ಮನೆ ಕಟ್ಟಲು ಗ್ರಾಮ ಪಂಚಾಯಿತಿ ಇಂದ ಅನುಮತಿ ಪಡೆಯುವುದು ಹೇಗೆ ಏನೆಲ್ಲ ದಾಖಲೆಗಳು ಬೇಕಾಗುತ್ತದೆ. ಅನ್ನುವ ಸೂಕ್ತ ಮಾಹಿತಿ ಇಲ್ಲಿದೆ.
ನಮಸ್ತೇ ಪ್ರೀಯ ಓದುಗರೇ, ನಮ್ಮದೇ ಆದ ಸ್ವಂತ ಮನೆ ಇರಬೇಕು, ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಅಂತ ತುಂಬಾ ಜನರಿಗೆ ಆಸೆಗಳು ಇರುತ್ತವೆ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನುತ್ತಾರೆ ಹಿರಿಯರು. ಹೀಗಾಗಿ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮನೆ ಕಟ್ಟುವುದು
ಅಷ್ಟೊಂದು ಸುಲಭವಾದ ಮಾತೇ? ಖಂಡಿತವಾಗಿ ಇಲ್ಲ. ಅದರಲ್ಲೂ ನಗರಗಳಲ್ಲಿ ಮನೆಯನ್ನು ಕಟ್ಟಬೇಕೆಂದರೆ ತುಂಬಾನೇ ಕಷ್ಟವಾಗುತ್ತದೆ. ಇನ್ನು ಹಳ್ಳಿಗಳಲ್ಲಿ ನಾವು ಮನೆಯನ್ನು ಕಟ್ಟಬೇಕೆಂದರೆ ಅದಕ್ಕೆ ಆದ ನಿಯಮವಾಳಿಗಳು ಇರುತ್ತವೆ. ಮುಖ್ಯವಾಗಿ ಹಳ್ಳಿಗಳಲ್ಲಿ
ಮನೆ ಕಟ್ಟಲು ನಮಗೆ ಪಂಚಾಯತಿ ಇಂದ ಅನುಮತಿಯನ್ನು ಖಂಡಿತವಾಗಿ ಪಡೆಯಬೇಕಾಗುತ್ತದೆ. ಗ್ರಾಮ ಪಂಚಾಯಿತಿ ಇಂದ ಅಷ್ಟೊಂದು ಸುಲಭವಾಗಿ ಅನುಮತಿಯನ್ನು ನೀಡುವುದಿಲ್ಲ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ, ಹಳ್ಳಿಗಳಲ್ಲಿ ನಾವು ಮನೆಯನ್ನು
ಕಟ್ಟಬೇಕೆಂದರೆ ಯಾವ ರೀತಿಯಾಗಿ ಅನುಮತಿಯನ್ನು ಪಡೆಯಬೇಕು, ಇದಕ್ಕೆ ಯಾವ ರೀತಿಯ ಪರಿಕ್ರಿಯೆಗಳು ಇರುತ್ತವೆ ಅಂತ ಸಂಪೂರ್ಣವಾಗಿ ತಿಳಿದುಕೊಳ್ಳೋಣ.ಹಳ್ಳಿಗಳಲ್ಲಿ ಮನೆಯನ್ನು ನಿರ್ಮಿಸಲು
ಕಡ್ಡಾಯವಾಗಿ ಪಂಚಾಯತಿ ಅವರಿಂದ ಅನುಮತಿಯನ್ನು ಪಡೆಯುವುದರ ಜೊತೆಗೆ ಕೆಲವು ಮಹತ್ವವಾದ ದಾಖಲೆಗಳನ್ನು ನಾವು ಪಡೆಯಬೇಕಾಗುತ್ತದೆ. ಮುಖ್ಯವಾಗಿ ಮನೆಯ ಹಕ್ಕು ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ. ಈ ಮನೆಯ ಹಕ್ಕು ಪತ್ರವನ್ನು ಪಂಚಾಯತಿವತಿಯಿಂದ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಪಡೆದುಕೊಳ್ಳಬಹುದು. ಮನೆಯ ಹಕ್ಕು ಪತ್ರ, ಆಧಾರ್ ಕಾರ್ಡ್ ಮತ್ತು ಸ್ಥಳೀಯ ಸಿವಿಲ್ ಇಂಜಿನೀರಿಂಗ್ ಅವರಿಂದ ಮನೆಯ ನೀಲಿ ನಕ್ಷೆ, ಮನೆ ಕಂದಾಯ ರಶೀದಿ, ಮತ್ತು ಮನೆ ಕಟ್ಟಬೇಕಾಗುವ ಖಾಲಿ ಜಾಗದ ಫೋಟೋ ಬೇಕಾಗುತ್ತದೆ. ಇದರಿಂದ ಉತ್ತಮವಾದ ಮನೆ ಕಟ್ಟಲು ಸಹಾಯ
ಆಗುತ್ತದೆ. ಈ ಎಲ್ಲ ದಾಖಲೆಗಳ ಜೊತೆಗೆ ಮನೆ ಕಟ್ಟುವುದರ ಜೊತೆಗೆ ಶೌಚಾಲಯವನ್ನು ಕಟ್ಟಬೇಕೆಂದು ಪತ್ರವನ್ನು ನೀಡಬೇಕು. ಇದರಿಂದ ಎಸ್ಸಿ ಮತ್ತು ಎಸ್,ಟಿ ಜನರಿಗೆ ಶೌಚಾಲಯವನ್ನು ನಿರ್ಮಿಸಲು ಸರ್ಕಾರದಿಂದ 12000 ಮತ್ತು 15000 ರೂಪಾಯಿ ಧನ ಸಹಾಯ ಸಿಗುತ್ತದೆ.
