ಮೊದಲ ಬಾರಿಗೆ ಅಶ್ವಿನಿ ಅವರ ಜೀವನದ ಕುರಿತು ಮಾತನಾಡಿದ ಶಿವಣ್ಣ.. ಅವರ ಮಧುರವಾದ ಮಾತುಗಳನ್ನು ಕೇಳಿ..
ಪುನೀತ್ ರಾಜ್ ಕುಮಾರ್ ಅವರು ಅಗಲಿ ಅದಾಗಲೇ ನಲವತ್ತು ದಿನಗಳು ಕಳೆದಿವೆ. ಆದರೆ ಹಿರಿಯರು ಹೇಳುವಂತೆ ಪುತ್ರ ಶೋಕ ನಿರಂತರ ಎನ್ನುವ ಮಾತಿನಂತೆ ನಾಡಿನ ಮನೆ ಮಗನೇ ಆಗಿದ್ದ ಪುನೀತ್ ಅವರ ಅಕಾಲಿಕ ಅಗಲಿಕೆ ನಿರಂತರ ನೋವನ್ನು ನೀಡುತ್ತಿರುವುದಂತೂ ಸತ್ಯ..
ಅದರಲ್ಲೂ ಆ ಕುಟುಂಬ ಹಾಗೂ ಅಶ್ವಿನಿ ಅವರ ನೋವು ಮಾತಿನಲ್ಲಿ ಹೇಳಲಾಗದು.. ಆದರೆ ಈ ನಡುವೆ ಶಿವರಾಜ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಅಶ್ವಿನಿ ಅವರ ಜೀವನದ ಕುರಿತು ಮನಬಿಚ್ಚಿ ಮಾತನಾಡಿದ್ದು ದೊಡ್ಡತನ ತೋರಿದ್ದಾರೆ.. ಹೌದು ದೊಡ್ಮನೆ ಕುಟುಂಬ
ಮೊದಲಿನಿಂದಲೂ ಪ್ರಬುದ್ಧರಾಗಿ ನಡೆದುಕೊಂಡೇ ಬರುತ್ತಿದ್ದು ನಿಜಕ್ಕೂ ನೋಡಿ ಕಲಿಯುವಂತಿದೆ.. ಈಗಲೂ ಸಹ ಅಶ್ವಿನಿ ಅವರ ವಿಚಾರ ಮಾತನಾಡುತ್ತಾ ಶಿವಣ್ಣ ಆಡಿರುವ ಮಾತುಗಳು ನಿಜಕ್ಕೂ ಅವರ ದೊಡ್ಡಗುಣ ತೋರುತ್ತದೆ..
ಹೌದು ಕಳೆದ ಸಾಕಷ್ಟು ವರ್ಷಗಳಿಂದ ಪುನೀತ್ ಅವರು ಕಂಡಿದ್ದ ಕನಸೀಗ ಅಶ್ವಿನಿ ಅವರ ಮೂಲಕ ನನಸಾಗುತ್ತಿದೆ.. ಹೌದು ನಿನ್ನೆಯಷ್ಟೇ ಪುನೀತ್ ಅವರ ಕನಸಿನ ಗಂಧದಗುಡಿ ಚಿತ್ರದ ಟೈಟಲ್ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿದೆ..
ಹಿಂದೆಂದೂ ನೋಡಿರದ ಕರ್ನಾಟಕದ ದರ್ಶನವನ್ನು ಮೈ ರೋಮಗಳು ಎದ್ದು ನಿಲ್ಲುವ ರೀತಿಯಲ್ಲಿ ಪುನೀತ್ ಅವರ ಕಣ್ಣುಗಳಲ್ಲಿ ತೋರಲಾಗಿದೆ.. ಇನ್ನೂ ಈ ಟೀಸರ್ ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣ ಪಡೆದದ್ದಷ್ಟೇ ಅಲ್ಲದೇ ಮೂರು ಲಕ್ಷಕ್ಕೂ ಅಧಿಕ ಲೈಕ್ಸ್ ದೊರೆತಿದೆ.
