ತನ್ನ ಬಳಿ ಹಣವಿಲ್ಲದಾಗ ರಾಧಿಕಾ ನಡೆದುಕೊಂಡ ರೀತಿಗೆ ಇಂದು ಯಶ್ ರಾಧಿಕಾರನ್ನು ನೋಡಿಕೊಳ್ಳುತ್ತಿರುವ ರೀತಿ ನೋಡಿ..
ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ವೃತ್ತಿ ಬದುಕಿನಲ್ಲಿ ಮಾಡಿದ ಸಾಧನೆ ಸಾಕಷ್ಟು ಜನರಿಗೆ ಸ್ಪೂರ್ತಿ ನಿಜ.. ಆದರೆ ರಾಧಿಕಾ ಹಾಗೂ ಯಶ್ ಜೋಡಿ ತಮ್ಮ ವ್ಯಯಕ್ತಿಕ ಬದುಕಿನಲ್ಲಿಯೂ ಸಹ ಸ್ಪೂರ್ತಿಯಾಗಿದ್ದಾರೆ ಎಂಬುದು ಅಷ್ಟೇ ಸತ್ಯದ ಮಾತು.. ಹೌದು ಇಂದು ಯಶ್ ರಾಧಿಕಾ ಅವರ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವ.. ಈ ದಿನ ಯಶ್ ತಮ್ಮ ಹಳೆದ
ದಿನಗಳ ಬಗ್ಗೆ ನೆನೆದಿದ್ದಾರೆ.. ಅದರಲ್ಲೂ ಯಶ್ ಅವರ ಬಳಿ ಹಣವಿಲ್ಲದ ಸಮಯದಲ್ಲಿ ರಾಧಿಕಾ ಪಂಡಿತ್ ನಡೆದುಕೊಳ್ಳುತ್ತಿದ್ದ ರೀತಿ ನಿಜಕ್ಕೂ ಅವರ ಗುಣವೇನೆಂಬುದನ್ನು ತೋರುತ್ತದೆ.. ಹೌದು ಯಶ್ ಈಗ ಸ್ಯಾಂಡಲ್ವುಡ್ ಗೆ ಮಾತ್ರವಲ್ಲ ಸಂಪೂರ್ಣ ಭಾರತದ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಎಂದರೆ
ತಪ್ಪಾಗಲಾರದು. ಹೊರದೇಶಗಳಲ್ಲಿಯೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಯಶ್ ಅವರ ಸಾಧನೆ ನಿಜಕ್ಕೂ ಗ್ರೇಟ್ ಎನ್ನುವಂತದ್ದು..ಇದಕ್ಕೆ ಕಾರಣ ಮುಖ್ಯವಾಗಿ ಅವರು ಯಾವುದೇ ಸಿನಿಮಾ ಕುಟುಂಬದಿಂದ ಬಂದಿರಲಿಲ್ಲ.. ಜೊತೆಗೆ ಸಿರಿವಂತರೂ ಆಗಿರಲಿಲ್ಲ.. ಅಷ್ಟೇ ಅಲ್ಲದೇ ಶುರುವಿನಲ್ಲಿ ಅವರನ್ನು ಬೆಂಬಲಿಸಿ ನಿಲ್ಲುವವರು
ಸಹ ಯಾರೂ ಇರಲಿಲ್ಲ.. ಮಧ್ಯಮ ವರ್ಗದ ಕುಟುಂಬದಿಂದ ಬಂದ ಯಶ್ ಸಿನಿಮಾ ದಲ್ಲಿ ಹೀರೋ ಆಗುವ ಸಲುವಾಗಿ ಪಟ್ಟ ಕಷ್ಟಗಳು ಹೇಳಲು ಸಹ ಅಸಾಧ್ಯ.. ಮೊದಲು ಧಾರಾವಾಹಿಗಳಲ್ಲಿ ನಟಿಸಿ ನಂತರ ಸಿನಿಮಾದಲ್ಲಿ ನಾಲ್ಕೈದು ದೃಶ್ಯ ಮಾತ್ರವೇ ಬರುವ ಹೀರೋ ಆಗಿ ಕಾಣಿಸಿಕೊಂಡರು.. ಸಿಕ್ಕ ಪಾತ್ರ ಚಿಕ್ಕದೇ ಆದರೂ ತನ್ನ
ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶ್ ಆಗಲೂ ಈಗಲೂ ಅದೇ ನಿಷ್ಠೆಯನ್ನು ಹೊಂದಿರೋದು ನಿಜಕ್ಕೂ ಮೆಚ್ಚುವ ವಿಚಾರ.. ಇನ್ನು ಯಶ್ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೊಂದೇ ಹೆಜ್ಜೆ ಇಡುತ್ತಾ ಬೆಳೆದು ಇದೀಗ ಭಾರತವೇ ತಿರುಗಿ ನೋಡುವಷ್ಟರ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ..
