಿಗೆ ತಮ್ಮ ಇಪ್ಪತ್ತೊಂದನೇ ವಯಸ್ಸಿಗೇ ಸ್ಯಾಂಡಲ್ವುಡ್ ನಲ್ಲಿ ನಿರ್ಮಾಪಕರಾಗಿ ಕಾಲಿಟ್ಟವರು.. ಕೋಟಿ ರಾಮು ಎಂದೇ ಪ್ರಖ್ಯಾತಿ ಪಡೆದರು.. ಹಣದ ಬಗ್ಗೆ ಯೋಚಿಸದೇ ಸಿನಿಮಾಗೆ
ಏನು ಬೇಕೋ ಅದನ್ನೆಲ್ಲಾ ಒದಗಿಸಿ ರಾಯಲ್ ಆಗಿ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು.. ವಜ್ರೇಶ್ವರಿ ಕಂಬೈನ್ಸ್.. ಈಶ್ವರಿ ಪ್ರೊಡಕ್ಷನ್ಸ್ ಹೀಗೆ ಆಗಿನ ಕಾಲದಲ್ಲಿ ಹೆಸರು ಹಾಗೂ ಗೌರವ ಸಂಪಾದಿಸಿದ್ದ ಕೆಲವೇ ನಿರ್ಮಾಣ
ಸಂಸ್ಥೆಗಳಲ್ಲಿ ರಾಮು ಅವರ ನಿರ್ಮಾಣ ಸಂಸ್ಥೆಯೂ ಒಂದಾಗಿತ್ತು.. ಇನ್ನು ರಾಮು ಅವರು ಮೊದಲು ನಿರ್ಮಾಣ ಮಾಡಿದ್ದ ಸಿನಿಮಾ ನಟ ದೇವರಾಜ್ ಅವರದ್ದಾದರೆ ಇತ್ತ ಕೊನೆಯ ಸಿನಿಮಾ ಅವರ ಮಗ ಪ್ರಜ್ವಲ್ ದೇವರಾಜ್ ಅವರ ಅರ್ಜುನ್ ಗೌಡ ಆಗಿದೆ..
ಹೌದು ಚಿತ್ರೀಮರಣವೆಲ್ಲಾ ಮುಗಿದು ಬಿಡುಗಡೆಗೆ ಸಿನಿಮಾ ಸಜ್ಜಾಗಿತ್ತು. ಆದರೆ ಕೊರೊನಾದಿಂದ ರಾಮು ಅವರು ಇಹಲೋಕ ತ್ಯಜಿಸಿದರು.. ಆನಂತರ ಆ ಸಿನಿಮಾ ಕತೆ ಅಷ್ಟಕ್ಕೆ ಮುಗಿಯಿತು ಎಂದುಕೊಳ್ಳಲಾಗಿತ್ತು.. ಆದರೀಗ ಮಾಲಾಶ್ರೀ ಅವರು ಮಹತ್ವದ ನಿರ್ಧಾರ ಮಾಡಿದ್ದಾರೆ.. ಪತಿ ರಾಮು ಅವರ ಕನಸಿನ ಸಿನಿಮಾ ಅರ್ಜುನ್ ಗೌಡ ಸಿನಿಮಾವನ್ನು ಇದೀಗ ಮಾಲಾಶ್ರೀ ಅವರು ಜವಾಬ್ದಾರಿ ತೆಗೆದುಕೊಂಡು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ..
ಹೌದು ಡಿಸೆಂಬರ್ ಮೂವತ್ತೊಂದರಂದು ಅರ್ಜುನ್ ಗೌಡ ಸಿನಿಮಾ ಬಿಡುಗಡೆಗೆ ಎಲ್ಲಾ ತಯಾರಿಯಾಗಿದ್ದು ರಾಮು ಅವರ ಕನಸನ್ನು ಇದೀಗ ಎಂಟು ತಿಂಗಳ ಬಳಿಕ ಮಾಲಾಶ್ರೀ ಅವರು ನೆರವೇರಿಸುತ್ತಿದ್ದಾರೆ.. ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ರಾಮು ಅವರಂತೆಯೇ ಸ್ಯಾಂಡಲ್ವುಡ್ ನಲ್ಲಿ
ನಿರ್ಮಾಪಕಿಯಾಗಿ ಗುರುತಿಸಿಕೊಂಡು ರಾಮು ನಿರ್ಮಾಣ ಸಂಸ್ಥೆಯನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಒಟ್ಟಿನಲ್ಲಿ ನೋವಿನ ಜೊತೆಯೇ ವಾಸ್ತವದ ಜೀವನ ಅನಿವಾರ್ಯವಾಗಿದ್ದು ವೃತ್ತಿ ಬದುಕಿನ ಹೊಸ ಆರಂಭ ಮಾಡುತ್ತಿರುವ ಮಾಲಾಶ್ರೀ ಅವರಿಗೆ ಶುಭವಾಗಲಿ.