ಕರ್ನಾಟಕದ ಕುರಿತ ಈ ಸಿನಿಮಾ ಹೊಸ ಇತಿಹಾಸ ನಿರ್ಮಾಣ ಮಾಡುವುದು ಖಚಿತವೆಂದು ಟೀಸರ್ ತೋರುತ್ತಿದ್ದು ಇದನ್ನು ನೋಡಿದ ಅಭಿಮಾನಿಗಳು ಒಂದು ಕಡೆ ಸಂತೋಷ ಪಟ್ಟರೆ ಮತ್ತೊಂದು ಕಡೆ ಅಪ್ಪು ಇರಬೇಕೆನ್ನುವ ದುಃಖ ಇದ್ದೇ ಇದೆ..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಈ ಕುರಿತು ಜನ ಸಾಮಾನ್ಯರು ಮಾತ್ರವಲ್ಲ ಎಲ್ಲಾ ಸ್ಟಾರ್ ಗಳು ಸಹ ಪ್ರತಿಕ್ರಿಯೆ ನೀಡಿದ್ದು ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಗಂಧದಗುಡಿಯ ಟೀಸರ್ ಅನ್ನು ಹಂಚಿಕೊಂಡಿದ್ದಾರೆ.. ಯಶ್ ದರ್ಶನ್
ಗಣೇಶ್ ನಿಖಿಲ್ ಉಪೇಂದ್ರ ರವಿಚಂದ್ರನ್ ಸುದೀಪ್ ಹೀಗೆ ಪ್ರತಿಯೊಬ್ಬ ಕಲಾವಿದರೂ ಸಹ ಟೀಸರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಅಪ್ಪು ಅವರ ಕನಸಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ.. ಇನ್ನು ಈ ಬಗ್ಗೆ ಮಾತನಾಡಿರುವ ಶಿವಣ್ಣ ಅವರು ಅಶ್ವಿನಿ ಅವರ ಜೀವನದ
ಕುರಿತು ಸಹ ಮಾತನಾಡಿದ್ದಾರೆ.. ಹೌದು ಅಶ್ವಿನಿ ಅವರು ಕಳೆದ ಆರು ವರ್ಷಗಳ ಹಿಂದಿನಿಂದಲೇ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಕಾಲಿಟ್ಟಿದ್ದವರು.. ಆದರೆ ಎಲ್ಲಿಯೂ ಸಹ ಇದನ್ನು ಪ್ರಚಾರ ಪಡೆಯದೇ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದವರು..
ಧಾರಾವಾಹಿಯ ನಿರ್ಮಾಣದಿಂದ ಶುರು ಮಾಡಿದ ಅಶ್ವಿನಿ ಅವರು ಇಂದು ಸಾಕಷ್ಟು ಸಿನಿಮಾಗಳ ನಿರ್ಮಾಣದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ.. ಅಶ್ವಿನಿ ಅವರನ್ನು ಇದಕ್ಕೆಲ್ಲಾ ಪ್ರೋತ್ಸಾಹ ನೀಡಿದವರು ತಮ್ಮ ಪತಿ ಅಪ್ಪು.. ಬಹುಶಃ ಅವರಿಲ್ಲದ ನಂತರ ಜೀವನದಲ್ಲಿ ಮತ್ತಷ್ಟು ಜನರಿಗೆ
ಜೀವನಕ್ಕೆ ಆಧಾರವಾಗುವ ಮೂಲಕ ಈ ರೀತಿ ನೋವು ಮರೆಯಲೆಂದೇ ಮೊದಲೇ ತಮ್ಮ ಪತ್ನಿಯನ್ನು ಈ ರೀತಿ ತಯಾರಿ ಮಾಡಿದಂತೆ ಅನಿಸುತ್ತಿದೆ.. ಈಗ ಪುನೀತ್ ಅವರು ತೋರಿದ ಮಾರ್ಗದಲ್ಲಿ ಅಶ್ವಿನಿ ಅವರು ನಡೆಯುತ್ತಿದ್ದಾರೆ.. ಸಿನಿಮಾಗಳ ನಿರ್ಮಾಣ ಹಾಗೂ ಅಪ್ಪು ಕನಸಿನ ಸಿನಿಮಾ
ಗಂಧದಗುಡಿ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿರುವ ಅಶ್ವಿನಿ ಅವರು ನೋವನ್ನು ಮರೆಯಲು ಸಾಧ್ಯವಾಗದಿದ್ದರೂ ಒಂದು ಕೆಲಸದಲ್ಲಿ ಬ್ಯುಸಿ ಆದಾಗ ಆ ಕೆಲಸವೇ ನೋವನ್ನು ಕಡಿಮೆ ಮಾಡುತ್ತದೆ..
ಇನ್ನು ಇತ್ತ ಅಶ್ವಿನಿ ಅವರ ಜೀವನದ ಕುರಿತು ಮಾತನಾಡಿರುವ ಶಿವಣ್ಣ.. “ನಾವು ಅಶ್ವಿನಿ ಅವರ ಜೊತೆ ಯಾವಾಗಲೂ ಇರ್ತೀವಿ.. ನಿಜ ಹೇಳಬೇಕು ಅಂದ್ರೆ ಅಶ್ವಿನಿಗೆ ಆ ಒಂದು ಪವರ್ ಇದೆ.. ಅಶ್ವಿನಿ ಮದುವೆ ಆಗಿರೋದೆ ಪವರ್ ಸ್ಟಾರ್ ನ.. ಆ ಪವರ್ ನ ಕೊಟ್ಟಿದ್ದಾರೆ ಅವರಿಗೆ..
ನಾನ್ ಯಾವತ್ತು ಅಶ್ವಿನಿ ಅಪ್ಪುನ ಗಂಡ ಹೆಂಡತಿ ರೀತಿ ನೋಡಿಲ್ಲ.. ಅವರು ಯಾವಾಗಲೂ ಫ್ರೆಂಡ್ಸ್ ರೀತಿಯೇ ಇದ್ದದ್ದು.. ಅವರು ಯಾವಾಗಿನಿಂದ ಪ್ರೀತಿಸುತ್ತಿದ್ದರೋ ನಾನು ಆಗಿನಿಂದ ನೋಡಿದ್ದೀನೆ.. ಸ್ನೇಹಿತರ ಹಾಗೆ ಇದ್ರು.. ನೂರಕ್ಕೆ ನೂರರಷ್ಟು ಅವರಲ್ಲಿ ಆ ಅನ್ಯೂನ್ಯತೆ ಇತ್ತು..
ಅವರು ಕಂಡಿತ ಮಾಡ್ತಾರೆ.. ನಾನ್ ಮೊನ್ನೆ ಇದೇ ವಿಚಾರ ಅಶ್ವಿನಿ ಜೊತೆ ಮಾತನಾಡಿದೆ.. ನಾವ್ ಇರ್ತೀವಿ ಅಶ್ವಿನಿ ನೀನ್ ಮಾಡು ಅಂದೆ.. ನನಗೊತ್ತು ಶಿವಣ್ಣ.. ನಿಮಗೆ ಹೇಳಬೇಕು ಅನ್ನಿಸ್ತು..
ನಾನು ಆಫೀಸಿಗೆ ಹೋಗ್ಬೇಕು ಅಂದುಕೊಂಡಿದ್ದೀನಿ ಎಂದು ಕೇಳಿದರು.. ನನಗೂ ನೋವಾಯ್ತು.. ಅವರಿಗೂ ನೋವಾಯ್ತು.. ಅವರು ನಾನು ಇಬ್ಬರೂ ಸಹ ಕಣ್ಣೀರಿಟ್ವಿ.. ನಾನ್ ಅವಾಗ್ಲೂ ಹೇಳಿದೆ.. ನಾವ್ ಯಾವಾಗ್ಲು
ಜೊತೆಲಿರ್ತೀವಿ ಅಶ್ವಿನಿ ಏನೇ ಇದ್ದರೂ ಹೇಳು ಅಂದ್ವಿ.. ಆದರೆ ನಮ್ ಸಪೋರ್ಟ್ ಬೇಕಾಗದೇ ಇರಬಹುದು ಅಶ್ವಿನಿಗೆ ನನಗೆ ಗೊತ್ತು ನನ್ನ ತಮ್ಮ ಎಲ್ಲವನ್ನೂ ಮಾಡಿದ್ದಾನೆ.. ಆದರೆ ಮೋರಲಿ ಸಪೋರ್ಟ್ ಆಗಿ ನಾವ್ ಯಾವಾಗಲೂ ಇರ್ತೀವಿ.. ಇಲ್ಲ ಶಿವಣ್ಣ ನೀವ್
ಯಾವಾಗಲೂ ಜೊತೆಲಿ ಇರ್ತೀರಾ ಅಂತ ಗೊತ್ತು ಎಂದು ಅಶ್ವಿನಿ ಅವರು ಹೇಳಿದ್ರು.. ಯಾವತ್ತಿದ್ರೂ ಅವನು ನನ್ನ ತಮ್ಮ.. ನಾವ್ ಯಾವತ್ತೂ ಅಶ್ವಿನಿ ಅವರನ್ನ ಬಿಟ್ಟು ಕೊಡೋದಿಲ್ಲ.. ಎಂದು ಶಿವಣ್ಣ ಅಶ್ವಿನಿ ಅವರ ಬಗ್ಗೆ ತಿಳಿಸಿದರು..