NEWS

ದರ್ಶನ್ ಅವರು ಹುಟ್ಟುಹಬ್ಬ ಆಚರಿಸಿದ ಅವರ ಜೀವನದ ಈ ವಿಶೇಷ ವ್ಯಕ್ತಿ ಯಾರು ಗೊತ್ತಾ.. ನಿಜಕ್ಕೂ ಶಾಕ್ ಆಗ್ತೀರಾ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತೆರೆ ಮೇಲೆ ಸೂಪರ್ ಸ್ಟಾರ್ ಇರಬಹುದು ದೊಡ್ಡ ಅಭಿಮಾನಿ ಬಳಗವನ್ನು ಅವರು ಹೊಂದಿರಬಹುದು.. ಆದರೆ ನಿಜ ಜೀವನದಲ್ಲಿ ದರ್ಶನ್ ಅವರಂತಹ ಸ್ನೇಹಜೀವಿಯನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.. ದರ್ಶನ್ ಅವರನ್ನು ಸಧ್ಯ

ಮಾಧ್ಯಮಗಳು ಬ್ಯಾನ್ ಮಾಡಿದ್ದೇವೆ ಎಂದುಕೊಂಡು ತಮ್ಮ ತಮ್ಮ ಸ್ಥಾನವನ್ನು ತಾವುಗಖೇ ತೋರಿಕೊಂಡಿದೆ.. ಆದರೆ ದರ್ಶನ್ ಅವರ ವಿಚಾರ ಸುದ್ದಿಯಾಗಲು ಮಾಧ್ಯಮಗಳು ಅವಶ್ಯಕತೆಯೇ ಇಲ್ಲ ಎಂಬುದು ಅಷ್ಟೇ ಸತ್ಯ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗುವ

ದರ್ಶನ್ ಅವರು ಸಧ್ಯ ಇಂದು ವಿಶೇಷ ವ್ಯಕ್ತಿಯೊಬ್ಬರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.. ಅದರಲ್ಲಿಯೂ ಇವರಿಗೂ ದರ್ಶನ್ ಅವರಿಗೂ ದಶಕಗಳ ಹಿಂದೆ ಇದ್ದ ಸಂಬಂಧ ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುವುದು..

ಹೌದು ದರ್ಶನ್ ಅವರು ಸ್ನೇಹಿತರಿಗೆ ಎಷ್ಟು ಪ್ರಾಮುಖ್ಯತೆ ನೀಡ್ತಾರೆ ಅನ್ನೋದು ಎಲ್ಲರಿಗೂ ತಿಳಿದೇ ಇದೆ.. ಬಿಡುವಿನ ಸಾಕಷ್ಟು ಸಮಯವನ್ನು ಸ್ನೇಹಿತರೊಟ್ಟಿಗೆ ಕಳೆಯುವ ದರ್ಶನ್ ಅವರು ಮೈಸೂರಿನ ತಮ್ಮ ತೋಟದ ಮನೆಯಲ್ಲಿ ಆಗಾಗ ಸ್ನೇಹಿತರೊಟ್ಟಿಗೆ ಖುದ್ದು ಅವರೇ ನಾನ್ ವೆಜ್

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಡುಗೆ ಮಾಡಿ ಪಾರ್ಟಿ ಮಾಡೋದು ಉಂಟು.. ಇನ್ನು ಸಿನಿಮಾ ಕೆಲಸಗಳಲ್ಲಿ‌ ಕೊಂಛ ಬಿಡುವು ಸಿಕ್ಕರೂ ಮೈಸೂರಿನಲ್ಲಿ ಹಾಜರಿರುವ ದರ್ಶನ್ ಅವರನ್ನು ಸ್ನೇಹಿತರು ಭೇಟಿಯಾಗಬೇಕೆಂದರೆ ಮೊದಲು ಹೋಗುವುದೇ ಮೈಸೂರಿನ ಫಾರ್ಮ್ ಹೌಸಿಗೆ.. ಇನ್ನು ಇಂದು ದರ್ಶನ್

ಅವರು ಖುದ್ದು ಅವರ ಜೀವನದ ವಿಶೇಷ ವ್ಯಕ್ತಿಯೊಬ್ಬರ ಹುಟ್ಟುಹಬ್ಬವನ್ನು ತಮ್ಮ ಫಾರ್ಮ್‌ ನಲ್ಲಿಯೇ ಆಚರಿಸಿದ್ದಾರೆ.. ಹೌದು ಅವರು ಮತ್ಯಾರೂ ಅಲ್ಲ.. ನಿರ್ಮಾಪಕಿ ಶೃತಿ ನಾಯ್ಡು ಅವರು..

ಹೌದು ಶೃತಿ ನಾಯ್ಡು ಹಾಗೂ ದರ್ಶನ್ ಅವರ ನಡುವಿನ ಬಾಂಧವ್ಯದ ವಿಚಾರ ತಿಳಿದರೆ ನಿಜಕ್ಕೂ ದರ್ಶನ್ ಅವರ ಬಗ್ಗೆ ಹೆಮ್ಮೆಯಾಗುತ್ತದೆ.. ಹೌದು ಎಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರ ಹುಟ್ಟೂರು ಮೈಸೂರು.. ಬೆಳೆದಿದ್ದೂ ಸಹ ಮೈಸೂರಿನಲ್ಲಿಯೇ.. ದಶಕಗಳ ಹಿಂದೆ ಸಿನಿಮಾ ಇಂಡಸ್ಟ್ರಿಗೆ

ಬರಲು ದರ್ಶನ್ ಅವರು ಪ್ರಯತ್ನ ಪಡುವ ಸಮಯದಲ್ಲಿ ದರ್ಶನ್ ಅವರು ತಮಗೆ ಗೊತ್ತಿದ್ದವರು ಸಿನಿಮಾ ಮಂದಿ ಏನು ಕೆಲಸ ಹೇಳಿದರೂ ಸಹ ಮಾಡುತ್ತಿದ್ದರು.. ಅಂತಹ ಸಮಯದಲ್ಲಿ ಮೈಸೂರಿನಲ್ಲಿ ವ್ಯಕ್ತಿಯೊಬ್ಬರು ಒಂದು

ಹುಡುಗಿಯ ಫೋಟೋ ಇರುವ ಕವರ್ ಒಂದನ್ನು ಕೊಟ್ಟು ಇದನ್ನು ಬೆಂಗಳೂರಿನ ಒಂದು ವಿಳಾಸಕ್ಕೆ ಹೋಗಿ ನಿರ್ಮಾಪಕರೊಬ್ಬರಿಗೆ ತಲುಪಿಸಿ ಬಾ ಎನ್ನುತ್ತಾರೆ.. ದರ್ಶನ್ ಅವರು ಸರಿ ಎಂದು ರೈಲಿನಲ್ಲಿ ಬೆಂಗಳೂರಿಗೆ ಹೋಗಿ ತಲುಪಿಸಿ ಬಂದಿರುತ್ತಾರೆ..

ಆ ಫೋಟೋ ಮತ್ಯಾರದ್ದೂ ಅಲ್ಲ ಅದು ಶೃತಿ ನಾಯ್ಡು ಅವರದ್ದೇ.. ಹೌದು ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ಶೃತಿ ನಾಯ್ಡು ಅವರೂ ಸಹ ಪ್ರಯತ್ನ ಪಡುತ್ತಿದ್ದರು.. ಶೃತಿ ನಾಯ್ಡು ಅವರು ಹುಟ್ಟುತ್ತಲೇ ಚಿನ್ನದ ಸ್ಪೂನ್ ಇಟ್ಟುಕೊಂಡು ಹುಟ್ಟಿದವರು.. ಅವರ ಬಳಿ ಆಗಲೇ

ದುಬಾರಿ ಬೆಲೆಯ ಐಶಾರಾಮಿ ಕಾರುಗಳಿದ್ದವು.. ಆ ಕಾರ್ ಗಳನ್ನು ಒಮ್ಮೆ ದರ್ಶನ್ ಅವರೂ ಸಹ ನೋಡಿ ಇಷ್ಟ ಪಟ್ಟಿದ್ದರು.. ನಂತರ ಅವರವರ ದಾರಿ ಅವರಿಗಾಯಿತು.. ಒಂದು ಕಡೆ ದರ್ಶನ್ ಅವರು ಸ್ವಂತ ಪರಿಶ್ರಮದ ಮೂಲಕ ಬೆಳೆದು ಹತ್ತಾರು ಐಶಾರಾಮಿ ಕಾರ್ ಗಳನ್ನು

ಕೊಂಡುಕೊಳ್ಳುವಷ್ಟು ಮಟ್ಟಕ್ಕೆ ಬೆಳೆದು ನಿಂತರು.. ಇತ್ತ ಶೃತಿ ನಾಯ್ಡು ಅವರೂ ಸಹ ಕಿರುತೆರೆಯಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಂಡು ಹೆಸರು ಮಾಡಿದರು.. ಆದರೆ ಇಬ್ಬರ ನಡುವಿನ ಬಾಂಧವ್ಯ ಮಾತ್ರ ಹಾಗೆಯೇ ಇತ್ತು..

ವಿಶೇಷ ಎಂದರೆ ಶೃತಿ ನಾಯ್ಡು ನಿರ್ಮಾಣದ ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯ ಒಂದು ದೊಡ್ಡ ಕಾರ್ಯಕ್ರಮವೊಂದು ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು.. ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಆಗಿದ್ದವರು ಮತ್ಯಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು..

ಹೌದು ಯಾವ ಹುಡುಗ ಒಂದು ಹುಡುಗಿ ಫೋಟೋವನ್ನು ಮೈಸೂರಿನಿಂದ ಬೆಂಗಳೂರಿಗೆ ತಲುಪಿಸುವ ಕೆಲಸ ಮಾಡಿದ್ದನೋ ಅದೇ ಹುಡುಗ ಆ ಹುಡುಗಿಯ ಧಾರಾವಾಹಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾದನು.. ಇದೇ ಅಲ್ಲವೇ ನಿಜವಾದ ಬೆಳವಣಿಗೆ

ಎಂದರೆ.. ಇದೇ ಅಲ್ಲವೇ ನಿಜವಾದ ಸಾಧನೆ ಎಂದರೆ.. ಇನ್ನು ಶೃತಿ ನಾಯ್ಡು ಅವರು ಈಗಲೂ ಸಹ ದರ್ಶನ್ ಅವರೊಟ್ಟಿಗೆ ಉತ್ತಮ ಬಾಂಧವ್ಯವನ್ನು ಒಳ್ಳೆಯ ಸ್ನೇಹವನ್ನು ಹೊಂದಿದ್ದಾರೆ..

ಅವರೂ ಸಹ ಮೈಸೂರಿನವರೇ ಆಗಿದ್ದು ಮೈಸೂರಿನಲ್ಲಿ ಹೊಟೆಲ್‌ ಒಂದನ್ನು ತೆರೆದಿದ್ದು ಆ ಹೊಟೆಲ್ ಉದ್ಘಾಟನೆಯನ್ನು ಸಹ ದರ್ಶನ್ ಅವರೇ ಮಾಡಿದ್ದರು.. ಇನ್ನು ಇಂದು ಶೃತಿ ನಾಯ್ಡು ಅವರ ಹುಟ್ಟು ಹಬ್ಬವಿದ್ದ ಕಾರಣ ದರ್ಶನ್ ಅವರು ಖುದ್ದು ಶೃತಿ ಅವರನ್ನು ಫೋನ್ ಮಾಡಿ

ಕರೆಸಿ ಹುಟ್ಟುಹಬ್ಬ ಆಚರಿಸಿ ಶುಭಾಶಯ ತಿಳಿಸಿ ಉಡುಗೊರೆ ನೀಡಿದ್ದಾರೆ.. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶೃತಿ ನಾಯ್ಡು ಅವರು ನನ್ನ ಹುಟ್ಟುಹಬ್ಬ ಈ ರೀತಿ ಶುರು ಆಯಿತು..

ಹುಟ್ಟುಹಬ್ಬವನ್ನು ಮತ್ತಷ್ಟು ವಿಶೇಷವನ್ನಾಗಿಸಿದ್ದಕ್ಕೆ ಧನ್ಯವಾದಗಳು ನನ್ನ ಸೂಪರ್ ಸ್ಟಾರ್ ಫ್ರೆಂಡ್ ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.. ಹೌದು ಮನುಷ್ಯ ಎಷ್ಟೇ ಬೆಳೆದರು ಆತ ಬೆಳೆದು ಬಂದ ಹಾದಿ ಆ ಹಾದಿಯಲ್ಲಿ

ಸಿಕ್ಕ ಸ್ನೇಹಿತರನ್ನು ಮರೆಯಬಾರದು ಎಂಬುದಕ್ಕೆ ದರ್ಶನ್ ಅವರೇ ದೊಡ್ಡ ಉದಾಹರಣೆ.. ಅವರ ಈ ದೊಡ್ಡಗುಣ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ ಎಂದರೂ ತಪ್ಪಾಗಲಾರದು..

Related Articles

Leave a Reply

Your email address will not be published. Required fields are marked *

Back to top button