ASTROLOGY

ಕಾಲ ಭೈರವ ದೇವರಿಗೆ: ಅಪ್ಪಿ ತಪ್ಪಿಯೂ ಈ ತಪ್ಪುಗಳು ನಿಮ್ಮಿಂದಾಗದಿರಲಿ..!

ಕಾಲ ಭೈರವ ದೇವರಿಗೆ: ಅಪ್ಪಿ ತಪ್ಪಿಯೂ ಈ ತಪ್ಪುಗಳು ನಿಮ್ಮಿಂದಾಗದಿರಲಿ..!

ಮಾನವಕುಲಕ್ಕೆ ಅಗತ್ಯವಾದ ಜೀವನ ಪಾಠಗಳನ್ನು ನೀಡಲು ಶಿವನು ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅಂತಹ ಒಂದು ರೂಪವೆಂದರೆ ಅದುವೇ ಕಾಲ ಭೈರವ ರೂಪ. ಮಹಾದೇವನ ಈ ರೂಪವು ಅತ್ಯಂತ ಉಗ್ರ ಮತ್ತು ಮಾರಣಾಂತಿಕವಾಗಿದೆ ಎನ್ನುವ ನಂಬಿಕೆಯಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಶಿವನು ಹಿಂದೂ ತಿಂಗಳ ಕಾರ್ತಿಕ ಮಾಸದ ಅಷ್ಟಮಿ ತಿಥಿಯಂದು ಕೃಷ್ಣ ಪಕ್ಷದಲ್ಲಿ ಜನಿಸಿದನು.

​ಈ ಎಣ್ಣೆಯಲ್ಲಿ ದೀಪ ಬೆಳಗಿ

ಕಾಲಭೈರವ ಜಯಂತಿ ದಿನದಂದು ಭಗವಾನ್ ಭೈರವನನ್ನು ಪೂಜಿಸುವುದರಿಂದ ಆ ವ್ಯಕ್ತಿಯ ಭಯವನ್ನು ತೊಡೆದುಹಾಕಲು ಮತ್ತು ಆತನ ಜೀವನದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಕಾಲಭೈರವನ ಪೂಜೆಯಲ್ಲಿ ಮೊದಲು ಸಾಸಿವೆ ಎಣ್ಣೆಯಿಂದ ತುಂಬಿದ ದೀಪ/ದಿಯಾವನ್ನು ಬೆಳಗಿಸಿ.

​ಇದನ್ನು ಶಿವಲಿಂಗಕ್ಕೆ ಅರ್ಪಿಸಿ

ಈ ದಿನದಂದು ಶಿವಲಿಂಗಕ್ಕೆ ಬಿಲ್ವಪತ್ರೆಯ ಮೇಲೆ ”ಓಂ ನಮಃ ಶಿವಾಯ” ಎಂದು ಬರೆದು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಭಗವಾನ್ ಭೈರವನು ಬಹಳ ಬೇಗನೆ ಸಂತೋಷಪಡುತ್ತಾನೆ ಮತ್ತು ನೀವು ಬೇಡಿದ ವರವನ್ನು ಅನುಗ್ರಹಿಸುತ್ತಾನೆ ಎಂದು ಹೇಳಲಾಗಿದೆ.

 

​ನಾಯಿಗೆ ಇದನ್ನು ನೀಡಿ

ಭೈರವ ದೇವನು ನಾಯಿಯ ಮೇಲೆ ಸವಾರಿ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಈ ಸಂದರ್ಭದಲ್ಲಿ, ಕಪ್ಪು ನಾಯಿಗೆ ಸಿಹಿಯಾದ ಚಪಾತಿ ಮತ್ತು ಬೆಲ್ಲ ಹಾಕಿದ ಅವಲಕ್ಕಿಯನ್ನು ತಿನ್ನಿಸುವುದರಿಂದ ನಿಮ್ಮ ಜೀವನದ ಎಲ್ಲಾ ತೊಡಕುಗಳು ನಿವಾರಣೆಯಾಗುತ್ತದೆ.

​ಇದನ್ನು ಪಠಿಸಿ

ದೆವ್ವ ಮತ್ತು ದುಷ್ಟ ಆತ್ಮಗಳ ಪ್ರಭಾವದಲ್ಲಿರುವವರು ಈ ದಿನದಂದು ‘ಓಂ ಕಾಲ ಭೈರವಾಯ ನಮಃ’ ಎನ್ನುವ ಮಂತ್ರವನ್ನು ಪಠಿಸಬೇಕು ಮತ್ತು ಕಾಲ ಭೈರವ ಅಷ್ಟಕವನ್ನು ಪಠಿಸಬೇಕು.

​ಮಾಟ ಮಂತ್ರದ ಮುಕ್ತಿಗಾಗಿ

ಮಾಟಮಂತ್ರದ ಪ್ರಭಾವವನ್ನು ತಗ್ಗಿಸಲು ಕಾಲಾಷ್ಟಮಿ ವ್ರತವನ್ನು ಆಚರಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ವ್ರತದ ಪಾರಣಕ್ಕೆ ಮೊದಲು, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ.

​ಈ ತಪ್ಪನ್ನು ಮಾಡಬೇಡಿ

ಕಾಲಭೈರವ ಜಯಂತಿಯಂದು ಸುಳ್ಳು ಹೇಳುವುದನ್ನು ತಪ್ಪಿಸಬೇಕು ಮತ್ತು ಈ ದಿನ ಯಾರಿಗೂ ತೊಂದರೆ ಕೊಡಬೇಡಿ. ಈ ದಿನ ಹಸು ಮತ್ತು ನಾಯಿಗಳು ಸೇರಿದಂತೆ ಇನ್ನಿತರ ಪ್ರಾಣಿಗಳಿಗೆ ವಿನಃ ಕಾರಣ ತೊಂದರೆಯನ್ನು ನೀಡಬೇಡಿ.

Related Articles

Leave a Reply

Your email address will not be published. Required fields are marked *

Back to top button