ಆದರೆ ಹಳೆಯ ದಿನಗಳನ್ನು ಅವರೆಂದೂ ಮರೆಯಲಿಲ್ಲ.. ಸಿನಿಮಾ ಜೊತೆ ಜೊತೆಗೆ ಯಶ್ ಅವರು ಪ್ರೀತಿಯಲ್ಲಿ ಬಿದ್ದಿದ್ದು ಧಾರಾವಾಹಿಯಲ್ಲಿ ತಮ್ಮ ಜೊತೆ ಅಭಿನಯಿಸುತ್ತಿದ್ದ ರಾಧಿಕಾ ಅವರನ್ನು ಮೆಚ್ಚಿಕೊಂಡಿದ್ದರು.. ಸ್ನೇಹ ಪ್ರೀತಿಯಾಯಿತು.. ಆದರೆ ಇಬ್ಬರೂ ಸಹ ಎಲ್ಲಿಯೂ ತಮ್ಮ
ಪ್ರೀತಿಯನ್ನು ಹೊರಗಿನ ಪ್ರಪಂಚಕ್ಕೆ ತೋರ್ಪಡಿಸಿಕೊಳ್ಳದೇ ವೃತ್ತಿ ಬದುಕಿನಲ್ಲಿ ಏನಾದರೂ ಸಾಧಿಸಿದ ನಂತರವೇ ಮದುವೆ ಎಂಬ ನಿರ್ಧಾರ ಮಾಡಿದ್ದರು.. ಅದರಂತೆಯೇ ಇಬ್ಬರೂ ತಮ್ಮದೇ ಆದ ಹೆಸರನ್ನು ಮಾಡಿದರು.. ಕೊನೆಗೆ ಯಶ್ ತಮ್ಮ ತಂಗಿಯ ಜವಾಬ್ದಾರಿ ಮುಗಿಸಿದ ನಂತರ ಇಬ್ಬರು ಅದ್ಧೂರಿಯಾಗಿ ಮದುವೆಯಾದರು..
ಆದರೆ ಈ ಹಿಂದೆ ಯಶ್ ಅವರು ಸಾಧಾರಣ ಸಣ್ಣ ಕಲಾವಿದನಾಗಿದ್ದ ಸಮಯದಿಂದಲೂ ರಾಧಿಕಾ ಯಶ್ ಅವರ ಪರವಾಗಿ ನಿಂತಿದ್ದರು.. ಅಷ್ಟೇ ಗೌರವವನ್ನು ಕೊಡುತ್ತಿದ್ದರು.. ನಾನೊಬ್ಬ ಸೂಪರ್ ಸ್ಟಾರ್ ಆಗ್ತೀನಿ ಎಂದಾಗ ಸಾಕಷ್ಟು ಜನ ನಕ್ಕರೂ ಸಹ ರಾಧಿಕಾ ಪಂಡಿತ್ ಮಾತ್ರ ಯಶ್ ಗೆ ಬೆಂಬಲಿಸುತ್ತಲೇ ಬರುತ್ತಿದ್ದರು.. ಅಷ್ಟೇ
ಅಲ್ಲದೇ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೂ ಸಹ ಯಶ್ ಗೆ ಕಷ್ಟವಾಗಬಾರದೆಂದು ಹೊರಗೆಲ್ಲೂ ಖರ್ಚು ಮಾಡಿಸುತ್ತಿರಲಿಲ್ಲವಂತೆ.. ಅಷ್ಟೇ ಅಲ್ಲದೇ ಯಶ್ ಒಂದು ಹಂತಕ್ಕೆ ಬರುವವರೆಗೂ ರಾಧಿಕಾ ಎಂದೂ ಸಹ ಭಾರವಾಗಬಾರದೆಂದು ಹೇಳಿದ್ದರಂತೆ.. ಇಷ್ಟು ಪ್ರೀತಿಸುವ ಹಾಗೂ ಕಾಳಜಿ ತೋರುವ ಹುಡುಗಿ ಸಿಗಲು ಯಶ್ ಒಂದು ರೀತಿ ಪುಣ್ಯ ಮಾಡಿದ್ದರೆ.
ಇತ್ತ ಯಶ್ ಕೂಡ ರಾಧಿಕಾ ಪಂಡಿತ್ ರನ್ನು ಅಷ್ಟೇ ಗೌರವದಿಂದ ನಡೆಸಿಕೊಳ್ಳುವುದು ಹಾಗೂ ಪ್ರೀತಿ ತೋರುವುದು ನೋಡಿದರೆ ನಿಜಕ್ಕೂ ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನಿಸುತ್ತದೆ.. ಇನ್ನು ಇಂದು ಐದನೇ ವರ್ಷದ ವಿವಾಹದ ದಿನದ ಕಾರಣ ಇಬ್ಬರೂ ಸಹ
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಒಅರಸ್ಲರ ಶುಭ ಕೋರಿದ್ದಾರೆ.. ಆದರೆ ಯಶ್ ತಮ್ಮ ಹಳೆಯ ದಿನದ ಫೋಟೋ ಅದರಲ್ಲೂ ಬೀಚ್ ಒಂದರಲ್ಲಿ ಸಾಮಾನ್ಯರಂತೆ ಕೂತಿರುವ ಹಳೆಯ ಫೋಟೋ ಜೊತೆಗೆ ಇಂದು ಕೆಲ ತಿಂಗಳ ಹಿಂದಷ್ಟೇ ಗೃಹಪ್ರವೇಶ ಮಾಡಿದ ತಮ್ಮ ಐಶಾರಾಮಿ ಮನೆಯಲ್ಲಿ ರಾಧಿಕಾ ಅವರೊಟ್ಟಿಗೆ ಇರುವ ಮತ್ತೊಂದು ಫೋಟೋವನ್ನೂ ಸಹ ಹಂಚಿಕೊಂಡಿದ್ದಾರೆ..
ಅಷ್ಟೇ ಅಲ್ಲದೇ “ಪ್ರಪಂಚ ಬಹಳ ಸುಂದರವಾಗಿದೆ ಎಂದು ಎಲ್ಲರೂ ಹೇಳ್ತಾರೆ.. ನಾನು ಕೂಡ ಅದನ್ನು ಒಪ್ಪುತ್ತೇನೆ.. ಆದರೆ ನನಗೆ ಪ್ರಪಂಚ ಸುಂದರವಾಗಿ ಕಾಣೋದು ನೀನು ಜೊತೆಯಲ್ಲಿದ್ದಾಗ ಮಾತ್ರ.. ನನ್ನ ಪ್ರಪಂಚವನ್ನು
ಸುಂದರವನ್ನಾಗಿಸಿದ್ದಕ್ಕೆ ಧನ್ಯವಾದಗಳು.. ಲವ್ ಯು ಫಾರ್ ಎವರ್ ಅಂಡ್ ಎವರ್..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಬದುಕು ಬದಲಾಗಬೇಕು.. ಅದರಲ್ಲೂ ನಮ್ಮ ಪರಿಶ್ರಮದಿಂದ ನಾಬೇ ನಮ್ಮ ಜೀವನವನ್ನು ಒಳ್ಳೆಯ ರೀತಿಯಲ್ಲಿ ಬದಲಿಸಿಕೊಳ್ಳಬೇಕು ಎಂಬುದಕ್ಕೆ ಈ ಜೋಡಿ
ಈಗ ಇರುವ ರೀತಿಯೇ ದೊಡ್ಡ ಉದಾಹರಣೆ.. ಈ ಜೋಡಿ ನೂರ್ಕಾಲ ಹೀಗೆ ಸಂತೋಷವಾಗಿರಲಿ.. ವಿವಾಹ ದಿನದ ಶುಭಾಶಯಗಳು ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಗೆ..