ಕಳೆದ ವಾರವಷ್ಟೇ ಫೇಮಸ್ ಆಗಿದ್ದ ಆನಂದ್ ಮಗಳು.. ಈ ವಾರ ಮಾಡಿದ ಕೆಲಸ ನೋಡಿ.
ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ತಂದೆ ತಾಯಿಯೇ ಮೊದಲ ಗುರುಗಳು ಅನ್ನೋ ಮಾತು ಅಕ್ಷರಶಃ ಸತ್ಯ.. ತಂದೆ ತಾಯಿ ಒಳ್ಳೆಯದನ್ನು ಕಲಿಸಿದರೆ ಮಕ್ಕಳು ಸಹ ಒಳ್ಳೆಯ ದಾರಿಯಲ್ಲಿ ನಡೆಯುತ್ತಾರೆ.. ಬೆಳೆಯುವ ಸಿರಿ
ಮೊಳಕೆಯಲ್ಲಿ ಅನ್ನುವ ಹಾಗೆ ಚಿಕ್ಕ ವಯಸ್ಸಿನಲ್ಲಿ ಹಾಕುವ ಅಡಿಪಾಯ ಬಹಳ ಮುಖ್ಯವಾಗಿರುತ್ತದೆ.. ಇನ್ನು ವಿಚಾರಕ್ಕೆ ಬರುವುದಾದರೆ ಕಳೆದ ವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾದ ನನ್ನಮ್ಮ ಸೂಪರ್ ಸ್ಟಾರ್ ಶೋ ಸಾಕಷ್ಟು ಸದ್ದು
ಮಾಡಿತ್ತು.. ಹೌದು ತಾಯಂದಿದನ್ನು ಸಂಭ್ರಮಿಸುವ ಶೋ ನನ್ನಮ್ಮ ಸೂಪರ್ ಸ್ಟಾರ್ ನ ತಾಯಿಮಕ್ಕಳ ಜೋಡಿಗಳು ಮೊದಲ ವಾರದಲ್ಲೀ ಯೇ ಪ್ರೇಕ್ಷಕರನ್ನು ಮೋಡಿ ಮಾಡಿತ್ತು..
ಎಲ್ಲಾ ತಾಯಿ ಮಕ್ಕಳು ಸಹ ಸಿಕ್ಕಾಪಟ್ಟೆ ಎನರ್ಜಿ ಇಂದ ಬಂದಿದ್ದು ಶೋ ಒಂದು ರೀತಿ ಮಕ್ಕಳು ಮಾತ್ರವಲ್ಲ ಎಲ್ಲಾ ವಯಸ್ಕರು ಸಹ ಮೆಚ್ಚಿಕೊಳ್ಳುವಂತಿತ್ತು.. ಅದರಲ್ಲೂ ಶೋನ ಪ್ರಮುಖ ಆಕರ್ಷಣೆಯಾಗಿದ್ದು ಮಾಸ್ಟರ್ ಆನಂದ್
ಮಗಳು.. ಹೌದು ವಂಶಿಕಾ ಅಂಜನಿ ಕಶ್ಯಪ ಎಂಟ್ರಿ ಕೊಟ್ಟ ಪ್ರೋಮೋ ಒಂದೇ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಸಾಮಾಜಿಕ ಜಾಲತಾಣದಲ್ಲಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮುದ್ದು ಮುದ್ದಾಗಿ ಅಪ್ಪ ಅಮ್ಮ ಮಾಡುವ ಕೆಲಸದ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಬಗ್ಗೆ ಪಟಪಟ ಎಂದು ಹುರುಳಿ ಕಾಳು ಸಿಡಿಯುವಂತೆ ಸಿಡಿದಿದ್ದ ವಂಶಿಕಾ ಅಂಜನಿ ಕಶ್ಯಪಳಿಗೆ ಅವಳದ್ದೇ ಆದ ಅಭಿಮಾನಿ ಬಳಗ ಹುಟ್ಟಿಕೊಂಡಿರೋದಂತೂ ಸತ್ಯ.. ಟಿವಿಲೂ ಅಪ್ಪನೇ ಮಾತಾಡ್ತಾರೆ ಮನೇಲು ಅಪ್ಪಾನೆ ಮಾತಾಡ್ತಾರೆ..
ನಾವ್ ಯಾವಾಗ ಮಾತಾಡದು ಅಂತ.. ನಾವ್ ಮಾತಾಡ್ಳೇ ಬಾರದ.. ಅಪ್ಪನ ಫ್ರೆಂಡ್ಸ್ ಬರ್ಲಿ ಅಮ್ಮನ ಫ್ರೆಂಡ್ಸ್ ಬರ್ಲಿ.. ವಂಶಿ ಎಬಿಸಿಡಿ ಹೇಳು.. ವಂಶಿ ಡ್ಯಾನ್ಸ್ ಮಾಡು ಅಂತಾರೆ.. ನನ್ನ ಫ್ರೆಂಡ್ಸ್ ಬಂದರೆ ಅವರು ಡ್ಯಾನ್ಸ್ ಮಾಡ್ತಾರಾ ಅವತು
ಡೈಲಾಗ್ ಹೇಳ್ತಾರಾ ಅಂತ ಚಿಟಪಟ ಎಂದು ಜನರ ಮನ ಗೆದ್ದಿದ್ದಳು ವಂಶಿಕಾ.. ಇನ್ನು ಈ ವಾರ ವಂಶಿ ನಡೆದುಕೊಂಡ ರೀತಿ ನಿಜಕ್ಕೂ ಅವರ ತಂದೆ ಮಾಸ್ಟರ್ ಆನಂದ್ ಹಾಗೂ ತಾಯಿ ಯಶಸ್ವಿನಿ ಅವರಿಗೆ ಹ್ಯಾಟ್ಸ್ ಆಫ್ ಹೇಳುವಂತಿತ್ತು.
ನಿಜಕ್ಕೂ ಸಣ್ಣ ಮಕ್ಕಳಿಗೆ ಸಂಸ್ಕಾರ ಹಾಗೂ ಈ ರೀತಿಯ ಒಳ್ಳೆಯ ಗುಣಗಳನ್ನು ಕಲಿಸುವುದು ನಿಜಕ್ಕೂ ತಂದೆ ತಾಯಿಯ ಕರ್ತವ್ಯ.. ಆ ಕರ್ತವ್ಯವನ್ನು ಆನಂದ್ ಹಾಗೂ ಯಶಸ್ವಿನಿ ಅವರು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆನ್ನಬಹುದು..
ಹೌದು ಈ ವಾರದ ಸಂಚಿಕೆಯಲ್ಲಿ ಎರೆಡೆರೆಡು ಜೋಡಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗುತಿತ್ತು.. ಗೆದ್ದವರಿಗೆ ಬಹುಮಾನವನ್ನೂ ಸಹ ನೀಡಲಾಗುತಿತ್ತು.. ಅದೇ ರೀತಿ ವಂಶಿ ಹಾಗೂ ತಾಯಿ ಅವರ ಎದುರಾಗಿ ಆರ್ಯ ಹಾಗೂ
ಆಕೆಯ ತಾಯಿ ಸ್ಪರ್ಧೆಗಿಳಿದರು.. ಸ್ಪರ್ಧೆಯಲ್ಲಿ ವಂಶಿಯ ತಾಯಿಗೆ ಸರ್ಪ್ರೈಸ್ ಒಂದು ಸಿಕ್ಕಿ ಚಾಕೋಲೇಟ್ ಬಾಕ್ಸ್ ದೊರಕಿತು.. ಇದನ್ನು ವಂಶಿ ಕುಣಿದು ಸಂಭ್ರಮಿಸಿದಳು..ಆದರೆ ಆ ತಕ್ಷಣ ಎದುರಿಗಿದ್ದ ಆರ್ಯ
ಬಹಳ ಸಪ್ಪೆ ಮುಖ ಮಾಡಿಕೊಂಡು ತನಗೆ ಚಾಕೊಲೇಟ್ ಸಿಗದ ಕಾರಣ ಬೇಸರ ಪಟ್ಟುಕೊಂಡಳು.. ಅದನ್ನು ನೋಡಿದ ವಂಶಿ ನಡೆದುಕೊಂಡ ರೀತಿ ನಿಜಕ್ಕೂ ಆ ಪುಟ್ಟಕಂದನ ದೊಡ್ಡ ಗುಣ ನೋಡಿ ಮನತುಂಬಿ ಬಂತು.
ಹೌದು ಆರ್ಯ ಬೇಸರ ಪಟ್ಟುಕೊಂಡಿದ್ದನ್ನು ನೋಡಿದ ತಕ್ಷಣ ಹಿಂದೆ ಮುಂದೆ ಏನನ್ನೂ ಯೋಚಿಸದೇ ಆರ್ಯ ಬಳಿ ಬಂದು ಈ ಚಾಕೋಲೇಟ್ ಬಾಕ್ಸ್ ನನಗೆ ಮಾತ್ರವಲ್ಲ.. ನಿನಗೆ ನನಗೆ ಇಬ್ಬರಿಗೂ ಸೇರಿಸಿ ಕೊಟ್ಟಿರೋದು.. ಇಬ್ಬರಿಗೂ
ಅಂತಾನೆ ನಮ್ಮಮ್ಮ ಗೆದ್ದಿದ್ದು.. ಬೇಜಾರ್ ಆಗ್ಬೇಡ.. ತಗೋ ನೀನೆ ಇಟ್ಕೋ ಅಂತ ಚಾಕೋಲೇಟ್ ಬಾಕ್ಸ್ ಅನ್ನು ಆರ್ಯಳಿಗೆ ಕೊಟ್ಟಿಯೇ ಬಿಟ್ಟಳು. ನಿಜಕ್ಕೂ ಆ ಕ್ಷಣ ವಂಶಿ ಸ್ಪಂದಿಸಿದ ರೀತಿ ನೋಡಿ ಅಲ್ಲಿದ್ದ ಎಲ್ಲರೂ ಸಹ ಸಂತೋಷ ಪಟ್ಟರು.. ಪುಟ್ಟ ಕಂದನಿಗೆ ಇಂತಹ ದೊಡ್ಡ ಗುಣಗಳನ್ನು
ಕಲಿಸಿರುವ ವಂಶಿ ತಂದೆ ಆನಂದ್ ಹಾಗೂ ತಾಯಿ ಯಶಸ್ವಿನಿ ಅವರಿಗೆ ಅಭಿನಂದನೆಗಳು.. ವಂಶಿ ವೇದಿಕೆ ಮೇಲೆ ಪಟ ಪಟ ಅನ್ನೋದನು ನೋಡಿದರೆ ನಿಜಕ್ಕೂ ಗೌರಿ ಗಣೇಶ ಸಿನಿಮಾದ ಎ. ಗಣೇಶ್ ಎಂ. ಗಣೇಶ್ ಹಾಗೂ ಚಂದ್ರಮೌಳಿಯನ್ನು ನೆನಪಿಸುತ್ತಿರೋದಂತೂ ಸತ್ಯ.. ಶುಭವಾಗಲಿ ದೊಡ್ಡ ಗುಣವುಳ್ಳ ಪುಟ್ಟ ವಂಶಿಗೆ..