ನಂತರ ಒಂದು ಅರ್ಜಿಯನ್ನು ಬರೆದು ಈ ಎಲ್ಲ ದಾಖಲೆಗಳ ಜೊತೆಗೆ ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕು ಈ ಗ್ರಾಮ ಪಂಚಾಯತಿಗೆ ಎಲ್ಲ ಪತ್ರಗಳನ್ನು ಅವರು ಚೆನ್ನಾಗಿ ಗ್ರಾಮ ಪಂಚಾಯಿತಿ ಮೇಲಾಧಿಕಾರಿಗಳು ಪರೀಶಿಲನೆ ಮಾಡುತ್ತಾರೆ. ನಂತ್ರ ಅವರು ಮನೆ ಕಟ್ಟುವ ಜಾಗಕ್ಕೆ ಬಂದು ವ್ಯಾಪ್ತಿ ಪ್ರದೇಶವನ್ನು ವೀಕ್ಷಣೆ ಮಾಡುತ್ತಾರೆ.
ಗ್ರಾಮ ಪಂಚಾಯಿತಿ ಮೇಲಾಧಿಕಾರಿ ಅಂದರೆ ಪಿಡಿಓ ಪರೀಶೀಲನೆ ಗೆ ಬಂದಾಗ ಕೆಲವು ನಿರ್ಬಂಧನೆಗಳನ್ನು ಹಾಕುತ್ತಾರೆ. ಅದಕ್ಕಾಗಿ ಕೆಲವು ಮಾರ್ಪಾಡುಗಳನ್ನು ಮಾಡುತ್ತಾರೆ. ನೀವು ಸಲ್ಲಿಸಿದ ಎಲ್ಲ ದಾಖಲೆಗಳು ಸರಿಯಾಗಿ ಇದ್ದರೆ, ಕಡತಗಳನ್ನು ಮುಂದಿನ ಗ್ರಾಮ
ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮುಂದುವರೆಸಲಾಗುತ್ತದೆ. ಈ ಸಾಮಾನ್ಯ ಸಭೆಯ ಮೂಲಕ ನಿಮಗೆ ಅನುಮತಿ ದೊರೆತ ಮೇಲೆ ಗ್ರಾಮ ಪಂಚಾಯಿತಿ ಮೇಲಾಧಿಕಾರಿಗಳು ಮೂವತ್ತು ದಿನಗಳಲ್ಲಿ ಆಕ್ಷೇಪಣೆಯ ನೋಟೀಸ್ ಅನ್ನು ಕಳಿಸುತ್ತಾರೆ. ಮತ್ತು
ಗ್ರಾಮದಲ್ಲಿ ಪ್ರಚಾರ ಮಾಡುತ್ತಾರೆ. ಆಕ್ಷೇಪಣೆ ಸಲ್ಲಿಕೆಯಾಗದೆ ಇದ್ದಲ್ಲಿ ನಿಗದಿ ಪಡಿಸಿದ ದಿನಾಂಕದೊಳಗೆ ಪಿಡಿಓ ಮನೆ ಕಟ್ಟಲು ಅನುಮತಿಯನ್ನು ನೀಡುತ್ತಾರೆ. ಈ ರೀತಿಯಾಗಿ ನೀವು ಮನೆಯನ್ನು ಸುಲಭವಾಗಿ ಕಟ್ಟಿ ಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಶುಭದಿನ.